ಯಕ್ಷಗಾನಕ್ಕೆ ಯುನೆಸ್ಕೋ ಪಾರಂಪರಿಕ ಮಾನ್ಯತೆ ಸಿಗಲಿ – ಯಕ್ಷಗಾನ ಸಮ್ಮೇಳನಾಧ್ಯಕ್ಷ ಡಾ.ಎಂ.ಪ್ರಭಾಕರ ಜೋಷಿ
11 ಫೆಬ್ರವರಿ 2023 ಉಡುಪಿ: ಯಕ್ಷಗಾನಕ್ಕೆ ಯುನೆಸ್ಕೋ ಪಾರಂಪರಿಕ ಮಾನ್ಯತೆ, ಸಂಗೀತ ನಾಟಕ ಅಕಾಡೆಮಿಯಿಂದ ಶಾಸ್ತ್ರೀಯ ಪ್ರಕಾರಗಳ ಮನ್ನಣೆ ಜತೆಗೆ ಕಲಾಭಿಮಾನದ ಹೊಸ ಶಕ್ತಿಯ ಅಭಿಯಾನವಾಗಲಿ ಎಂದು ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನಾಧ್ಯಕ್ಷ ಡಾ.ಎಂ.ಪ್ರಭಾಕರ ಜೋಷಿ ಹೇಳಿದರು.
ಅವರು ಕುಂಜಿಬೆಟ್ಟು ಎ.ಎಲ್.ಎನ್. ರಾವ್ ಕ್ರೀಡಾಂಗಣದಲ್ಲಿ ಶನಿವಾರ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಕನ್ನಡ ಸಂಸ್ಕತಿ, ಭಾರತೀಯ ಸಂಸ್ಕಾರದ ಧಾರ್ಮಿಕ ಸಾರವಾದ ಯಕ್ಷಗಾನಕ್ಕೆ 11ಆಧಾರ ಸ್ಥಂಭಗಳಿದ್ದು 50ರಷ್ಟು ಗುಣಮಟ್ಟದ ಸಂಶೋಧನಾ ಅಧ್ಯಯನ ನಡೆದಿದೆ. ಯಕ್ಷಗಾನ ಶಿಕ್ಷಣ ಪದ್ಧತಿ, ಸಂಘಟನೆಯ ಸ್ವರೂಪದಲ್ಲಿ ಆಮೂಲಾಗ್ರ ಪರಿಷ್ಕಾರಗಳಾಗಬೇಕು.
ಯಕ್ಷಗಾನ ಶಿಕ್ಷಣದಲ್ಲಿ ಕಲಾತತ್ವ, ಅನ್ಯಕಲೆಗಳ ಪರಿಚಯ ಅಳವಡಿಕೆ ಅಗತ್ಯ. ಕಲೆಗೆ ಪಾರಂಪರಿಕ, ಸಾಂಸ್ಥಿಕ, ಸಾಮುದಾಯಿಕ ಪದ್ಧತಿಗಳ ಯೋಗ್ಯ ಸಮನ್ವಯದ ವ್ಯವಸ್ಥೆ ರೂಪಿಸಬೇಕು. ಈ ನಿಟ್ಟಿನಲ್ಲಿ ಸರಕಾರಿ, ಖಾಸಗಿ ನೆರವು, ರಾಜ್ಯ ಸರಕಾರದಿಂದ ಯಕ್ಷಗಾನ ಕೇಂದ್ರಗಳಿಗೆ ಸಮಗ್ರ ಗೌರವಯುತ ಅನುದಾನ ನೀತಿ ರೂಪಿಸಿ, ಯಕ್ಷಗಾನ ಮೇಳ ನಡೆಸುವ ಸಶಕ್ತ ದೇವಳ, ಮೇಳಗಳಿಗೆ ಕಡ್ಡಾಯ ಹೊಣೆಗಾರಿಕೆ ನೀಡಬೇಕು.
ಮಹಿಳಾ ಯಕ್ಷಗಾನಕ್ಕೆ ಪುರುಷರ ಪೆÇ್ರೀತ್ಸಾಹವೇ ಆಧಾರವಾಗಿದ್ದು ಸಮನ್ವಯದಿಂದ ಸಾಗಬೇಕು. ಸುಪ್ತಯೋಗ ಬೇಕು, ಆಧುನಿಕತೆಯೂ ಬೇಕು. ನಾವೀನ್ಯ , ಪ್ರಯೋಗ, ಆಧುನಿಕತೆ, ತಂತ್ರಜ್ಞಾನ ಏನೆಂಬುದು ತಿಳಿದಿರಬೇಕು.ಅನ್ವಯದ ಹೊಣೆ ತಿಳಿದಿರಬೇಕು.
ಯಕ್ಷಗಾನ ವಿಶ್ವಗಾನ ಆಗಬೇಕಾದರೆ ವಿಶ್ವಮಟ್ಟದ ರಂಗಭೂಮಿಯಲ್ಲಿ ಸ್ವೀಕಾರಕ್ಕೆ ಯೋಗ್ಯ ರೀತಿಯ ಗಾನ, ನೃತ್ಯ, ಪ್ರಸ್ತುತಿ, ಧ್ವನಿ ಬೆಳಕು, ರಂಗ ಶಿಸ್ತು, ಸಮಯ ಪರಿಪಾಲನೆ, ಸಮಗ್ರ ನಿರ್ದೇಶಿತ ರೂಪಗಳಿಂದ ಕಲಾ ಪ್ರದರ್ಶನಕ್ಕೆ ಹೆಮ್ಮೆಯ ಜತೆ ಜ್ಞಾನದ ಗೆಯ್ಮೆ ಬೇಕು.
ಕಲೆಗಾಗಿ ಕನ್ನಡ ಶಾಲೆ ಉಳಿಸಿ.ಯಕ್ಷಗಾನ ಉಳಿದರೆ ಸಾಂಸ್ಕತಿಕ ಸಿರಿ ಉಳಿದೀತು.ಪ್ರಾಥಮಿಕ ಶಿಕ್ಣಣದಲ್ಲಿ ಕನ್ನಡ ಶಿಕ್ಷಣ ಬಲು ಮುಖ್ಯ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಯಕ್ಷ ಸಮ್ಮೇಳನಗಳು ನಿಗದಿತವಾಗಿ ನಡೆಯಬೇಕು.
ಯಕ್ಷಗಾನ ಕಲಾವಿದರ ಡಾಟಾ ಬೇಸ್ ಸಹಿತ 30ಮುಖ್ಯ ಅಂಶಗಳನ್ನು ಮುಂದಿಟ್ಟು ಬೇರು ಕಡಿದ ಮೇಲೆ ವೃಕ್ಷ ಜಾರದೆ ನಿಲ್ಲುವುದುಂಟೆ? ಕಲೆಯ ಬೇರು ಗಟ್ಟಿಯಾಗುವಂತೆ ಕಾಪಾಡಿ ಗಿಡವನ್ನೂ ಚಿರ ಕಲಾವವೃಕ್ಷವಾಗಿ ಬೆಳೆಸುವ ಹೊಣೆ ನಮ್ಮದು ಎಂದರು.
ಮಾತುಗಾರಿಕೆ, ಪುರಾಣದ ಅರಿವು, ವ್ಯಾಯಾಮಕ್ಕೆ ಯಕ್ಷಗಾನ ಪೂರಕ ರಾಜ್ಯದಾದ್ಯಂತ ಶಾಲಾ ಕಾಲೇಜುಗಳಲ್ಲಿ ಯಕ್ಷಗಾನ ಕಲಿಸಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ
ಯುವಪೀಳಿಗೆಗೆ ಪ್ರೇರಣೆ ನೀಡಿ, ಕಲೆಯ ಮೂಲಸತ್ವ ಉಳಿಸುವ ಮೂಲಕ ಶಾಲಾ ಕಾಲೇಜುಗಳಲ್ಲಿ ಯಕ್ಷಗಾನದ ಹಿರಿಮೆ ತಿಳಿಸಿ,ಪಠ್ಯವಾಗಿ ಕಲಿಸುವ ಯತ್ನವಾಗಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಕನ್ನಡ ಮತ್ತು ಸಂಸ್ಕತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಉಡುಪಿ ಜಿಲ್ಲಾಡಳಿತದ ಸಹಯೋಗದಲ್ಲಿ ಎರಡು ದಿನಗಳ ಕಾಲ ಕುಂಜಿಬೆಟ್ಟು ಎ.ಎಲ್.ಎನ್.ರಾವ್ ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನವನ್ನು ಮಲ್ಪೆ ಶಂಕರನಾರಾಯಣ ಸಾಮಗ ವೇದಿಕೆಯಲ್ಲಿ ಶನಿವಾರ ಉದ್ಘಾಟಿಸಿ ಮಾತನಾಡಿದರು.
ಪ್ರಧಾನಿ ಮೋದಿ ಪ್ರತಿಪಾದಿಸಿದ ವೋಕಲ್ ಫಾರ್ ಲೋಕಲ್ ಯೋಜನೆಯಡಿ ಯಕ್ಷಗಾನ ಕಲೆ, ಭಾಷೆ ಉಳಿಸಬೇಕು. ಕನ್ನಡ ಭಾಷೆ, ಸಾಹಿತ್ಯವನ್ನು ಬೆಳೆಸಿದ ಯಕ್ಷಗಾನದಿಂದ ಮಾತುಗಾರಿಕೆಯ ಕಲೆ, ದೇಹಕ್ಕೆ ವ್ಯಾಯಾಮ, ವೇದ ಪುರಾಣದ ಅರಿವು ಹೊಂದಲು ರಾಜ್ಯದಾದ್ಯಂತ ಶಾಲಾ ಮಟ್ಟದಿಂದ ಯಕ್ಷಗಾನ ಕಲಿಸುವುದು ಅತ್ಯಂತ ಸೂಕ್ತ ಹಾಗೂ ಪ್ರಸ್ತುತ.
ಜಾತಿ,ಧರ್ಮ, ಲಿಂಗ ತಾರತಮ್ಯವನ್ನು ಮೀರಿ ನಿಂತ ಯಕ್ಷಗಾನ ಕಲೆ ಉಳಿಸಿ ಬೆಳೆಸುವ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮಗಿದೆ. ದೇವಳ, ಭಾರತೀಯ ಸಂಸ್ಕತಿ, ವೇದ ಪುರಾಣ, ನಾಟ್ಯ ಸಂಗೀತದ ಅವಿನಾಭಾವ ಸಂಬಂಧ ಯಕ್ಷಗಾನಕ್ಕಿದೆ .
ಸಾಮಾಜಿಕ ನಾಟಕಕ್ಕೆ ಯಕ್ಷಗಾನ ಬಳಸಬೇಡಿ. ಯಕ್ಷಗಾನದ ತಳಪಾಯ ಅಲುಗಾಡಿಸಬೇಡಿ. ಗಂಡು ಕಲೆಯನ್ನು ಹೆಣ್ಮಕ್ಕಳು ಕಲಿಯುತ್ತಿರುವುದು ಶ್ಲಾಘನೀಯ ಎಂದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ 18 ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿ, ಯಕ್ಷಗಾನ ಕಲಾವಿದರ ಸಮ್ಮೇಳನದ ಅಗತ್ಯವಿದ್ದು ಸಮಸ್ಯೆ ಅರ್ಥೈಸಿ ಸರಕಾರಿ ಸೌಲಭ್ಯ ಒದಗಿಸಬೇಕು. ಕಾಲಮಿತಿ ಪ್ರಯೋಗದಿಂದ ಕಲಾಸಕ್ತರು ಮತ್ತೆ ಯಕ್ಷಗಾನದತ್ತ ಆಕರ್ಷಿತರಾಗುತ್ತಿದ್ದಾರೆ ಎಂದರು.
ರಾಜ್ಯ ಇಂಧನ ಕನ್ನಡ ಮತ್ತು ಸಂಸ್ಕತಿ ಖಾತೆ ಸಚಿವ ವಿ.ಸುನಿಲ್ ಕುಮಾರ್, ಜಿಲ್ಲಾಧಿಕಾರಿ ಕೂಮಾರ್ ರಾವ್ ಎಂ., ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್., ಉದ್ಯಮಿ ಪುರುಷೋತ್ತಮ ಶೆಟ್ಟಿ, ದಿ ಮೈ ಎಲೆಕ್ಟ್ರಿಕ್ ಇಂಡಸ್ಟ್ರೀಸ್ ಲಿಮಿಟೆಡ್ ಇದರ ಅಧ್ಯಕ್ಷ ಕೆ.ಉದಯ ಕುಮಾರ್ ಶೆಟ್ಟಿ, ಕಟೀಲು ದೇವಳದ ಅರ್ಚಕ ವಾಸುದೇವ ಅಸ್ರಣ್ಣ, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀ ನಾರಾಯಣ ಕಾರಂತ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ಎಚ್.ಧನಂಜಯ ಶೆಟ್ಟಿ, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕೊಲ್ಲೂರು ಶ್ರೀಮೂಕಾಂಬಿಕಾ ದೇವಳದ ಆಡಳಿತ ಮೊಕ್ತೇಸರ ಕೆರಾಡಿ ಚಂದ್ರಶೇಖರ ಶೆಟ್ಟಿ, ಕುಂಭಾಶಿ ಶ್ರೀವಿನಾಯಕದ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶ್ರೀರಮಣ ಉಪಾಧ್ಯ, ಮಾಹೆ ವಿವಿ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಉಡುಪಿ ಶಾಸಕ ಕೆ.ರಘುಪತಿ ಭಟ್ ಉಪಸ್ಥಿತರಿದ್ದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗರು ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಕದ್ರಿ ನವನೀತ್ ಶೆಟ್ಟಿ ನಿರೂಪಿಸಿದರು. ಯಕ್ಷಗಾನ ಸಮ್ಮೇಳನದ ಪ್ರಧಾನ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಸ್ಚಾಗತಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಆಶಯದ ಮಾತುಗಳನ್ನಾಡಿದರು.