ಬೆಂಗಳೂರು : ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಜಿರೆ ಇದರ ವತಿಯಿಂದ ಸ್ವರಮಾಂತ್ರಿಕ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಸಂಸ್ಮರಣೆಯ ಪ್ರಯುಕ್ತ ‘ಯಕ್ಷಗಾನ ತಾಳಮದ್ದಳೆ ಅಷ್ಟಾಹ’ವನ್ನು ದಿನಾಂಕ 20 ಅಕ್ಟೋಬರ್ 2024ರಿಂದ 27 ಅಕ್ಟೋಬರ್ 2024ರವರೆಗೆ ಬೆಂಗಳೂರು ಮಹಾನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 20 ಅಕ್ಟೋಬರ್ 2024ರಂದು ಸಂಜೆ 4-00 ಗಂಟೆಗೆ ಕೋರಮಂಗಲ 5ನೇ ಬ್ಲಾಕ್, 1ನೇ ಕ್ರಾಸ್, ನಂ.137, ಶ್ರೀ ಕೃಷ್ಣ ದೇವಸ್ಥಾನ, ಶ್ರೀ ಎಡನೀರು ಮಠದಲ್ಲಿ ‘ಕೃಷ್ಣ ಸಂಧಾನ’, ದಿನಾಂಕ 21 ಅಕ್ಟೋಬರ್ 2024ರಂದು ಸಂಜೆ 5-00 ಗಂಟೆಗೆ ಕನಕಪುರ ರಸ್ತೆ, ದೊಡ್ಡಕಲ್ಲಸಂದ್ರ ಮೆಟ್ರೋ ಹತ್ತಿರ, ಶಂಕರ ಫೌಂಡೇಶನ್, ಎಲಿಫೆಂಟ್ ಹೈ ಕೆಫೆ ಇಲ್ಲಿ ‘ವಾಲಿವಧೆ’, ದಿನಾಂಕ 22 ಅಕ್ಟೋಬರ್ 2024ರಂದು ಸಂಜೆ 5-00 ಗಂಟೆಗೆ ಕರಿಹೋಬನಹಳ್ಳಿ ನಾಗಸಂದ್ರ ಅಂದ್ರಹಳ್ಳಿ ಮುಖ್ಯರಸ್ತೆ ಎಸ್.ಎಲ್.ಎನ್. ಬಡಾವಣೆ 2ನೇ ಕ್ರಾಸ್ ಶಬರಿ ಗಿರಿ ಇಲ್ಲಿ ‘ರಾಮ ದರ್ಶನ’, ದಿನಾಂಕ 23 ಅಕ್ಟೋಬರ್ 2024ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಸಂಜಯನಗರ, ಲಾಸ್ಯ ಅಕಾಡೆಮಿ ಆಫ್ ಡಾನ್ಸ್ ಅನುಗ್ರಹ ಕೇಂದ್ರದಲ್ಲಿ ‘ಪಾದುಕಾ ಪ್ರದಾನ’, ದಿನಾಂಕ 24 ಅಕ್ಟೋಬರ್ 2024ರಂದು ಸಂಜೆ 5-00 ಗಂಟೆಗೆ ನಾಗರ ಭಾವಿ ಪಾಪರೆಡ್ಡಿ ಪಾಳ್ಯ 80 ಅಡಿ ರಿಂಗ್ ರೋಡ್ ನಂ.27 ಹಿಂದೂ ಧಾರ್ಮಿಕ ಸಭಾ ಭವನದಲ್ಲಿ ‘ವಾಮನ ಚರಿತ್ರೆ’, ದಿನಾಂಕ 25 ಅಕ್ಟೋಬರ್ 2024ರಂದು ಸಂಜೆ 5-00 ಗಂಟೆಗೆ ಮಹಾಲಕ್ಷ್ಮೀ ಪುರಂ ಲೇ ಔಟ್, 4ನೇ ಮುಖ್ಯ ರಸ್ತೆ, ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ‘ಮಾರುತಿ ಸಂಧಾನ’, ದಿನಾಂಕ 26 ಅಕ್ಟೋಬರ್ 2024ರಂದು ಸಂಜೆ 5-00 ಗಂಟೆಗೆ ರಾಜಾಜಿ ನಗರ, 5ನೇ ಬ್ಲಾಕ್, 12ನೇ ಮೈನ್, 65ನೇ ಕ್ರಾಸ್, ರಾಜಾಜಿ ನಗರ, ಚಿತ್ಪಾವನ ಭವನದಲ್ಲಿ ‘ಸುದರ್ಶನ ಗ್ರಹಣ’, ದಿನಾಂಕ 27 ಅಕ್ಟೋಬರ್ 2024ರಂದು ಬೆಳಿಗ್ಗೆ 10-30 ಗಂಟೆಗೆ ಕಸವನಹಳ್ಳಿ ತರಂಗಿಣಿ ಇಲ್ಲಿ ‘ಶ್ರೀಧಾಮ ಗಮನ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆಗಳು ನಡೆಯಲಿದೆ.