ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆ ಕಾರ್ಯಕ್ರಮದಲ್ಲಿ ಕಾಸರಗೋಡು ಸುಬ್ರಾಯ ಪಂಡಿತ ವಿರಚಿತ ‘ರಾವಣ ವಧೆ’ ಎಂಬ ತಾಳಮದ್ದಳೆಯು ಓ೦ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ದಿನಾಂಕ 11-05-2024ರಂದು ನಡೆಯಿತು.
ಹಿಮ್ಮೇಳದಲ್ಲಿ ಎಲ್.ಎನ್. ಭಟ್, ಆನಂದ ಸವಣೂರು, ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ ಮತ್ತು ಅಚ್ಯುತ ಪಾಂಗಣ್ಣಾಯ ಹಾಗೂ ಮುಮ್ಮೇಳದಲ್ಲಿ ಪೂಕಳ ಲಕ್ಷ್ಮೀನಾರಾಯಣ ಭಟ್ (ರಾವಣ), ಗುಡ್ಡಪ್ಪ ಬಲ್ಯ (ಶ್ರೀ ರಾಮ), ಭಾಸ್ಕರ್ ಬಾರ್ಯ (ಮಂಡೋದರಿ), ಮಾಂಬಾಡಿ ವೇಣುಗೋಪಾಲ ಭಟ್ (ಮಾತಲಿ), ಚಂದ್ರಶೇಖರ್ ಭಟ್ ಬಡೆಕ್ಕಲ (ದೂತ), ಪ್ರೇಮಲತಾ ಟಿ. ರಾವ್ (ವಿಭೀಷಣ) ಸಹಕರಿಸಿದರು. ಟಿ. ರಂಗನಾಥ ರಾವ್ ಹಾಗೂ ದುಗ್ಗಪ್ಪ ಎನ್. ಸಹಕರಿಸಿದರು.