ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ವಿಂಶತಿ ಸಂಭ್ರಮದ ಅಂಗವಾಗಿ ತಾಳಮದ್ದಳೆ ಸರಣಿಯ 5ನೇ ಕಾರ್ಯಕ್ರಮವು ದಿನಾಂಕ 26 ಆಗಸ್ಟ್ 2024ರಂದು ಅಷ್ಟಮಿ ಸಂಭ್ರಮದ ಪ್ರಯುಕ್ತ ಕೌಡಿಚ್ಚಾರು, ಅರಿಯಡ್ಕದ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಜಾಂಬವತಿ ಕಲ್ಯಾಣ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಕುಸುಮಾಕರ ಆಚಾರ್ಯ ಆಲಂಕಾರು ಹಾಗೂ ಚೆಂಡೆ, ಮದ್ದಳೆಗಳಲ್ಲಿ ಮುರಳೀಧರ ಕಲ್ಲೂರಾಯ ಕುಂಜೂರುಪಂಜ, ಮೋಹನ್ ಶರವೂರು ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ (ಶ್ರೀ ಕೃಷ್ಣ), ಕಿಶೋರಿ ದುಗ್ಗಪ್ಪ ನಡುಗಲ್ಲು (ಜಾಂಬವಂತ), ಹರಿಣಾಕ್ಷಿ ಜೆ. ಶೆಟ್ಟಿ (ಬಲರಾಮ), ಭಾರತಿ ರೈ ಅರಿಯಡ್ಕ (ನಾರದ) ಸಹಕರಿಸಿದರು. ಭಜನಾ ಮಂದಿರದ ಅಧ್ಯಕ್ಷ ರಾಮದಾಸ್ ರೈ ಹಾಗೂ ಸದಸ್ಯರು ಕಲಾವಿದರನ್ನು ಶಾಲು ಹೊದಿಸಿ ಗೌರವಿಸಿದರು. ಸಂಘದ ನಿರ್ದೇಶಕರ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಸಂಘದ ಸದಸ್ಯೆ ಭಾರತಿ ರೈ ಅರಿಯಡ್ಕ ಪ್ರಾಯೋಜಿಸಿದರು.