ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ತಿಂಗಳ ಸರಣಿ ತಾಳಮದ್ದಳೆಯು ದಿನಾಂಕ 05 ಮೇ 2025ರಂದು ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ‘ಮಾಗಧ ವಧೆ’ ಎಂಬ ಆಖ್ಯಾನದೊಂದಿಗೆ ನಡೆಯಿತು.
ಹಿಮ್ಮೇಳದಲ್ಲಿ ಯಲ್.ಯನ್. ಭಟ್ ಬಟ್ಯಮೂಲೆ, ಪದ್ಯಾಣ ಶಂಕರನಾರಾಯಣ ಭಟ್, ಮಾಸ್ಟರ್ ಪರೀಕ್ಷಿತ್, ಕುಮಾರಿ ಶರಣ್ಯ ನೆತ್ತರಕೆರೆ, ಮಾಸ್ಟರ್ ಅವಿನಾಶ್ ಕೃಷ್ಣ ಪುಣಚ ಸಹಕರಿಸಿದರು. ಮುಮ್ಮೇಳದಲ್ಲಿ ಗುಂಡ್ಯಡ್ಕ ಈಶ್ವರ ಭಟ್ (ಮಾಗಧ), ಭಾಸ್ಕರ ಬಾರ್ಯ (ಧರ್ಮರಾಯ), ಗುಡ್ಡಪ್ಪ ಬಲ್ಯ (ಶ್ರೀ ಕೃಷ್ಣ), ಹರಿಣಾಕ್ಷಿ ಜೆ. ಶೆಟ್ಟಿ (ಭೀಮ) ಸಹಕರಿಸಿದರು. ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು.