ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ಕೂಟವು ದಿನಾಂಕ 04 ಜನವರಿ 2025ರಂದು ‘ಅಂಗದ ಸಂಧಾನ’ ತಾಳಮದ್ದಳೆಯೊಂದಿಗೆ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ಜರಗಿತು.
ಹಿಮ್ಮೇಳದಲ್ಲಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ, ಕುಮಾರಿ ಕೃತಿಕಾ ಖಂಡೇರಿ, ಜಯಪ್ರಕಾಶ್ ನಾಕೂರು, ಟಿ.ಡಿ. ಗೋಪಾಲಕೃಷ್ಣ ಭಟ್ ಮತ್ತು ಕುಮಾರಿ ಶರಣ್ಯ ವಿಟ್ಲ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ರಾಮ (ವಿ.ಕೆ. ಶರ್ಮ ಅಳಿಕೆ), ಅಂಗದ (ಭಾಸ್ಕರ್ ಬಾರ್ಯ). ಪ್ರಹಸ್ತ (ಗುಡ್ಡಪ್ಪ ಬಲ್ಯ) ಸಹಕರಿಸಿದರು. ಟಿ. ರಂಗನಾಥ ರಾವ್ ಸ್ವಾಗತಿಸಿ, ರಾಜ್ ಗೋಪಾಲ್ ಭಟ್ ಬನ್ನೂರು ವಂದಿಸಿದರು.