ಪುತ್ತೂರು : ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯ ಬೊಳುವಾರು ಪುತ್ತೂರು ಇದರ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಹಾಗೂ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ಸಹಯೋಗದಲ್ಲಿ ನಡೆಸಲ್ಪಡುವ ಪಾಕ್ಷಿಕ ಕಾರ್ಯಕ್ರಮದ ಪ್ರಥಮ ತಾಳಮದ್ದಳೆ ಕೂಟವು ದಿನಾಂಕ 08 ಅಕ್ಟೋಬರ್ 2024ರಂದು ಗಣೇಶ್ ಕೊಲೆಕ್ಕಾಡಿ ವಿರಚಿತ ‘ಸೌಗಂಧಿಕಾ ಹರಣ’ ಎಂಬ ಆಖ್ಯಾನದೊಂದಿಗೆ ಶ್ರೀ ಸುಬ್ರಹ್ಮಣ್ಯ ನಗರ ಮೈದಾನದ ವೇದಿಕೆಯಲ್ಲಿ ಜರಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಜಯಪ್ರಕಾಶ್ ನಾಕೂರು, ಸತೀಶ್ ಇರ್ದೆ, ಆನಂದ ಸವಣೂರು ಹಾಗೂ ಚೆಂಡೆ ಮದ್ದಲೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಪಿ.ಟಿ. ಜಯರಾಮ ಭಟ್, ಮುರಳೀಧರ ಕಲ್ಲೂರಾಯ, ಮಾಸ್ಟರ್ ಪರೀಕ್ಷಿತ್, ಮಾಸ್ಟರ್ ಅಮೋಘ ಶಂಕರ್ ಹಾಗೂ ಮಾಸ್ಟರ್ ಅಭಯಕೃಷ್ಣ ಸಹಕರಿಸಿದರು.
ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ ಮತ್ತು ಶುಭಾ ಜೆ.ಸಿ. ಅಡಿಗ (ಭೀಮ), ಗುಡ್ಡಪ್ಪ ಬಲ್ಯ (ಹನೂಮಂತ), ದುಗ್ಗಪ್ಪ ನಡುಗಲ್ಲು (ಧರ್ಮರಾಯ), ಪ್ರೇಮಲತಾ ರಾವ್ (ವೇದವ್ಯಾಸ), ಕಿಶೋರಿ ದುಗ್ಗಪ್ಪ ನಡುಗಲ್ಲು (ದ್ರೌಪದಿ), ಹರಿಣಾಕ್ಷಿ ಜೆ. ಶೆಟ್ಟಿ (ಕುಬೇರ), ಶಾರದಾ ಅರಸ್ (ಅರ್ಜುನ) ಸಹಕರಿಸಿದರು. ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ನೀಲಂತ ಹಾಗೂ ಪ್ರವೀಣ್ ಬೊಳುವಾರು ಕಲಾವಿದರಿಗೆ ಶ್ರೀ ದೇವರ ಪ್ರಸಾದವನ್ನಿತ್ತು ಗೌರವಿಸಿದರು.