ಕೋಟೇಶ್ವರ : ಶ್ರೀ ರಾಮ ಸೇವಾ ಸಂಘ ಇವರ ಸಹಕಾರದೊಂದಿಗೆ ‘ರಾಮಾಂಜನೇಯ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆಯು ದಿನಾಂಕ 18 ಆಗಸ್ಟ್ 2024ರಂದು ಮಧ್ಯಾಹ್ನ ಗಂಟೆ 2-30ರಿಂದ ಕೋಟೇಶ್ವರದ ಶ್ರೀ ಪಟ್ಟಾಭಿ ರಾಮಚಂದ್ರ ಕಲ್ಯಾಣ ಮಂದಿರದಲ್ಲಿ ನಡೆಯಲಿದೆ.
ದ್ವಂದ್ವ ಭಾಗವತಿಕೆಯಲ್ಲಿ ಶ್ರೀ ಪ್ರಸನ್ನ ಭಟ್ ಬಾಳ್ಕಲ್ ಮತ್ತು ಶ್ರೀ ಲಂಬೋದರ ಹೆಗಡೆ, ಮದ್ದಳೆಯಲ್ಲಿ ಶ್ರೀ ಶಶಾಂಕ ಆಚಾರ್ ಹಾಗೂ ಚೆಂಡೆಯಲ್ಲಿ ಶ್ರೀ ಸಚಿನ್ ಆಚಾರ್ ಕುಂಭಾಶಿ ಮತ್ತು ಮುಮ್ಮೇಳದಲ್ಲಿ ವಿದ್ಯಾವಾಚಸ್ಪತಿ ಉಮಾಕಾಂತ್ ಭಟ್ ಶಿರಸಿ, ವಿದ್ವಾನ್ ಗಣಪತಿ ಭಟ್ ಸಂಕದಗುಂಡಿ, ಪ್ರೊ. ಪವನ್ ಕಿರಣಕೆರೆ ಹಾಗೂ ಶ್ರೀ ಸುನೀಲ್ ಹೊಲಾಡು ಇವರುಗಳು ಸಹಕರಿಸಲಿರುವರು.