ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವಿಂಶತಿ ಸರಣಿ ತಾಳಮದ್ದಳೆ 14 ಸಂಘದ ಸದಸ್ಯೆ ಜಯಂತಿ ಹೆಬ್ಬಾರ್ ಇವರ ಪ್ರಾಯೋಜಕತ್ವದಲ್ಲಿ ಬನ್ನೂರು ಭಾರತಿ ನಗರದ ಶ್ರೀ ಬಲಮುರಿ ವಿದ್ಯಾಗಣಪತಿ ದೇವಳದ ಆಶ್ರಯದಲ್ಲಿ ದಿನಾಂಕ 25 ನವೆಂಬರ್ 2024ರಂದು ನಡೆಯಿತು.
ಹಳೆಯಂಗಡಿ ರಾಮ ಭಟ್ಟ ವಿರಚಿತ ‘ಶರಸೇತು ಬಂಧನ’ ತಾಳಮದ್ದಳೆಯಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ ಹಾಗೂ ಚೆಂಡೆ ಮದ್ದಳೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್ ಮತ್ತು ಮಾಸ್ಟರ್ ಪರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಹನೂಮಂತ (ಗುಂಡ್ಯಡ್ಕ ಈಶ್ವರ ಭಟ್), ಅರ್ಜುನ (ಭಾಸ್ಕರ್ ಬಾರ್ಯ ಮತ್ತು ಮಾಂಬಾಡಿ ವೇಣುಗೋಪಾಲ ಭಟ್), ವೃದ್ದ ವಿಪ್ರ (ಗುಡ್ಡಪ್ಪ ಬಲ್ಯ), ಶ್ರೀ ರಾಮ (ಬಡೆಕ್ಕಿಲ ಚಂದ್ರಶೇಖರ್ ಭಟ್) ಸಹಕರಿಸಿದರು. ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ಚಂದ್ರಶೇಖರ್ ಭಟ್ ವಂದಿಸಿದರು.