ಮುರ್ಡೇಶ್ವರ : ಉತ್ತರಕೊಪ್ಪ ಗೋಳಿಕುಂಬ್ರಿ ಇಲ್ಲಿರುವ ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನ (ರಿ.) ಇದರ ವತಿಯಿಂದ ‘ಯಕ್ಷಸಪ್ತಾಹ ಮುರುಡೇಶ್ವರ – 2025’ 11ನೆಯ ವರ್ಷದ ಸಂಭ್ರಮವನ್ನು ದಿನಾಂಕ 08 ಫೆಬ್ರವರಿ 2025ರಿಂದ 14 ಫೆಬ್ರವರಿ 2025ರವರೆಗೆ ಪ್ರತಿದಿನ ಸಂಜೆ 6-00 ಗಂಟೆಗೆ ಮುರ್ಡೇಶ್ವರ ಬಸ್ತಿಮಕ್ಕಿ, ನೀರಗದ್ದೆ ಬೈಲೂರು, ಶ್ರೀ ರಾಘವೇಶ್ವರ ಭಾರತೀ ಹವ್ಯಕ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಪ್ತಾಹದಲ್ಲಿ ಪೂರ್ಣಚಂದ್ರ ಯಕ್ಷಗಾನ ಮಂಡಳಿ (ರಿ.) ಕೊಂಡದಕುಳಿ, ಕುಂಭಾಶಿ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಪೌರಾಣಿಕ ಯಕ್ಷೋತ್ಸವ ನಡೆಯಲಿದೆ.