ಬೆಳ್ತಂಗಡಿ : ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಜಿರೆ, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ (ರಿ.) ಬೆಳ್ತಂಗಡಿ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ಇವರ ಸಹಯೋಗದಲ್ಲಿ ಯಕ್ಷಗಾನ ಮಹೋಪಾಧ್ಯಾಯ ನೆಡ್ಲೆ ನರಸಿಂಹ ಭಟ್ ಅವರ ಸಂಸ್ಮರಣೆಗಾಗಿ ‘ಯಕ್ಷಾವತರಣ-5’ ಎಂಬ ಯಕ್ಷಸಾಂಗತ್ಯ ತಾಳಮದ್ದಳೆ ಸಪ್ತಾಹ ಹಾಗೂ ‘ಯಶೋ’ ಯಕ್ಷನಮನ – ಗಾನ ನೃತ್ಯ ಚಿತ್ರ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ದಿನಾಂಕ 23-09-2024ರಿಂದ 30-09-2024ರವರೆಗೆ ಬೆಳ್ತಂಗಡಿ ಲಯ್ಲಾದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ದಿನಾಂಕ 23 ಸೆಪ್ಟೆಂಬರ್ 2024ರಂದು ‘ಭೀಷ್ಮಪರ್ವ’, ದಿನಾಂಕ 24 ಸೆಪ್ಟೆಂಬರ್ 2024ರಂದು ‘ಇಂದ್ರತಂತ್ರ – ಪ್ರಹ್ಲಾದಶಾಪ’, ದಿನಾಂಕ 25 ಸೆಪ್ಟೆಂಬರ್ 2024ರಂದು ‘ಶಲ್ಯ ಸಾರಥ್ಯ’, ದಿನಾಂಕ 26 ಸೆಪ್ಟೆಂಬರ್ 2024ರಂದು ‘ವಾಮನ ಚರಿತ್ರೆ’, ದಿನಾಂಕ 27 ಸೆಪ್ಟೆಂಬರ್ 2024ರಂದು ‘ಕರ್ಣಭೇದನ’, ದಿನಾಂಕ 28 ಸೆಪ್ಟೆಂಬರ್ 2024ರಂದು ‘ಅಗ್ನಿಪರೀಕ್ಷೆ – ನಿಜಪಟ್ಟಾಭಿಷೇಕ’, ದಿನಾಂಕ 29 ಸೆಪ್ಟೆಂಬರ್ 2024ರಂದು ‘ಗುರುದಕ್ಷಿಣೆ’, ದಿನಾಂಕ 30 ಸೆಪ್ಟೆಂಬರ್ 2024ರಂದು ‘ಯಶೋ’ ಯಕ್ಷನಮನ – ಗಾನ-ನೃತ್ಯ-ಚಿತ್ರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಹಿರಿಯ ಯಕ್ಷಗಾನ ಕಲಾವಿದರು, ಹಿಮ್ಮೇಳ ಮತ್ತು ಮುಮ್ಮೇಳ ತಂಡಗಳು ಈ ಕಲಾವೈಭವದಲ್ಲಿ ಭಾಗವಹಿಸಲಿದ್ದಾರೆ. ‘ಯಕ್ಷಾವತರಣ-5’ ಇದರ ಉದ್ಘಾಟನೆಯನ್ನು ಉದ್ಯಮಿ ನೆಡ್ಳೆ ರಾಮ ಭಟ್ ಮಂಗಳೂರು ನೆರವೇರಿಸಲಿದ್ದು, ಕುರಿಯ ವಿಠಲ ಶಾಸ್ತ್ರಿ ಪ್ರತಿಭಾ ಪುರಸ್ಕಾರವನ್ನು ಜೀ ವಾಹಿನಿಯ ಡ್ರಾಮಾ ಜೂನಿಯರ್ ವಿಜೇತೆ ರಿಷಿಕಾ ಕುಂದೇಶ್ವರ ಇವರಿಗೆ ನೀಡಲಾಗುವುದು. ಪ್ರತಿದಿನ ಸಂಜೆ 4-45 ಗಂಟೆಗೆ ಈ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇದೆ ಎಂದು ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷರಾದ ವಿ. ಕುಮಾರಸ್ವಾಮಿ ಕನ್ಯಾನ, ಸಂಚಾಲಕ ಉಜಿರೆ ಅಶೋಕ ಭಟ್, ಸ್ಥಾನಿಕ ಸಭಾದ ಅಧ್ಯಕ್ಷರಾದ ಶಿವಾನಂದ ರಾವ್ ಕಕ್ಕನೇಜಿ, ರೋಟರಿ ಕ್ಲಬ್ ಬೆಳ್ತಂಗಡಿ ಅಧ್ಯಕ್ಷರಾದ ಪೂರನ್ ವರ್ಮ ಉಜಿರೆ ಇವರುಗಳು ತಿಳಿಸಿದ್ದಾರೆ.