ಕಾರ್ಕಳ: ಯಕ್ಷದೇಗುಲ ಕಾಂತಾವರದ 23ನೇ ವರ್ಷದ ಕಾರ್ಯಕ್ರಮದ ಅಂಗವಾಗಿ ಹನ್ನೆರಡು ತಾಸಿನ ಆಟ, ಕೂಟ, ಬಯಲಾಟ “ಯಕ್ಷೋಲ್ಲಾಸ 2025” ಕಾರ್ಯಕ್ರಮವು ದಿನಾಂಕ 20 ಜುಲೈ 2025ರಂದು ಕಾಂತಾವರ ಕ್ಷೇತ್ರದಲ್ಲಿ ಬೆಳಿಗ್ಗೆ ಘಂಟೆ 10.00ರಿಂದ ನಡೆಯಲಿದೆ.
ಗ್ರಾಮ ಪಂ. ಅಧ್ಯಕ್ಷರಾದ ರಾಜೇಶ್ ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಬಾರಾಡಿಬೀಡು ಸುಮತಿ ಆರ್. ಬಲ್ಲಾಳ್ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ ಕಾಂತಾವರ ಕ್ಷೇತ್ರದ ಧರ್ಮದರ್ಶಿಗಳಾದ ಡಾ. ಜೀವಂಧರ್ ಬಲ್ಲಾಳರ ಅಧ್ಯಕ್ಷತೆಯಲ್ಲಿ ಯಕ್ಷಗಾನ ಕ್ಷೇತ್ರದ ಬಹು ಸಾಧನೆಯ ನಿವೃತ್ತ ಕಲಾವಿದರಾದ ಬಿ.ಸಿ.ರೋಡು ಶಿವರಾಮ ಜೋಗಿಯವರಿಗೆ ಯಕ್ಷಗಾನದ ಸವ್ಯಸಾಚಿ ‘ಬಾಯಾರು ದಿ. ಪ್ರಕಾಶ್ಚಂದ್ರ ರಾವ್ ಸಂಸ್ಮರಣಾ ಪ್ರಶಸ್ತಿ’ ಹಾಗೂ ಕಟೀಲು ಮೇಳದ ನಿವೃತ್ತ ಕಲಾವಿದ ಗುಂಡಿಮಜಲು ಗೋಪಾಲ ಭಟ್ ಇವರಿಗೆ ‘ಪುತ್ತೂರು ದಿ.ಡಾ. ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.