ಮಂಗಳೂರು: ಮಂಗಳೂರಿನ ನೃತ್ಯಾಂಗನ್ ಸಂಸ್ಥೆ ಆಯೋಜಿಸಿದ್ದ ‘ಯುವ ನೃತ್ಯೋತ್ಸವ – 2025’ ಕಾರ್ಯಕ್ರಮವು ದಿನಾಂಕ 08 ಜೂನ್ 2025ರ ಭಾನುವಾರದಂದು ಮಂಗಳೂರಿನ ಡಾನ್ ಬಾಸ್ಕೊ ಹಾಲ್ನಲ್ಲಿ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿದ ಮಂಗಳೂರಿನ ಭರತಾಂಜಲಿ ಸಂಸ್ಥೆಯ ನಿರ್ದೇಶಕಿ ವಿದುಷಿ ಪ್ರತಿಮಾ ಶ್ರೀಧರ್ ಮಾತನಾಡಿ “’ನೃತ್ಯಾಂಗನ್’ನ ‘ರಾಧಿಕಾ ಶೆಟ್ಟಿ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಲಾವಿದರಿಗೆ ವೇದಿಕೆ ಒದಗಿಸುತ್ತಿದ್ದಾರೆ” ಎಂದರು. ಭರತನಾಟ್ಯದ ಲಾಲಿತ್ಯ, ಒಡಿಸ್ಸಿ ನೃತ್ಯದ ಭಕ್ತಿ ಭಾವ, ಸಮೂಹ ನೃತ್ಯದ ಸೊಬಗಿನೊಂದಿಗೆ ಯುವ ಕಲಾವಿದೆಯರು ಕಲಾರಸಿಕರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಉಡುಪಿಯ ಶ್ರೇಷ್ಠಾ ದೇವಾಡಿಗ, ಮೈಸೂರಿನ ಪೂಜಾ ಸುಗಮ್ ಮತ್ತು ಕಿನ್ನಿಗೋಳಿಯ ಶ್ರೇಯಾ ಜಿ. ಭರತನಾಟ್ಯ, ಬೆಂಗಳೂರಿನ ಪೃಥ್ವಿ ನಾಯಕ್ ಒಡಿಸ್ಸಿ ನೃತ್ಯ ಪ್ರದರ್ಶನ ನೀಡಿದರು. ನಗರದ ಭರತಾಂಜಲಿ ಸಂಸ್ಥೆಯ ಸದಸ್ಯೆಯರಿಂದ ಸಮೂಹ ನೃತ್ಯ ಪ್ರದರ್ಶಿಸಲ್ಪಟ್ಟಿತು.
ಶ್ರೇಷ್ಠಾ ದೇವಾಡಿಗ
ಪೂಜಾ ಸುಗಮ್
ಶ್ರೇಯಾ ಜಿ.
ಪೃಥ್ವಿ ನಾಯಕ್