ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ.) ಶಿವಮೊಗ್ಗ ಮತ್ತು ಫ್ರೆಂಡ್ಸ್ ಸೆಂಟರ್ ಶಿವಮೊಗ್ಗ ಇದರ ವತಿಯಿಂದ 245ನೇ ‘ಸಾಹಿತ್ಯ ಹುಣ್ಣಿಮೆ’ ಮನೆ ಮನೆ ಸಾಹಿತ್ಯ ಸಂಭ್ರಮ ಹಾಡು, ಹಾಸ್ಯ, ಕಥೆ, ಕವನ, ಹನಿಗವನ, ವಿಚಾರಗಳ ತಿಂಗಳ ಕಾರ್ಯಕ್ರಮವನ್ನು ದಿನಾಂಕ 03 ಜನವರಿ 2026ರಂದು ಸಂಜೆ 6-00 ಗಂಟೆಗೆ ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ಫ್ರೆಂಡ್ಸ್ ಸೆಂಟರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಲೆನಾಡು ಅಭಿವೃದ್ಧಿ ಮಂಡಲಿಯ ಅಧ್ಯಕ್ಷರಾದ ಡಾ. ಆರ್.ಎಂ. ಮಂಜುನಾಥ ಗೌಡರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಡಿ. ಮಂಜುನಾಥ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀಮತಿ ಮಹಾದೇವಿ, ಶ್ರೀಮತಿ ನಳಿನಾಕ್ಷಿ, ನೀಲಪ್ಪ ಇವರಿಂದ ಹಾಡು, ಹಾಸ್ಯ ಕಲಾವಿದ ಉಮೇಶ್ ಗೌಡ ಇವರಿಂದ ಹಾಸ್ಯ, ಡಾ. ಕೆ.ಜಿ. ವೆಂಕಟೇಶ್ ಇವರಿಂದ ಕಥೆ, ಸೂರ್ಯಪ್ರಕಾಶ್ ಡಿ.ಎಚ್., ಶ್ರೀಮತಿ ಬಿ.ಟಿ. ಅಂಬಿಕಾ, ಡಾ. ಅನುಪಮಾ ವೈ.ಜೆ., ಎಂ. ನವೀನ್ ಕುಮಾರ್ ಮತ್ತು ಡಿ. ಗಣೇಶ್ ಇವರಿಂದ ಕವನ ವಾಚನ, ವಾಗೀಶ್ ಆರಾಧ್ಯಮಠ ಮತ್ತು ತಿಮ್ಮೇಶಪ್ಪ ಇವರಿಂದ ಹನಿಗವನ ಪ್ರಸ್ತುತಗೊಳ್ಳಲಿದೆ.


