ಮಂಗಳೂರು : ಅಶೋಕನಗರ ಯುವಕ ಸಂಘ (ರಿ.) ಅಶೋಕನಗರ ಮಂಗಳೂರು ಇದರ 64ನೇ ವಾರ್ಷಿಕೋತ್ಸವ ಸಂಭ್ರಮದ ಪ್ರಯುಕ್ತ ಸನ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ, ಗೌರವ ಅಭಿನಂದನೆ ಮತ್ತು ಸಾಂಸ್ಕೃತಿಕ ವೈಭವ ಕಾರ್ಯಕ್ರಮಗಳನ್ನು ದಿನಾಂಕ 01 ಮಾರ್ಚ್ 2025ರಂದು ಸಂಜೆ 7-00 ಗಂಟೆಗೆ ಅಶೋಕನಗರ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭವು ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ಇವರ ಆಡಳಿತಾಧಿಕಾರಿ ಜಗದೀಶ ಕೆ. ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಶಸ್ತಿ ವಿಜೇತ ಉರ್ವ ಅಶೋಕನಗರದ ಬಿಲ್ಲವ ಸಂಘಕ್ಕೆ ಗೌರವ ಅಭಿನಂದನೆ ಹಾಗೂ ಮಾಜಿ ಸೈನಿಕ ಪ್ರಸನ್ನ ಮತ್ತು ಅಂಗನವಾಡಿ ಸಹಾಯಕಿ ಶ್ರೀಮತಿ ವಿಶಾಲಾಕ್ಷಿ ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಬೈಕಾಡಿ ಪ್ರತಿಷ್ಠಾನದ ಅಂಗ ಸಂಸ್ಥೆ ‘ರತ್ನ ಕಲಾಲಯ’ದ ನಿರ್ದೇಶಕಿ ಅಕ್ಷತಾ ಬೈಕಾಡಿ ಇವರ ಶಿಷ್ಯ ವೃಂದ ಮತ್ತು ಕಲಾವಿದರಿಂದ ನೃತ್ಯ-ಗಾನ-ಕುಂಚ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿವೆ.