Subscribe to Updates

    Get the latest creative news from FooBar about art, design and business.

    What's Hot

    ಮುಂಬೈಯಲ್ಲಿ ಯಕ್ಷಗಾನ ಪ್ರದರ್ಶನ ಮತ್ತು ಕಲಾವಿದರ ಸನ್ಮಾನ ಕಾರ್ಯಕ್ರಮ

    August 18, 2025

    ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ‘ಸಂಗಮ’ ಸಮೂಹ ಕಲಾ ಪ್ರದರ್ಶನ | ಆಗಸ್ಟ್ 23

    August 18, 2025

    Book review | ‘IRU’ -the Remarkable Life of Irawathi Karve

    August 18, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಮರ್ಶೆ | ದಂಪತಿಗಳ ಕಲಾಭಿವ್ಯಕ್ತಿಯ ಯುಗಳ ಯಕ್ಷ ರೂಪಕ ‘ಚಿತ್ರ ಫಲ್ಗುಣ’
    Review

    ವಿಮರ್ಶೆ | ದಂಪತಿಗಳ ಕಲಾಭಿವ್ಯಕ್ತಿಯ ಯುಗಳ ಯಕ್ಷ ರೂಪಕ ‘ಚಿತ್ರ ಫಲ್ಗುಣ’

    October 29, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಯಕ್ಷಗಾನದಲ್ಲಿ ಹೊಸತನ, ನಾವೀನ್ಯ ಪ್ರಯೋಗಶೀಲತೆಗಳು ನಿತ್ಯನೂತನ, ಯಕ್ಷ ಸಂವಿಧಾನದ ಒಳಗಡೆಯೇ ಒಂದಿಷ್ಟು ವಿಭಿನ್ನ- ವಿನೂತನ ಆಶಯಗಳನ್ನು ಪ್ರಸ್ತುತ ಪಡಿಸುವ ಪ್ರಕ್ರಿಯೆಗಳು ಇಂದು ಕಂಡು ಬರುತ್ತಿವೆ. ನಿಜ ಜೀವನದಲ್ಲಿ ಸತಿಪತಿಗಳಾಗಿರುವ ಹವ್ಯಾಸಿ ಕಲಾವಿದರು ಪ್ರಸಂಗದಲ್ಲಿ ಸತಿಪತಿಗಳ ಯುಗಳ ಪಾತ್ರ ನಿರ್ವಹಿಸುವ ಮೂಲಕ ಗಮನ ಸಳೆದಿದ್ದು ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು ರಚನೆಯ ಚಿತ್ರ-ಫಲ್ಗುಣ ಎನ್ನುವ ಯಕ್ಷಕಥಾ ರೂಪಕದಲ್ಲಿ.

    ದಿನಾಂಕ 15-10-2023ರಂದು ಹೀಗೊಂದು ಪರಿಕಲ್ಪನೆ ರಂಗಾರ್ಪಣೆಗೊಂಡಿತು. ನೇಪಥ್ಯದ ಪೌರಾಣಿಕ ಕಥೆಯೊಂದರ ಎಳೆ ಅನುಸರಿಸಿ ಮೊಗೆಬೆಟ್ಟು ಎರಡು ಪಾತ್ರಗಳನ್ನು ಚಿತ್ರಿಸಿ, ಅದಕ್ಕೆ ಅನುಗುಣವಾಗಿ ನೃತ್ಯ, ಪರಿಣಾಮಕಾರಿ ಪದ್ಯಗಳ ರಚಿಸಿದರು. ಪ್ರಸಿದ್ಧ ಹವ್ಯಾಸಿ ಕಲಾವಿದರಾದ ಶಶಾಂಕ್ ಪಟೇಲ್ ಹಾಗೂ ಅವರ ಪತ್ನಿ ಶೃತಿಕಾಶಿ ಇದರಲ್ಲಿ ನಾಯಕ-ನಾಯಕಿಯಾಗಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದರು.

    ಚಿತ್ರ ಫಲ್ಗುಣ ಕುತೂಹಲ ಹಾಗೂ ಸಾಕಷ್ಟು ಪ್ರತೀಕ್ಷೆಗಳನ್ನು ಸೃಷ್ಟಿಸಿತ್ತು. ನಿಜ ಜೀವನದ ದ೦ಪತಿಗಳು, ಯಕ್ಷಗಾನದಲ್ಲಿಯೂ ಜೋಡಿಯಾಗಿ ಕಾಣಿಸಿಕೊಳ್ಳುವುದೆ೦ದರೆ ನಿರೀಕ್ಷೆಗಳು ಸಹಜ. ದಂಪತಿಗಳ ಕಲಾಭಿವ್ಯಕ್ತಿ, ಸನ್ನಿವೇಶಗಳ ಸೃಷ್ಟಿ, ರಂಗ ಚಲನೆ, ಮುಖ್ಯವಾಗಿ ಸಂಭಾಷಣೆ ಚುಟುಕಾಗಿದ್ದರೂ ಕಲಾವಿದರು ಭಾವನೆಗಳನ್ನು ಮಾತಿಗಿಂತ ನೃತ್ಯ-ಚಲನೆಯಲ್ಲಿ ತೋರಿಸಿಕೊಟ್ಟಿದ್ದು ಅರ್ಥಪೂರ್ಣವಾಗಿತ್ತು.

    ಚಿತ್ರ-ಫಲ್ಗುಣ ಚಿತ್ರಾಂಗದ ಮತ್ತು ಅರ್ಜುನರ ಪ್ರೇಮಕಾವ್ಯ, ಯಕ್ಷಗಾನ ಪ್ರಸಂಗದಲ್ಲಿ ಈ ಸನ್ನಿವೇಶಗಳು ಕಾಣಿಸಿಕೊಳ್ಳುವುದಿಲ್ಲ. ಇಲ್ಲಿ ಅರ್ಜುನನ ಪ್ರವೇಶ, ತೀರ್ಥಾಟನೆ, ಮಣಿಪುರ ವನ ಪ್ರವೇಶ, ವನದ ವರ್ಣನೆ, ಬೇಟೆಯಾಡುತ್ತಾ ರಾಜಕುಮಾರಿ ಚಿತ್ರಾಂಗದ ಆಗಮನ, ಚಿತ್ರ-ಅರ್ಜುನ ಮುಖಾಮುಖಿ, ಶರ ಪಯೋಗ- ಪ್ರೇಮಾಂಕುರ, ಈತನ್ಮಧ್ಯೆ ಅರ್ಜುನ ನಾಗಲೋಕ ಸೇರಿದ ರಂಗಕ್ರಿಯೆ, ಕನಸಿನಲ್ಲಿ ಚಿತ್ರಾರ್ಜುನ ಪ್ರೇಮ ಸಲ್ಲಾಪ, ಅಂತಿಮದಲ್ಲಿ ಗಾಂಧರ್ವ ವಿವಾಹ ಇದು ಒಟ್ಟಾರೆಯ ದೃಶ್ಯಗಳು.

    ಇಲ್ಲಿ ನೃತ್ಯ-ಗಾಯನ ಗಮನ ಸಳೆಯುತ್ತದೆ. ಹೊಸ ರಾಗಗಳನ್ನು ಸಾಂದರ್ಭಿಕವಾಗಿ ಬಳಸಲಾಗಿದೆ. ಮಾಮೂಲಿ ರೂಪಕಗಳಿಗಿಂಥ ಭಿನ್ನವಾಗಿ ತೋರಿಸುವ ಪ್ರಯತ್ನ ಇಲ್ಲಿ ಗಮನಿಸಬಹುದು. ನೃತ್ಯ ಅಭಿನಯ, ರಂಗಕ್ರಿಯೆಯೊಂದಿಗೆ ಚುಟುಕು ಸಂಭಾಷಣೆಯೂ ಇದ್ದು, ಯಕ್ಷಗಾನ ರೂಪವೂ ಹೌದು- ಯಕ್ಷಗಾನ ರೂಪಕವೂ ಹೌದು ಎನ್ನಬಹುದು. 2 ತಾಸುಗಳ ಅವಧಿ ಚಿತ್ರ- ಫಲ್ಗುಣ ಹೃನ್ಮನಗಳನ್ನು ಪುಳಕಗೊಳಿಸುತ್ತದೆ.

    ವಹವ್ವಾರೆ ಮನಸೂರೆ ಬನಶಂಕರಿ, ಶರವ ಪೂಡಿ ಓಡಿ ಬಂದ ಶರವಲೋಚನೆ, ಚಿತ್ರಾ ಎಂಬವಳೆ… ಧೀರ ನಾರಿಯ ತಡೆದೇ | ನಾ ಶಶಾಂಕಾನ್ವಯನು ನೀ ಶೃತಿಯು ಜೀವವೀಣೆಗೆ | ಹಾಗೂ ಕನಸಿನ ಸನ್ನಿವೇಶದ ಚಂದ್ರವದನೆ ಪ್ರಾಣನಾಯಕಿ, ಹೃದಯ ವೀಣೆಯ ವೈಣಿಕ ಪ್ರತಿಯೊಂದು ಪದ್ಯಗಳು ಕೂಡಾ ಕಿವಿಗೆ ಇಂಪಾಗುವುದರ ಜೊತೆಗೆ ಪದ್ಯವನ್ನು ನೃತ್ಯದ ಜೊತೆ ಸಚೇತನಗೊಳಿಸುವಲ್ಲಿ ಶಶಾಂಕ್- ಶೃತಿಯವರ ಪ್ರಾಮಾಣಿಕ ಶ್ರಮವೂ ಗಮನಾರ್ಹ.

    ಹಿಮ್ಮೇಳದಲ್ಲಿ ಮೊಗೆಬೆಟ್ಟು ಪ್ರಸಾದ ಕುಮಾರರ ಭಾಗವತಿಕ ಸಾಂಪ್ರಾದಾಯಿಕ ಹಾಗೂ ಹೊಸರಾಗಗಳ ಸಂಯೋಜನೆಯೊಂದಿಗೆ ಒಳ್ಳೆಯ ಆರಂಭ ನೀಡಿದರೆ, ರಾಘವೇಂದ್ರ ಹೆಗಡೆ ಯಲ್ಲಾಪುರ ಅವರ ಮದ್ದಳೆಯ ನುಡಿತ, ಶ್ರೀನಿವಾಸ ಪ್ರಭು ಅವರ ಚಂಡೆಯ ಸಾಥ್ ಪ್ರದರ್ಶನವನ್ನು ಉತ್ಕೃಷ್ಟಗೊಳಿಸಿತು. ಈ ಪ್ರದರ್ಶನ ಮಲ್ಯಾಡಿ ಲೈವ್‌ ನಲ್ಲಿ ಪ್ರಸಾರಗೊಂಡು ಜಗತ್ತಿನಾದ್ಯಂತ ಯಕ್ಷಪ್ರೇಮಿಗಳು ವೀಕ್ಷಿಸುವಂತಾಯಿತು.

    • ನಾಗರಾಜ ವಂಡ್ಸೆ, ಪತ್ರಕರ್ತರು ಕುಂದಾಪುರ

    Share. Facebook Twitter Pinterest LinkedIn Tumblr WhatsApp Email
    Previous Articleಲೇಖಕಿ ಸುರೇಖಾ ಭೀಮಗುಳಿಯವರ “ತಲ್ಲಣ” ಕಥಾ ಸಂಕಲನ ಕೃತಿ ಬಿಡುಗಡೆ
    Next Article ಪರಿಚಯ ಲೇಖನ | ‘ಉಜ್ವಲ‌ ಭವಿಷ್ಯದ ಯಕ್ಷ ಪ್ರತಿಭೆ’ ಸೃಜನ್ ಗಣೇಶ್ ಹೆಗಡೆ ಗುಂಡೂಮನೆ
    roovari

    Add Comment Cancel Reply


    Related Posts

    ಮುಂಬೈಯಲ್ಲಿ ಯಕ್ಷಗಾನ ಪ್ರದರ್ಶನ ಮತ್ತು ಕಲಾವಿದರ ಸನ್ಮಾನ ಕಾರ್ಯಕ್ರಮ

    August 18, 2025

    Book review | ‘IRU’ -the Remarkable Life of Irawathi Karve

    August 18, 2025

    ಯುಎಇ ಯಕ್ಷಗಾನ ಕೇಂದ್ರದಿಂದ ಯಕ್ಷಗಾನಾರ್ಚಣೆ, ಯಕ್ಷದರ್ಪಣ ಬಿಡುಗಡೆ ಮತ್ತು ಸಾಧಕರಿಗೆ ಗೌರವಾರ್ಪಣೆ

    August 18, 2025

    ಪಾವಂಜೆಯಲ್ಲಿ ‘ಯಕ್ಷಾಂತರಂಗ’ ಯಕ್ಷಗಾನ ಪ್ರಸಂಗ ಸಾಹಿತ್ಯ ಮತ್ತು ರಂಗ ನಡೆಗಳ ಮಾಹಿತಿ ಕಾರ್ಯಾಗಾರ | ಆಗಸ್ಟ್ 20ರಿಂದ 24

    August 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.