ಬೈಂದೂರು : ಸುರಭಿ (ರಿ.) ಬೈಂದೂರು ಇವರ ವತಿಯಿಂದ ಮೂರು ದಿನಗಳ ರಾಜ್ಯ ಮಟ್ಟದ ನಾಟಕೋತ್ಸವ ‘ರಂಗ ಸುರಭಿ 2024’ ದಿನಾಂಕ 06-04-2024ರಿಂದ 08-04-2024ರವರೆಗೆ ಸಂಜೆ ಗಂಟೆ 6.30ಕ್ಕೆ ಬೈಂದೂರಿನ ಶ್ರೀ ಶಾರದಾ ವೇದಿಕೆಯಲ್ಲಿ ನಡೆಯಲಿದೆ.
ದಿನಾಂಕ 06-04-2024ರಂದು ಬೈಂದೂರಿನ ಶ್ರೀರಾಮ ವಿವಿದೋದ್ಧೇಶ ಟ್ರಸ್ಟಿನ ಆಡಳಿತ ಟ್ರಸ್ಟಿ ಶ್ರೀ ಬಿ ರಾಮಕೃಷ್ಣ ಶೇರೆಗಾರ್ ಇವರ ಅಧ್ಯಕ್ಷತೆಯಲ್ಲಿ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪುರವಧ್ಯಕ್ಷರಾದ ಶ್ರೀ ಚಂದ್ರಶೇಖರ ಶೆಟ್ಟಿ ಕೆರಾಡಿ ಇವರು ಜ್ಯೋತಿ ಪ್ರಜ್ವಲಿಸಿ ನಾಟಕೋತ್ಸವದ ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ರಂಗ ಕಲಾವಿದರಾದ ಶ್ರೀ ವಿಶ್ವೇಶ್ವರ ಅಡಿಗ ಬಿಜೂರು ಇವರಿಗೆ ರಂಗ ಸನ್ಮಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ನಂತರ ಮಂಗಳೂರಿನ ‘ಅಸ್ತಿತ್ವ (ರಿ.)’ ಇವರು ಅಭಿನಯಿಸುವ ಅರುಣ್ ಲಾಲ್ ಕೇರಳ ಇವರ ರಂಗ ಪಠ್ಯ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಜುಗಾರಿ’ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 07-04-2024ರಂದು ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ರಾಂತ ಮುಖ್ಯೋಪಾಧ್ಯಾಯರಾದ ಶ್ರೀ ಕೃಷ್ಣಪ್ಪ ಶೆಟ್ಟಿ ಹುಂಚನಿ ಇವರ ವಹಿಸಲಿರುವರು. ಇದೇ ಸಂದರ್ಭದಲ್ಲಿ ಪಾಂಬೂರಿನ ಪರಿಚಯ ಪ್ರತಿಷ್ಠಾನ ಇದರ ಕಾರ್ಯದರ್ಶಿಯಾದ ಶ್ರೀ ಪ್ರಕಾಶ್ ನೋರೋನ್ನಾ ಇವರಿಗೆ ರಂಗ ಸನ್ಮಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ನಂತರ ಪಟ್ಲದ ಸಾಂಸ್ಕೃತಿಕ ವೇದಿಕೆ ‘ಭೂಮಿಗೀತ’ ಇವರು ಪ್ರಸ್ತುತ ಪಡಿಸುವ ಸಂತೋಷ ನಾಯಕ್ ಪಟ್ಲ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಒಂದು ದಮ್ಮ ಪದ’ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 08-04-2024ರಂದು ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರಿನ ಸುರಭಿ ಇದರ ಅಧ್ಯಕ್ಷರಾದ ಶ್ರೀ ನಾಗರಾಜ ಪಿ. ಯಡ್ತರೆ ಇವರ ವಹಿಸಲಿರುವರು. ಇದೇ ಸಂದರ್ಭದಲ್ಲಿ ಬ್ರಹ್ಮಾವರ ಬೈಕಾಡಿಯ ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಇದರ ಅಧ್ಯಕ್ಷರಾದ ಶ್ರೀ ರೋಹಿತ್ ಎಸ್. ಬೈಕಾಡಿ ಇವರಿಗೆ ರಂಗ ಸನ್ಮಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ನಂತರ ಶಿವಮೊಗ್ಗದ ‘ರಂಗಬೆಳಕು’ ತಂಡವರಿಂದ ಅಜೇಯ್ ನೀನಾಸಂ ಇವರ ರಂಗರೂಪ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಒಲವಿನ ಜಂಕ್ಷನ್’ ನಾಟಕ ಪ್ರದರ್ಶನಗೊಳ್ಳಲಿದೆ.