ಬೆಂಗಳೂರು : ಬೆಂಗಳೂರಿನ ವಿಜಯ ಪದ್ಮ ಸಂಗೀತ ಶಾಲೆ ಹಾಗೂ ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ ಇದರ ಸಹಯೋಗದಲ್ಲಿ ಆಯೋಜಿಸಿದ ‘ಸಮರ್ಪಣ ಸಂಗೀತಂ’ ಶೀರ್ಷಿಕೆಯಡಿಯಲ್ಲಿನ ಕರ್ನಾಟಕ ಶಾಸ್ತ್ರಿಯ ಸಂಗೀತ ಕಾರ್ಯಕ್ರಮವು ದಿನಾಂಕ 24 ಅಕ್ಟೋಬರ್ 2024ರ ಗುರುವಾರದಂದು ಬೆಂಗಳೂರಿನ ಕೋಣನಕುಂಟೆಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆಯಿತು.
ಕರ್ನಾಟಕ ಕಲಾಶೀ ವಿದ್ಯಾನ್ ಶ್ರೀ ಕೆ. ಎಸ್. ಮೋಹನ್ ಕುಮಾರ್ ಇವರ ಕರ್ನಾಟಕ ಶಾಸ್ತ್ರಿಯ ಸಂಗೀತ ಗಾಯನಕ್ಕೆ ಸಹಗಾಯಕರಾಗಿ ಶ್ರೀ. ಎಸ್.ತಾಗರಾಜ್, ಪಿಟೀಲಿನಲ್ಲಿ ವಿದ್ವಾನ್ ವೆಂಕಟೇಶ್ ಜೋಸ್ಟರ್, ಮೃದಂಗದಲ್ಲಿ ವಿದ್ಯಾನ್ ಎನ್. ವಾಸುದೇವ್ ಹಾಗೂ ತಾಂಬೂರಿಯಲ್ಲಿ ಶ್ರೀಮತಿ ಲಕ್ಷ್ಮೀದೇವಿ ಮೋಹನ್ ಕುಮಾರ್ ಸಹಕರಿಸಿದರು. ಕಾರ್ಯಕ್ರಮದಲ್ಲಿ ಕಲಾಶೀ ವಿದ್ಯಾನ್ ಶ್ರೀ ಕೆ. ಎಸ್. ಮೋಹನ್ ಕುಮಾರ್ ತ್ಯಾಗರಾಜರ ರಚನೆಯ ‘ಗಾನ ಮೂರ್ತೆ’ ಕೃತಿಯನ್ನು ವಿಸ್ತಾರವಾಗಿ ಪ್ರಸ್ತುತಪಡಿಸಿದರು.