ಬೆಂಗಳೂರು : ಹವ್ಯಾಸಿ ಯಕ್ಷಗಾನ ರಂಗಭೂಮಿಯಲ್ಲಿ ತನ್ನದೇ ಆದ ಸಾಧನೆಯನ್ನು ಮಾಡಿರುವ ಯಕ್ಷಸಿಂಚನ ಟ್ರಸ್ಟ್ (ರಿ), ಬೆಂಗಳೂರು ಇವರು 15ನೇ ವರುಷದ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 17ನೇ ನವೆಂಬರ್ 2024ನೇ ಭಾನುವಾರ ‘ಬಡಗುತಿಟ್ಟು ಪೌರಾಣಿಕ ಯಕ್ಷೋತ್ಸವ’ವನ್ನು ಬೆಂಗಳೂರಿನ ಕೆಂಪೇಗೌಡನಗರ,ರಾಮಕೃಷ್ಣ ಮಠ ಬಡಾವಣೆ, ಗವಿಪುರ ಸಾಲು ಛತ್ರಗಳ ಎದುರು, ಉದಯಭಾನು ಕಲಾಸಂಘದಲ್ಲಿ ಆಯೋಜಿಸಿದ್ದಾರೆ.
ಮಧ್ಯಾಹ್ನ 3-00 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಯಕ್ಷಕಲಾ ಅಕಾಡೆಮಿ ಬೆಂಗಳೂರು ಇದರ ಬಾಲ ಕಲಾವಿದರುಗಳು ಹಟ್ಟಿಯಂಗಡಿ ರಾಮಭಟ್ಟ ರಚಿತ ‘ಸುಭದ್ರಾ ಕಲ್ಯಾಣ’ ಪ್ರಸಂಗದ ಪ್ರದರ್ಶನಗೈಯುತ್ತಿದ್ದಾರೆ. ನಂತರ ಸಂಜೆ 5-00 ಗಂಟೆಗೆ ಯಕ್ಷಸಿಂಚನ ತಂಡದ ಕಲಾವಿದರುಗಳು ಬೊಟ್ಟಿಕೆರೆ ಪುರುಷೋತ್ತಮ ಪೂಂಜ ರಚಿತ ‘ಮಾನಿಷಾದ’ ಪ್ರಸಂಗವನ್ನು ಪ್ರದರ್ಶನ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಖ್ಯಾತ ಯಕ್ಷಗುರುಗಳು ಹಾಗೂ ಭಾಗವತರಾದ ಶ್ರೀ ಉಮೇಶ್ ಭಟ್ ಬಾಡ ಇವರ ನಾಲ್ಕು ದಶಕಗಳ ಯಕ್ಷಗಾನ ಕೈಂಕರ್ಯಕ್ಕಾಗಿ 2024ನೇ ಸಾಲಿನ ‘ಸಾರ್ಥಕ ಸಾಧಕ ಗೌರವ ಪ್ರಶಸ್ತಿ’ ಪ್ರದಾನವಾಗಲಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಖ್ಯಾತ ಅರ್ಥಧಾರಿಗಳಾದ ಶ್ರೀ ಮೋಹನ್ ಹೆಗಡೆ ಹಾಗೂ ಖ್ಯಾತ ಪ್ರಕಾಶಕರಾದ ವೀರಕಪುತ್ರ ಶ್ರೀನಿವಾಸ ಆಗಮಿಸುತ್ತಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಜಾವಾಣಿ ಕನ್ನಡ ದಿನಪತ್ರಿಕೆಯ ಸಂಪಾದಕರಾದ ಶ್ರೀ ರವೀಂದ್ರ ಭಟ್ ಐನಕೈ ಇವರು ವಹಿಸಿಕೊಳ್ಳಲಿದ್ದಾರೆ. ಖ್ಯಾತ ಹಿಮ್ಮೇಳ ಕಲಾವಿದರಾದ ಶ್ರೀ ಎ.ಪಿ. ಪಾಠಕ್ ಇವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕಲಾವಿದರಾಗಿ ಶ್ರೀ ಎ.ಪಿ. ಪಾಠಕ್, ಶ್ರೀ ಕೃಷ್ಣಮೂರ್ತಿ ತುಂಗ, ಕುಮಾರಿ ಚಿತ್ಕಲಾ ತುಂಗ, ಶ್ರೀ ಪನ್ನಗ ಮಯ್ಯ, ಕುಮಾರ ರಜತ್, ಕುಮಾರಿ ಪ್ರಣವಿ, ಕುಮಾರಿ ಪಂಚಮಿ, ಕುಮಾರ ಸ್ಕಂದ, ಕುಮಾರಿ ಪ್ರಣತಿ, ಕುಮಾರ ಸುಜನ್, ಕುಮಾರಿ ವಿದುಲ, ಕುಮಾರ ಅಕ್ಷಜ್ಞ, ಕುಮಾರಿ ಭಾರ್ಗವಿ, ಕುಮಾರ ಅಶ್ವಿನ್, ಶ್ರೀ ರವಿ ಮಡೋಡಿ, ಶ್ರೀ ಶಶಿರಾಜ ಸೋಮಯಾಜಿ, ಶ್ರೀ ಮನೋಜ್ ಭಟ್, ಶ್ರೀ ಗುರುರಾಜ್ ಭಟ್, ಶ್ರೀ ಅಭಿನವ ತುಂಗ, ಶ್ರೀ ಆದಿತ್ಯ ಉಡುಪ, ಶ್ರೀ ಕೃಷ್ಣ ಶಾಸ್ತ್ರಿ, ಶ್ರೀ ಆದಿತ್ಯ ಹೊಳ್ಳ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪ್ರಸಂಗಗಳನ್ನು ಯಕ್ಷಗುರು ಕೃಷ್ಣಮೂರ್ತಿ ತುಂಗ ಇವರು ನಿರ್ದೇಶನ ಮಾಡಿರುತ್ತಾರೆ
ಸಂಪರ್ಕ : ರವಿ ಮಡೋಡಿ-9986384205, ಶಶಿರಾಜ ಸೋಮಯಾಜಿ- 9986363495