ಬೆಂಗಳೂರು : ಪ್ರೆಸ್ಟೀಜ್ ಸೆಂಟರ್ ಆಫ್ ಪರ್ಫಾಮಿಂಗ್ ಆರ್ಟ್ಸ್ ಇವರು ಹಮ್ಮಿಕೊಂಡಿರುವ ‘ಚಿಗುರು ರಂಗೋತ್ಸವ’ದಲ್ಲಿ ದಿನಾಂಕ 14 ಮಾರ್ಚ್ 2025ರಂದು 3-00 ಮತ್ತು 7-00 ಗಂಟೆಗೆ ಬೆಂಗಳೂರಿನ ಕೋಣನಕುಂಟೆ ಮೆಟ್ರೋ ಸ್ಠೆಷನ್ ಬಳಿಯಿರುವ ಪ್ರೆಸ್ಟೀಜ್ ಸೆಂಟರ್ ಆಫ್ ಪರ್ಫಾಮಿಂಗ್ ಆರ್ಟ್ಸ್ ಇಲ್ಲಿ ಸಂಚಾರಿ ಥಿಯೇಟರ್ ತಂಡದವರು ‘ರೊಶೊಮನ್’ ನಾಟಕ ಪ್ರದರ್ಶನ ನೀಡಲಿದ್ದಾರೆ.
ಜಪಾನಿನ ಬರಹಗಾರ ರುನೊಸುಕೆ ಅಕುತಗುವ ಅವರು ರಚಿಸಿದ ಕತೆಗಳನ್ನು ಆಧಾರವಾಗಿಟ್ಟುಕೊಂಡು ಅಕಿರಾ ಕುರುಸಾವಾ ಚಲನಚಿತ್ರವನ್ನಾಗಿಸಿದ ರಶೋಮನ್ ಚಲನಚಿತ್ರವನ್ನು ಆಧರಿಸಿ ಹಿಂದಿ ಲೇಖಕ ರಘುವೀರ್ ಸಹಾಯ್ ಹಿಂದಿ ನಾಟಕವನ್ನು ರಚಿಸಿದ್ದಾರೆ ಮತ್ತು ಅದನ್ನು ಕನ್ನಡಕ್ಕೆ ಎಸ್ ಮಾಲತಿ ಅನುವಾದಿಸಿದ್ದಾರೆ.