ಮಂಗಳೂರು : ಕೊಂಕಣಿ ಭಾಷಾ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಇಬ್ಬರು ಕೊಂಕಣಿ ಸಾಹಿತಿಗಳ ರಾಷ್ಟ್ರ ಮಟ್ಟದ ಜನ್ಮಶತಾಬ್ದಿ ಜಂಟಿ ಆಚರಣಾ ಸಮಾರಂಭ ದಿನಾಂಕ 15 ಮತ್ತು 16 ಮಾರ್ಚ್ 2025 ರಂದು ನಡೆಯಲಿದೆ.
ಕೊಂಕಣಿ ಭಾಷೆಗೆ ಪ್ರಥಮ ಪದ್ಮವಿಭೂಷಣ ಗರಿ ತಂದುಕೊಟ್ಟ ದಿ. ರವೀಂದ್ರ ಕೇಳ್ಕರ್ ಮತ್ತು ಮನೋಹರ್ ರಾಯ್ ಸರ್ದೇಸಾಯಿ ಇವರ ಜನ್ಮಶತಾಬ್ಬಿ ಕಾರ್ಯಕ್ರಮ ಇಲ್ಲಿನ ಶಕ್ತಿನಗರದ ವಿಶ್ವಕೊಂಕಣಿ ಕೇಂದ್ರದಲ್ಲಿ ನಡೆಯಲಿದೆ ಎಂದು ವಿಶ್ವಕೊಂಕಣಿ ಕೇಂದ್ರದ ಕಾರ್ಯದರ್ಶಿ ಡಾ. ಮೋಹನ್ ಪೈ ತಿಳಿಸಿದರು.
ದಿನಾಂಕ 15 ಮಾರ್ಚ್ 2025ರಂದು ಬೆಳಗ್ಗೆ ಘಂಟೆ 9.30ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಗೋವಾ ಭಾಷಾ ನಿರ್ದೆಶನಾಲಯ ಮುಖ್ಯಸ್ಥ ಪ್ರಶಾಂತ್ ಶಿರೋಡ್ಕರ್, ಗೋವಾದ ಗಿರೀಶ್ ಕೇಳ್ಕರ್, ಸುನಿಲ್ ಸರ್ದೇಸಾಯ್ ಭಾಗವಹಿಸಲಿದ್ದಾರೆ.
ಹಿರಿಯ ಸಾಹಿತಿ ಹಾಗೂ ನ್ಯಾಯವಾದಿಯಾದ ಉದಯ ಎಲ್. ಭೇಂದ್ರೆ, ರವೀಂದ್ರ ಕೇಳ್ಕರ್ ವಿಚಾರ ಮಂಡಿಸಲಿದ್ದಾರೆ. ಬಳಿದ ವಿವಿಧ ವಿಚಾರಗೋಷ್ಠಿ ನಡೆಯಲಿದೆ. ಸಂಜೆ ಘಂಟೆ 4.00ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ನಿರ್ಮಿಸಿರುವ ರವೀಂದ್ರ ಕೇಳ್ಕರ್ ಇವರ ಜೀವನ ಮತ್ತು ಸಾಧನೆ ಬಗ್ಗೆ ಸಾಕ್ಷ್ಯ ಚಿತ್ರ ಪ್ರದರ್ಶನ ನಡೆಯಲಿದೆ ಎಂದರು.
ದಿನಾಂಕ 16 ಮಾರ್ಚ್ 2025ರಂದು ಬೆಳಗ್ಗೆ ಘಂಟೆ 9.30ಕ್ಕೆ ಮನೋಹರ್ ರಾಯ್ ಸರ್ದೇಸಾಯ್ ಬಗ್ಗೆ ಗೋವಾದ ಹೆಸರಾಂತ ಸಾಹಿತಿ ಮಾಧವ ಬೋರಕಾರ್ ಭಾಷಣ ಮಾಡುವರು. ಬಳಿಕ ವಿವಿಧ ವಿಚಾರಗೋಷ್ಠಿ ನಡೆಯಲಿದೆ. ಸಂಜೆ ಘಂಟೆ 4.00ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.