ಮಡಿಕೇರಿ : ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಸಮಿತಿ ವತಿಯಿಂದ ಕನ್ನಡ ಭವನದ ಕೊಡಗು ಜಿಲ್ಲಾ ಘಟಕ ಹಾಗೂ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭವನ್ನು ದಿನಾಂಕ 23 ಮಾರ್ಚ್ 2025ರಂದು ಮಧ್ಯಾಹ್ನ 2-00 ಗಂಟೆಗೆ ಮಡಿಕೇರಿಯ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಕನ್ನಡ ಭವನದ ಸ್ಥಾಪಕ ಸಂಚಾಲಕ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಉದ್ಘಾಟಿಸಲಿದ್ದು, ಕನ್ನಡ ಭವನದ ಕೊಡಗು ಜಿಲ್ಲಾಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ, ಹಿರಿಯ ಸಾಹಿತಿ ಭಾರಧ್ವಜ್ ಕೆ. ಆನಂದತೀರ್ಥ, ಕನ್ನಡ ಭವನ ಕೇಂದ್ರ ಸಮಿತಿಯ ಉಪಾಧ್ಯಕ್ಷ ಕೆ.ಪಿ. ರಾಜೇಶ್ ಚಂದ್ರ ಪಾಲ್ಗೊಳ್ಳಲಿದ್ದಾರೆ. ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾಧ್ಯಕ್ಷ ವಿರಾಜ್ ಅಡೂರು ಪ್ರಾಸ್ತಾವಿಕ ನುಡಿಯನ್ನಾಡಲಿದ್ದಾರೆ. ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷೆ ಎಂ.ಎ. ರುಬೀನಾ, ಜಿಲ್ಲಾ ಕೋಶಾಧಿಕಾರಿ ಚಂದನ್ ನಂದರಬೆಟ್ಟು ಸೇರಿದಂತೆ ಕನ್ನಡ ಭವನ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾಸರಗೋಡಿನ ಕನ್ನಡ ಭವನದ ‘ಕನ್ನಡ ಪಯಸ್ವಿನಿ ಪ್ರಶಸ್ತಿ-2025’ನ್ನು ಬೊಳ್ಳಜಿರ ಬಿ. ಅಯ್ಯಪ್ಪ, ಎಂ.ಎ. ರುಬೀನಾ, ಬಿ.ಜಿ. ಅನಂತಶಯನ, ಭಾರದ್ವಾಜ್ ಕೆ. ಆನಂದತೀರ್ಥ, ನಾಗೇಶ್ ಕಾಲೂರು, ಕೊಟ್ಟುಕತ್ತಿರ ಯಶೋದ ಪ್ರಕಾಶ್, ಹೆಚ್.ಜಿ. ಯೋಗೇಶ್, ತೆನ್ನೀರ ಟೀನಾ ಚಂಗಪ್ಪ, ಅಜ್ಜಿಕುಟ್ಟಿರ ಭವ್ಯ ಬೋಪಣ್ಣ, ಬಿ.ಆರ್. ಬಸವರಾಜ್, ಚಂದನ್ ನಂದರಬೆಟ್ಟು ಬೊಟ್ಟೋಳಂಡ ನಿವ್ಯ ದೇವಯ್ಯ ಹಾಗೂ ಕನ್ನಡ ಭವನದ ‘ಭರವಸೆಯ ಬೆಳಕು’ ಪ್ರಶಸ್ತಿಯನ್ನು ಯೋಗಪಟು ಬಿ.ಕೆ. ಸಿಂಚನ ಇವರುಗಳಿಗೆ ಪ್ರದಾನ ಮಾಡಲಾಗುವುದು. ಹಿರಿಯ ಸಾಹಿತಿ ಪಿ.ವಿ. ಪ್ರದೀಪ್ ಕುಮಾರ್, ಜಯಾನಂದ ಪೆರಾಜೆ, ಡಾ. ಶಾಂತ ಪುತ್ತೂರು, ವಿರಾಜ್ ಅಡೂರು, ಡಾ. ಕೊಳ್ಚಪ್ಪೆ ಗೋವಿಂದ ಭಟ್, ಡಾ. ಟಿ. ತ್ಯಾಗರಾಜ್, ರೇಖಾ ಎಸ್. ರಾವ್, ಡಾ. ಹೇಮಂತ್ ಕುಮಾರ್, ಕೆ.ಪಿ. ರಾಜೇಶ್‌ಚಂದ್ರ, ವಸಂತ್ ಕೆರೆಮನೆ ಇವರಿಗೆ ‘ಕೊಡಗು ಜಿಲ್ಲಾ ಸಾಹಿತ್ಯ ಪ್ರಶಸ್ತಿ-2025’ ನೀಡಿ ಗೌರವಿಸಲಾಗುವುದು. ಅಲ್ಲದೆ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿಯ ಸ್ಥಾಪಕ ಸಂಚಾಲಕ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಇವರಿಗೆ ‘ಗಡಿನಾಡ ಚೇತನ ವಿಶೇಷ ಗೌರವ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.
ಇದೇ ಸಂದರ್ಭದಲ್ಲಿ ಸಾಹಿತಿ ಅಜ್ಜಿಕುಟೀರ ಭವ್ಯ ಬೋಪಣ್ಣರವರ ‘ದೇವನೆಲೆರ ಭೀರ್ಯ’ ಹಾಗೂ ಲೇಖಕಿ ತೆನ್ನೀರ ಟೀನಾ ಚಂಗಪ್ಪ ಇವರ ‘ಮನದಾಳದ ಹೆಜ್ಜೆ’ ಕೃತಿಗಳು ಬಿಡುಗಡೆಯಾಗಲಿದೆ. ಕನ್ನಡ ಭವನದ ಜಿಲ್ಲಾಧ್ಯಕ್ಷರು ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರೂ ಆಗಿರುವ ಬೊಳ್ಳಜಿರ ಬಿ. ಅಯ್ಯಪ್ಪ, ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಎಂ.ಎ. ರುಬೀನಾ, ಕನ್ನಡ ಭವನದ ಉಪಾಧ್ಯಕ್ಷ ತೆನ್ನೀರ ಚೀನಾ ಚಂಗಪ್ಪ, ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು, ಖಜಾಂಚಿ ವಿನೋದ್ ಕುಡ್ತೇಕರ್, ನಿರ್ದೇಶಕರುಗಳಾದ ಅರುಣ್ ಕುಮಾರ್, ಎಸ್.ಎ. ರಿಶಾ, ಹರ್ಷಿತಾ ಶೆಟ್ಟಿ, ಕೆ.ಎಂ. ಸಂಕೇತ್, ಮಾಗಲು ಲೋಹಿತ್, ಲೋಕೇಶ್ ಕಾಟಕೇರಿ, ಎಸ್.ಆರ್. ವತ್ಸಲ, ಪೇರಿಯಂಡ ಜಯಂತಿ ಉತ್ತಪ್ಪ, ಬಿ.ಎನ್. ಚಿತ್ರಾ ಸುಜನ್, ಎಂ.ಎಂ. ಅಬ್ದುಲ್ಲಾ, ವಿಶ್ವ ಕುಂಬೂರು, ಕೆ.ಎಂ. ವಿನೋರ್, ಚುಟುಕು ಸಾಹಿತ್ಯ ಪರಿಷತ್‌ನ ಉಪಾಧ್ಯಕ್ಷೆ ಪೇರಿಯಂಡ ಯಶೋಧ, ಕಾರ್ಯದರ್ಶಿ ಬೊಟ್ಟೋಳಂಡ ನಿವ್ಯಾ ಕಾವೇರಮ್ಮ, ಕಾರ್ಯಕಾರಿಣಿ ಸದಸ್ಯರಾದ ಕರವಂಡ ಸೀಮಾ ಗಣವತಿ, ಪಳಂಗೀಯಂಡ ಶರತ್ ಬೋಪಣ್ಣ, ಕಿಶೋರ್ ರೈ ಕತ್ತಲೆಕಾಡು, ಕೆ.ಎ. ಸಂಕೇತ್, ಹೇಮಂತ್ ಪಾರೇರ, ಪಂದ್ಯಂಡ ರೇಣುಕಾ ಸೋಮಯ್ಯ, ಅಮ್ಮಾಟಂಡ ವಿಂಧ್ಯಾ ದೇವಯ್ಯ, ಮೊಣ್ಣಂಡ ವಿನು ಕಾರ್ಯಪ್ಪ, ಕಾಣತಂಡ ಭವ್ಯ ದೇವಯ್ಯ, ಉಡುವೆರ ರೇಖಾ ರಘು, ಕೆ.ಎಂ. ವಿನೋದ್ ಪದ ಸ್ವೀಕಾರ ಮಾಡಲಿದ್ದಾರೆ. ಹಿರಿಯ ಕವಿ ನಾಗೇಶ್ ಕಾಲೂರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ‘ಚುಟುಕು ಕವಿಗೋಷ್ಠಿ’ಯಲ್ಲಿ ಸುಮಾರು 35ಕ್ಕೂ ಹೆಚ್ಚು ಚುಟುಕು ಕವಿಗಳು ಕವನ ವಾಚನ ಮಾಡಲಿದ್ದಾರೆ ಎಂದು ಕನ್ನಡ ಭವನದ ಜಿಲ್ಲಾಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಎ. ರುಬೀನಾ ತಿಳಿಸಿದ್ದಾರೆ.