ಮಂಗಳೂರು : ಸಪ್ತಕ ಬೆಂಗಳೂರು ಇದರ ವತಿಯಿಂದ ಚಿರಂತನ ಚಾರಿಟೇಬಲ್ ಟ್ರಸ್ಟ್ ಸುರತ್ಕಲ್ ಮತ್ತು ರಾಮಕೃಷ್ಣ ಮಠ ಮಂಗಳೂರು ಇವರ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ಪಂಡಿತ್ ಓಂಕಾರ ಗುಲ್ವಾಡಿಯವರಿಗೆ ಸನ್ಮಾನ ‘ಸಂಗೀತ್ ಸಮ್ಮಾನ್’ ಕಾರ್ಯಕ್ರಮವನ್ನು ದಿನಾಂಕ 13 ಏಪ್ರಿಲ್ 2025ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಆಯೋಜಿಸಲಾಗಿದೆ.
ಸಂಜೆ 5-00 ಗಂಟೆಗೆ ನಡೆಯಲಿರುವ ಅಂಕುಶ್ ನಾಯಕ್ ಮತ್ತು ಕಾರ್ತಿಕ್ ಭಟ್ ಇವರ ಸಿತಾರ್ ಕೊಳಲು ಜುಗಲ್ ಬಂದಿಗೆ ಧಾರವಾಡದ ಹೇಮಂತ್ ಜೋಶಿ ತಬಲಾ ಸಾಥ್ ನೀಡಲಿದ್ದಾರೆ. 6-00 ಗಂಟೆಗೆ ಪಂಡಿತ್ ವೆಂಕಟೇಶ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಸನ್ಮಾನ ಸಮಾರಂಭ ನಡೆಯಲಿದೆ. 6-30 ಗಂಟೆಗೆ ಧಾರವಾಡದ ಪಂಡಿತ್ ವೆಂಕಟೇಶ್ ಕುಮಾರ್ ಇವರ ಹಾಡುಗಾರಿಕೆಗೆ ಪಂಡಿತ್ ಓಂಕಾರ ಗುಲ್ವಾಡಿ ತಬಲಾ ಹಾಗೂ ಮುಂಬೈಯ ಪಂಡಿತ್ ಸುಧೀರ್ ನಾಯಕ್ ಸಂವಾದಿನಿ ನುಡಿಸಲಿದ್ದಾರೆ.