ಸಾಣೇಹಳ್ಳಿ : ಶ್ರೀ ಶಿವಕುಮಾರ ಕಲಾಸಂಘ (ರಿ.) ಮತ್ತು ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ ಇದರ ವತಿಯಿಂದ ‘ಮಕ್ಕಳ ಹಬ್ಬ ಸಮಾರೋಪ’ ಸಮಾರಂಭವನ್ನು ದಿನಾಂಕ 29 ಏಪ್ರಿಲ್ 2025ರಂದು ಬೆಳಗ್ಗೆ 8-30 ಗಂಟೆಗೆ ಸಾಣೇಹಳ್ಳಿಯ ಎಸ್.ಎಸ್. ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಮೊದಲ ಅವಧಿ ಬೆಳಗ್ಗೆ 8-30 ಗಂಟೆಗೆ ವಚನ ಗೀತೆ, ಯೋಗ ನೃತ್ಯ, ವಚನ ನೃತ್ಯ, ಎರಡನೇ ಅವಧಿ ಬೆಳಗ್ಗೆ 10-30 ಗಂಟೆಗೆ ಕೋಟಗಾನಳ್ಳಿ ರಾಮಯ್ಯ ರಚನೆಯ ರುಚಿತ್ ಕುಮಾರ್ ಬಿ.ಸಿ. ಇವರ ನಿರ್ದೇಶನದಲ್ಲಿ ಭೂಮಿ ತಂಡದವರಿಂದ ‘ರತ್ನಪಕ್ಷಿ’, ಕೃಷ್ಣಮೂರ್ತಿ ಎನ್. ತಾಳಿಕಟ್ಟೆ ಇವರ ರಚನೆ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಅಗ್ನಿ ತಂಡದವರಿಂದ ‘ಕಳ್ಳರ ಸಂತೆ’, ಮೂರನೇ ಅವಧಿ ಸಂಜೆ 4-30 ಗಂಟೆಗೆ ಶ್ರೀಪಾದ ಭಟ್ ಕನ್ನಡ ರೂಪಾಂತರಗೊಳಿಸಿರುವ ಜಗದೀಶ್ ನೆಗಳೂರು ವಿನ್ಯಾಸ ಮತ್ತು ನಿರ್ದೇಶನದಲ್ಲಿ ಆಕಾಶ ತಂಡದವರಿಂದ ‘ರಿಂಗಿನಾಟ’ ಹಾಗೂ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ರಚಿಸಿರುವ ಚಂದ್ರಮ್ಮ ಆರ್. ಇವರ ನಿರ್ದೇಶನದಲ್ಲಿ ಗಾಳಿ ತಂಡದವರಿಂದ ‘ಕೋಳೂರು ಕೊಡಗೂಸು’ ನಾಟಕಗಳು ಪ್ರದರ್ಶನಗೊಳ್ಳಲಿದೆ. ಮಧ್ಯಾಹ್ನ 2-30 ಗಂಟೆಗೆ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶಿಬಿರದ ಅಭಿಪ್ರಾಯ ಹಂಚಿಕೆ, ಸಾಣೇಹಳ್ಳಿ ಶಿವಸಂಚಾರ ಕಲಾತಂಡದವರಿಂದ ವಚನಗೀತೆ ಹಾಗೂ ಪ್ರಶಸ್ತಿ ಪತ್ರ ವಿತರಣೆ ನಡೆಯಲಿದೆ.