ಬೆಂಗಳೂರು : ಸುಂದರ ಪ್ರಕಾಶನ ಇದರ ವತಿಯಿಂದ ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 11 ಮೇ 2025ರಂದು ಬೆಳಗ್ಗೆ 11-00 ಗಂಟೆಗೆ ಬೆಂಗಳೂರು ಬಸವನಗುಡಿ ಬಿ.ಪಿ. ವಾಡಿಯ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಇಲ್ಲಿ ಆಯೋಜಿಸಲಾಗಿದೆ.
2025ರ ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ’ಯನ್ನು ನಟಿ ನಿರ್ದೇಶಕಿ ಪ್ರಾಧ್ಯಾಪಕಿ ಡಾ. ಸುಷ್ಮಾ ಎಸ್.ವಿ. ಇವರಿಗೆ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಲೇಖಕ ಮಂ.ಆ. ವೆಂಕಟೇಶ್ ಇವರ ‘ಕರ್ನಾಟಕ ರಾಜ್ಯ ರಮಾರಮಣರು’ ಕರ್ನಾಟಕ ರಾಜ್ಯವನ್ನಾಳಿದವರು : ಒಂದು ನೆನಪು ಎಂಬ ಕೃತಿ ಲೋಕಾರ್ಪಣೆಗೊಳ್ಳಲಿದೆ. ಕವಿ ಬಿ.ಆರ್. ಲಕ್ಷ್ಮಣ ರಾವ್, ರಂಗಕರ್ಮಿ ಗುಂಡಣ್ಣ ಮತ್ತು ಸಾಹಿತಿ ಎಚ್. ಗೋಪಾಲಕೃಷ್ಣ ಇವರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಸಭಾ ಕಾರ್ಯಕ್ರಮದ ಬಳಿಕ ಡಾ. ಸುಷ್ಮಾ ಎಸ್.ವಿ. ಇವರ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ವಿಜಯನಗರ ಬಿಂಬ ಮತ್ತು ಪಿ.ಇ.ಎಸ್. ವಿಶ್ವವಿದ್ಯಾಲಯದ ಶಿಷ್ಯ ವೃಂದದಿಂದ ರಂಗ ಕವನ ಪ್ರಾಯೋಗಿಕ ರಂಗ ಪ್ರಸ್ತುತಿಗೊಳ್ಳಲಿದೆ.