ಎಡನೀರು : ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರ ಪಂಚಮ ಚಾತುರ್ಮಾಸ್ಯ ವೃತಾಚರಣೆ ಪ್ರಯುಕ್ತ ದಿನಾಂಕ 09 ಆಗಸ್ಟ್ 2025ರಿಂದ 12 ಆಗಸ್ಟ್ 2025ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರತಿ ದಿನ ಸಂಜೆ 6-00 ಗಂಟೆಗೆ ಶ್ರೀ ಎಡನೀರು ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 09 ಆಗಸ್ಟ್ 2025ರಂದು ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಕುಮಾರಿ ಆತ್ಮಶ್ರೀ ಮತ್ತು ಕುಮಾರಿ ಆದಿಶ್ರೀ ಇವರ ಹಾಡುಗಾರಿಕೆಗೆ ಕುಮಾರಿ ತನ್ಮಯಿ ಉಪ್ಪಂಗಳ ವಯಲಿನ್ ಮತ್ತು ವಿದ್ವಾನ್ ಬಾಲಕೃಷ್ಣ ಹೊಸಮನೆ ಇವರು ಮೃದಂಗದಲ್ಲಿ ಸಹಕರಿಸಲಿದ್ದಾರೆ. ರಾತ್ರಿ 7-30 ಗಂಟೆಗೆ ಮಂಗಳೂರು ಕದ್ರಿಯ ನೃತ್ಯಭಾರತೀ ಪ್ರಸ್ತುತ ಪಡಿಸುವ ‘ಕೃಷ್ಣಾಂತರಂಗ –ನವರಾಸ ರಾಮ’ ನೃತ್ಯರೂಪಕವನ್ನು ವಿದುಷಿ ಗೀತಾ ಸರಳಾಯ ಮತ್ತು ವಿದುಷಿ ರಶ್ಮಿ ಸರಳಾಯ ಇವರು ನೃತ್ಯ ಸಂಯೋಜನೆ ಮತ್ತು ನಿರ್ದೇಶನ ಮಾಡಿರುತ್ತಾರೆ.
ದಿನಾಂಕ 10 ಆಗಸ್ಟ್ 2025ರಂದು ಉಪ್ಪಿನಂಗಡಿಯ ವಸುಧಾ ಪ್ರತಿಷ್ಠಾನ ಪ್ರಸ್ತುತ ಪಡಿಸುವ ‘ಭಾರ್ಗವ ವಿಜಯ’ ಯಕ್ಷಗಾನ ಬಯಲಾಟ ನಡೆಯಲಿದೆ.
ದಿನಾಂಕ 11 ಆಗಸ್ಟ್ 2025ರಂದು ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ ಇವರ ಹಾಡುಗಾರಿಕೆಗೆ ವಿದ್ವಾನ್ ಅನಂತ ಪದ್ಮನಾಭ ಭಟ್ ವಯಲಿನ್, ವಿದ್ವಾನ್ ಪುರುಷೋತ್ತಮ ಪುಣಿಂಚಿತ್ತಾಯ ಮೃದಂಗ ಮತ್ತು ವಿದ್ವಾನ್ ಬಾಲಕೃಷ್ಣ ಹೊಸಮನೆ ಮೋರ್ಸಿಂಗ್ ನಲ್ಲಿ ಸಹಕರಿಸಲಿದ್ದಾರೆ. ರಾತ್ರಿ 7-30 ಗಂಟೆಗೆ ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ.) ಎಡನೀರು, ವಿದುಷಿ ಅನುಪಮಾ ರಾಘವೇಂದ್ರ ಮತ್ತು ಬಳಗದವರಿಂದ ‘ನೃತ್ಯ ಸಂಧ್ಯಾ’ ಭರತನಾಟ್ಯ ಪ್ರದರ್ಶನ ನಡೆಯಲಿದೆ.
ದಿನಾಂಕ 12 ಆಗಸ್ಟ್ 2025ರಂದು ಶಾಸ್ತ್ರೀಯ ಭಕ್ತಿ ಸಂಗೀತದಲ್ಲಿ ಶ್ರೀಮತಿ ಸರೋಜಾ ಎಸ್. ಭಟ್ ಮತ್ತು ಕುಮಾರಿ ವೈದೇಹಿ ಹೇರಳ ಇವರ ಹಾಡುಗಾರಿಕೆಗೆ ಕುಮಾರಿ ತನ್ಮಯಿ ಉಪ್ಪಂಗಳ ವಯಲಿನ್ ಮತ್ತು ವೆಂಕಟಯಶಸ್ವಿ ಕಬೆಕ್ಕೋಡು ಇವರು ಮೃದಂಗದಲ್ಲಿ ಸಹಕರಿಸಲಿದ್ದಾರೆ. ರಾತ್ರಿ 7-30 ಗಂಟೆಗೆ ಬೆಂಗಳೂರಿನ ಶ್ರೀಮತಿ ಲಕ್ಷ್ಮಿ ಎಸ್. ರಾವ್ ಇವರ ನಿರ್ದೇಶನದಲ್ಲಿ ಶ್ರೀ ಶಂಕರ ಸ್ಕೂಲ್ ಓಫ್ ಡಾನ್ಸ್ ಸಂಸ್ಥೆಯಿಂದ ‘ನೃತ್ಯ ವಂದನ’ ಪ್ರಸ್ತುತಗೊಳ್ಳಲಿದೆ.