ಕರ್ಕಿ : ಅಭಿನೇತ್ರಿ ಆರ್ಟ್ ಟ್ರಸ್ಟ್ (ರಿ) ನೀಲ್ಲೋಡ್ ಅರ್ಪಿಸುವ ‘ಅಭಿನೇತ್ರಿ ಯಕ್ಷೋತ್ಸವ ’ ಯಕ್ಷಗಾನ, ತಾಳಮದ್ದಳೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 21 ಹಾಗೂ 22 ಡಿಸೆಂಬರ್ 2024ರಂದು ಕವಲಕ್ಕಿ ಇಲ್ಲಿನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಯಕ್ಷಗಾನದ ಹಿರಿಯ ಸ್ತ್ರೀವೇಷಧಾರಿಯಾದ ಶ್ರೀ ಶ್ರೀಧರ ಷಡಕ್ಷರಿ ಇವರಿಗೆ ‘ಅಭಿನೇತ್ರಿ’ ಪ್ರಶಸ್ತಿ, ಯಕ್ಷಗಾನದ ಹಿರಿಯ ಹಾಸ್ಯಗಾರರಾದ ಶ್ರೀ ಹಳ್ಳಾಡಿ ಜಯರಾಮ ಶೆಟ್ಟಿ ಇವರಿಗೆ ‘ಬೆಳೆಯೂರು ಕೃಷ್ಣಮೂರ್ತಿ’ ಪ್ರಶಸ್ತಿ ಮತ್ತು ಶ್ರೀ ಅಮೃತೇಶ್ವರಿ ಮೇಳದ ಪ್ರಧಾನ ಭಾಗವತರಾದ ಶ್ರೀ ರಾಘವೇಂದ್ರ ಮಯ್ಯ ಹಾಲಾಡಿ ಇವರಗೆ ‘ಕಣ್ಣಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹಾಗೂ ಅಶಕ್ತ ಅರ್ಹ ಕಲಾವಿದರಿಬ್ಬರಿಗೆ ರೂಪಾಯಿ 50ಸಾವಿರ ಸಹಾಯಧನ ನೀಡಲಾಗುವುದು.