Subscribe to Updates

    Get the latest creative news from FooBar about art, design and business.

    What's Hot

    ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ 17ನೇ ವಾರ್ಷಿಕೋತ್ಸವ | ಜುಲೈ 07

    June 30, 2025

    ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ‘ಯಕ್ಷಮಂಗಳ ಪ್ರಶಸ್ತಿ’ ಮತ್ತು ‘ಯಕ್ಷಮಂಗಳ ಕೃತಿ ಪ್ರಶಸ್ತಿ’ ಪ್ರದಾನ

    June 30, 2025

    ಉಪ್ಪಿನಂಗಡಿಯ ಶ್ರೀರಾಮ ಶಾಲೆಯಲ್ಲಿ ‘ಯಕ್ಷ ಶಿಕ್ಷಣ’ ಉಚಿತ ಯಕ್ಷಗಾನ ತರಬೇತಿ ಉದ್ಘಾಟನೆ

    June 30, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಧಾರವಾಡದ ಡಾ. ದ.ರಾ. ಬೇಂದ್ರೆ ಭವನದಲ್ಲಿ ‘ಅಮರಸ್ವರ ಸಮಾರೋಹ’ | ಫೆಬ್ರವರಿ 02
    Awards

    ಧಾರವಾಡದ ಡಾ. ದ.ರಾ. ಬೇಂದ್ರೆ ಭವನದಲ್ಲಿ ‘ಅಮರಸ್ವರ ಸಮಾರೋಹ’ | ಫೆಬ್ರವರಿ 02

    January 30, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ : ಗದಗ, 4ನೇ ಕ್ರಾಸ್, ಪಂಚಾಕ್ಷರಿ ನಗರದಲ್ಲಿರುವ ಕಲಾ ವಿಕಾಸ ಪರಿಷತ್ (ರಿ.) ಇದರ ವತಿಯಿಂದ ‘ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳವರ 133ನೇ ಜಯಂತೋತ್ಸವ ಪ್ರಯುಕ್ತ ‘ಅಮರಸ್ವರ ಸಮಾರೋಹ’ ಕಾರ್ಯಕ್ರಮವನ್ನು ದಿನಾಂಕ 02 ಫೆಬ್ರವರಿ 2025ರಂದು ಬೆಳಿಗ್ಗೆ 10-30 ಗಂಟೆಗೆ ಧಾರವಾಡದ ಸಾಧನಕೇರಿಯಲ್ಲಿರುವ ಡಾ. ದ.ರಾ. ಬೇಂದ್ರೆ ಭವನದಲ್ಲಿ ಆಯೋಜಿಸಲಾಗಿದೆ.

    ಧಾರವಾಡದ ಹಿರಿಯ ರಂಗಕರ್ಮಿ ಡಾ. ಶಶಿಧರ ನರೇಂದ್ರ ಇವರ ಅಧ್ಯಕ್ಷತೆಯಲ್ಲಿ ಹಿರಿಯ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕರಾದ ಡಾ. ಶಾಂತಾರಾಮ ಹೆಗಡೆ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಖ್ಯಾತ ತಬಲಾ ವಾದಕರಾದ ಪಂ. ಶಾಂತಲಿಂಗಪ್ಪ ಹೂಗಾರ (ದೇಸಾಯಿ ಕಲ್ಲೂರ), ಪ್ರತಿಷ್ಠಿತ ಕಲಾ ಪೋಷಕ ಸಂಸ್ಥೆ ‘ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ’ ಮತ್ತು ಶಿರಸಿಯ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಮಂಡಳಿ ‘ಯಕ್ಷ ಕಲಾಸಂಗಮ’ ಇವರುಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ಸಂಜೆ 4-00 ಗಂಟೆಗೆ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಲಾ ವಿಕಾಸ ಪರಿಷತ್ ಇದರ ಅಧ್ಯಕ್ಷರಾದ ಶ್ರೀ ಸಿ.ಕೆ.ಹೆಚ್. ಶಾಸ್ತ್ರೀ ಇವರು ವಹಿಸಲಿರುವರು.

    ಸುವರ್ಣ ಕರ್ನಾಟಕ ಸಿರಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಬೆಂಗಳೂರಿನ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕರಾದ ಡಾ. ಗೋಪಾಲ ಕೆ. ರಾಯಚೂರ, ಧಾರವಾಡದ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕರಾದ ಡಾ. ಪರಶುರಾಮ ಕಟ್ಟಿ ಸಂಗಾವಿ, ಹಳಿಯಾಳದ ಸುಗಮ ಸಂಗೀತ ಗಾಯಕಿ ಶ್ರೀಮತಿ ಸುಮಾ ಹಡಪದ, ಡಂಬಳ ಸುಗಮ ಸಂಗೀತ ಗಾಯಕ ಶ್ರೀ ಬಸವರಾಜ ಎನ್. ಸಿದ್ದಣ್ಣನವರ, ಹುಬ್ಬಳ್ಳಿಯ ನೃತ್ಯ ತಂಡ ಜ್ಞಾನ ಜ್ಯೋತಿ ಕಲಾ ಬಳಗ, ಇಟ್ಟಿಗಿ ಶ್ರೀ ರಾಜರಾಜೇಶ್ವರಿ ಸಂಗೀತ ಕಲಾ ಪಾಠ ಶಾಲೆ, ದಾಂಡೇಲಿ ಸುಸ್ವರ ಸಂಗೀತ ವಿದ್ಯಾ ಸಂಸ್ಥೆ ಮತ್ತು ಹಳಿಯಾಳ ಶ್ರೀ ದುರ್ಗಾದೇವಿ ನಾಟ್ಯ ಶಾಲೆ ಇವರುಗಳಿಂದ ಸಂಗೀತ ನೃತ್ಯ ಕಲಾ ಪ್ರದರ್ಶನ ಪ್ರಸ್ತುತಗೊಳ್ಳಲಿದೆ.

    award bharatanatyam Classical Music dance Music
    Share. Facebook Twitter Pinterest LinkedIn Tumblr WhatsApp Email
    Previous Articleಬೈಂದೂರಿನ ಜೆ.ಎನ್.ಆರ್. ಹೊರಾಂಗಣ ವೇದಿಕೆಯಲ್ಲಿ ‘ಚಾರುವಸಂತ’ ದೇಸೀ ಕಾವ್ಯದ ರಂಗರೂಪ | ಫೆಬ್ರವರಿ 04
    Next Article ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹರೀಶ್ ಸುಲಾಯ ಒಡ್ಡಂಬೆಟ್ಟು ಆಯ್ಕೆ
    roovari

    Add Comment Cancel Reply


    Related Posts

    ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ 17ನೇ ವಾರ್ಷಿಕೋತ್ಸವ | ಜುಲೈ 07

    June 30, 2025

    ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ‘ಯಕ್ಷಮಂಗಳ ಪ್ರಶಸ್ತಿ’ ಮತ್ತು ‘ಯಕ್ಷಮಂಗಳ ಕೃತಿ ಪ್ರಶಸ್ತಿ’ ಪ್ರದಾನ

    June 30, 2025

    ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನಿಂದ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ ಮತ್ತು ಪುಸ್ತಕ ಬಿಡುಗಡೆ | ಜುಲೈ 06

    June 30, 2025

    ಮೈಸೂರಿನ ಕಿರುರಂಗಮಂದಿರದಲ್ಲಿ ‘ಪಂಚಗವ್ಯ’ ಪಂಚಕಾವ್ಯಗಳ ಅಭಿನಯಗುಚ್ಛ | ಜುಲೈ 05

    June 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.