ಉಡುಪಿ : ಆರ್ಟಿಸ್ಟ್ಸ್ ಫೋರಂ ಪ್ರಸ್ತುತ ಪಡಿಸುವ ‘ಆನ್ ಆರ್ಟ್ ಫ್ಯೂಷನ್’ ವೇದಿಕೆಯ ಕಲಾವಿದರ ಸದಸ್ಯರಿಂದ ‘ಚಿತ್ರಕಲೆಗಳ ಪ್ರದರ್ಶನ’ವನ್ನು ದಿನಾಂಕ 06 ಡಿಸೆಂಬರ್ 2024ರಿಂದ 15 ಡಿಸೆಂಬರ್ 2024ರವರೆಗೆ ಬೆಂಗಳೂರಿನ ದ್ವಿಜ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 06 ಡಿಸೆಂಬರ್ 2024ರಂದು ಸಂಜೆ 5-30 ಗಂಟೆಗೆ ಈ ಪ್ರದರ್ಶನವು ಉದ್ಘಾಟನೆಗೊಳ್ಳಲಿದ್ದು, ಯು. ಶಂಕರ್ ರಾವ್, ಎಚ್.ಕೆ. ರಾಮಚಂದ್ರ, ಜನಾರ್ದನ ಹವಾಂಜೆ, ಖುರ್ಷಿದ್ ಯಾಕೂಬ್, ಎಸ್. ನಾಗರಾಜ್ ಹನೇಹಳ್ಳಿ, ಪವನ್ ಕುಮಾರ್ ಅತ್ತಾವರ, ರಮೇಶ್ ರಾವ್, ಸಕು ಪಂಗಳ, ಸಪ್ನ ನೋರೋನ್ಹ, ಸಂತೋಷ್ ಪೈ, ಶರತ್ ಪಲಿಮಾರ್, ಶಿವ ಹದಿಮಣಿ, ಸಿಂಧು ಕಾಮತ್, ಸಿತಾರಾ ರಾವ್ ಇವರುಗಳ ಚಿತ್ರಕಲೆಗಳ ಪ್ರದರ್ಶನ ನಡೆಯಲಿದೆ.