02 ಮಾರ್ಚ್ 2023, ಮಂಗಳೂರು: ಬೆಂಗಳೂರಿನ ಕರಾವಳಿ ಕನ್ನಡಿಗರ ಸಾಂಸ್ಕೃತಿಕ ಮತ್ತು ಸಮಾಜ ಸೇವಾ ಸಂಸ್ಥೆಯಾದ ಆನಂದ ಬಳಗ ನೀಡುವ 35ನೇ ವರ್ಷದ “ಆನಂದ ಸಮಾಜ ಭೂಷಣ” ಪ್ರಶಸ್ತಿಗೆ ಹಿರಿಯ ಕಲಾವಿದ, ಸಾಹಿತಿ, ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಮತ್ತು ಉದ್ಯಮಿ, ಸಮಾಜ ಸೇವಕ ಎಂ. ಭಾಸ್ಕರ ರಾವ್ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 5ರಂದು ಸಂಜೆ ಬೆಂಗಳೂರಿನ ಹೊಟೇಲ್ ವುಡ್ ಲ್ಯಾಂಡ್ಸ್ ಸಭಾಭವನದಲ್ಲಿ ಜರಗಲಿರುವುದು. ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದಮೂರ್ತಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಸಂಸ್ಥೆಯ ಅಧ್ಯಕ್ಷ ಬಾ. ರಾಮಚಂದ್ರ ಉಪಾಧ್ಯ ಅಧ್ಯಕ್ಷತೆ ವಹಿಸುವರು. ನೃತ್ಯ ವಿದುಷಿ ಸಂಧ್ಯಾ ಕೇಶವ ರಾವ್ ಬಳಗದಿಂದ “ನೃತ್ಯ ಸಂಧ್ಯಾ” ಕಾರ್ಯಕ್ರಮ ಜರಗಲಿದ್ದು, ಬಳಗವನ್ನು ಮತ್ತು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಹಾಗೂ ಬ್ರಾಹ್ಮಣ ಒಕ್ಕೂಟದ ಕಾರ್ಯಾಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆನಂದ ಬಳಗವು ಬೆಂಗಳೂರಿನ ಕರಾವಳಿ ಕನ್ನಡಿಗರ ಪ್ರಸಿದ್ದ ಸೇವಾ ಸಂಸ್ಥೆಯಾಗಿದ್ದು, 34 ವರ್ಷಗಳಲ್ಲಿ ಪ್ರತಿಭಾ ಪುರಸ್ಕಾರ, ವಸಂತೋತ್ಸವ ಮುಂತಾದ ಒಂದು ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳು ನಡೆಸಿದ್ದು, ಸುಮಾರು ರೂ.5 ಕೋಟಿಗೂ ಹೆಚ್ಚಿನ ಮೊತ್ತವನ್ನು ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿದೆ.
Subscribe to Updates
Get the latest creative news from FooBar about art, design and business.
Next Article 4ನೇ ದಿನದ ಸುಮನಸ ರಂಗ ಹಬ್ಬ – ಏಕಲವ್ಯ – ಕನ್ನಡ ಯಕ್ಷಗಾನ