ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘವು 2024ನೇ ಸಾಲಿನ ‘ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ’ ಬಹುಮಾನಕ್ಕೆ ಐವರು ಲೇಖಕಿಯರ ಕೃತಿಗಳನ್ನು ಆಯ್ಕೆ ಮಾಡಿದೆ.
ಶಿವಮೊಗ್ಗದ ಸವಿತಾ ನಾಗಭೂಷಣ ಇವರ ‘ದಿನದ ಪ್ರಾರ್ಥನೆ’ ಕಥಾ ಸಂಕಲನ, ಉಡುಪಿಯ ಕಾತ್ಯಾಯಿನಿ ಕುಂಜುಬೆಟ್ಟು ಇವರ ‘ತಂಬೂರಿ’ ಕವನ ಸಂಕಲನ, ಬೆಂಗಳೂರಿನ ರೇಣುಕಾ ಕೋಡಗುಂಟಿ ಇವರ ‘ಚಿಗುರೊಡೆದ ಬೇರು’ ಕಥಾ ಸಂಕಲನ, ಮೈಸೂರಿನ ಗೀತಾ ಸೀತಾರಾಮ ಇವರ ‘ಮಾಳ್ವ ಸಾಮ್ರಾಜ್ಯದ ರಾಜಯೋಗಿನಿ ಅಹಲ್ಯಾಬಾಯಿ ಹೋಳ್ಕರ್’ ಕಾದಂಬರಿ ಮತ್ತು ಶಿವಮೊಗ್ಗದ ಕೆ.ಎಸ್. ಪವಿತ್ರಾ ಇವರ ‘ಧೀತನನ’ ಅಂಕಣ ಕೃತಿಗಳು ಆಯ್ಕೆಯಾಗಿವೆ. ಪ್ರಶಸ್ತಿಯು ತಲಾ ರೂ.15,000/- ನಗದು ಒಳಗೊಂಡಿದೆ. ಮಾರ್ಚ್ ಮೊದಲ ವಾರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರಹಲಗತ್ತಿ ತಿಳಿಸಿದ್ದಾರೆ.

