Subscribe to Updates

    Get the latest creative news from FooBar about art, design and business.

    What's Hot

    ಪುಸ್ತಕ ವಿಮರ್ಶೆ | ಭಾರತೀಸುತರ ಕತೆಗಳು

    September 22, 2026

    ‘ಡಾ. ಕಾರಂತ ಹುಟ್ಟೂರ ಪುರಸ್ಕಾರ’ಕ್ಕೆ ಸಾಹಿತಿ ಹೆಬ್ಬಾರ್, ವಾಗ್ಮಿ ಡಾ. ರಾಹುಲ್ ಆಯ್ಕೆ

    September 22, 2026

    ಹಾಡುಗಳಿಂದ ಮನೋಬಲ, ಜೀವನ, ಉದ್ಯಮ ಸುಗಮ ನಿರ್ವಹಣೆ – ಉದ್ಯಮಿ‌ ಕೆ. ಸುರೇಶ್

    September 22, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಹಾಡುಗಳಿಂದ ಮನೋಬಲ, ಜೀವನ, ಉದ್ಯಮ ಸುಗಮ ನಿರ್ವಹಣೆ – ಉದ್ಯಮಿ‌ ಕೆ. ಸುರೇಶ್
    Music

    ಹಾಡುಗಳಿಂದ ಮನೋಬಲ, ಜೀವನ, ಉದ್ಯಮ ಸುಗಮ ನಿರ್ವಹಣೆ – ಉದ್ಯಮಿ‌ ಕೆ. ಸುರೇಶ್

    September 22, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಇಷ್ಟವಾದ ಹಾಡುಗಳನ್ನು ಕೇಳಿದಾಗ ಕೆಲವೇ ಕ್ಷಣಗಳಲ್ಲಿ ಮನಸ್ಸು ಹಗುರವಾಗುತ್ತದೆ. ಹಾಡಿನ ಸಾಹಿತ್ಯ, ರಾಗ ಮತ್ತು ಧ್ವನಿ ನಮ್ಮ ಭಾವನೆಗಳನ್ನು ಸ್ಪರ್ಶಿಸಿ ಒತ್ತಡವನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿವೆ ಎನ್ನುವುದು ತನ್ನ ಸ್ವಾನುಭವವಾಗಿದೆ ಎಂದು ಉದ್ಯಮಿ ಕೆ. ಸುರೇಶ್ ಹೇಳಿದರು.

    ಸಾಮಾಜಿಕ-ಸಾಂಸ್ಕೃತಿಕ-ಸಾಹಿತ್ಯಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು, ಸಂಗೀತ ಘಟಕ ಸ್ವರಚಿನ್ನಾರಿ ಹೊಟೇಲ್ ಉಡುಪಿ ಗಾರ್ಡನ್ಸ್ ಸಹಯೋಗದಲ್ಲಿ ಕಾಸರಗೋಡು ಮಧುರಾ ಸಭಾಂಗಣದಲ್ಲಿ ದಿನಾಂಕ 20 ಸೆಪ್ಟೆಂಬರ್ 2026 ರವಿವಾರ ಆಯೋಜಿಸಿದ ‘ಅಂತರ್ಧ್ವನಿ- 20’ ಪ್ರತಿಭಾನ್ವಿತ ಕರೋಕೆ ಗಾಯಕರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ದಿನಂಪ್ರತಿ ಹಾಡುಗಳ ಜೊತೆ ಯೋಗಾಸನ ನಡೆಸುತ್ತೇನೆ. ಸಂಜೆ ಉದ್ಯಮದಲ್ಲಿ‌ ವ್ಯವಹಾರ ಮುಗಿಸುವ ಮೊದಲು ಒಂದು‌ ಗಂಟೆ ಸಂಗೀತ ಕೇಳುತ್ತೇನೆ. ಬೆಳಗ್ಗೆ ಮತ್ತು ಸಂಜೆ ದಿನಂಪ್ರತಿ ಒಟ್ಟು ಎರಡು ಗಂಟೆ ನನಗೆ ಇಷ್ಟವಾದ ಎಸ್.ಪಿ.ಬಿ, ಮಹಮ್ಮದ್ ರಫಿ, ಜೇಸುದಾಸ್ ಮುಂತಾದವರ ಹಳೆಯ ಹಾಡುಗಳನ್ನು ಕೇಳುವುದರಿಂದ ಮನಸ್ಸು ಪುನಶ್ಚೇತನ ಪಡೆಯುತ್ತದೆ ಎಂದು ಅವರು ವಿವರಿಸಿದರು. ಕೆಲಸದ ಒತ್ತಡ ಹೆಚ್ಚಾದಾಗ ಕೆಲ ನಿಮಿಷಗಳು ಸಂಗೀತವನ್ನು ಆಲಿಸುವುದು ಮನಸ್ಸನ್ನು ಶಾಂತಗೊಳಿಸಿ, ಮತ್ತೆ ಕೆಲಸದ ಕಡೆಗೆ ಏಕಾಗ್ರತೆಯಿಂದ ಗಮನ ಹರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಉದ್ಯಮದ ಜವಾಬ್ದಾರಿಗಳ ನಡುವೆ ನಮ್ಮ ಮನಸ್ಸಿನ ಆರೋಗ್ಯಕ್ಕೂ ನಾವು ಸಮಯ ನೀಡಬೇಕು. ಕಾಸರಗೋಡಿನ ಹೆಮ್ಮೆಯ ಕಲಾವಿದ ಕಾಸರಗೋಡು ಚಿನ್ನಾ ಅವರ ನೇತೃತ್ವದಲ್ಲಿ ನಡೆಯುವ ಕಲಾಸೇವೆ ಮಾದರಿಯಾಗಿದೆ ಎಂದು ಅವರು ಹೇಳಿದರು.

    ಮುಖ್ಯ ಅತಿಥಿ ಉದ್ಯಮಿ ಕೃಷ್ಣಪ್ರಸಾದ್ ಅವರು ಮಾತನಾಡಿ, ಕಲೆ, ಕಲಾವಿದರನ್ನು ಪೋಷಿಸುವುದು ಸಣ್ಣ ವಿಷಯವಲ್ಲ. ಉದಯೋನ್ಮುಖ ಕಲಾವಿದರು ಸ್ವರ ಚಿನ್ನಾರಿಯಂತಹ ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಶ್ರದ್ದೆ, ಸಮರ್ಪಣಾ ಭಾವದಿಂದ ತೊಡಗಿಸಿಕೊಳ್ಳುವ ಕಲಾವಿದರು ಯಾವುದೇ ಕ್ಷಣದಲ್ಲಿ ಅದ್ಭುತ ಯಶಸ್ಸನ್ನು ಪಡೆಯಬಲ್ಲರು. ಫಾರ್ ದಿ ಪೀಪಲ್ ಚಿತ್ರದ ‘ಲಜ್ಜಾವತಿಯೇ..’ ಒಂದು ಹಾಡು ಅದರ ಗಾಯಕ ಜಸ್ಸಿ ಗಿಫ್ಟ್ ಅವರನ್ನು ರಾತ್ರಿ ಬೆಳಗು ಆಗುವುದರಲ್ಲಿ ದಕ್ಷಿಣ ಭಾರತದಾದ್ಯಂತ ಜನಪ್ರಿಯಗೊಳಿಸಿತು ಎಂದು ಹೇಳಿದರು.

    ಹೊಟೇಲ್ ಉಡುಪಿ ಗಾರ್ಡನ್ಸ್ ಮಾಲೀಕ ಕೆ.ಎಂ. ಮಹೇಶ್ ಭಟ್ ಅವರು ಕನ್ನಡದ ಕಾರ್ಯಕ್ರಮಗಳಿಗೆ ತಮ್ಮ ಉದ್ಯಮವು ಉತ್ತೇಜನ ನೀಡುತ್ತಾ ಬಂದಿದೆ ಎಂದು‌ ಹೇಳಿದರು. ಕರ್ನಾಟಕದ ಭಾಗವಾಗಿದ್ದ ಕಾಸರಗೋಡು ಕೇರಳ ಪಾಲಾಗಿರುವುದು ದುರದೃಷ್ಟಕರ. ಇಂತಹ ಪರಿಸ್ಥಿತಿಯಲ್ಲೂ ಸ್ವರ ಚಿನ್ನಾರಿಯಂತಹ ಸಂಸ್ಥೆಗಳು ಕನ್ನಡದ ಶಕ್ತಿಯನ್ನು ಪ್ರದರ್ಶಿಸುವ ಕೆಲಸವನ್ನು ಯಶಸ್ವಿಯಾಗಿ ನಡೆಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ರಂಗಚಿನ್ನಾರಿ ನಿರ್ದೇಶಕ, ನ್ಯಾಯವಾದಿ ಎ.ಎನ್. ಅಶೋಕ ಕುಮಾರ್ ಅಧ್ಯಕ್ಷತೆ ವಹಿಸಿದರು. ‘ಅಂತರ್ಧ್ವನಿ’ ಸಂಚಾಲಕ ಕಾಸರಗೋಡು ಚಿನ್ನಾ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಸತೀಶ್ಚಂದ್ರ ಭಂಡಾರಿ, ಸ್ವರ ಚಿನ್ನಾರಿ ಸಹ ಸಂಚಾಲಕಿ ಬಬಿತಾ ಆಚಾರ್ಯ ಉಪಸ್ಥಿತರಿದ್ದರು. ಕರೋಕೆ ಗಾಯಕರ ಸಮ್ಮಿಲನ ಕಾರ್ಯಕ್ರಮದಲ್ಲಿ 40ಕ್ಕೂ ಅಧಿಕ ಕಲಾವಿದರು ಹಾಡುಗಳನ್ನು ಪ್ರಸ್ತುತ ಪಡಿಸಿದರು. ಕವಿ ಸಿಂಚನ ಕಾರ್ಯಕ್ರಮದಲ್ಲಿ ಕವಿ ಪ್ರೊ. ವೇಣುಗೋಪಾಲ ಕಾಸರಗೋಡು ಇವರನ್ನು ಕವಿ ಸ್ನೇಹಲತಾ ದಿವಾಕರ್ ಪರಿಚಯಿಸಿದರು.

    ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಶ್ರೀಮತಿ ಸರೋಜಿನಿ ಕೆ. ಭಟ್ “ರಂಗಚಿನ್ನಾರಿ ಸಂಸ್ಥೆಯ ಸಂಗೀತ ಘಟಕ ಸ್ವರಚಿನ್ನಾರಿ ನೇತೃತ್ವದಲ್ಲಿ ಕಾಸರಗೋಡಿನ ಗ್ರಾಮೀಣ ಪ್ರದೇಶಗಳ ಗಾಯಕ ಗಾಯಕಿಯರಿಗೆ ‘ಅಂತರ್ಧ್ವನಿ’ ಮುಖಾಂತರ ವೇದಿಕೆ ನಿರ್ಮಿಸಿ ಕೊಡುವುದು ಸ್ತುತ್ಯರ್ಹವಾದ ಕೆಲಸ. ನಿತ್ಯ ಸಂಗೀತ ಅಭ್ಯಾಸ ಮಾಡುವುದರಿಂದ ಸರಸ್ವತಿಯನ್ನು ಒಲಿಸಿಕೊಳ್ಳಬಹುದು” ಎಂದು ಅವರು ಹೇಳಿದರು.

    ಸ್ವರಚಿನ್ನಾರಿಯ ಗೌರವಾಧ್ಯಕ್ಷರಾದ ಡಾ. ಕೆ.ಕೆ. ಶ್ಯಾನುಭೋಗ್, ರಂಗಚಿನ್ನಾರಿಯ ನಿರ್ದೇಶಕರಾದ ನ್ಯಾಯವಾದಿ ಎ.ಎಸ್. ಅಶೋಕ್ ಕುಮಾರ್, ಉಡುಪಿ ಗಾರ್ಡನ್ಸ್ ಮಾಲಕರಾದ ಮಹೇಶ್ ಭಟ್ ಉಪಸ್ಥಿತರಿದ್ದರು. ಚಲನಚಿತ್ರ ನಟರೂ ಕಂಬಳದ ವೀಕ್ಷಕ ವಿವರಣೆಯ ಖ್ಯಾತರೂ ಆಗಿರುವ ಎಡ್ತೂರು ರಾಜೀವ ಶೆಟ್ಟರು ‘ಅಂತರ್ಧ್ವನಿ’ಯ ಮುಖಾಂತರ ಕಾಸರಗೋಡಿನಲ್ಲಿ ಕನ್ನಡ ಚಟುವಟಿಕೆಯನ್ನು ಗಟ್ಟಿಗೊಳಿಸುತ್ತಿರುವ ರಂಗಚಿನ್ನಾರಿಯ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಡ್ತೂರು ರಾಜೀವ ಶೆಟ್ಟಿ ಹಾಗೂ ಗಾಯಕಿ ಅಂತರ್ಧ್ವನಿಯ ಸಹ ಸಂಚಾಲಕಿ ಬಬಿತಾ ಆಚಾರ್ಯ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸಂಚಾಲಕರಾದ ಕಾಸರಗೋಡು ಚಿನ್ನಾ ವಂದಿಸಿ, ನಾರಿಚಿನ್ನಾರಿಯ ದಿವ್ಯಾಗಟ್ಟಿ ಪರಕ್ಕಿಲ, ಸ್ನೇಹಲತಾ ದಿವಾಕರ್ ಕಾರ್ಯಕ್ರಮವನ್ನು ನಿರೂಪಿಸಿದರು.

    baikady Music roovari
    Share. Facebook Twitter Pinterest LinkedIn Tumblr WhatsApp Email
    Previous Articleರಾಜ್ಯಮಟ್ಟದ ‘ಮುಸ್ಲಿಂ ಸಾಹಿತ್ಯ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಅಕ್ಟೋಬರ್ 10
    Next Article ‘ಡಾ. ಕಾರಂತ ಹುಟ್ಟೂರ ಪುರಸ್ಕಾರ’ಕ್ಕೆ ಸಾಹಿತಿ ಹೆಬ್ಬಾರ್, ವಾಗ್ಮಿ ಡಾ. ರಾಹುಲ್ ಆಯ್ಕೆ
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ಭಾರತೀಸುತರ ಕತೆಗಳು

    September 22, 2026

    ‘ಡಾ. ಕಾರಂತ ಹುಟ್ಟೂರ ಪುರಸ್ಕಾರ’ಕ್ಕೆ ಸಾಹಿತಿ ಹೆಬ್ಬಾರ್, ವಾಗ್ಮಿ ಡಾ. ರಾಹುಲ್ ಆಯ್ಕೆ

    September 22, 2026

    ರಾಜ್ಯಮಟ್ಟದ ‘ಮುಸ್ಲಿಂ ಸಾಹಿತ್ಯ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಅಕ್ಟೋಬರ್ 10

    September 22, 2026

    ಯಶಸ್ವಿನಿ ಕದ್ರಿ ಇವರ ‘ಮಾಯಕದ ಕತೆಗಳು’ ಕೃತಿ ಬಿಡುಗಡೆ

    September 22, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.