ಕೋಟ : ಕೋಟತಟ್ಟು ಗ್ರಾಮ ಪಂಚಾಯತ್ ಮತ್ತು ಡಾ. ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟದ ಸಹಭಾಗಿತ್ವದಲ್ಲಿ ಕಳೆದ 20 ವರುಷಗಳಿಂದ ಕಾರಂತರ ಆಸಕ್ತ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ‘ಡಾ. ಶಿವರಾಮ ಕಾರಂತ ಹುಟ್ಟೂರ ಪುರಸ್ಕಾರ’ಕ್ಕೆ ಹಿರಿಯ ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಮತ್ತು ವಾಗ್ಮಿ ಡಾ. ರಾಹುಲ್ ದೇವರಾಜ್ ಶಿವಮೊಗ್ಗ ಇವರು ಆಯ್ಕೆಯಾಗಿದ್ದಾರೆ.

ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ 2025ರ ಪುರಸ್ಕಾರವನ್ನು ಹಿರಿಯ ವಕೀಲರು, ಕಾರಂತರ ಒಡನಾಡಿಗಳು, ಸಾಹಿತಿಗಳು, ವಾಗ್ಮಿ, ಭಾಷಣಗಾರ ಐರೋಡಿ ಶಂಕರನಾರಾಯಣ ಹೆಬ್ಬಾರ್ ಇವರಿಗೂ. 2026ನೇ ಸಾಲಿನ ಕಾರಂತ ಹುಟ್ಟೂರ ಪುರಸ್ಕಾರವನ್ನು ಪ್ರೇರಣ ಮಾತುಗಾರ ಯುವ ಮನಸ್ಸುಗಳ ಪ್ರೇರಕ ಡಾ. ರಾಹುಲ್ ದೇವರಾಜ್ ಇವರನ್ನು ಆಯ್ಕೆ ಮಾಡಲಾಗಿದೆ. ಪುರಸ್ಕಾರವನ್ನು ಕಾರಂತರ ಜನ್ಮದಿನವಾದ 10 ಅಕ್ಟೋಬರ್ 2026ರಂದು ಮಧ್ಯಾಹ್ನ 3-00 ಗಂಟೆಗೆ ವಿತರಿಸಲಾಗುವುದೆಂದು ಸಮಿತಿ ಗೌರವಾಧ್ಯಕ್ಷ ಆನಂದ ಸಿ. ಕುಂದರ್, ನರೇಂದ್ರ ಕುಮಾರ್ ಕೋಟ, ಆಯ್ಕೆ ಸಮಿತಿ ಸಂಚಾಲಕ ಯು.ಎಸ್. ಶೆಣೈ, ಪಂ. ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ತಿಳಿಸಿದ್ದಾರೆ.
