Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ‘ಕಾವ್ಯಾಂ ವ್ಹಾಳೊ-6’ ಶೀರ್ಷಿಕೆಯಡಿ ಕವಿಗೋಷ್ಟಿಯನ್ನು ದಿನಾಂಕ 06 ಸಪ್ಟೆಂಬರ್ 2025ರಂದು ಸಂಜೆ 4-00 ಗಂಟೆಗೆ ಅಕಾಡೆಮಿ ಸಭಾಂಗಣದಲ್ಲಿ ಹಮ್ಮಿಕೊಂಡಿದೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಇವರು ವಹಿಸಿಕೊಳ್ಳಲಿದ್ದು, ಕೊಂಕಣಿಯ ಹಿರಿಯ ಸಾಹಿತಿಗಾರರಾದ ಹೇಮಾಚಾರ್ಯಯವರು ಮುಖ್ಯ ಅತಿಥಿಯಾಗಿ ಹಾಗೂ ಪ್ರಮುಖ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಶ್ರೀ ರೊನಿ ಕ್ರಾಸ್ತಾ ಕೆಲರಾಯ್ ಇವರು ಕವಿಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಲಿದ್ದು, ಶ್ರೀ ರೋಶನ್ ಎಮ್. ಕಾಮತ್ ವಾಮಂಜೂರು, ಕು. ಅಲ್ರೀಶಾ ರೊಡ್ರಿಗಸ್, ಶ್ರೀಮತಿ ಚಂದ್ರಿಕಾ ಮಲ್ಯ, ಶ್ರೀ ರೋಮನ್ಸ್ ಲೋಬೊ ಗುರುಪುರ, ಸ್ಟೆಫನ್ ವಾಸ್ ಕೆಲರಾಯ್, ಶ್ರೀಮತಿ ಎಸ್. ಜಯಶ್ರೀ ಶೆಣೈ, ಶ್ರೀ ಪೆದ್ರು ಪ್ರಭು ತಾಕೊಡೆ (ಪೀಟರ್ ಡಿಸೋಜ), ಶ್ರೀಮತಿ ಸೋನಿಯಾ ಡಿ’ಕೋಸ್ತ, ಶ್ರೀ ಕೆರನ್ ಮಾಡ್ತಾ, ಶ್ರೀ ವಲೇರಿಯನ್ ಮೊರಾಸ್ ತಾಕೊಡೆ ಮುಂತಾದವರು ತಮ್ಮ ಕವಿತೆಗಳನ್ನು ವಾಚಿಸುವರು. ಕೊಂಕಣಿ ಭಾಂದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.
ದಾವಣಗೆರೆ : ಪ್ರಸಕ್ತ ಸಾಲಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯಕ್ರಮ, ಯೋಜನೆಗಳ ಕುರಿತು ಜಾನಪದ ಕಲಾ ತಂಡಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಜಾನಪದ ಕಲಾ ತಂಡಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಷಣ್ಮುಖಪ್ಪ ತಿಳಿಸಿದ್ದಾರೆ. ಅರ್ಜಿ ಸಲ್ಲಿಸುವ ತಂಡಗಳು ಸಾಂಗ್ ಮತ್ತು ಡ್ರಾಮಾ ಡಿವಿಜನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇತರೆ ವಿವಿಧ ಸರ್ಕಾರಿ ಇಲಾಖೆಯಲ್ಲಿ ಭಾಗವಹಿಸಿ ಗುರುತಿಸಲ್ಪಟ್ಟಿದ್ದು, ಜಿಲ್ಲಾ ನೋಂದಣಿ ಇಲಾಖೆಯಲ್ಲಿ ನೋಂದಾಯಿತ ಸಂಸ್ಥೆಯಾಗಿರಬೇಕು. ಕಲಾ ತಂಡದಲ್ಲಿ ಕನಿಷ್ಠ 06ರಿಂದ 08 ಜನ ಕಲಾವಿದರು ಇರಬೇಕು. ಈ ಪೈಕಿ ಇಬ್ಬರು ಮಹಿಳಾ ಕಲಾವಿದರು, ಒಬ್ಬರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಸೇರಿದ ಕಲಾವಿದರನ್ನೊಳಗೊಂಡಿರಬೇಕು. ಸಂಗೀತ ಸಲಕರಣೆಗಳನ್ನು ಹಾಗೂ ಸಮವಸ್ತ್ರ ಹೊಂದಿರಬೇಕು. ಆಸಕ್ತ ಅರ್ಹ ಜಾನಪದ ಬೀದಿ ನಾಟಕ ಕಲಾತಂಡಗಳು ತಮ್ಮ…
ಮಂಗಳೂರು : ಗಾನ ನೃತ್ಯ ಅಕಾಡೆಮಿ (ರಿ.) ಮಂಗಳೂರು ಪ್ರಸ್ತುತ ಪಡಿಸುವ ‘ಆರೋಹಣ’ ಭರತನಾಟ್ಯ ಪ್ರದರ್ಶನ ಕಾರ್ಯಕ್ರಮವನ್ನು ದಿನಾಂಕ 07 ಸೆಪ್ಟೆಂಬರ್ 2025ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ಡಾನ್ ಬೋಸ್ಕೋ ಹಾಲ್ ನಲ್ಲಿ ಆಯೋಜಿಸಲಾಗಿದೆ. ಮಣಿ ಕೃಷ್ಣಸ್ವಾಮಿ ಆಕಾಡೆಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಇವರು ಅತಿಥಿಯಾಗಿ ಭಾಗವಹಿಸಲಿದ್ದು, ಗಾನ ನೃತ್ಯ ಅಕಾಡೆಮಿಯ ಮಯೂರ ಮತ್ತು ಚಾತುರ ತಂಡಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಹಾಡುಗಾರಿಕೆಯಲ್ಲಿ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ, ನಟುವಾಂಗದಲ್ಲಿ ವಿದುಷಿ ರಶ್ಮಿ ಉಡುಪ, ಮೃದಂಗದಲ್ಲಿ ಉಡುಪಿಯ ವಿದ್ವಾನ್ ಬಾಲಚಂದ್ರ ಭಾಗವತ್ ಮತ್ತು ಕೊಳಲಿ ನಲ್ಲಿ ವಿದ್ವಾನ್ ರಾಜಗೋಪಾಲ ಕಂಞಗಾಡ್ ಇವರು ಸಹಕರಿಸಲಿದ್ದಾರೆ.
ಬೆಂಗಳೂರು : ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ (ರಿ) ಇದರ ವತಿಯಿಂದ ‘ರಾಜ್ಯೋತ್ಸವ ಪ್ರಶಸ್ತಿ’ಗೆ ಅರ್ಜಿ ಆಹ್ವಾನಿಸಲಾಗಿದೆ. ಡಾ. ಎಸ್.ಎಲ್. ಭೈರಪ್ಪ, ನಾ. ಡಿಸೋಜ, ಕುಂ. ವೀರಭದ್ರಪ್ಪ, ನಾಗತಿಹಳ್ಳಿ ಚಂದ್ರಶೇಖರ, ಕೌಂಡಿನ್ಯ, ಎಂ.ಕೆ. ಇಂದಿರಾ, ಡಾ. ಎಸ್. ನಾರಾಯಣ್ ರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಕಲೆ, ಸಾಹಿತ್ಯ, ಕ್ರೀಡೆ, ರಂಗಭೂಮಿ, ಚಲನಚಿತ್ರ, ಕಿರುತೆರೆ, ಸಮಾಜಸೇವೆ, ಯಕ್ಷಗಾನ, ಯೋಗ, ಪತ್ರಕರ್ತರು ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ದಿನಾಂಕ 30 ಸೆಪ್ಟೆಂಬರ್ 2025ರ ಒಳಗಾಗಿ ತಮ್ಮ ಫೋಟೋ ಮತ್ತು ಬಯೋಡೆಟಾವನ್ನು 88614 95610 ನಂಬರ್ ಗೆ ವಾಟ್ಸ್ ಆ್ಯಪ್ ಮಾಡಬಹುದು.
ಮಂಗಳೂರು : ಜೀರುಂಡೆ ಪುಸ್ತಕ ಇದರ ವತಿಯಿಂದ ಫಾತಿಮಾ ರಲಿಯಾ ಅವರ ‘ಕೀಮೋ’ ಅನುಭವ ಕಥನ ಪುಸ್ತಕ ಬಿಡುಗಡೆ ಸಮಾರಂಭವನ್ನು ದಿನಾಂಕ 07 ಸೆಪ್ಟೆಂಬರ್ 2025ರಂದು ಸಂಜೆ 4-00 ಗಂಟೆಗೆ ಸಂತ ಅಲೋಶಿಯಸ್ ಕಾಲೇಜಿನ ರೊಬರ್ಟ್ ಸಿಕ್ವೇರಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಡಾ. ಶ್ರೀನಿವಾಸ ಕಕ್ಕಿಲ್ಲಾಯ ಇವರು ಪುಸ್ತಕ ಬಿಡುಗಡೆ ಮಾಡಲಿದ್ದು, ರಮ್ಯಾ ಕೆ.ಜಿ. ಮೂರ್ನಾಡು ಮತ್ತು ಶರೀಫ್ ಹಿಮಮಿ ಶೆಟ್ಟಿಕೊಪ್ಪ ಪುಸ್ತಕದ ಬಗ್ಗೆ ಮಾತನಾಡಲಿದ್ದಾರೆ. ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ನಿಕೇತನ, ಕನ್ನಡ ವಿಭಾಗ ರಂಗ ಅಧ್ಯಯನ ಕೇಂದ್ರ, ಸಂತ ಅಲೋಶಿಯಸ್ ಪರಿಗಣಿತ ವಿಶ್ವ ವಿದ್ಯಾಲಯ ಮಂಗಳೂರು ಮತ್ತು ಉಡುಗೊರೆ ಪ್ರಕಾಶನ ಇವುಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ.
ಬೆಂಗಳೂರು : ‘ಸಮಷ್ಟಿ’ ಅಭಿನಯಿಸುವ 3 ಮೆಟಾ ಪ್ರಶಸ್ತಿ ವಿಜೇತ ‘ಚಿತ್ರಪಟ’ ನಾಟಕ ಪ್ರದರ್ಶನವನ್ನು ದಿನಾಂಕ 04 ಸೆಪ್ಟೆಂಬರ್ 2025ರಂದು ಸಂಜೆ 7-30 ಗಂಟೆಗೆ ಬೆಂಗಳೂರಿನ ರಂಗಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ. ರಚನೆ : ಡಾ. ಎಚ್.ಎಸ್. ವೆಂಕಟೇಶ ಮೂರ್ತಿ ಸಂಗೀತ ಸಂಯೋಜನೆ : ಗಜಾನನ ಹೆಗಡೆ ವಸ್ತ್ರ ವಿನ್ಯಾಸ ಹಾಗೂ ನೃತ್ಯ ಸಂಯೋಜನೆ : ಶ್ವೇತಾ ಶ್ರೀನಿವಾಸ್ ಬೆಳಕು : ರವೀಂದ್ರ ಪೂಜಾರಿ ವಿನ್ಯಾಸ ಹಾಗೂ ನಿರ್ದೇಶನ : ಮಂಜುನಾಥ ಎಲ್. ಬಡಿಗೇರ 2015ಕ್ಕೆ ‘ಚಿತ್ರಪಟ’ ನಾಟಕ ಕಟ್ಟಿದ್ದು, 2025ಕ್ಕೆ ಸತತ 10 ವರ್ಷಗಳು. ಈ ನಾಟಕದ ಪ್ರದರ್ಶನವನ್ನು ನಿರಂತರವಾಗಿ ಸಮಷ್ಟಿ ರಂಗತಂಡದಿಂದ ಮಾಡುತ್ತಾ ಬಂದಿದ್ದು, ಈ ನಾಟಕಕ್ಕೆ 2015ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮೆಟಾ ಪ್ರಶಸ್ತಿ – ಉತ್ತಮ ನಟಿ ಹಾಗೂ ಉತ್ತಮ ವಸ್ತ್ರ ವಿನ್ಯಾಸಕಿ ವಿಭಾಗಕ್ಕೆ ದೊರೆತಿದೆ. ಸೀತೆಯಾಗಿ ನಾನು ಪ್ರತಿ ಪ್ರದರ್ಶನದಿಂದ ಪ್ರದರ್ಶನಕ್ಕೆ ಹೊಸ ಹೊಸ ಹೊಳಹುಗಳನ್ನು ಕಂಡುಕೊಳ್ಳುತ್ತ, ಪಾತ್ರದ ಅಂತರಾಳವನ್ನು ಅನ್ವೇಷಿಸಲು, ನಟನಾಭ್ಯಾಸಿಯಾಗಿ ನನ್ನನ್ನು ಇನ್ನಷ್ಟು ಹುರಿಗೊಳಿಸಿಕೊಳ್ಳಲು, ಸ್ಫೂರ್ತಿ…
ಬೆಂಗಳೂರು : ಭಾರತೀಯ ವಿದ್ಯಾಭವನ ಮತ್ತು ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಜಂಟಿಯಾಗಿ ನೀಡುವ 2025ನೇ ಸಾಲಿನ ‘ವಿ.ಕೃ. ಗೋಕಾಕ್ ಪ್ರಶಸ್ತಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕೃತ ಮಗುತನ ಸಾಹಿತಿ ಆನಂದ ಪಾಟೀಲ ಅವರು ಭಾಜನರಾಗಿದ್ದಾರೆ. ಈ ಪ್ರಶಸ್ತಿಯು ರೂ.25,000/- ನಗದು ಮತ್ತು ಪದಕವನ್ನು ಒಳಗೊಂಡಿದೆ. ವಿ.ಕೃ ಗೋಕಾಕ್ ಟ್ರಸ್ಟ್ ಅಧ್ಯಕ್ಷರಾದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯರ ಅಧ್ಯಕ್ಷತೆಯ ಸಮಿತಿಯಲ್ಲಿ ಅನಿಲ್ ಗೋಕಾಕ್, ಸುನೀಲ್ ಗೋಕಾಕ್, ಪ್ರೊ. ನಾಗರಾಜ ಹೆಗಡೆ ಅಪಗಾಲ, ನಿಶಾ ಗೋಕಾಕ್, ಅಭಿನವ ರವಿಕುಮಾರ್, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್. ಸುರೇಶ್ ಉಪಸ್ಥಿತರಿದ್ದರು. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದ ಕೆಆರ್ಜಿ ಸಭಾಂಗಣದಲ್ಲಿ ದಿನಾಂಕ 07 ಸೆಪ್ಟೆಂಬರ್ 2025ರಂದು ಬೆಳಗ್ಗೆ 10-30 ಗಂಟೆಗೆ ರಾಯಚೂರಿನ ಮಹರ್ಷಿ ಆದಿಕವಿ ವಾಲ್ಮೀಕಿ ವಿ.ವಿ. ಕುಲಪತಿಗಳಾದ ಪ್ರೊ. ಶಿವಾನಂದ ಕೆಳಗಿನಮನಿ ಪ್ರಶಸ್ತಿ ಪ್ರದಾನ ಮಾಡುವರು. ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಇವರು ಪ್ರಸ್ತಾವನೆಯ ಮಾತುಗಳನ್ನಾಡುವರು. ಅಂಕೋಲದ ಕವಯಿತ್ರಿ ಶ್ರೀದೇವಿ ಕೆರೆಮನೆ ಅಭಿನಂದನಾ ನುಡಿಗಳನ್ನಾಡುವರು.…
ಪುತ್ತೂರು : ಗ್ರಾಮೀಣ ಭಾಗದ ಮಕ್ಕಳಿಗೆ ಹಿಮ್ಮೇಳ ಸಹಿತ ಶುದ್ಧ ಶಾಸ್ತ್ರೀಯ ಶೈಲಿಯ ಭರತನಾಟ್ಯದ ಸೊಗಡನ್ನು ಪರಿಚಯಿಸುವ ಉದ್ದೇಶದಿಂದ ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು, ವಸುಧಾರಾ ಕಲಾಕೇಂದ್ರ ಬೋಳಂತೂರು – ಮಂಚಿ ಇವರ ಸಹಯೋಗದಲ್ಲಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಕಲಾವಿದರಿಂದ ‘ಮೂಕಾಂಬಿಕಾ ಮೂವತ್ತರ ಮಾರ್ದನಿ’ ಎನ್ನುವ ಮೂವತ್ತರ ವರ್ಷಾಚರಣೆಯ ಸಂದರ್ಭದಲ್ಲಿ ಗುರುಗಳಾದ ದೀಪಕ್ ಕುಮಾರ್ ಇವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ರೂಪುಗೊಂಡು ಜನಮೆಚ್ಚುಗೆ ಗಳಿಸಿದ ಸರಸ್ವತಿ-ಲಕ್ಷ್ಮಿ-ಪಾರ್ವತಿ ದೇವಿಯರ ಕಥಾ ಪ್ರಸ್ತುತಿ ‘ತ್ರಿಶಕ್ತಿ’ ದಿನಾಂಕ 31 ಆಗಸ್ಟ್ 2025ರ ಭಾನುವಾರ ಸಂಜೆ 5-00 ಗಂಟೆಗೆ ಲಯನ್ಸ್ ಕ್ಲಬ್ ಮಂಚಿ ಇಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು. ಅಭ್ಯಾಗತರಾಗಿ ದೀಪ ಪ್ರಜ್ವಲನೆಗೈದ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಶ್ರೀ ಉಮಾನಾಥ ರೈ ಮೇರಾವು ಇವರು ನೃತ್ಯವನ್ನು ಶ್ಲಾಘಿಸಿದರು ಹಾಗೂ ಇನ್ನಷ್ಟು ಇಂತಹ ಗುಣಮಟ್ಟದ ಕಾರ್ಯಕ್ರಮ ಆಗುವಲ್ಲಿ ತಮ್ಮ ಸಹಕಾರ ಇರುತ್ತದೆ ಎನ್ನುವ ಭರವಸೆ ನೀಡಿದರು. ಲಯನ್ಸ್ ಭವನವನ್ನು ನೃತ್ಯ ಕಾರ್ಯಕ್ರಮಕ್ಕೆ ಉಚಿತವಾಗಿ ನೀಡಿದ ಮಾಲಕರಾದ…
ಮಂಗಳೂರು : ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ವತಿಯಿಂದ ಹಿರಿಯ ಅರ್ಥಧಾರಿ, ಸಂಘಟಕ ಬಿ. ನಾಗೇಶ ಪ್ರಭು ಸಂಸ್ಮರಣಾ ಕಾರ್ಯಕ್ರಮವು ದಿನಾಂಕ 31 ಆಗಸ್ಟ್ 2025ರಂದು ಮಂಗಳೂರು ರಥಬೀದಿಯ ಕುಡ್ತೇರಿ ಶ್ರೀ ಮಹಾಮಾಯಾ ದೇವಸ್ಥಾನದ ಸಭಾಗೃಹದಲ್ಲಿ ಜರಗಿತು. ಈ ಸಂಧರ್ಭ ಸಂಘದ ಗೌರವಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಇವರು ಶ್ರೀಮತಿ ಯೋಗಾಕ್ಷಿ ಗಣೇಶ ತಲಕಳರವರಿಗೆ ‘ಶ್ರೀ ವಾಗೀಶ್ವರೀ ಅನುಗ್ರಹ ಪ್ರಶಸ್ತಿ’ಯನ್ನು ಪ್ರದಾನ ಮಾಡಿ “ಹಳ್ಳಿಯಲ್ಲಿದ್ದೂ ಯಕ್ಷಗಾನ ಕಲೆಯನ್ನು ಬೆಳೆಸಿ ಉಳಿಸಿದ ಇಂತಹ ಕಲಾರಾಧಕರಿಂದ ಯಕ್ಷಗಾನ ಉಳಿದಿದೆ. ತಮ್ಮನ್ನು ತಾವು ತೊಡಗಿಸಿಕೊಂಡು, ತಮ್ಮ ಮಕ್ಕಳನ್ನೂ ಯಕ್ಷಗಾನಕ್ಕೆ ಅಣಿಗೊಳಿಸಿ, ಉಳಿದ ಆಸಕ್ತರಿಗೂ ಈ ಕಲೆಯನ್ನು ಪರಿಚಯಿಸುತ್ತಿರುವ ಯೋಗಾಕ್ಷಿಯವರ ಸಾಧನೆ ಮೆಚ್ಚುವಂತಹದು. ದಿ. ನಾಗೇಶ ಪ್ರಭುಗಳು ತಮ್ಮ ದುಡಿಮೆಯ ಬಹುಪಾಲನ್ನು ಈ ಕಲೆಗಾಗಿ ವಿನಿಯೋಗಿಸಿದವರು. ಯೋಗಾಕ್ಷಿ ಗಣೇಶ ಇವರಿಗೆ ಸನ್ಮಾನ ಮಾಡುವ ಮೂಲಕ ಅವರ ಆತ್ಮಕ್ಕೆ ಅತ್ಯಂತ ಸಂತೋಷ ಉಂಟಾಗುವುದರಲ್ಲಿ ಸಂದೇಹವಿಲ್ಲ” ಎಂದರು. ದಿ. ನಾಗೇಶ ಪ್ರಭುಗಳ ಯಕ್ಷಗಾನದ ಸೇವೆಯನ್ನು ಸಂಘದ ಸಂಚಾಲಕ ನವನೀತ…
ಮೈಸೂರು : ಪರಿವರ್ತನ ರಂಗ ಸಮಾಜ (ರಿ.) ಪ್ರಸ್ತುತಪಡಿಸುವ ರವೀಂದ್ರ ಭಟ್ ಇವರ ಕೃತಿ ಆಧಾರಿತ ‘ಮೂರನೇ ಕಿವಿ’ ನಾಟಕ ಪ್ರದರ್ಶನವನ್ನು ದಿನಾಂಕ 06 ಸೆಪ್ಟೆಂಬರ್ 2025ರಂದು ಮಧ್ಯಾಹ್ನ 3-30 ಹಾಗೂ ಸಂಜೆ 7-30 ಗಂಟೆಗೆ ಬೆಂಗಳೂರಿನ ರಂಗಶಂಕರದಲ್ಲಿ ಆಯೋಜಿಸಲಾಗಿದೆ. ಪ್ರೊ. ಎಸ್.ಆರ್. ರಮೇಶ್ ಇವರು ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಮಾತು ಬಾರದಿರುವ ಪ್ರಪಂಚದಲ್ಲಿ ಶಬ್ದ ಮತ್ತು ಮಾತಿಗೆ ಅಗಾಧವಾದ ಪ್ರಾಮುಖ್ಯತೆ ಇದೆ. ಹುಟ್ಟಿನಿಂದಲೇ ಕಿವುಡರಾದವರಿಗೆ ಮಾತನಾಡುವುದನ್ನು ಕಲಿಸಲು ನಡೆಸುವ ದೀರ್ಘ ಪ್ರಯತ್ನವೇ ಮೂರನೇ ಕಿವಿ ಕೃತಿಯ ಪ್ರಮುಖ ಉದ್ದೇಶ. ಮಾತು ಕಲಿಸುವ ಪ್ರಯತ್ನದ ಹಿನ್ನೆಲೆಯಲ್ಲಿ ವಿಜ್ಞಾನವಿದೆ. ಕಲಿಕಾ ಅಭ್ಯಾಸಗಳಿವೆ. ನಿತ್ಯ ನಡೆಸುವ ಹೋರಾಟವಿದೆ. ಉತ್ಸಾಹವಿದೆ. ನಿರಾಶೆ, ಬೇಗುದಿ, ಆಶ್ಚರ್ಯ, ಕುತೂಹಲ ಎಲ್ಲವನ್ನು ಒಳಗೊಳ್ಳುವ ಸಾಹಸ ಹೋರಾಟವಿದು. ತಾಯಿ ಮಗ ಜೊತೆಯಲ್ಲಿ ನಡೆಸುವ ಈ ಕಠಿಣ ಹೋರಾಟದಲ್ಲಿ ಬೆಂಬಲವಾಗಿ ತಂದೆ ಮತ್ತು ಇತರ ಕುಟುಂಬದ ಸದಸ್ಯರು, ಶಾಲೆಯಲ್ಲಿನ ಶಿಕ್ಷಕಿಯರು, ವೈದ್ಯರು, ಮಿತ್ರರು ಎಲ್ಲರೂ ಪಾಲ್ಗೊಳ್ಳುತ್ತಾರೆ. ಒಟ್ಟಾರೆ ಇದು ಸಮುದಾಯದ…