Author: roovari

ಮಂಗಳೂರು : ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯ ಇವರ ಆಯೋಜನೆಯಲ್ಲಿ ರೆಮೋನಾ ಇವೈಟ್ ಪಿರೇರಾ ಇವರಿಂದ ‘ಅನ್ವೇಷಣೆಯ ಲಯಬದ್ಧ’ ದಾಖಲೆಗಾಗಿ ಭರತನಾಟ್ಯ ಪ್ರದರ್ಶನವನ್ನು ದಿನಾಂಕ 21 ಜುಲೈ 2025ರಿಂದ 28 ಜುಲೈ 2025ರವರೆಗೆ ಸಂತ ಅಲೋಶಿಯಸ್ ಕಾಲೇಜಿನ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ್ದು, ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 21 ಜುಲೈ 2025ರ ಸೋಮವಾರ ಬೆಳಿಗ್ಗೆ ಘಂಟೆ 10.00 ಕ್ಕೆ ನಡೆಯಲಿದೆ. ತಮ್ಮ 3ನೇ ವಯಸ್ಸಿನಿಂದ ಭರತನಾಟ್ಯವನ್ನು ಪ್ರಾರಂಭಿಸಿರುವ ರೆಮೊನಾ ಇವೈಟ್ ಪಿರೇರಾ ಸೌರಭ ನೃತ್ಯ ಕಲಾ ಪರಿಷತ್ತಿನ ವಿದ್ಯಾರ್ಥಿನಿ. ಗುರು ಡಾ. ಶ್ರೀವಿದ್ಯಾ ಮುರಳೀಧರ್ ಇವರ ಮಾರ್ಗದರ್ಶನದಲ್ಲಿ ಭರತನಾಟ್ಯವನ್ನು ಕಲಿಯುತ್ತಿರುವ ಇವರು 2019ರಲ್ಲಿ ರಂಗ ಪ್ರವೇಶ ಮಾಡಿರುತ್ತಾರೆ. ಐದನೇ ವಯಸ್ಸಿನಲ್ಲಿ ‘ಅರಳು ಮಲ್ಲಿಗೆ ಪ್ರಶಸ್ತಿ’ ಹಾಗೂ ಕುಂದಾಪುರದಲ್ಲಿ ನಡೆದ ಭರತನಾಟ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿರುತ್ತಾರೆ. ಕೇಂದ್ರ ಸರಕಾರದಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ, ಧಾರವಾಡದ ಬಾಲ ವಿಕಾಸ ಅಕಾಡೆಮಿಯಿಂದ ಬಾಲ ಗೌರವ್ ಪ್ರಶಸ್ತಿ, ಹೊಯ್ಸಳಾ ಕೆಳದಿ ಚೆನ್ನಮ್ಮ ಜಿಲ್ಲಾ ಮಟ್ಟದ…

Read More

ವಿರಾಜಪೇಟೆ : ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್, ರೋಟರಿ ಕ್ಲಬ್ ಹಾಗೂ ದಿನೇಶ್ ಫೌಂಡೇಶನ್ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಸಂಭ್ರಮ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಬನಶಂಕರಿ 2ನೇ ಹಂತದಲ್ಲಿರುವ ಜೆಎಸ್‍ಎಸ್ ಶಾಲಾ ಆವರಣದಲ್ಲಿರುವ ಶ್ರೀ ಘನಲಿಂಗ ಶಿವಯೋಗಿ ಸಭಾಂಗಣದಲ್ಲಿ ನಡೆಯಿತು ಕಾರ್ಯಕ್ರಮದಲ್ಲಿ ವಿರಾಜಪೇಟೆಯ ಭರತನಾಟ್ಯ ಕಲಾವಿದೆ ಕೆ. ಪಿ. ದಿಥ್ಯ ಇವರಿಗೆ ‘ಸ್ಟಾರ್ ಆಫ್ ಕರ್ನಾಟಕ-2025’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಿಥ್ಯ ಇವರು ವಿರಾಜಪೇಟೆ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಪ್ರಸ್ತುತ ವಿರಾಜಪೇಟೆಯ ನಾಟ್ಯಂಜಲಿ ನೃತ್ಯ ಶಾಲೆಯಲ್ಲಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾಳೆ. ವಿರಾಜಪೇಟೆಯ ಚಿಕ್ಕಪೇಟೆಯ ನಿವಾಸಿ ನಿವೃತ್ತ ಶಿಕ್ಷಕರುಗಳಾದ ಕೊಂಫುಳಿ ಪಳಂಗಪ್ಪ, ತಾರಾಮಣಿ ಅವರ ಮೊಮ್ಮಗಳು ಹಾಗೂ ಪೃಥ್ವಿ ಕುಮಾರ್, ಭವ್ಯ ದಂಪತಿಯ ಪುತ್ರಿ.

Read More

ಮೂಡುಬಿದಿರೆ : ಆಮ್ನಾಯಃ – ಯಕ್ಷಸಂಸ್ಕೃತಿ ಬಳಗ ಗಾಳಿಮನೆ ಇವರ ವತಿಯಿಂದ ಪಾಕ್ಷಿಕ ತಾಳಮದ್ದಲೆ ಸರಣಿ : ವಿಶ್ವಾವಸು 5127 ದ್ವಿತೀಯ ಪ್ರದರ್ಶನವನ್ನು ದಿನಾಂಕ 24 ಜುಲೈ 2025ರಂದು ಸಂಜೆ 6-00 ಗಂಟೆಗೆ ಮೂಡುಬಿದಿರೆಯ ಶ್ರೀಜೈನ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಪಾರ್ತಿಸುಬ್ಬು ವಿರಚಿತ ‘ಪಾದುಕಾ ಪಟ್ಟಾಭಿಷೇಕ’ ಎಂಬ ಪ್ರಸಂಗದ ತಾಳಮದ್ದಲೆ ಪ್ರಸ್ತುತಗೊಳ್ಳಲಿದೆ.

Read More

ಸೋಮವಾರಪೇಟೆ : ಕನ್ನಡಸಿರಿ ಸ್ನೇಹ ಬಳಗದ ವತಿಯಿಂದ ಯುವ ಬರಹಗಾರ ಹೇಮಂತ್ ಪಾರೇರ ರಚಿಸಿರುವ ‘ಬೆಳ್ಳಿಗೆಜ್ಜೆ’ ಕವನ ಸಂಕಲನ ದಿನಾಂಕ 15 ಜುಲೈ 2025ರಂದು ಸೋಮವಾರಪೇಟೆಯ ಪತ್ರಿಕಾ ಭವನದಲ್ಲಿ ಬಿಡುಗಡೆಗೊಂಡಿತು. ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ “ಸರಳವಾಗಿ ಬರೆದ ಕವನಗಳು ಓದುಗರ ಹೃದಯಕ್ಕೆ ತಲುಪುತ್ತವೆ. ಯಾವುದೇ ಕಥೆ ಕವನಗಳು ಓದುಗರಿಂದ ಓದಿಸಿಕೊಂಡು ಹೋಗುವಂತೆ, ಭಾಷೆ ಹಿಡಿತ, ಪದಗಳ ಜೋಡಣೆ ಬರಹಗಾರರಿಗೆ ಬಹು ಮುಖ್ಯವಾಗಿರುತ್ತದೆ” ಎಂದು ಹೇಳಿದರು. ಅರಿಸಿನಗುಪ್ಪೆ ಸಿದ್ಧಲಿಂಗಪುರ ಶ್ರೀ ಮಂಜುನಾಥ ದೇವಾಲಯದ ಶ್ರೀ ರಾಜೇಶ್ನಾ ಥ್ ಗುರೂಜಿ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿ, “ಸಾಹಿತಿಗಳು, ಬರಹಗಾರರ ಕೊಡುಗೆ ಕನ್ನಡ ಭಾಷೆಗೆ ಬಹಳಷ್ಟು ಇದೆ. ಪತ್ರಿಕೆ ಸೇರಿದಂತೆ, ಸಾಮಾಜಿಕ ಜಾಲತಾಣಗಳಲ್ಲೂ ಬರಹಗಾರರು ತಮ್ಮ ಬರಹವನ್ನು ಬರೆಯಲು ಅವಕಾಶಗಳು ಹೆಚ್ಚಾಗಿವೆ. ಇದು ಯುವ ಸಾಹಿತಿಗಳ ಬೆಳವಣಿಗೆಗೆ ಹೆಚ್ಚಿನ ಸಹಕಾರಿಯಾಗಿದೆ. ಆಂಗ್ಲ ಭಾಷೆಯ ವ್ಯಾಮೋಹದಿಂದಾಗಿ ಕನ್ನಡ ಭಾಷೆ ಬಳಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ನಮ್ಮ ಮಾತೃ ಭಾಷೆ…

Read More

‘ಕಜ್ಜಾಯ’ವು ಸುನಂದಾ ಬೆಳಗಾಂಕರರ ಮೊದಲ ಸೃಜನಶೀಲ ಕೃತಿಯಾಗಿದೆ. ಎಪ್ಪತ್ತರ ದಶಕದಲ್ಲಿ ಸುಧಾ ವಾರಪತ್ರಿಕೆಯಲ್ಲಿ ಸತತವಾಗಿ ಲಲಿತ ಪ್ರಬಂಧಗಳನ್ನು ಬರೆಯುವ ಮೂಲಕ ಸಾಹಿತ್ಯದ ಪಯಣವನ್ನು ಆರಂಭಿಸಿದ ಅವರಿಗೆ ಓದುಗರ ಅಪಾರ ಮೆಚ್ಚುಗೆಯು ದೊರೆಯಿತು. ‘ಕಜ್ಜಾಯ’ ಲಲಿತ ಪ್ರಬಂಧ ಸಂಕಲನವು ಈಗಾಗಲೇ ಐದು ಮುದ್ರಣಗಳನ್ನು ಕಂಡಿರುವುದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಕಜ್ಜಾಯದಲ್ಲಿ ಹತ್ತು ಲಲಿತ ಪ್ರಬಂಧಗಳಿವೆ. ಮೇಲುನೋಟಕ್ಕೆ ಲಲಿತಪ್ರಬಂಧ ಎನಿಸಿಕೊಳ್ಳುವ ‘ಮಣ್ಣು’ ಎಂಬ ರಚನೆಯಲ್ಲಿ ಕತೆಯನ್ನು ಹೇಳುವ ತಂತ್ರವನ್ನು ಬಳಸಲಾಗಿದೆ. ಕತೆಯನ್ನು ಆರಂಭಿಸುವ ಲೇಖಕಿಯು ಅದಕ್ಕೆ ತಕ್ಕ ಪ್ರಾಥಮಿಕ ಹಿನ್ನೆಲೆಯನ್ನು ಒದಗಿಸಿದ ಬಳಿಕ ಹಿಂದೆ ಸರಿದು ಪಾತ್ರವೊಂದರ ಮೂಲಕ ಕತೆಯನ್ನು ಹೇಳುತ್ತಾರೆ. ಮುಂದೆ ಬರಲಿರುವ ದಾರುಣ ಸನ್ನಿವೇಶದ ಸೂಚನೆಯನ್ನು ಕೊಡದೆ ತಿಳಿ ಹಾಸ್ಯದ ಧಾಟಿಯಲ್ಲಿ ಆರಂಭವಾಗುವ ಪ್ರಬಂಧದಲ್ಲಿ ಬರುವ ಮಣ್ಣಿನ ಪ್ರಸ್ತಾಪದಲ್ಲಿ ಮುಂಬರುವ ಸಾವಿನ ಪೀಠಿಕೆಯಿದೆ. ಮಣ್ಣನ್ನು ನೋಡುವಾಗ ಲೇಖಕಿಗೆ ಮಣ್ಣಿನ ಮೂರ್ತಿಗಳನ್ನು ಮಾಡುತ್ತಿದ್ದ ದಾನಪ್ಪ-ಹಾಲವ್ವ ದಂಪತಿಯರ ನೆನಪು, ಹೆತ್ತವರನ್ನು ಬಿಟ್ಟು ಮುಂಬಯಿಗೆ ಉದ್ಯೋಗಕ್ಕೆ ಹೋಗಬಯಸುವ ಮಗ ಶ್ರೀಶೈಲ, ಇದೇ ಕೊರಗನ್ನು ಅನುಭವಿಸುತ್ತಾ ಮಣ್ಣಿನಲ್ಲಿ…

Read More

ಉಪ್ಪಿನಂಗಡಿ : ಹಿರಿಯ ಯಕ್ಷಗಾನ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾತಾಳ ವೆಂಕಟರಮಣ ಭಟ್ ಉಪ್ಪಿನಂಗಡಿಯ ತಮ್ಮ ಸ್ವ ಗೃಹದಲ್ಲಿ ದಿನಾಂಕ 19 ಜುಲೈ 2025ರ ಶನಿವಾರದಂದು ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಹಿರಿಯ ಪುತ್ರ ಯಕ್ಷಗಾನ ಕಲಾವಿದ ಅಂಬಾಪ್ರಸಾದ್ ಪಾತಾಳ, ಕಿರಿಯ ಪುತ್ರ ಉಪ್ಪಿನಂಗಡಿ ಪಿ. ಎ. ಬ್ಯಾಂಕ್ ನಿರ್ದೇಶಕ ಶ್ರೀರಾಮ ಭಟ್ ಪಾತಾಳ ಸಹಿತ ನಾಲ್ವರು ಪುತ್ರಿಯರು, ಮೊಮ್ಮಕ್ಕಳು, ಅಪಾರ ಬಂಧುಗಳು ಹಾಗೂ ಅಭಿಮಾನಿಗಳನ್ನು ಆಗಲಿದ್ದಾರೆ. ತೆಂಕು ಮತ್ತು ಬಡಗು ಎರಡೂ ತಿಟ್ಟುಗಳಲ್ಲಿ ವೇಷಗಳನ್ನು ಮಾಡಿ ಭಾವಾಭಿನಯ ಮತ್ತು ನೃತ್ಯ ಲಾಲಿತ್ಯಗಳಿಂದ ವೈವಿಧ್ಯಮಯ ವೇಷಗಳಲ್ಲಿ ಮೆರೆದ ಹಿರಿಯ ಕಲಾವಿದ ಪಾತಾಳ ವೆಂಕಟರಮಣ ಭಟ್ಟರು. ಮೂರನೇ ತರಗತಿ ಪೂರೈಸಿ 1951ರಲ್ಲಿ ಜೀವನೋಪಾಯಕ್ಕಾಗಿ ಕಾಂಚನ ನಾಟಕ ಕಂಪನಿಯಲ್ಲಿ ಅಡುಗೆಯವರಾಗಿ ಸೇರಿ ಸಹಜ ಪ್ರತಿಭೆಯಿಂದ ಪ್ರಧಾನ ಸ್ತ್ರೀ ವೇಷ ಪಾತ್ರಧಾರಿಯಾಗಿ ಅವಕಾಶ ಪಡೆದರು. 1953ರಲ್ಲಿ ವೃತ್ತಿ ಮೇಳಕ್ಕೆ ಸೇರಿ 1981ರಲ್ಲಿ ಯಕ್ಷ ರಂಗದಿಂದ ನಿವೃತ್ತಿ ಗೊಳ್ಳುವ ತನಕ ತೆಂಕು…

Read More

ಮನಮೋಹಕ ಅಭಿನಯ ಮತ್ತು ನೃತ್ಯ-ನಟುವಾಂಗಗಳಿಗೆ ಹೆಸರಾದ ನೃತ್ಯಗುರು ಡಾ. ಶ್ರುತಿ ಎನ್. ಮೂರ್ತಿ – ‘ನಾಟ್ಯಭೈರವಿ ನೃತ್ಯ ಶಾಲೆ’ಯ ಹೆಸರಾಂತ ಗುರು. ಇತ್ತೀಚೆಗೆ ಇವರ ನುರಿತ ಗರಡಿಯಲ್ಲಿ ರೂಹು ತಳೆದ ನೃತ್ಯಶಿಲ್ಪ ಕುಮಾರಿ ಸುಪ್ರೀತಾ, ಬೆಂಗಳೂರಿನ ವಿವೇಕ ಆಡಿಟೋರಿಯಂನಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ನೆರವೇರಿಸಿಕೊಂಡು ಅತ್ಯಂತ ಮೋಹಕ ಕೃತಿಗಳನ್ನು ವರ್ಣರಂಜಿತವಾಗಿ ಪ್ರದರ್ಶಿಸಿದಳು. ಸುಂದರ ಅಭಿನಯ, ಸೊಗಸಾದ ನೃತ್ತ ಸೌಂದರ್ಯದಿಂದ ಕೂಡಿದ ನಾಟ್ಯ ಮಯೂರಿ ಸುಪ್ರೀತಳ ನೃತ್ಯವೈವಿಧ್ಯ ಕಲಾರಸಿಕರನ್ನು ರಂಜಿಸಿತು. ಕಲಾತ್ಮಕ ‘ಪುಷ್ಪಾಂಜಲಿ’ಯಿಂದ ನೃತ್ಯದ ಶುಭಾರಂಭ ಮಾಡಿ ‘ಗಣೇಶವಂದನೆ’ಯನ್ನು ವಿಶಿಷ್ಟವಾಗಿ ಕಣ್ಮನ ಸೆಳೆದ ಭಾವ-ಭಂಗಿಗಳಿಂದ ನಿರೂಪಿಸಿದಳು. ಆಕೆಯ ಅಂಗಶುದ್ಧ ನರ್ತನವು ‘ಅಲರಿಪು’ವಿನ ಆಂಗಿಕಾಭಿನಯಕ್ಕೆ ಕಳೆಗೊಟ್ಟಿತು. ಗುರು ಶ್ರುತಿ ಅವರ ಲಯಾತ್ಮಕ ನಟುವಾಂಗದ ಬನಿ ಅವಳ ಪಾದಚಲನೆಗೆ, ನೃತ್ತಗಳ ನಿರೂಪಣೆಗೆ ಅಮಿತ ಸ್ಫೂರ್ತಿ ನೀಡಿತು. ಮುಂದೆ ಸಾದರಪಡಿಸಿದ ‘ಕಾಲಭೈರವಾಷ್ಟಕಂ’ ಪರಿಣಾಮಕಾರಿಯಾಗಿ ಝೇಂಕರಿಸಿ, ವಿವಿಧ ಭಾವಗಳ ಸಾಂದ್ರತೆ ಮಡುಗಟ್ಟಿತ್ತು. ಕಲಾವಿದೆಯ ಪ್ರಖರ ಅಭಿನಯ ಶಕ್ತಿಗೆ ಕನ್ನಡಿ ಹಿಡಿಯಿತು. ಪ್ರಸ್ತುತಿಯ ಕೇಂದ್ರಭಾಗ- ‘ಸ್ವಾಮಿಯೇ ವರ ಸೊಲ್ಲಡಿ’ ಎಂಬ ಶೃಂಗಾರ…

Read More

ಉಡುಪಿ : ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ಇವರಿಂದ ರಥಬೀದಿ ಗೆಳೆಯರು (ರಿ.) ಉಡುಪಿ ಇವರ ಸಹಯೋಗದಲ್ಲಿ ‘ಅರವಿನ ಬೆಳಕು ಉಪನ್ಯಾಸ ಮಾಲೆ -7’ ಕಾರ್ಯಕ್ರಮವನ್ನು ದಿನಾಂಕ 22 ಜುಲೈ 2025ರಂದು ಸಂಜೆ 4-00 ಗಂಟೆಗೆ ಉಡುಪಿಯ ಹೆನ್ರಿ ಡುನ್ಯಾಂಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಡಾ. ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷರಾದ ಡಾ. ಗಣನಾಥ ಶೆಟ್ಟಿ ಎಕ್ಕಾರು ಇವರ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಶ್ರೀಮತಿ ಸ್ವರೂಪ ಟಿ.ಕೆ. ಇವರು ಉದ್ಘಾಟನೆ ಮಾಡಲಿದ್ದಾರೆ. ‘ಡಾ. ಶಿವರಾಮ ಕಾರಂತರ ಬದುಕು ಮತ್ತು ಬರಹಗಳ ಪ್ರಸ್ತುತತೆ’ ಎಂಬ ವಿಷಯದ ಬಗ್ಗೆ ಬೆಂಗಳೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರು ಉಪನ್ಯಾಸ ನೀಡಲಿದ್ದಾರೆ.

Read More

ಪಡುಕುತ್ಯಾರು : ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಇದರ ವತಿಯಿಂದ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ವಿಶ್ವಾವಸು ಸಂವತ್ಸರದ ಚಾತುರ್ಮಾಸ್ಯ ವೃತಚಾರಣೆಯಲ್ಲಿ ‘ಹರಿಕಥಾ ಸತ್ಸಂಗ’ವನ್ನು ದಿನಾಂಕ 20 ಜುಲೈ 2025ರಂದು ಅಪರಾಹ್ನ 1-30 ಗಂಟೆಗೆ ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಸರಸ್ವತೀ ಪೀಠದಲ್ಲಿ ಆಯೋಜಿಸಲಾಗಿದೆ. ಮಂಗಳೂರಿನ ಕುಮಾರಿ ಶ್ರದ್ಧಾ ಗುರುದಾಸ್ ಇವರಿಂದ ನಡೆಯಲಿರುವ ‘ಗುರುಭಕ್ತ ಏಕಲವ್ಯ’ ಹರಿಕಥಾ ಸತ್ಸಂಗಕ್ಕೆ ತಬ್ಲಾದಲ್ಲಿ ಪ್ರಥಮ್ ಆಚಾರ್ಯ, ಹಾರ್ಮೋನಿಯಂನಲ್ಲಿ ಡಾ. ಎಸ್.ಪಿ. ಗುರುದಾಸ್ ಮತ್ತು ಮೋರ್ಸಿಂಗ್ ನಲ್ಲಿ ಸುಧಾಮ ಆಚಾರ್ಯ ಸಹಕರಿಸಲಿದ್ದಾರೆ.

Read More

ಕುಂದಾಪುರ : ಮಗುವಿನ ನಾಮಕರಣದ ಪ್ರಯುಕ್ತ ಕುಂದಾಪುರ ತಾಲೂಕಿನ ಹಾಲಾಡಿಯ ಜಿ. ಶಂಕರ್ ಶಾಲಿನಿ ಸಭಾಂಗಣದಲ್ಲಿ ದಿನಾಂಕ 16 ಜುಲೈ 2025ರಂದು ಯಕ್ಷಗಾನ ಗಾನವೈಭವ ಕಾರ್ಯಕ್ರಮ ಆಯೋಜಿಸಿದ್ದರು. ಪ್ರಸಿದ್ಧ ಕಾಷ್ಠಶಿಲ್ಪಿ ನರಸಿಂಹ ಆಚಾರ್ಯರು ತಮ್ಮ ಪುಟ್ಟ ಮೊಮ್ಮಗಳ ನಾಮಕರಣಕ್ಕಾಗಿ‌ ಜನ್ಸಾಲೆ ರಾಘವೇಂದ್ರ ಆಚಾರ್ಯರ ಸಾರಥ್ಯದಲ್ಲಿ ಗಾನವೈಭವ ಸಂಯೋಜಿಸಿದ್ದರು. ಯಕ್ಷಗಾನಲೋಕದ ಕುಚ್ಚಿಕೂ ಗೆಳೆಯರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ ಹಾಗೂ ಪ್ರಸಾದ್ ಕುಮಾರ್ ‌ಮೊಗೆಬೆಟ್ಟು ಭಾಗವತಿಕೆಯಲ್ಲಿದ್ದರೆ, ಮದ್ದಳೆಯಲ್ಲಿ ಶಶಾಂಕ ಆಚಾರ್ಯ, ಚಂಡೆಯಲ್ಲಿ ಪ್ರಜ್ವಲ್‌ ಮುಂಡಾಡಿ ಸಹಕರಿಸಿದ್ದರು. ಯುವ ಅರ್ಥಧಾರಿ, ಕಲಾವಿದ ಸುನಿಲ್ ಹೊಲಾಡು ನಿರೂಪಣೆಯಲ್ಲಿದ್ದರು. ಗಣಪತಿ ಸ್ತುತಿಯೊಂದಿಗೆ ಆರಂಭವಾದ ಗಾನವೈಭವದಲ್ಲಿ ಪೌರಾಣಿಕ ಹಾಗೂ ನೂತನ ಪ್ರಸಂಗಗಳ ಪದ್ಯಗಳು ಉಭಯಭಾಗವತರ ಕಂಠದಲ್ಲಿ ಕರ್ಣಾನಂದಕರವಾಗಿ ಮೊಳಗಿದವು. ಗಾನಕ್ಕೆ ತಕ್ಕಂತೆ ವಾದನಾ ಸಹಕಾರವಿತ್ತು. ಹೊಲಾಡು ಅವರ ನಿರೂಪಣೆಯೂ ಹೃದ್ಯವೆನಿಸಿತ್ತು. ಮಗುವಿನ ಹೆಸರು ಸೂಚಿಸುವ ಮುಹೂರ್ತ ಒದಗಿದಾಗ ಮೊಗೆಬೆಟ್ಟು ಅವರು ತಕ್ಷಣವೇ ಒಂದು ಗೀತೆ ಬರೆದು ಗೆಳೆಯ ಜನ್ಸಾಲೆಯವರ ಕೈಗಿತ್ತರು. ಜನ್ಸಾಲೆ ಭಾಗವತರು ಹಾಡಿಯೇ ಬಿಟ್ಟರು. ಆ ಹಾಡಿನಲ್ಲಿ ಮಗುವಿನ‌…

Read More