Author: roovari

ಬೆಂಗಳೂರು : ಕನ್ನಡ ಬರಹಗಾರ ಮತ್ತು ಪ್ರಕಾಶಕರ ಸಂಘದ ಕಾರ್ಯದರ್ಶಿ ಆರ್. ದೊಡ್ಡೇಗೌಡ ಅವರನ್ನು ‘ಕನ್ನಡ ಅರವಿಂದ’ ಪ್ರಶಸ್ತಿ ಹಾಗೂ ಕನ್ನಡ ಹೋರಾಟಗಾರ ನಾ. ನಾಗರಾಜಯ್ಯ ಅವರನ್ನು ‘ಕನ್ನಡ ಚಿರಂಜೀವಿ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ನಯನ ಸಭಾಂಗಣದಲ್ಲಿ ದಿನಾಂಕ 12-12-2022ರಂದು ನಡೆಯುವ ಕನ್ನಡ ಗೆಳೆಯರ ಬಳಗದ ವಾರ್ಷಿಕ ಪ್ರಶಸ್ತಿ ಪ್ರದಾನ, ಪುಸ್ತಕ ಬಹುಮಾನ, ಕನ್ನಡ ಚಿಂತನೆ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಕನ್ನಡ ಪರಿಚಾರಕ ಆರ್. ದೊಡ್ಡೇಗೌಡ ಅವರಿಗೆ ‘ಕನ್ನಡ ಅರವಿಂದ’ ಪ್ರಶಸ್ತಿ : ಬೆಳಗಾವಿ ಕನ್ನಡಪರ ಹೋರಾಟಕ್ಕೆ ಗಟ್ಟಿಯ ನೆಲೆ ಒದಗಿಸಿದ ಪತ್ರಕರ್ತ ಅರವಿಂದರಾಯ ಜೋಶಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷರಾಗಿ ಕನ್ನಡ ಚಟುವಟಿಕೆಗೆ ವಿಸ್ತಾರವಾದ ವೇದಿಕೆಯನ್ನು ನಿರ್ಮಿಸಿದವರು. ಅಪ್ಪಟ ದೇಶಾಭಿಮಾನಿ, ಸ್ವಾತಂತ್ರ್ಯ ಸೇನಾನಿ, ಬೆಳಗಾವಿಯಲ್ಲಿ ಪ್ರಥಮ ಕನ್ನಡ ಶಾಲೆ ಆರಂಭಿಸಿದವರು, ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದವರು, ಕೇಂದ್ರ ಗೃಹ ಸಚಿವರಿಗೆ ಕಾರ್ಯದರ್ಶಿಯಾಗಿದ್ದಾಗಲೂ ಕರ್ನಾಟಕವನ್ನು ಮರೆಯಲಿಲ್ಲ. ಜೋಶಿ ಅವರ ನೆನಪಿನಲ್ಲಿ ಕನ್ನಡ ಪರಿಚಾರಕರಿಗೆ ಕನ್ನಡ…

Read More

ಕಾರ್ಕಳ : ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಸಹಯೋಗದಲ್ಲಿ ಕೆ.ಎನ್.ಭಟ್ ಶಿರಾಡಿಪಾಲ್ ಜನ್ಮ ಶತಮಾನೋತ್ಸವದ ಪ್ರಯುಕ್ತ ದಿನಾಂಕ 15-11-2023ರಂದು ಸರಕಾರಿ ಹೈಸ್ಕೂಲ್ ಸಭಾಭವನದಲ್ಲಿ ಶತನಮನ ಶತಸನ್ಮಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕಾರ್ಕಳದ ಸಾಹಿತ್ಯಾಸಕ್ತ ಮಹಿಳಾ ಸಾಧಕಿಯರಾದ ದ್ವಿಭಾಷಾ ಸಾಹಿತಿ ಸುಲೋಚನ ತಿಲಕ್, ನಿವೃತ್ತ ಶಿಕ್ಷಕಿ ಸಾವಿತ್ರಿ ಮನೋಹರ್, ನಿವೃತ್ತ ಅಂಗ್ಲಭಾಷಾ ಉಪನ್ಯಾಸಕಿ ಶ್ಯಾಮಲಾ ಕುಮಾರಿ ಬೇವಿಂಜೆ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಅಧ್ಯಕ್ಷ ಮಿತ್ರಪ್ರಭಾ ಹೆಗ್ಡೆ, ಸಾಹಿತಿಕ ಶೈಕ್ಷಣಿಕ ಮತ್ತು ಧಾರ್ಮಿಕ ಸಂಘಟಕಿ ಮಾಲತಿ ವಸಂತರಾಜ್‌ ಹಾಗೂ ಸಾಹಿತಿ ಮತ್ತು ಪತ್ರಿಕಾ ಬರಹಗಾರ್ತಿ ಮನೋರಮಾ ರೈ ಅವರನ್ನು ಕೆ.ಎನ್. ಭಟ್ ಶಿರಾಡಿಫಾಲ್ ಅವರ ಪುತ್ರಿಯರಾದ ಅನುಪಮಾ ಚಿಪ್ಳೂಣಕರ್, ವಿದ್ಯಾ ಡೋಂಗ್ರೆ ಹಾಗೂ ನಿವೇದಿತಾ ಗಜೇಂದ್ರ ಇವರುಗಳು ಸನ್ಮಾನಿಸಿದರು. ಸುಲೋಚನಾ ಬಿ.ವಿ., ವಸುಧಾ ಶೆಣೈ ಶಕುಂತಲಾ ಅಡಿಗ, ಡಾ. ಸುಮತಿ ಪಿ., ನಿವೇದಿತಾ ಗಜೇಂದ್ರ ಹಾಗೂ ಇಂದಿರಾ ಸನ್ಮಾನ ಪತ್ರ ವಾಚಿಸಿದರು. ಸನ್ಮಾನ ಸ್ವೀಕರಿಸಿದ ಸಾಹಿತಿ ಶ್ಯಾಮಲಾ ಕುಮಾರಿ…

Read More

ಸಾಲಿಗ್ರಾಮ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ ಕಲಾಭಿರಾಮ ಪ್ರತಿಷ್ಠಾನ ಇವರಿಂದ ಆದಿತ್ಯ ಹೆಗಡೆ ಯಡೂರು ವಿರಚಿತ ‘ಶೂದ್ರ ತಪಸ್ವಿ’ ಯಕ್ಷಗಾನ ಪೌರಾಣಿಕ ಪ್ರಸಂಗ ಪ್ರದರ್ಶನ ದಿನಾಂಕ 22-11-2023ರಂದು ಸಂಜೆ 6.30ಕ್ಕೆ ಗುಂಡ್ಮಿ ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರು ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ, ಮದ್ದಲೆಯಲ್ಲಿ ಶ್ರೀ ರಾಘವೇಂದ್ರ ಹೆಗಡೆ ಯಲ್ಲಾಪುರ ಮತ್ತು ಚೆಂಡೆ ಶ್ರೀ ಶಿವಾನಂದ ಕೋಟ ಹಾಗೂ ಮುಮ್ಮೇಳದಲ್ಲಿ ರಾಮನಾಗಿ ಶ್ರೀ ರಾಮಚಂದ್ರ ಹೆಗಡೆ ಕೊಂಡದಕುಳಿ, ಹನುಮಂತನಾಗಿ ಶ್ರೀ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ ಮತ್ತು ಶಂಬೂಕನಾಗಿ ಶ್ರೀ ಆದಿತ್ಯ ಹೆಗಡೆ ಯಡೂರು ಸಹಕರಿಸಲಿದ್ದಾರೆ. ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ ಕಲಾಭಿರಾಮ ಪ್ರತಿಷ್ಠಾನವು ತಮಗೆಲ್ಲರಿಗೂ ಆದರದ ಸ್ವಾಗತ ಕೋರಿದೆ.

Read More

ಪುತ್ತೂರು : ಸಂಸಾರ ಜೋಡುಮಾರ್ಗ ಇದರ ಆಶ್ರಯದಲ್ಲಿ ರೋಟರಿ ಪುತ್ತೂರು ಎಲೈಟ್ ಸಹಭಾಗಿತ್ವದಲ್ಲಿ ನಿರತ ನಿರಂತ ಬಹುವಚನಂ ಆಯೋಜನೆಯ ಮೂರು ದಿನಗಳ ‘ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವ’ವು ದಿನಾಂಕ 22-11-2023ರಿಂದ 24-11-2023ರವರೆಗೆ ಪುತ್ತೂರಿನ ಎಡ್ವರ್ಡ್ ಹಾಲ್ ಸುದಾನ ಆವರಣದಲ್ಲಿ ನಡೆಯಲಿದೆ. ದಿನಾಂಕ 22-11-2023ರಂದು ಸಂಜೆ ಗಂಟೆ 6.30ರಿಂದ ಮಾಣೆ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅಭಿನಯಿಸುವ ನಾಟಕ ‘ಆರೋಗ್ಯ ಸಿರಿ’. ಈ ನಾಟಕದ ರಚನೆ ಮತ್ತು ನಿರ್ದೇಶನ ಮೌನೇಶ ವಿಶ್ವಕರ್ಮ ಮಾಡಿದ್ದು, ಪರಿಕಲ್ಪನೆ ರವೀಂದ್ರ ದರ್ಬೆ ಅವರದ್ದು, ವಿಜಯಲಕ್ಷ್ಮೀ ವಿ. ಶೆಟ್ಟಿ ಮಾರ್ಗದರ್ಶನದಲ್ಲಿ ಜಯಶ್ರೀ ಆಚಾರ್ಯ ಮತ್ತು ಸಂಧ್ಯಾ ಸಹಕಾರ ನೀಡಲಿದ್ದಾರೆ. ಸಂಜೆ 7-15ಕ್ಕೆ ಪುತ್ತೂರಿನ ಸುದಾನ ವಸತಿ ಶಾಲೆಯ ವಿದ್ಯಾರ್ಥಿಗಳು ಅಭಿನಯಿಸುವ ನಾಟಕ “ರೋಗಗಳ ಮಾಯದಾಟ’. ಈ ನಾಟಕದ ರಚನೆ ಮತ್ತು ನಿರ್ದೇಶನ ಮೌನೇಶ ವಿಶ್ವಕರ್ಮ ಮಾಡಿದ್ದು, ಪರಿಕಲ್ಪನೆ ಪೂಜಾ ಎಂ.ವಿ. ಅವರದ್ದು, ಶೋಭಾ ನಾಗರಾಜ್ ಮಾರ್ಗದರ್ಶನ ನೀಡಲಿದ್ದಾರೆ. ದಿನಾಂಕ 23-11-2023ರಂದು ಸಂಜೆ ಗಂಟೆ 6.30ರಿಂದ ಪುತ್ತೂರಿನ ಶ್ರೀ…

Read More

ಬೆಳಗಾವಿ : ಕೆ.ಎಲ್‌.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ) ಬೆಳಗಾವಿ, ಐಕ್ಯೂಎಸಿ ಕನ್ನಡ ವಿಭಾಗ ಹಾಗೂ ಬೆಳಗಾವಿಯ ಡಾ. ಡಿ.ಎಸ್.ಕರ್ಕಿ ಪ್ರತಿಷ್ಠಾನ ಟ್ರಸ್ಟ್ (ರಿ.) ಸಹಯೋಗದಲ್ಲಿ ‘ಕರ್ನಾಟಕ ಸಂಭ್ರಮ-50’ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಡಾ. ಡಿ.ಎಸ್. ಕರ್ಕಿ ಅವರ 116ನೇ ಜಯಂತ್ಯುತ್ಸವದ ಪ್ರಯುಕ್ತ ‘ಕನ್ನಡದ ದೀಪ : ಡಾ. ಡಿ.ಎಸ್. ಕರ್ಕಿ’ ವಿಶೇಷ ಉಪನ್ಯಾಸ ಕಾರ್ಯಕ್ರಮವು ದಿನಾಂಕ 22-11-2023 ಮಂಗಳವಾರ, ಪೂರ್ವಾಹ್ನ 11:30 ಗಂಟೆಗೆ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಸರ್. ಸಿ.ವಿ. ರಾಮನ್‌ ಸಭಾಂಗಣದಲ್ಲಿ ನಡೆಯಲಿದೆ. ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಜ್ಯೋತಿ ಎಸ್. ಕವಳೇಕರ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಡಿ.ಎಸ್. ಕರ್ಕಿ ಪ್ರತಿಷ್ಠಾನ ಟ್ರಸ್ಟಿನ ಮಹಿಳಾ ಘಟಕದ ಅಧ್ಯಕ್ಷರಾದ ಡಾ. ವಿಜಯಲಕ್ಷ್ಮೀ ತಿರ್ಲಾಪೂರ ನಡೆಸಲಿದ್ದು, ಮುಖ್ಯ ಅತಿಥಿಯಾಗಿ ದಾವಣಗೆರೆ ವಿಶ್ವ ವಿದ್ಯಾನಿಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕರಾದ ಡಾ. ಭೀಮಾಶಂಕರ ಜೋಷಿ…

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಮಂದಿರದಲ್ಲಿ ಹಮ್ಮಿಕೊಂಡ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರದಾನ ಹಾಗೂ ವಿಶ್ರಾಂತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಬಿ. ಶಿವಲಿಂಗೇಗೌಡ ಅವರು ಅನುವಾದಿಸಿದ ಮೂಲ ʻಖಲ್ಹೀಲ್ ಗಿಬ್ರಾನ್ʼ ಅವರ ಕೃತಿ ʻಮುರಿದ ರೆಕ್ಕೆಗಳುʼ ಪುಸ್ತಕ ಬಿಡುಗೆಡೆ ಸಮಾರಂಭ ದಿನಾಂಕ 16-11-2023ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಮಾತನಾಡುತ್ತಾ “ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಾಡಿನ ಪ್ರಾತಃಸ್ಮರಣೀಯರು. ಅವರ ಪ್ರಗತಿಪರ ಆಡಳಿತವನ್ನು ಕಂಡು ಮಹಾತ್ಮಾ ಗಾಂಧೀಜಿಯವರು ನಾಲ್ವಡಿಯವರನ್ನು ‘ರಾಜರ್ಷಿ’ ಎಂದು ಕರೆದರು ಮತ್ತು ಮೈಸೂರು ಸಂಸ್ಥಾನವನ್ನು ‘ರಾಮರಾಜ್ಯ’ ಎಂದಿದ್ದರು. ಅವರ ಆಳ್ವಿಕೆಯ ಅವಧಿಯಲ್ಲಿಯೇ ಆಗಿರುವ ಸಮಾಜ ಮುಖಿ ಕಾರ್ಯಗಳು ಇಂದಿಗೂ ಪ್ರಶಸ್ತವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರ ಹೆಮ್ಮೆಯ ವಿಶ್ವಾಸಾರ್ಹ ಸಂಸ್ಥೆ. ಕನ್ನಡಿಗರ ವಿಶ್ವಾಸದ ಪ್ರತೀಕವಾಗಿ ನಮ್ಮಲ್ಲಿ ಇಂದು 2100ಕ್ಕೂ…

Read More

ಉಳ್ಳಾಲ : ರಾಣಿ ಅಬ್ಬಕ್ಕ ಉತ್ಸವ ಸಮಿತಿ ಉಳ್ಳಾಲ ಇದರ ಆಶ್ರಯದಲ್ಲಿ ಮಂಗಳೂರಿನ ಬೀರಿಯಲ್ಲಿರುವ ಸೈಂಟ್ ಅಲೋಶಿಯಸ್ ಕಾಲೇಜಿನ ಆಡಳಿತ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಕಟ್ಟಡದ ಸಭಾಂಗಣದಲ್ಲಿ ‘ನೀವು ಕೇಳಿರದ ಉಳ್ಳಾಲ ರಾಣಿ ಅಬ್ಬಕ್ಕಳ ಸಾಹಸ ಕಥೆ’ ಕುರಿತು ವಿಚಾರ ಸಂಕಿರಣ ದಿನಾಂಕ 15-11-2023ರಂದು ನಡೆಯಿತು. ಮಾಜಿ ಶಾಸಕ ಕೆ. ಜಯರಾಮ್‌ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೀರ ರಾಣಿ ಅಬ್ಬಕ್ಕಳ ಹೆಸರಿನಲ್ಲಿ ಆಗಬೇಕಾದ ಕಾರ್ಯಗಳ ಬಗ್ಗೆ ವಿವರಿಸಿದರು. ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್‌ ಉಳ್ಳಾಲ ಉಪನ್ಯಾಸ ನೀಡಿ, “ಸ್ವಾತಂತ್ರ್ಯಕ್ಕೆ ಅಬ್ಬಕ್ಕಳು ಹೋರಾಟ ಮಾಡಿದ್ದಾಳೆ ಎನ್ನುವುದಕ್ಕಿಂತ ಮೊದಲು ಅವರ ಕುಟುಂಬದ ಬಗ್ಗೆ ಅರ್ಥ ಮಾಡಿಕೊಳ್ಳಬೇಕಾಗಿದೆ. ರಾಣಿ ಅಬ್ಬಕ್ಕ ಎರಡನೆಯವರಾಗಿದ್ದು, ಜೈನ ಧರ್ಮಕ್ಕೆ ಸೇರಿದ್ದರು. ಪೋರ್ಚ್‌ಗೀಸರ ವಿರುದ್ಧ ಹೋರಾಟ ಮಾಡಿದವರಲ್ಲಿ, ವಾಸ್ಕೋಡಿಗಾಮ ವ್ಯಾಪಾರದ ದೃಷ್ಟಿಯಿಂದ ಕಲ್ಲಿಕೋಟೆಗೆ ಬಂದಾಗ ಅವರ ವಿರುದ್ಧ ಸೆಟೆದು ನಿಂತು ಹೋರಾಡಿದವರಲ್ಲಿ ಅಬ್ಬಕ್ಕ ಕೂಡಾ ಒಬ್ಬರು. ಅವರ ಹೋರಾಟದ ಕಾಲದಲ್ಲಿ ಉಳ್ಳಾಲ ಸಣ್ಣ ಪ್ರಾಂತ್ಯ ಕೂಡಾ ಆಗಿತ್ತು”…

Read More

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕವು ಬಪ್ಪಳಿಗೆಯ ಅಂಬಿಕಾ ಕೇಂದ್ರೀಯ ವಿದ್ಯಾಲಯದ ಸಹಯೋಗದೊಂದಿಗೆ ಆಯೋಜಿಸುವ ಪುತ್ತೂರು ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನವು ದಿನಾಂಕ 20-12-2023ರ ಬುಧವಾರದಂದು ನಡೆಯಲಿದೆ. ಯುವ ಜನತೆಯನ್ನು ಸಾಹಿತ್ಯ ಲೋಕಕ್ಕೆ ಬರಮಾಡಿಕೊಂಡು ಅವರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಕವಿಗೋಷ್ಠಿ ಮಾತ್ರವಲ್ಲದೆ ಸಾಹಿತ್ಯ ಸಮ್ಮೇಳನದಲ್ಲಿ ಪ್ರಸ್ತುತ ಶಿಕ್ಷಣ ವ್ಯವಸ್ಥೆ, ಆಧುನಿಕ ತಂತ್ರಜ್ಞಾನದ ಬಳಕೆ, ನಾನು ಮೆಚ್ಚುವ ಶಿಕ್ಷಕ, ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಇತ್ಯಾದಿ ವಿಷಯಗಳಲ್ಲಿ ವಿಚಾರಗೋಷ್ಠಿ ಹಾಗೂ ಚರ್ಚಾ ಕೂಟಗಳು ನಡೆಯಲಿವೆ. ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಲು ಅರ್ಜಿ ಆಹ್ವಾನ ಸಾಹಿತ್ಯ ಲೋಕಕ್ಕೆ ಉತ್ತಮ ಸಾಹಿತಿಗಳನ್ನು ಹಾಗೂ ವಾಗ್ಮಿಗಳನ್ನು ಕೊಡುಗೆಯಾಗಿ ನೀಡುವ ನಿಟ್ಟಿನಲ್ಲಿ ಈ ಮಕ್ಕಳ ಸಾಹಿತ್ಯ ಸಮ್ಮೇಳನದ ಎಲ್ಲಾ ಪ್ರಮುಖ ಸ್ಥಾನಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಯೋಜನೆಯನ್ನು ಪ್ರಸ್ತಾಪಿಸಲಾಗಿ ಈ ಕೆಳಗಿನ ವಿವಿಧ ಗೋಷ್ಠಿಗಳಿಗೆ ಪುತ್ತೂರು ತಾಲೂಕಿನಲ್ಲಿ ಅಧ್ಯಯನ ಮಾಡುತ್ತಿರುವ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಸಾಹಿತ್ಯಾಸಕ್ತ ವಿದ್ಯಾರ್ಥಿಗಳಿಂದ…

Read More

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಚವೆಯ ಶ್ರೀಮತಿ ಭಾಗೀರಥಿ ಭಟ್ಟ ಹಾಗೂ ಕೃಷ್ಣ ಭಟ್ಟ ಇವರ ಮಗನಾಗಿ 5.03.1967 ರಂದು ರವೀಂದ್ರ ಭಟ್ಟ ಅಚವೆ ಅವರ ಜನನ. ದ್ವಿತೀಯ ಪಿಯುಸಿ ಇವರ ವಿದ್ಯಾಭ್ಯಾಸ. ಆರನೇ ತರಗತಿ ಓದುತ್ತಿರುವಾಗ ಮನೆಯಲ್ಲಿ ಯಕ್ಷಗಾನ ಭಾಗವತಿಕೆಯ ತರಬೇತಿ ನಡೆಯುತ್ತಿತ್ತು ಅದನ್ನು ದಿನವೂ ಗಮನಿಸುತ್ತಿದ್ದರು ಆ ಕಾಲದಲ್ಲಿ ಮನರಂಜನೆಯ ಮಾಧ್ಯಮ ‘ಯಕ್ಷಗಾನ’ವೊಂದೇ ಆಗಿತ್ತು ಎಲ್ಲಿ ಯಕ್ಷಗಾನ ನಡೆದರೂ ಹಾರ್ಮೋನಿಯಂ ವಾದನ ನನ್ನದಾಗಿರುತ್ತಿತ್ತು. ನಂತರ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮುಗಿದ ಮೇಲೆ ಯಕ್ಷಗಾನ ಭಾಗವತಿಕೆ ಕಲಿಯಲು ಮುಂದಾದರು ಅಚವೆಯವರು. ಪ್ರಾಚಾರ್ಯ ಕೆ.ವಿ. ಹೆಗಡೆ ಗೋಳಗೋಡ್ ಇವರ ಯಕ್ಷಗಾನ ಗುರುಗಳು. ಗೋರ್ಪಾಡಿ ವಿಠ್ಠಲ ಪಾಟೀಲ್, ಗೋಪಾಲ ಗಾಣಿಗ ಹೆರಂಜಾಲು ಬಳಿ ಯಕ್ಷಗಾನದ ಭಾಗವತಿಕೆಯ ಬಗ್ಗೆ ಕೇಳಿ ಕಲಿತಿರುತ್ತಾರೆ ರವೀಂದ್ರ ಭಟ್ಟ ಅಚವೆ. ನಾರಣಪ್ಪ ಉಪ್ಪೂರು, ನೆಬ್ಬೂರರು, ಕಾಳಿಂಗ ನಾವಡ, ಕೆ.ಪಿ ಹೆಗಡೆ, ಧಾರೇಶ್ವರರು, ವಿದ್ವಾನ್ ಗಣಪತಿ ಭಟ್ಟರು, ಗೋಪಾಲ ಗಾಣಿಗ, ಪದ್ಯಾಣ ಗಣಪತಿ ಭಟ್ಟರು ನೆಚ್ಚಿನ ಭಾಗವತರು ಪ್ರತಿಯೊಬ್ಬರಲ್ಲೂ…

Read More

ಮೈಸೂರು : ರಂಗಬಂಡಿ ಮಳವಳ್ಳಿ (ರಿ.) ಪ್ರಸ್ತುತ ಪಡಿಸುವ ಏಕವ್ಯಕ್ತಿ ರಂಗ ಪ್ರಯೋಗ ‘ಅನುರಕ್ತೆ’ (ದೇವಯಾನಿ ಬದುಕಿನ ದುರಂತ ಕಥನ) ನಾಟಕವು ದಿನಾಂಕ 01-12-2023ರಂದು ಸಂಜೆ 6.30ಕ್ಕೆ ಮೈಸೂರಿನ ಕಲಾಮಂದಿರ ಅವರಣದ ಕಿರು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.  ಶಶಿಕಾಂತ ಯಡಹಳ್ಳಿಯವರ ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನವನ್ನು ಮಧು ಮಳವಳ್ಳಿ ನಿರ್ವಹಿಸಿದ್ದು, ರಂಗದ ಮೇಲೆ ಉಮಾಶ್ರೀ ಮಧು ಮಳವಳ್ಳಿ ಪ್ರಸ್ತುತಪಡಿಸಲಿದ್ದಾರೆ. ಈ ನಾಟಕದ ರಂಗ ವಿನ್ಯಾಸವನ್ನು ಶಶಿಧರ ಅಡಪ ನಿರ್ವಹಿಸಲಿದ್ದು, ಸಂಗೀತ ಜನಾರ್ದನ (ಜನ್ನಿ) ಅವರದ್ದು, ಬೆಳಕಿನ ವಿನ್ಯಾಸವನ್ನು ಅರುಣ್ ಮೂರ್ತಿ ಮತ್ತು ನಾಟಕಕ್ಕೆ ಆದಿತ್ಯ ಭಾರದ್ವಾಜ್ ಸಹಕರಿಸಲಿದ್ದಾರೆ. ನಾಟಕಕ್ಕೆ ಸಹಾಯ ಧನ ರೂಪಾಯಿ 100/- ಆಗಿದ್ದು, ಹೆಚ್ಚಿನ ಮಾಹಿತಿಗಾಗಿ – 7022940964, 8197130609  ನಾಟಕದ ಕುರಿತು : ಪೌರಾಣಿಕ ಕತೆಗಳು, ಪಾತ್ರಗಳು, ಘಟನೆಗಳು ಸದಾ ನಮ್ಮನ್ನಾವರಿಸುತ್ತವೆ. ಇವು ಸಾರ್ವಕಾಲಿಕವಾಗಿರುವುದೇ ಇದಕ್ಕೆ ಕಾರಣವಿರಬಹುದು! ಅಲ್ಲಿಯ ಪಾತ್ರಗಳ ರಸವತ್ತತೆ, ಮನುಜ ಸಹಜ ಗುಣಗಳು, ಜೀವನದ ಪಾಠಗಳು, ಬದುಕಿನೊಡನೆ ಬೆಸೆದ ಬರಹವಾಗಿರುತ್ತದೆ. ಮನುಷ್ಯನ ಮುಖವಾಡ ಕಳಚಲು…

Read More