Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಶಾಖೆಯು ತಮ್ಮ ವಿಶ್ವ ಪರಂಪರೆಯ ಸಪ್ತಾಹವನ್ನು ದಿನಾಂಕ 25 ನವೆಂಬರ್ 2024ರಂದು ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ‘ಮಂಗಳೂರಿನ ಕಟ್ಟೆಗಳು’ ಎಂಬ ಶೀರ್ಷಿಕೆಯ ಪ್ರದರ್ಶನದ ಉದ್ಘಾಟನೆಯೊಂದಿಗೆ ಮುಕ್ತಾಯಗೊಳಿಸಿತು. ಕಟ್ಟೆಗಳು ಪವಿತ್ರ ಮರಗಳ ಬುಡದ ಸುತ್ತಲೂ ನಿರ್ಮಿಸಲಾದ ವೇದಿಕೆಗಳು. ಇವು ಕರಾವಳಿ ಪ್ರದೇಶದಲ್ಲಿ ಧಾರ್ಮಿಕ ನೆಲೆಗಳಾಗಿಯೂ ಸಮುದಾಯದ ಕೇಂದ್ರಗಳಾಗಿಯೂ ಗುರುತಿಸಲ್ಪಡುತ್ತವೆ. ಪ್ರದರ್ಶನವು ಕಟ್ಟೆಗಳ ವಿಶಿಷ್ಟ ಸಾಂಸ್ಕೃತಿಕ ಮತ್ತು ಪರಿಸರದ ಮಹತ್ವವನ್ನು ತೋರಿಸುತ್ತದೆ. ಈ ಪ್ರದರ್ಶನವು ಇಂಟಾಕ್ ಮಂಗಳೂರು ಶಾಖೆಯ ಸಂಚಾಲಕರಾದ ಸುಭಾಸ್ ಚಂದ್ರ ಬಸು ಅವರ ನೇತೃತ್ವದಲ್ಲಿ ವಾಸ್ತುಶಿಲ್ಪಿಗಳು ಮತ್ತು ವಾಸ್ತುಶಿಲ್ಪದ ವಿದ್ಯಾರ್ಥಿಗಳ ಸಹಕಾರದೊಂದಿಗೆ ಎರಡು ವರ್ಷಗಳಿಂದ ನಡೆದ ಸಮಗ್ರ ದಾಖಲೀಕರಣದ ಯೋಜನೆಯ ಫಲಿತಾಂಶವಾಗಿದೆ. ಮಂಗಳೂರಿನ ಹಳೆಯ ಭಾಗದ 200ಕ್ಕೂ ಹೆಚ್ಚು ಕಟ್ಟೆಗಳ ದಾಖಲೀಕರಣದ ಮೂಲಕ ಇವುಗಳ ಐತಿಹಾಸಿಕ ಮತ್ತು ವ್ಯಾಪ್ತಿಗತ ಬದಲಾವಣೆಯ ಕುರಿತು ಒಂದು ನೋಟವನ್ನು ನೀಡುತ್ತದೆ. ಸಾಮಾಜಿಕ, ವ್ಯಾಪಾರ ಮತ್ತು ವಿರಾಮದ…
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿಭಾಗಕ್ಕೆ ಏರ್ಪಡಿಸಿದ ಕನ್ನಡ ನಾಡು ನುಡಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ರಸಪ್ರಶ್ನೆ ಕಾರ್ಯಕ್ರಮವು ದಿನಾಂಕ 28 ನವೆಂಬರ್ 2024ರಂದು ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪತ್ರಕರ್ತ ಡಾನ್ ರಾಮಣ್ಣ ಮಾತನಾಡಿ “ಇದೊಂದು ಉತ್ತಮವಾದ ಕಾರ್ಯಕ್ರಮ. ಇಂತಹ ಚಟುವಟಿಕೆಗಳು ಮಕ್ಕಳ ಕಲಿಕೆಗೆ ಇನ್ನಷ್ಟು ಸ್ಪೂರ್ತಿ ನೀಡಲಿದೆ.” ಎಂದು ತಿಳಿಸಿದರು. ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಉದ್ದೇಶ ಹಾಗೂ ಅಗತ್ಯತೆಗಳ ಬಗ್ಗೆ ಸಭೆಗೆ ತಿಳಿಸಿದ ಸಾಂಸ್ಕೃತಿಕ ವೇದಿಕೆಯ ಗೌರವ ಅಧ್ಯಕ್ಷರಾದ ಶ್ರೀಮತಿ ಸುಧೀಷ್ಣಾ ಕುಮಾರಿ “ಕನ್ನಡ ನಾಡು, ನುಡಿ, ಸಾಹಿತ್ಯವನ್ನು ಹಾಗೂ ನಮ್ಮ ಸಾಂಸ್ಕೃತಿಕ ವೈಭವವನ್ನು ಮಕ್ಕಳು ಅರಿಯುವ ಅಗತ್ಯವಿದೆ. ಮಕ್ಕಳಲ್ಲಿ ಓದುವ ಅಭ್ಯಾಸ ಕಡಿಮೆಯಾಗಿದೆ. ಇಂತಹ ರಸಪ್ರಶ್ನೆ ಕಾರ್ಯಕ್ರಮಗಳು ಮಕ್ಕಳನ್ನು ಓದಲು…
ಮೈಸೂರು : ಜೆ.ಎಸ್.ಎಸ್. ಸಂಗೀತ ಸಭಾ ಟ್ರಸ್ಟ್ (ರಿ.) ಮೈಸೂರು ಮತ್ತು ಜೆ.ಎಸ್.ಎಸ್. ಮಹಾವಿದ್ಯಾಪೀಠ ಇವರ ಆಶ್ರಯದಲ್ಲಿ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಸಂಸ್ಮರಣ ಪ್ರಯುಕ್ತ ಇಪ್ಪತ್ತೊಂಬತ್ತನೆಯ ‘ಸಂಗೀತ ಸಮ್ಮೇಳನ 2024’ವನ್ನು ದಿನಾಂಕ 02 ಡಿಸೆಂಬರ್ 2024ರಿಂದ 06 ಡಿಸೆಂಬರ್ 2024ರವರೆಗೆ ಮೈಸೂರಿನ ಜೆ.ಎಸ್.ಎಸ್. ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ದಿನಾಂಕ 02 ಡಿಸೆಂಬರ್ 2024ರಂದು ಸಂಜೆ 5-30 ಗಂಟೆಗೆ ಸಮ್ಮೇಳನಾಧ್ಯಾಕ್ಷರಾದ ವೈಣಿಕ ವಿದ್ವಾನ್ ಡಾ. ರಾ. ವಿಶ್ವೇಶ್ವರನ್ ಇವರನ್ನು ಜೆ.ಎಸ್.ಎಸ್. ಮಹಿಳಾ ಕಾಲೇಜಿನ ಮುಖ್ಯದ್ವಾರದಿಂದ ಮೆರವಣಿಗೆಯೊಂದಿಗೆ ಸ್ವಾಗತಿಸಲಾಗುವುದು. ಇಸ್ರೋ ಮಾಜಿ ಅಧ್ಯಕ್ಷರಾದ ಡಾ. ಎ.ಎಸ್. ಕಿರಣ್ ಕುಮಾರ್ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿರುವರು. ಇದೇ ಸಂದರ್ಭದಲ್ಲಿ ಸುರತ್ಕಲ್ಲಿನ ಕಲಾಪೋಷಕರು ಮತ್ತು ಸಂಘಟಕರಾದ ಶ್ರೀ ಪಿ. ನಿತ್ಯಾನಂದ ರಾವ್ ಇವರಿಗೆ ‘ಸಂಗೀತ ಸೇವಾನಿಧಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಂಜೆ 7-00 ಗಂಟೆಗೆ ನಡೆಯಲಿರುವ ಸಂಗೀತ ಕಾರ್ಯಕ್ರಮದಲ್ಲಿ ವಿದ್ವಾನ್ ಡಾ. ರಾ. ವಿಶ್ವೇಶ್ವರನ್ – ವೀಣೆ,…
ಬೆಂಗಳೂರು : ಕನ್ನಡ ಸಹೃದಯರ ಪ್ರತಿಷ್ಠಾನ (ಕುಮಾರವ್ಯಾಸ ಮಂಟಪ) ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಕುಮಾರವ್ಯಾಸ ಜಯಂತಿ ಪ್ರಯುಕ್ತ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಕವಿ-ಕಾವ್ಯ ಪರಿಚಯ ಭಾಷಣ ಸ್ಪರ್ಧೆಯು ದಿನಾಂಕ 7 ಡಿಸೆಂಬರ್ 2024ರ ಶನಿವಾರದಂದು ಬೆಂಗಳೂರಿನ ಜಯನಗರದ ವಿ. ಇ. ಐ. ಟಿ. ಪದವಿ ಕಾಲೇಜು ಇಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಶ್ರೀ ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನ (ರಿ) ಇದರ ಅಧ್ಯಕ್ಷರಾದ ಡಾ. ಕೆ. ಪಿ. ಪುತ್ತೂರಾಯ, ಕರ್ನಾಟಕ ಗಮಕ ಕಲಾ ಪರಿಷತ್ತು ಇದರ ಕಾರ್ಯದರ್ಶಿಗಲಾದ ಜಿ. ದಕ್ಷಿಣಾಮೂರ್ತಿ ಹಾಗೂ ವಿ. ಇ. ಐ. ಟಿ. ಕಾಲೇಜು ಇದರ ಪ್ರಾಂಶುಪಾಲರಾದ ಶ್ರೀ ಶಂಕರಾಚಾರ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬೆಂಗಳೂರು : ಕನ್ನಡ ಯುವಜನ ಸಂಘ (ರಿ).ಇವರು ಬೆಂಗಳೂರಿನ ಶ್ರೀ ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನ (ರಿ) ಇದರ ಸಹಕಾರದಲ್ಲಿ ಆಯೋಜಿಸುವ ಪು. ತಿ. ನರಸಿಂಹಾಚಾರ್ ವಿರಚಿತ ‘ಶ್ರೀಹರಿ ಚರಿತೆ’ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮವು ದಿನಾಂಕ 05 ಡಿಸೆಂಬರ್ 2024ರಂದು ಬೆಂಗಳೂರಿನ ಕನ್ನಡ ಯುವಜನ ಸಂಘದ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಡಾ. ಮಂಜುಳಾ ಮರಾಠ ವಾಚಿಸಿ ಕರ್ನಾಟಕ ಕಲಾಶ್ರೀ ನಾಗರತ್ನಾ ಮೂರ್ತಿ ವ್ಯಾಖ್ಯಾನ ಗೈಯಲಿದ್ದಾರೆ. ಕನ್ನಡ ಯುವಜನ ಸಂಘದ ಅಧ್ಯಕ್ಷರಾದ ಶ್ರೀ ಜಗದೀಶ ರೆಡ್ಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕುವೆಂಪು ವಿಚಾರ ವೇದಿಕೆ ಇದರ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಎಂ. ಸಿ. ನರೇಂದ್ರ ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 98453 18814, 080-2222 1142 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಮಂಗಳೂರು : ಶ್ರೀ ವಿನಾಯಕ ಯಕ್ಷಕಲಾ ಫೌಂಡೇಷನ್ (ರಿ.) ಇದರ 16ನೇ ವರುಷದ ‘ಶ್ರೀ ವಿನಾಯಕ ಯಕ್ಷಕಲೋತ್ಸವ 2024’ ಕಾರ್ಯಕ್ರಮಗಳನ್ನು ದಿನಾಂಕ 01 ಡಿಸೆಂಬರ್ 2024ರಂದು ಮಧ್ಯಾಹ್ನ 1-30 ಗಂಟೆಗೆ ಎಸ್. ಕೋಡಿ ಪದ್ಮಾವತಿ ಲಾನ್ ಇಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ, ಗೌರವಾರ್ಪಣೆ ಮತ್ತು ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಮಧ್ಯಾಹ್ನ 3-00 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನ್ ಇವರ ವಹಿಸಲಿದ್ದು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ಭಟ್ ಇವರು ಶುಭಾಶಂಶನೆಗೈಯ್ಯಲಿದ್ದಾರೆ. ಇದೇ ಸಂದರ್ಭದಲ್ಲಿ ‘ಶ್ರೀ ವಿನಾಯಕ ಯಕ್ಷಕಲೋತ್ಸವ 2024’ ಪ್ರಶಸ್ತಿ ಮತ್ತು ‘ಶ್ರೀ ವಿನಾಯಕ ಯಕ್ಷಕಲಾ ಗೌರವ ಪುರಸ್ಕಾರ’ ಪ್ರದಾನ ಮಾಡಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ‘ಶ್ರೀಕೃಷ್ಣ ಪಾರಿಜಾತ’ ಹಾಸ್ಯ ವೈಭವ, ‘ಶ್ರೀರಾಮ ಕಥಾಸಾರ’ ನೃತ್ಯ ರೂಪಕ ಮತ್ತು ‘ಲವಕುಶ ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಹಾಗೂ ನಾಗರಿಕ ಸಲಹಾ ಸಮಿತಿ (ರಿ. ), ಸುರತ್ಕಲ್ ಆಯೋಜಿಸುವ ‘ಉದಯರಾಗ-57’ ಕಾರ್ಯಕ್ರಮವು ದಿನಾಂಕ 01-ಡಿಸೆಂಬರ್ 2024ರ್ ಭಾನುವಾರದಂದು ಬೆಳಗ್ಗೆ ಘಂಟೆ 6.00 ರಿಂದ 7.00ವರೆಗೆ ಸುರತ್ಕಲ್ ಪ್ರೈಓವರ್ ತಳಭಾಗದಳಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಪುತ್ತೂರಿನ ಸಾಧನಾ ಸಂಗೀತ ವಿದ್ಯಾಲಯ ವಿದುಷಿ. ಡಾ. ಸುಚಿತ್ರಾ ಹೊಳ್ಳ ಇವರ ಶಿಷ್ಯೆಯರಿಂದ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ. ಮಯೂರಿ ಭಟ್, ಗೀತಾ ರಾಜೇಶ್, ಸುಮನಾ ರಾವ್, ನಂದಿನಿ ವಿನಾಯಕ್, ಗೀತಾ ಗಣೇಶ್, ರಕ್ಷಿತಾ ಚಿನ್ಮಯಾ, ಸುದೀಕ್ಷಾ ಆರ್., ಸಹನಾ ಕುಕ್ಕಿಲ ಹಾಗೂ ಮೈತ್ರಿ ಟಿ.ಎಸ್. ಇವರ ಹಾಡುಗಾರಿಕೆಕೆಗೆ ವಯಲಿನ್ ನಲ್ಲಿ ತನ್ಮಯೀ ಉಪ್ಪಂಗಳ ಹಾಗೂ ಮೃದಂಗದಲ್ಲಿ ಆಚಿಂತ್ಯಕೃಷ್ ಸಹಕರಿಸಲಿದ್ದಾರೆ.
ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ವಿಭಾಗವು ‘ಸಾಂಪ್ರದಾಯಿಕ ನೇಯ್ಗೆಯ ಪುನರುಜ್ಜೀವನ : ಉಡುಪಿ ಸೀರೆ’ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 24 ನವೆಂಬರ್ 2024ರಂದು ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ನಡೆಯುತ್ತಿರುವ ವಿಶ್ವ ಪರಂಪರೆಯ ಸಪ್ತಾಹ ಆಚರಣೆಯ ಆರನೇ ಕಾರ್ಯಕ್ರಮದಲ್ಲಿ ಆಯೋಜಿಸಿತು. ಮುಖ್ಯ ಭಾಷಣಕಾರರಾದ ಕದಿಕೆ ಟ್ರಸ್ಟಿನ ಸಂಸ್ಥಾಪಕಿ ಮಮತಾ ರೈಯವರು ಉಡುಪಿ ಸೀರೆಯನ್ನು ಪುನರುಜ್ಜೀವನಗೊಳಿಸುವ ತಮ್ಮ ಸ್ಪೂರ್ತಿದಾಯಕ ಪಯಣವನ್ನು ಹಂಚಿಕೊಂಡರು. ಕದಿಕೆ ಟ್ರಸ್ಟ್ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನೇಕಾರರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದು, ಈ ಪಾರಂಪರಿಕ ಕರಕುಶಲತೆಯನ್ನು ಸಂರಕ್ಷಿಸಲು ಮತ್ತು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದೆ. ಮಮತಾ ರೈ ತಮ್ಮ ಭಾಷಣದಲ್ಲಿ ವಿಜ್ಞಾನ ಪ್ರಾಧ್ಯಾಪಕ ಜೀವನದಿಂದ ಉಡುಪಿ ಸೀರೆಯ ಪ್ರೋತ್ಸಾಹಕರಾದ ಪಯಣವನ್ನು ವಿವರಿಸಿದರು. “ನಾನು ಈ ಯೋಜನೆಯನ್ನು ಪ್ರಾರಂಭಿಸಿದಾಗ, ಕೇವಲ 40-45 ನೇಕಾರರು ಮಾತ್ರ ಉಳಿದಿದ್ದರು, ಅವರು ಬಹುತೇಕ ಮೂರು ದಶಕಗಳ ಹಿಂದೆಯೇ ಈ ಕಲೆಗಳನ್ನು ತೊರೆದಿದ್ದರು.…
ಮಂಗಳೂರು : ವಿಶ್ವಂ ಸ್ಕೂಲ್ ಆಫ್ ಆರ್ಟ್ ಪ್ರಸ್ತುತ ಪಡಿಸುವ ‘ಮಣ್ಣಿನಾಟ’ ಮಕ್ಕಳಿಗಾಗಿ ಒಂದು ದಿನದ ಕಾರ್ಯಾಗಾರವನ್ನು ದಿನಾಂಕ 08 ಡಿಸೆಂಬರ್ 2024ರಂದು ಬೆಳಿಗ್ಗೆ 9-30 ಗಂಟೆಯಿಂದ 4-30 ಗಂಟೆಯವರೆಗೆ ಮಂಗಳೂರಿನ ಟೆಂಪುಲ್ ಸ್ಕ್ವೇರ್, ಪ್ರೇಮ ಪ್ಲಾಜಾ ಕಟ್ಟಡದಲ್ಲಿರುವ ವಿಶ್ವಂ ಸ್ಕೂಲ್ ಆಫ್ ಆರ್ಟ್ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕ್ಲೇ ಮೊಡೆಲ್ಲಿಂಗ್ ಕಾರ್ಯಾಗಾರದಲ್ಲಿ 5ನೇ ತರಗತಿಯಿಂದ 10ನೇ ತರಗತಿವರೆಗಿನ ಮಕ್ಕಳು ಭಾಗವಹಿಸಬಹುದು. ನೋಂದಣಿ ಶುಲ್ಕ ರೂ.200/- ಆಗಿದ್ದು, ಹೆಚ್ಚಿನ ಮಾಹಿತಿಗಾಗಿ 9845663331 ಸಂಖ್ಯೆಯನ್ನು ಸಂಪರ್ಕಿಸಿರಿ.
ಪೆರ್ಡೂರು : ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ (ರಿ) ಪೆರ್ಡೂರು ಇದರ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಹಿರಿಯ ನಾಗರಿಕರಿಗಾಗಿ ‘ಹಿರಿಯೆರೊಟ್ಟುಗೊಂಜಿ ದಿನ’ ವಿಶಿಷ್ಟ ಕಾರ್ಯಕ್ರಮವನ್ನು ದಿನಾಂಕ 01 ಡಿಸೆಂಬರ್ 2024ರಂದು ಬೆಳಗ್ಗೆ 9-00 ಗಂಟೆಗೆ ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಹಿರಿಯರನ್ನು ರಂಜಿಸುವ ಸಲುವಾಗಿ ಹಾಗೂ ಅವರಲ್ಲಿರುವ ಸಾಂಸ್ಕೃತಿಕ ಆಸಕ್ತಿಯ ಹಾಡು, ನೃತ್ಯ, ರಾಧೆ-ಕೃಷ್ಣ ವೇಷ, ಮೋಜಿನ ಆಟಗಳು, ಹಾಸ್ಯ, ಛದ್ಮವೇಷ ಹಾಗೂ ಮತ್ತಿರರ ಸ್ಪರ್ಧಾ ಚಟುವಟಿಕೆಗಳು ಪ್ರಸ್ತುತಗೊಳ್ಳಲಿವೆ. ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ವಯಸ್ಸಿನ ದಾಖಲೆಯೊಂದಿಗೆ ಭಾಗವಹಿಸಬಹುದು. ಹಿರಿಯ ನಾಗರಿಕರಿಗೆ ಸ್ಪರ್ಧೆಗಳಿದ್ದು ವಿಜೇತರಿಗೆ ಬಹುಮಾನ ನೀಡಲಾಗುವುದು. ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ (ರಿ) ಹಲವಾರು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಗೊಳ್ಳುತ್ತಿದ್ದು, ಉಡುಪಿ ಜಿಲ್ಲೆಯ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಬದುಕಿನುದ್ದಕ್ಕೂ ತನ್ನವರಿಗಾಗಿ ದುಡಿದು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಯೌವ್ವನವನ್ನು ಸವೆಸಿ ಬದುಕಿನ ಮುಸ್ಸಂಜೆಯಲ್ಲಿರುವ ಜೀವಗಳಿಗೆ ಪ್ರೀತಿಯ ಆಸರೆ ನೀಡುವ ಜವಾಬ್ದಾರಿ…