Author: roovari

ಕಾರ್ಕಳ : ಕನ್ನಡ ಸಂಘ ಕಾಂತಾವರ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಜಂಟಿಯಾಗಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಡೆಯುವ ತಿಂಗಳ ಉಪನ್ಯಾಸ ಕಾರ್ಯಕ್ರಮ ‘ಅರಿವು -ತಿಳಿವು’ ದಿನಾಂಕ 23-09-2023 ರಂದು ಕಾರ್ಕಳದ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಇವರು “ಬಿ.ಜಿ.ಎಲ್  ಸ್ವಾಮಿ ಎಂಬ ಗಿಡಮರಗಳ ಒಡನಾಡಿ” ಈ ವಿಷಯದಲ್ಲಿ ಉಪನ್ಯಾಸ ನೀಡುತ್ತಾ “ಕನ್ನಡ ಶಾಸನಗಳಿಂದ ಮೊತ್ತಮೊದಲಿಗೆ ಸಸ್ಯ ಸಂಕುಲಗಳ ಕುರಿತು ಅಧ್ಯಯನ ಮಾಡಿದ ಹೆಗ್ಗಳಿಕೆ ಡಾ.ಬಿ.ಜಿ ಎಲ್. ಸ್ವಾಮಿಯವರಿಗೆ ಸಲ್ಲುತ್ತದೆ. ‘ಹಸಿರು ಹೊನ್ನು’ ಕೃತಿ ಸಾಹಿತ್ಯ ಲೋಕದಲ್ಲಿ ಸಸ್ಯ ಶಾಸ್ತ್ರಗಳ ಕುರಿತಂತೆ ಇರುವ ಪ್ರಸಿದ್ಧ ಮತ್ತು ವೈಶಿಷ್ಯಪೂರ್ಣ ಕೃತಿಯಾಗಿದೆ. ಡಿ.ವಿ.ಜಿ.ಯವರು ಮಾನವ ಜಗತ್ತಿನ ಭಾವಗಳನ್ನು ಕುರಿತು ಬರೆದರೆ ಮಗ ಬಿ.ಜಿ.ಎಲ್ ಸ್ವಾಮಿಯವರು ಸಸ್ಯ ಸಂಕುಲಗಳ ಹೃದಯಗಳ ಹಾಗೂ ಭಾವಗಳ ಜೊತೆ ಬೆರೆತು ಅರಿತರು. ತಂದೆ ಡಿ.ವಿ.ಜಿ.ಯವರಿಂದ ಶಿಸ್ತುಬದ್ಧ ಬದುಕಿನೊಂದಿಗೆ ಹಾಸ್ಯ ವಿನೋದ ಪ್ರವೃತ್ತಿಯಿಂದಲೇ ವಿಡಂಬನೆಗಳನ್ನೂ ಮಾಡಿದವರು. ಅವರು…

Read More

ಬಾಗಲಕೋಟೆ : ನಟರಾಜ ಸಂಗೀತ ನೃತ್ಯ ನಿಕೇತನ ವಿದ್ಯಾಗಿರಿ ಬಾಗಲಕೋಟೆ ಸಂಸ್ಥೆಯು ಆಯೋಜಿಸುವ ಯುವ ವಿದ್ವಾಂಸರಾದ ವಿದ್ವಾನ್ ಮಂಜುನಾಥ ಎನ್ ಪುತ್ತೂರು ಮತ್ತು ಡಾ.ಅನಷ್ಕು ಅವರ ಭರತನಾಟ್ಯ ಪ್ರದರ್ಶನವನ್ನು ದಿನಾಂಕ 30-09-2023ರ ಭಾನುವಾರದಂದು ಬಾಗಲಕೋಟೆಯಲ್ಲಿ ಹಮ್ಮಿಕೊಂಡಿದೆ. ಕಾರ್ಯಕ್ರಮದ ಜೊತೆಗೆ ಮಂಜುನಾಥ್ ಎನ್ ಪುತ್ತೂರು ಮತ್ತು ಡಾ.ಅನಷ್ಕು ಎರಡು ದಿನಗಳ ನೃತ್ಯ ಕಾರ್ಯಗಾರವನ್ನು ಕೂಡ ನಡೆಸಿಕೊಡಲಿದ್ದಾರೆ.ಇದು ಮಂಜುನಾಥ್ ಅವರ 75ನೇ ಕಾರ್ಯಗಾರವಾಗಿದೆ.

Read More

ಉಪ್ಪಿನಂಗಡಿ : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕ ಹಾಗೂ ಉಪ್ಪಿನಂಗಡಿ ಹೋಬಳಿ ಘಟಕ ಮತ್ತು ಜ್ಞಾನ ಗಂಗಾ ಪುಸ್ತಕ ಮಳಿಗೆ ಪುತ್ತೂರು ನೇತೃತ್ವದಲ್ಲಿ ಪುಸ್ತಕ ಹಬ್ಬ, ಪುಸ್ತಕದಾನಿಗಳ ಸಮಾವೇಶ ಹಾಗೂ ಉಪ್ಪಿನಂಗಡಿ ಗ್ರಾಮ ಸಾಹಿತ್ಯ ಸಂಭ್ರಮ ಕಾರ್ಯಕ್ರಮವು ದಿನಾಂಕ 29-09-2023, 30-09-2023 ಮತ್ತು 01-10-2023ರವರೆಗೆ ಮೂರು ದಿನ ಉಪ್ಪಿನಂಗಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ಗ್ರಾಮ ಪಂಚಾಯತ್ ಉಪ್ಪಿನಂಗಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಸತ್ಯಶಾಂತ ಪ್ರತಿಷ್ಠಾನ ನೆಕ್ಕಿಲಾಡಿ, ರೋಟರಿ ಕ್ಲಬ್ ಉಪ್ಪಿನಂಗಡಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ಈ ಸಂಘಟನೆಗಳ ಸಹಕಾರದಲ್ಲಿ ಹಾಗೂ ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಇವರ ಮಹಾಪೋಷಕತ್ವದಲ್ಲಿ ನಡೆಯುತ್ತದೆ.    ಪುತ್ತೂರು ಶಾಸಕ ಅಶೋಕ್ ಕುಮಾರ್‌ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಗ್ರಾ.ಪಂ. ಅಧ್ಯಕ್ಷೆ ಲಲಿತಾ ಪುಸ್ತಕ ಮೇಳ ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ಡಾ. ತಾಳ್ತಜೆ ವಸಂತ್‌ ಕುಮಾರ್‌ ಪ್ರಥಮ ಪುಸ್ತಕ ದಾನ…

Read More

ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಉಚ್ಚಿಲ ಇಲ್ಲಿನ ಯಕ್ಷಗಾನ ಸಂಘದ ನೇತೃತ್ವದಲ್ಲಿ ಯಕ್ಷಗಾನ ತಾಳಮದ್ದಳೆ ದಿನಾಂಕ 30-09-2023ನೇ ಶನಿವಾರ ಸಂಜೆ 4-00 ರಿಂದ ನಡೆಯಲಿದೆ. ಸುರತ್ಕಲ್ಲಿನ ವಾಸುದೇವ ರಾವ್ ಇವರ ಸಂಯೋಜನೆಯಲ್ಲಿ ತಡಂಬೈಲಿನ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ಸದಸ್ಯರು ‘ರುಕ್ಮಿಣಿ ಕಲ್ಯಾಣ’ ಪ್ರಸಂಗವನ್ನು ಪ್ರಸ್ತುತಪಡಿಸಲಿರುವರು. ಕಾರ್ಯಕ್ರಮದಲ್ಲಿ ಅರ್ಥಧಾರಿಗಳಾಗಿ ಶ್ರೀಮತಿಯರಾದ ಸುಲೋಚನಾ ವಿ.ರಾವ್, ಸುಮಿತ್ರ ಶಶಿಕಾಂತ ಕಲ್ಲೂರಾಯ ಹಾಗೂ ಸುಮತಿ ಭಟ್‌ ಕೆ.ಯನ್ ಭಾಗವಹಿಸಲಿರುವರು.

Read More

ಉಪ್ಪಿನಕುದ್ರು : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ (ಡಾ. ಸುಧಾ ಮೂರ್ತಿ ಹಾಗೂ ಡಾ. ಪಿ. ದಯಾನಂದ ಪೈ ಪ್ರಾಯೋಜಿತ) 2023ರ ‘ಪ್ರತಿಭೆ ನಿಮ್ಮದು ವೇದಿಕೆ ನಮ್ಮದು’ ಎಂಬ ವಿನೂತನ ಕಾರ್ಯಕ್ರಮ ಸರಣಿಯ ಅಕ್ಟೋಬರ್ ತಿಂಗಳ ಕಾರ್ಯಕ್ರಮವು ದಿನಾಂಕ 08-10-2023ರಂದು ಸಂಜೆ ಗಂಟೆ 4ಕ್ಕೆ ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕುಮಾರಿ ಭಾವನಾ ಭಟ್ ಹರಿಖಂಡಿಗೆ ಇವರಿಂದ ‘ಪಿಟೀಲು ವಾದನ’ ಹಾಗೂ ಕುಮಾರಿ ಪ್ರಿಯದರ್ಶಿನಿ ಭಟ್ ಹರಿಖಂಡಿಗೆ ಇವರಿಂದ ‘ವೀಣಾ ವಾದನ’ ವಿಶೇಷ ಕಾರ್ಯಕ್ರಮ ನಡೆಯಲಿದೆ. ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ರಾಜ್ಯ ಪ್ರಶಸ್ತಿ ಪುರಸ್ಕೃತರು ಭಾಸ್ಕರ್ ಕೊಗ್ಗ ಕಾಮತ್ ತಮಗೆಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.

Read More

ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಆಯೋಜಿಸುವ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿಯ ಉದ್ಘಾಟನಾ ಸಮಾರಂಭ ದಿನಾಂಕ 01-10-2023ನೇ ಭಾನುವಾರ ಬೆಳಿಗ್ಗೆ ಗಂಟೆ 11.00ಕ್ಕೆ ನಡೆಯಲಿದೆ. ಮಂಗಳೂರಿನ ಬಳ್ಳಾಲ್‌ಬಾಗಿನ ಲೋಕಯ್ಯ ಶೆಟ್ಟಿ ರಸ್ತೆಯಲ್ಲಿರುವ ಶ್ರೀ ದುರ್ಗಾ ಕಾಂಪ್ಲೆಕ್ಸ್‌ನ 3ನೇ ಮಹಡಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಗೌರವಾನ್ವಿತ ಮಹಾಪೌರರಾದ ಶ್ರೀ ಸುಧೀರ್ ಶೆಟ್ಟಿ ಕಣ್ಣೂ‌ರು ವಹಿಸಲಿರುವರು. ಮಂಗಳೂರಿನ ಸಿಮ್ ಟೆಕ್ನಾಲಜಿಸ್ ಗ್ರೂಪೀನ ಆಡಳಿತ ನಿರ್ದೇಶಕರಾದ ಶ್ರೀ ನವೀನ್ ಕಿಲ್ಲೆ ದೀಪ ಪ್ರಜ್ವಲನ ಮಾಡಲಿರುವರು. ಮುಖ್ಯ ಅತಿಥಿಗಳಾಗಿ ಮಂಗಳೂರಿನ ಸನಾತನ ನಾಟ್ಯಾಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಕೆ.ಶೆಟ್ಟಿ, ಮಂಗಳೂರಿನ ಸಿಂಫನಿ ಸಂಗೀತೋಪಕರಣ ಮಳಿಗೆ ಇದರ ಮಾಲಕರಾದ ಶ್ರೀ ಲಾಯ್ ನೊರೊನ್ಹಾ, ಮಂಗಳೂರಿನ ಕರ್ನಾಟಕ ಸಂಗೀತ ಕಲಾವಿದರಾದ ವಿದ್ವಾನ್ ಅನೀಶ್ ವಿ.ಭಟ್ ಭಾಗವಹಿಸಲಿದ್ದಾರೆ. ಇದೇ ಸ್ಥಳದಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ ಗಂಟೆ 11.00 ರಿಂದ 12.00ರ ತನಕ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿ ನಡೆಯಲಿದೆ. ಜೊತೆಗೆ ಸಂಗೀತ ಕಲಿಕೆಗೆ…

Read More

ಕಾಸರಗೋಡು : ಚಿನ್ಮಯ ವಿದ್ಯಾಲಯ, ವಿದ್ಯಾನಗರದ ತೇಜಸ್ ಸಭಾಂಗಣದಲ್ಲಿ ದಿನಾಂಕ 21-09-2023ರಂದು ಪ್ರಸಿದ್ಧ ಒಡಿಸ್ಸಿ ನೃತ್ಯ ಕಲಾವಿದೆ ಆರುಷಿ ಮುದುಗಲ್ ಪ್ರಸ್ತುತಪಡಿಸಿದ ಒಡಿಸ್ಸಿ ನೃತ್ಯ ಪ್ರದರ್ಶನವು ಸಾವಿರಾರು ಪ್ರೇಕ್ಷಕರನ್ನು ರಂಜಿಸಿತು. ಒಡಿಸ್ಸಿ ನೃತ್ಯದ ಆರಂಭಿಕ ಅಧ್ಯಯನ ಹಾಗೂ ತಾಂತ್ರಿಕ ಕೌಶಲಗಳನ್ನು ಇವರು ದೆಹಲಿಯ ಮಹಾವಿದ್ಯಾಲಯದಲ್ಲಿ ಗುರು ಮಾಧವಿ ಮುದಗಲ್ ಅವರಿಂದ ಅಭ್ಯಸಿಸಿ ಭಾರತದ ಶ್ರೇಷ್ಠ ಹತ್ತು ಒಡಿಸ್ಸಿ ಕಲಾವಿದರಲ್ಲಿ ಒಬ್ಬರೆನಿಸಿದ್ದಾರೆ. ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯ, ಯು.ಕೆ., ಬೆಲ್ಜಿಯಂ ಮೊದಲಾದ ದೇಶಗಳಲ್ಲಿ ನಡೆದ ಅಂತಾರಾಷ್ಟ್ರೀಯ ನೃತ್ಯೋತ್ಸವಗಳಲ್ಲಿ ಪ್ರದರ್ಶನ ನೀಡಿದ ಆರುಷಿ ಮುದಗಲ್ ಸ್ಪಿಕ್ ಮೆಕೆ ಸಂಘಟನೆಯ ಭಾಗವಾಗಿದ್ದು, ಯುವ ಜನರಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕಲೆ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶವನ್ನಿಟ್ಟುಕೊಂಡಿರುವರು. ಸಂಗೀತ ನಾಟಕ ಅಕಾಡೆಮಿಯಿಂದ ಉಸ್ತಾದ್ ಬಿಸ್ಮಿಲ್ಲ ಖಾನ್ ಪುರಸ್ಕಾರಕ್ಕೆ ಭಾಜನರಾದ ಇವರು ಎಫ್.ಐ.ಸಿ.ಸಿ.ಯಿಂದ ‘ಯುವ ವನಿತೆಯ ಸಾಧನೆ’, ಗುರು ಕೇಳು ಚರಣ್ ಮಹಾ ಪಾತ್ರರಿಂದ ‘ಯುವ ಪ್ರತಿಭಾ ಸಮ್ಮಾನ್’, ರಾಷ್ಟ್ರಪತಿಯಿಂದ ‘ಬಾಲಶ್ರೀ ಪುರಸ್ಕಾರ’, ರಾಜೀವ್ ಗಾಂಧಿ ಎಕ್ಸಲೆನ್ಸ್ ಪುರಸ್ಕಾರ ಮೊದಲಾದ…

Read More

ಮಂಗಳೂರು : ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಜರಗಿದ ಸಂಸ್ಕೃತೋತ್ಸವವನ್ನು ದಿನಾಂಕ 14-09-2023ರಂದು ಕದ್ರಿಯ ಜ್ಯೋತಿಷ ವಿದ್ವಾನ್ ಶ್ರೀರಂಗ ಐತಾಳ ಇವರು ಉದ್ಘಾಟಿಸಿದರು. ಅವರು ಮಾತನಾಡುತ್ತಾ “ವಿದ್ಯಾರ್ಜನೆಯು ಕೇವಲ ಅಂಕ ಗಳಿಕೆಗೆ ಸೀಮಿತವಾಗಬಾರದು. ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆ ಆಗಬೇಕಾದರೆ ಬೌದ್ಧಿಕ ವಿಕಾಸವಾಗಬೇಕು. ಅಧ್ಯಯನದ ಜತೆ ಭಾಷಾಭಿಮಾನ, ದೇಶಾಭಿಮಾನ ಹಾಗೂ ಸ್ವಾಭಿಮಾನವನ್ನು ಬೆಳೆಸಿಕೊಂಡಾಗ ಸಂಸ್ಕೃತ ಭಾಷೆಯ ಆಗಾಧತೆ ಅರಿವಾಗುತ್ತದೆ. ಹಾಗಾಗಿ ಭಾರತೀಯರ ಪ್ರಾಣಸದೃಶವಾದ ಸಂಸ್ಕೃತ ಭಾಷೆಯನ್ನು ಉಳಿಸಿಬೆಳೆಸುವಲ್ಲಿ ವಿದ್ಯಾರ್ಥಿಗಳು ಶ್ರದ್ಧಾವಂತರಾಗಬೇಕು” ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್ ಅವರು, “ವಿದ್ಯಾರ್ಥಿಗಳು ಬಾಲ್ಯದಲ್ಲಿ ಭಾಷೆಯನ್ನು ಶ್ರದ್ಧೆಯಿಂದ ಕಲಿತಾಗ ಅದರಲ್ಲಿ ಪ್ರೌಢಿಮೆ ಸಿದ್ಧಿಸುತ್ತದೆ. ಸಂಸ್ಕೃತ ವ್ಯವಹಾರ ಭಾಷೆಯಾಗಿ ಮೂಡಿಬರಬೇಕಾದರೆ ನಮ್ಮ ಇಚ್ಚಾಶಕ್ತಿ ಬಹಳ ಮುಖ್ಯ. ಈ ಭಾಷೆಯ ಮೂಲಕ ವೈದಿಕ ಸಾಹಿತ್ಯ, ರಾಮಾಯಣ ಮಹಾಭಾರತಾದಿ ಮಹಾಕಾವ್ಯಗಳ ರಸಾಸ್ವಾದ ಮಾಡಲು ಸಾಧ್ಯ” ಎಂದರು. ಶಾರದಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಪ್ರದೀಪ ಕುಮಾರ ಕಲ್ಕೂರ “ಭಾರತೀಯ ಋಷಿಗಳು ಇಂದಿನ…

Read More

ಮಂಗಳೂರು : ತುಳುವೆರೆ ಆಯನೊ ಕೂಟ ಕುಡ್ಲ (ರಿ.) ಇದರ ಪದಗ್ರಹಣ ಸಮಾರಂಭವು ಮಂಗಳೂರಿನ ಪುರಭವನದಲ್ಲಿ ದಿನಾಂಕ 30-09-2023ರಂದು ಜರಗಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುವೆರೆ ಆಯನೊ ಕೂಟದ ಅಧ್ಯಕ್ಷರಾದ ಶ್ರೀಮತಿ ಶಮಿನ ಆಳ್ವ ಇವರು ವಹಿಸಲಿದ್ದಾರೆ. ವಿಧಾನ ಸಭಾ ಅಧ್ಯಕ್ಷರಾದ ಶ್ರೀ ಯು.ಟಿ. ಖಾದರ್ ಇವರು ಉದಾಟಿಸಲಿದ್ದು, ಕಟೀಲು ದೇವಾಲಯದ ಶ್ರೀ ಹರಿನಾರಾಯಣ ಆಸ್ರಣ್ಣ ಇವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಇದೇ ವೇದಿಕೆಯಲ್ಲಿ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವರಾದ ಶ್ರೀ ರಮಾನಾಥ ರೈ ಮತ್ತು ಜಾಗತಿಕ ಬಂಟ್ಸ್ ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಇವರುಗಳು ಶ್ರೀ ಸದಾಶಿವ ಶೆಟ್ಟಿ ಕನ್ಯಾನ ಇವರಿಗೆ ‘ತುಳುವೆರೆ ಕರ್ಣೆ’ ಬಿರುದು ಪ್ರದಾನ ಮಾಡಲಿರುವರು. ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್ ಇವರಿಂದ ದೇವದಾಸ್ ಈಶ್ವರಮಂಗಲ ಇವರು ಅನುವಾದ ಮಾಡಿದ ‘ಸಿರಿದೇವಿ ಮಾತ್ಮೆ’ ಎಂಬ ಕೃತಿಯು ಲೋಕಾರ್ಪಣೆಯಾಗಲಿದೆ. ಮಧ್ಯಾಹ್ನ ಗಂಟೆ 2ಕ್ಕೆ ವಾಯ್ಸ್ ಓಫ್ ಆರಾಧನಾ…

Read More

ಮುಲ್ಕಿ : ಕನ್ನಡ ಸಾಹಿತ್ಯ ಪರಿಷತ್ತು ಮುಲ್ಕಿ ತಾಲೂಕು ಘಟಕದಿಂದ ದಿನಾಂಕ 01-10-2023ರ ಭಾನುವಾರ ಸಂಜೆ ಗಂಟೆ 6ಕ್ಕೆ ಮುಲ್ಕಿ ಬಪ್ಪನಾಡಿನ ಮಾತಾ ಪಂಚದುರ್ಗಾ ರೆಸಿಡೆನ್ಸಿ ಮಾಳಿಗೆಯಲ್ಲಿ ಕಾರ್ಯಕ್ರಮ ‘ಸಾಹಿತ್ಯದ ಬೆಳಕು’. ಈ ಕಾರ್ಯಕ್ರಮದಲ್ಲಿ ಕತ್ತಲಿನಲ್ಲಿ ಬೆಳಕಿನ ಮಾತು ಆಡುತ್ತಾರೆ. ಸಾಹಿತಿ ಕಲಾವಿದ ತಾರಾನಾಥ ವರ್ಕಾಡಿ ಬೆಳಕಿನ ಪದ್ಯಗಳನ್ನು ಹಾಡುತ್ತಾರೆ. ಬೋಳ ವಿನಂತಿ ಕಾಮತ್ ಮತ್ತು ಪ್ರಣವ್ ಶರ್ಮ ಇವರಿಗೆ ಹಿಮ್ಮೇಳದಲ್ಲಿ ಶಶಿ ಹೆಜಮಾಡಿಕೋಡಿ ಬಳಗದವರು ಸಹಕರಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಮುಲ್ಕಿ ತಾಲೂಕು ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ತಮಗೆಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.

Read More