Author: roovari

ಮಡಿಕೇರಿ: ಕರ್ನಾಟಕ ಸುವರ್ಣ ಸಂಭ್ರಮ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ವಿವಿಧ ಸಂಘ ಸಂಸ್ಥೆಗಳು, ಕನ್ನಡ ಅಭಿಮಾನಿಗಳು ಮತ್ತು ನಾಗರಿಕರ ಸಹಭಾಗಿತ್ವದಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ದಿನಾಂಕ 11 ನವೆಂಬರ್ 2024ರಂದು ಕುಶಾಲನಗರದಲ್ಲಿ 5 ಸಾವಿರ ಮಂದಿ ಪಾಲ್ಗೊಂಡು ‘ಕನ್ನಡ ಕಂಠ ಗಾಯನ’ ಕಾರ್ಯಕ್ರಮ ನಡೆಯಲಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ತಿಳಿಸಿದ್ದಾರೆ. ಕುಶಾಲನಗರದ ರಥ ಬೀದಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಐದು ಸಹಸ್ರ ಮಂದಿಯಿಂದ ‘ಕನ್ನಡ ನಾಡಗೀತೆ, ರೈತಗೀತೆ ಮತ್ತು ಹುಟ್ಟದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತ ಗಾಯನ’ ನಡೆಯಲಿದೆ. 1973ರಲ್ಲಿ ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಹೆಸರಾಗಿ 50 ವರ್ಷ ಪೂರ್ಣಗೊಂಡಿರುವ ಸುಸಂದರ್ಭದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ-50 ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಶೀರ್ಷಿಕೆಯಡಿ ರಾಜ್ಯಾದ್ಯಂತ ವರ್ಷ ಪೂರ್ತಿ ವೈವಿದ್ಯಮಯ ಹಾಗೂ ವರ್ಣಮಯ ಸುವರ್ಣ ಸಂಭ್ರಮಾಚರಣೆಯನ್ನು ಆಚರಿಸಲಾಗುವುದು ಎಂದು ತಿಳಿಸಿದರು.

Read More

ಮಡಿಕೇರಿ:  ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಹಯೋಗದೊಂದಿಗೆ ಪಂಜೆ ಮಂಗೇಶರಾಯರ ಬದುಕು-ಬರಹ ಕುರಿತು ವಿಚಾರ ಸಂಕಿರಣ ಹಾಗೂ ಚಿತ್ರಕಲಾ ಸ್ಪರ್ಧೆಯು ದಿನಾಂಕ 05 ನವಂಬರ್ 2024ರ ಮಂಗಳವಾರದಂದು ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾseminar ಟಿಸಿದ ಮಡಿಕೇರಿ ನಗರಸಭಾ ಸದಸ್ಯ ಬಿ. ವೈ. ರಾಜೇಶ್ ಯಲ್ಲಪ್ಪ ಮಾತನಾಡಿ “ಖ್ಯಾತ ಸಾಹಿತಿ ಪಂಜೆ ಮಂಗೇಶರಾಯರ ಬದುಕು ಎಲ್ಲರಿಗೂ ಆದರ್ಶವಾಗಬೇಕು. ಮಂಗೇಶರಾಯರು ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ಅವರ ಕೊಡುಗೆ ಅಪಾರವಾದುದು. ಮಡಿಕೇರಿಯ ಪದವಿ ಪೂರ್ವ ಕಾಲೇಜಿನಲ್ಲೂ ಮುಖ್ಯ ಶಿಕ್ಷಕರಾಗಿ ಸೇವೆ ಮಾಡಿರುವುದು ಹೆಮ್ಮೆಯ ವಿಷಯ. ಅವರು ರಚಿಸಿರುವ ಹುತ್ತರಿ ಹಾಡು ಇಂದಿಗೂ ಪ್ರಸ್ತುತವಾಗಿದೆ. ಅವರ ಸರಳ ಜೀವನ ಆದರ್ಶಪ್ರಾಯವಾಗಿದೆ. ಸ್ನೇಹ ಸಿರಿ ಬಳಗದಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಇನ್ನು ಮುಂದೆಯೂ  ಸಹಕಾರ ನೀಡಲಾಗುವುದು.” ಎಂದು ಹೇಳಿದರು. ಕನ್ನಡ ಸಿರಿ…

Read More

ಸುರತ್ಕಲ್ : ಸಾಹಿತ್ಯ, ಸಾಂಸ್ಕೃತಿಕ ಸಂಘಟನೆ ರಂಗಚಾವಡಿ ಮಂಗಳೂರು ಆಶ್ರಯದಲ್ಲಿ ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ (ರಿ.) ಸುರತ್ಕಲ್ ಇದರ ಸಹಯೋಗದಲ್ಲಿ ‘ರಂಗಚಾವಡಿ ವರ್ಷದ ಹಬ್ಬ’ ಕಾರ್ಯಕ್ರಮವು ದಿನಾಂಕ 10 ನವೆಂಬರ್ 2024ರಂದು ಸಂಜೆ 4-30 ಗಂಟೆಗೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ. ಮುಂಬೈ ವಿ.ಕೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿರುವರು. ಮುಂಬೈನ ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ, ಚಲನಚಿತ್ರ ನಿರ್ಮಾಪಕ ಡಾ. ಸಂಜೀವ ದಂಡೆಕೇರಿ, ಶ್ರೀಡೆವಲಪರ್ಸ್ ಕಟೀಲು ಸಂಸ್ಥೆಯ ಮಾಲೀಕ ಗಿರೀಶ್ ಎಂ. ಶೆಟ್ಟಿ ಕಟೀಲು, ಚಲನಚಿತ್ರ ನಿರ್ಮಾಪಕ ಚಂದ್ರಶೇಖರ ಮಾಡ ಕುದ್ರಾಡಿಗುತ್ತು, ಥಾಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ವೇಣುಗೋಪಾಲ್‌ ಶೆಟ್ಟಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಲಕುಮಿ ತಂಡದ ವ್ಯವಸ್ಥಾಪಕ ಕಿಶೋರ್ ಡಿ. ಶೆಟ್ಟಿ ಇವರಿಗೆ 2024ನೇ ಸಾಲಿನ ‘ರಂಗಚಾವಡಿ ಪ್ರಶಸ್ತಿ’ ಪ್ರದಾನ…

Read More

ಬೆಳಗಾವಿ : ಜಿಲ್ಲಾ ಲೇಖಕಿಯರ ಸಂಘದ ಸಂಸ್ಥಾಪಕ ಅಧ್ಯಕ್ಷೆ, ಕವಯತ್ರಿ ಆಶಾ ಕಡಪಟ್ಟಿಯವರು ದಿನಾಂಕ 07 ನವೆಂಬರ್ 2024ರ ಗುರುವಾರ ನಿಧನರಾದರು. ಇವರು ಕಾವ್ಯ ಕ್ಷೇತ್ರಕ್ಕೆ ಅತ್ಯಮೂಲ್ಯವಾದ ಕೊಡುಗೆ ನೀಡಿದ್ದು, ಒಳ್ಳೆಯ ಹಾಡುಗಾರರಾಗಿಯೂ ಗುರುತಿಸಿಕೊಂಡಿದ್ದರು. ಎರಡು ಕಾದಂಬರಿ, ಎಂಟು ಕವನ ಸಂಕಲನ ಹಾಗೂ ಕಥಾ ಸಂಕಲನಗಳನ್ನು ರಚಿಸಿದ್ದ ಆಶಾರವರು ಸ್ಥಾಪಿಸಿದ್ದ ಜಿಲ್ಲಾ ಲೇಖಕಿಯರ ಸಂಘಕ್ಕೆ ಈಗ 25 ವರ್ಷಗಳಾಗಿವೆ. ಈ ಸಂಘದ ಮೂಲಕ ಜಿಲ್ಲೆಯ ಹಲವು ಲೇಖಕಿಯರನ್ನು, ಕವಯತ್ರಿಯರನ್ನು, ಯುವ ಬರಹಗಾರರನ್ನು ಪ್ರೋತ್ಸಾಹಿಸಿದ್ದರು. ಸರ್ಕಾರದ ಡಾ. ಬೆಟಗೇರಿ ಕೃಷ್ಣಶರ್ಮ ಟ್ರಸ್ಟಿನ ಸದಸ್ಯರೂ ಆಗಿದ್ದರು. ಇಲ್ಲಿನ ಮರಾಠಾ ಲಘು ಪದಾತಿದಳದಲ್ಲಿ ಸಿವಿಲ್ ಎಂಜಿನಿಯರ್ ಆಗಿದ್ದ ಅವರ ಪತಿ ಬಾಲಚಂದ್ರ ಕಡಪಟ್ಟಿಯವರು ಐದು ವರ್ಷಗಳ ಹಿಂದೆ ನಿಧನರಾಗಿದ್ದರು. ಇವರಿಗೆ ಮಕ್ಕಳು ಇರಲಿಲ್ಲ. ಆಶಾ ಅವರ ಬಯಕೆಯಂತೆ ಅವರ ದೇಹವನ್ನು ಇಲ್ಲಿನ ಡಾ. ರವಿ ಪಾಟೀಲ ಅವರ ಆಸ್ಪತ್ರೆಗೆ ದಾನ ಮಾಡಲಾಯಿತು.

Read More

ಧಾರವಾಡ : ಬಹುರೂಪಿ ಹಾಗೂ ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ (ರಿ.) ಧಾರವಾಡ ಇದರ ವತಿಯಿಂದ ಮಲಯಾಳಂ ಖ್ಯಾತ ಲೇಖಕಿ ಕೆ.ಆರ್. ಮೀರಾ ಇವರ ವಿಶಿಷ್ಟ ಕೃತಿಯನ್ನು ವಿಕ್ರಂ ಕಾಂತಿಕೆರೆ ಇವರು ಕನ್ನಡಕ್ಕೆ ಅನುವಾದ ಮಾಡಿರುವ ‘ಭಗವಂತನ ಸಾವು’ ಕೃತಿ ಬಿಡುಗಡೆ ಸಮಾರಂಭವನ್ನು ದಿನಾಂಕ 09 ನವೆಂಬರ್ 2024ರಂದು ಚಿತ್ರಕಲಾ ಪರಿಷತ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಸಂವೇದನಾಶ್ರೀಲ ನಟರಾದ ಪ್ರಕಾಶ್ ರೈ ಇವರು ಕೃತಿ ಬಿಡುಗಡೆ ಮಾಡಲಿದ್ದು, ಲೇಖಕಿ ಕೆ.ಆರ್. ಮೀರಾ, ವಿಕ್ರಂ ಕಾಂತಿಕೆರೆ, ಶ್ರೀವಿಜಯ ಕಲಬುರ್ಗಿ ಮತ್ತು ಚಿಂತಕರಾದ ಸಿದ್ದನಗೌಡ ಪಾಟೀಲ ಇವರುಗಳು ಅತಿಥಿಗಳಾಗಿ ಭಾಗವಹಿಸಲಿರುವರು.

Read More

ಹಿರೇಮಠ : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ವತಿಯಿಂದ ನಡೆಯುವ ‘ನೇಕಾರ ಸಾಹಿತ್ಯ ಸಮ್ಮೇಳನ’ದ ಸರ್ವಾಧ್ಯಕ್ಷರಾಗಿ ಜನಪದ ಹಾಡುಗಾರರು, ಗೀತರಚನಕಾರರು, ನಾಟಕಕಾರರು ಮತ್ತು ನಟರು ಆದ ಶ್ರೀ ಗುರುರಾಜ್ ಹೊಸಕೋಟೆಯವರನ್ನು ಆಯ್ಕೆ ಮಾಡಲಾಗಿದೆ. ಜನಪದ ಕಲಾವಿದರ ವಂಶದಿಂದ ಬಂದ ಗುರುರಾಜ ಹೊಸಕೋಟೆಯವರು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪುರದಲ್ಲಿ ದಿನಾಂಕ 26 ಮೇ 1948ರಂದು ಜನಿಸಿದರು. ಅವರ ತಂದೆ ರುದ್ರಪ್ಪ ಹೊಸಕೋಟೆಯವರು ಹರಿಕಥಾ ವಿದ್ವಾಂಸರು. ತಾಯಿ ಗೌರಮ್ಮನವರು ಜಾನಪದ ಹಾಡುಗಾರ್ತಿ. ಗುರುರಾಜರು ಓದಿದ್ದು ಪಿ.ಯು.ಸಿ.ವರೆಗೆ ಮಾತ್ರ. ಆದರೆ ತಂದೆಯಿಂದ ಬಂದ ಸಂಗೀತ ಬಳುವಳಿಯಿಂದ ಜನಪದ ಹಾಡುಗಾರಿಕೆಯಲ್ಲಿ ಅವರದು ಅಪ್ರತಿಮ ಪರಿಣತಿ. ಅವರು ಶಾಲೆಯಲ್ಲಿದ್ದ ದಿನಗಳಲ್ಲೇ ಜನಪದ ಹಾಡುಗಳನ್ನು ಹಾಡುತ್ತಿದ್ದುದಲ್ಲದೆ, ಹಾಡುಗಳ ರಚನೆಯನ್ನೂ ಪ್ರಾರಂಭಿಸಿದರು. ಇತರ ಶಾಲೆಗಳಿಗೂ ಹೋಗಿ ಜನಪದ ಶೈಲಿಯ ಸಮೂಹ ಗೀತೆಗಳನ್ನು ರಚಿಸಿ ಮಾಡುತ್ತಿದ್ದ ನೃತ್ಯ, ಹಾಡಿನ ಸಂಯೋಜನೆ, ಜನಪದ ಶೈಲಿಯ ಹಾಡುಗಳ ರಚನೆ ಮತ್ತು ಹಾಡುಗಾರಿಕೆಯಿಂದ ಅಪಾರ ಪ್ರಸಿದ್ಧಿ ಗಳಿಸಿದರು. ಕರ್ನಾಟಕದ ಹೆಸರಾಂತ ಧ್ವನಿಸುರುಳಿ ಕಂಪನಿಗಳಿಗೆ ಇವರು ಬರೆದ…

Read More

ಸುಂಟಿಕೊಪ್ಪ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸೋಮವಾರಪೇಟೆ ಕ.ಸಾ.ಪ. ಹೋಬಳಿ, ಘಟಕ ಕನ್ನಡ ಸಾಹಿತ್ಯ ಪರಿಷತ್ತು ಐಗೂರು ಕೇಂದ್ರದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ದಿನಾಂಕ 01 ನವೆಂಬರ್ 2024ರಂದು ಕ.ಸಾ.ಪ. ಐಗೂರು ಕೇಂದ್ರದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಕನ್ನಡ ಧ್ವಜವನ್ನು ಐಗೂರು ಕ.ಸಾ.ಪ. ಘಟಕದ ಅಧ್ಯಕ್ಷ ಸಂಗಾರು ಕೀರ್ತಿಪ್ರಸಾದ್ ಆರೋಹಣ ಮಾಡಿದ ನಂತರ ಕನ್ನಡಾಂಬೆ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಕನ್ನಡಾಭಿಮಾನಿಗಳು ಅರ್ಪಿಸಿದರು. ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಅಜಿತ್‌ಕುಮಾರ್‌ ಮಾತನಾಡಿ, “ಕರ್ನಾಟಕದ ಜಲ, ನೆಲ ಸಂಸ್ಕೃತಿ ಸಂಪ್ರಾದಾಯವನ್ನು ಉಳಿಸಿ ಬೆಳೆಸಲು ಕನ್ನಡ ನೆಲದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ” ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಐಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಟಿ.ಎಸ್. ಪೂರ್ಣಕುಮಾರ್, “ಸುವರ್ಣ ಮಹೋತ್ಸವದ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ ಈ ಕಾಲಘಟ್ಟದಲ್ಲಿ ಶಾಸ್ತ್ರೀಯ ಭಾಷೆಗೆ ಸೇರ್ಪಡೆಯಾಗುತ್ತಿರುವುದು ಅರ್ಥಪೂರ್ಣವಾಗಿದೆ” ಎಂದರು. ಸೋಮವಾರಪೇಟೆ ತಾಲೂಕು ಕ.ಸಾ.ಪ. ಸದಸ್ಯ ಶಾಫಿ ಸದಿ ಮಾತನಾಡಿ,…

Read More

ಬೆಂಗಳೂರು : ಸಂತಕವಿ ಕನಕದಾಸ ಮತ್ತು ತತ್ತ್ವಪದಕಾರರ ಅಧ್ಯಯನ ಕೇಂದ್ರವು ನಾನಾ ಕಾರಣಗಳಿಂದಾಗಿ 4 ವರ್ಷಗಳಿಂದ ಘೋಷಣೆ ಮಾಡದೇ ಇದ್ದ ‘ಕನಕ ಗೌರವ ಪ್ರಶಸ್ತಿ’ ಹಾಗೂ ‘ಕನಕ ಯುವ ಪುರಸ್ಕಾರ’ವನ್ನು ಈ ಬಾರಿ ಘೋಷಣೆ ಮಾಡಿದೆ. 2024-25ನೇ ಸಾಲಿನ ಅರ್ಹ ಯುವ ಪುರಸ್ಕೃತರು ಅಲಭ್ಯವಾಗಿದ್ದರಿಂದ ಆಯ್ಕೆ ಮಾಡಿಲ್ಲ ಎಂದು ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ತಿಳಿಸಿದ್ದಾರೆ. ಕನಕ ಗೌರವ ಪ್ರಶಸ್ತಿ 75 ಸಾವಿರ ರೂ. ನಗದು ಮತ್ತು ಪುರಸ್ಕಾರ, ಕನಕ ಯುವ ಪುರಸ್ಕಾರ 50 ಸಾವಿರ ರೂ. ನಗದು ಮತ್ತು ಪುರಸ್ಕಾರವನ್ನು ಒಳಗೊಂಡಿದೆ. ‘ಕನಕ ಗೌರವ ಪ್ರಶಸ್ತಿ’ : 2021-22 ಪ್ರೊ. ತಾಳ್ತಜೆ ವಸಂತ ಕುಮಾರ್ ಪುತ್ತೂರು 2022-23 ಡಾ. ನೀಲಪ್ಪ ಮೈಲಾರಪ್ಪ ಹಾವೇರಿ, 2023-24: ಡಾ. ಎಚ್.ಎನ್. ಮುರಳೀಧರ ಬೆಂಗಳೂರು, 2024-25: ಡಾ. ಜಿ.ವಿ. ಆನಂದಮೂರ್ತಿ ತುಮಕೂರು, ‘ಕನಕ ಯುವ ಪುರಸ್ಕಾರ’ : 2021-22 : ಡಾ. ಅನಿಲ್ ಕುಮಾರ್ ಮೈಸೂರು 2022-23 : ಡಾ. ಚಿಕ್ಕಮಗಳೂರು ಗಣೇಶ್, 2023-24…

Read More

ಉಳ್ಳಾಲ: ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಭಾಗವಾಗಿ ನಾಡಿನೆಲ್ಲದೆ ಸಂಚರಿಸುತ್ತಿರುವ ಸಾಹಿತ್ಯ ರಥವನ್ನು ದಿನಾಂಕ 08 ನವಂಬರ್ 2024ರ ಗುರುವಾರ ಸಂಜೆ ತೊಕ್ಕೊಟ್ಟಿನಲ್ಲಿ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಉಳ್ಳಾಲ ತಾಲೂಕು ತಹಶೀಲ್ದಾರ್ ಪುಟ್ಟರಾಜು ಮಾತನಾಡಿ “ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ  ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಊರು ಊರುಗಳಲ್ಲಿ ಕನ್ನಡದ ಹಬ್ಬದಂತೆ ಸಂಭ್ರಮಿಸುವಂತಾಗಲಿ. ನಾವೆಲ್ಲ ಕನ್ನಡಿಗರು ಎಂಬ ಸಂಭ್ರಮ ಅಭಿಮಾನವನ್ನು ಸಮ್ಮೇಳನ ಉಂಟುಮಾಡಲಿ.” ಎಂದು ಹೇಳಿದರು. ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ್ ಸಮ್ಮೇಳನದ ಆಶಯವನ್ನು ವಿವರಿಸಿ ಸಮ್ಮೇಳನದ ಯಶಸ್ಸಿಗೆ ಹಾರೈಸಿದರು. ಉಳ್ಳಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಡಾ.ಧನಂಜಯ ಕುಂಬ್ಳೆ ಮಾತನಾಡಿ “ಸಾಹಿತ್ಯ ಸಮ್ಮೇಳನವು ಯಾವುದೇ ಗೊಂದಲಗಳಿಲ್ಲದೇ ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಕನ್ನಡದ ವೈಚಾರಿಕತೆಯನ್ನು ಪ್ರಚುರಪಡಿಸಲಿ.” ಎಂದರು. ಉಳ್ಳಾಲ ತಾಲೂಕು ಕಾರ್ಯನಿರ್ವಹಣಾಧಿಕಾರಿ ಗುರುದತ್ತ್,  ನಗರಸಭಾಧ್ಯಕ್ಷ್ಯೆ ಶಶಿಕಲಾ ಚೆಂಬುಗುಡ್ಡೆ, ಕೌನ್ಸಿಲರ್ ಅಸ್ಗರ್ ಅಲಿ,  ಉಳ್ಳಾಲ…

Read More

ಉಡುಪಿ : ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ನೃತ್ಯನಿಕೇತನ ಕೊಡವೂರು ಇವರು ಆಯೋಜನೆ ಮಾಡಿದ ಎರಡು ದಿವಸಗಳ ‘ನೃತ್ಯದೀಪೋತ್ಸವ’ ಕಾರ್ಯಕ್ರಮವು ದಿನಾಂಕ 03 ನವೆಂಬರ್ 2024ರಂದು ಬಹಳ ವಿಜೃಂಭಣೆಯಿಂದ ಸಮಾಪನಗೊಂಡಿತು. ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಯಶಸ್ವಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ಶ್ರೀ ಸಾಧು ಸಾಲ್ಯಾನ್ ಕೊಡವೂರು, ಸೆಂಚುರಿ ಫಾರ್ಮಿನ ಆಡಳಿತಪಾಲುದಾರರಾದ ಶ್ರೀ ರಾಜಾರಾಮ್ ಭಟ್, ಕೆನರ ಕ್ರೆಡಿಟ್ ಕೋಪರೇಟಿವ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮೋಹನ ಉಪಾಧ್ಯಾಯ, ಕರ್ಕೇರ ಇಂಜಿನಿಯರಿಂಗ್ ವರ್ಕ್ಸ್ ಮಲ್ಪೆ ಇದರ ಮುಖ್ಯಸ್ಥರಾದ ಶ್ರೀ ಪ್ರಕಾಶ್ ಕರ್ಕೇರ, ವಿ.ಡಿ. ಎಂಟರ್ ಪ್ರೈಸಸ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಶ್ರೀ ದಿನೇಶ್ ಭಟ್ ಕಿನ್ನಿಮುಲ್ಕಿ, ಸಿವಿಲ್ ಇಂಜಿನಿಯರ್ ಶ್ರೀ ವಿಶ್ವನಾಥ್ ಭಟ್, ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತಿನ ಉಪಾಧ್ಯಕ್ಷರಾದ ಚಂದ್ರಶೇಖರ ನಾವಡ ಉಪಸ್ಥಿತರಿದ್ದರು. ನೃತ್ಯನಿಕೇತನ ಕೊಡವೂರಿನ ಮುನ್ನೂರು ಜನ ನೃತ್ಯಕಲಾವಿದೆಯರು ಅಮೋಘವಾಗಿ ನೃತ್ಯ ಪ್ರದರ್ಶನ ನೀಡಿದರು. ಪೂರ್ಣಿಮಾ ಜನಾರ್ದನ್ ನಿರೂಪಿಸಿದ ಕಾರ್ಯಕ್ರಮಕ್ಕೆ ಸಂಸ್ಥೆಯ ನಿರ್ದೇಶಕರಾದ ವಿದ್ವಾನ್ ಸುಧೀರ್ ರಾವ್ ಸ್ವಾಗತಿಸಿ,…

Read More