Author: roovari

ಮಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಶಾನಭಾಗ ಇವರು ಸಂಪಾದಿಸಿದ ‘ಆನ್ವೀಕ್ಷಿಕೀ‘ ಸಮಕಾಲೀನ ಆಖ್ಯಾನಗಳು ಪುಸ್ತಕ ಲೋಕಾರ್ಪಣೆ ಹಾಗೂ ಸಂವಾದ ಕಾರ್ಯಕ್ರಮವು ದಿನಾಂಕ 28-06-2023ರ ಸಂಜೆ 06.30ಕ್ಕೆ ಮಂಗಳೂರಿನ ಪ್ರತಾಪನಗರದ ಸಂಘನಿಕೇತನದಲ್ಲಿ ನಡೆಯಲಿದೆ. ಮಂಗಳೂರು ಮಹಾನಗರದ ಮಾನ್ಯ ಸಂಘಚಾಲಕರಾದ ಡಾ.ಸತೀಶ್ ರಾವ್ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಪ್ರಾಧ್ಯಾಪಕರು ಮತ್ತು ಖ್ಯಾತ ಚಿಂತಕರಾದ ಡಾ. ಅಜಕ್ಕಳ ಗಿರೀಶ್ ಭಟ್ ವಕ್ತಾರರಾಗಿ ಭಾಗವಹಿಸಲಿದ್ದಾರೆ.

Read More

ಮುಂಬಯಿ : ಡೊಂಬಿವಲಿ ಪೂರ್ವದ ಮಂಜುನಾಥ ಸಭಾಗೃಹದಲ್ಲಿ ದಿನಾಂಕ :18-06-2023ರಂದು ನಡೆದ ಅನಿತಾ ಪಿ. ತಾಕೊಡೆಯವರ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸಭಾಧ್ಯಕ್ಷತೆಯನ್ನು ವಹಿಸಿದ ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ದಿವಾಕರ ಶೆಟ್ಟಿ ಇಂದ್ರಾಳಿಯವರು “ನಮ್ಮ ಮುಖ್ಯ ಉದ್ದೇಶವೇ ಕನ್ನಡವನ್ನು ಉಳಿಸಿ ಬೆಳೆಸುವುದು. ಕನ್ನಡವು ನಿಂತ ನೀರಾಗಬಾರದು ಅದು ನದಿಯಂತೆ ಹರಿಯುತ್ತಿರಬೇಕು. ಇದರ ಸಲುವಾಗಿ ಕನ್ನಡ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದೇವೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಂಘದ ಮುಖಾಂತರ ಸಹಕರಿಸುತ್ತಿದ್ದೇವೆ. ಇಂದಿನ ಕಾರ್ಯಕ್ರಮಕ್ಕೆ ಕನ್ನಡದ ಅಭಿಮಾನಿಗಳ ಬಳಗವೇ ಬಂದಿದೆ. ರಾಜಕಾರಣಿಗಳ ಹಿಂದೆ ಜನ ಹೋಗುವುದನ್ನು ನೋಡಿದ್ದೇನೆ. ಕವಿಗಳಿಗೆ ಇಷ್ಟು ದೊಡ್ಡ ಅಭಿಮಾನಿ ಬಳಗವಿದೆಯೆಂದು ಇವತ್ತೇ ಗೊತ್ತಾಗಿದ್ದು. ಅನಿತಾ ತಾಕೊಡೆಯವರು ನಮ್ಮ ಡೊಂಬಿವಲಿಯ ಹೆಮ್ಮೆ. ಸಣ್ಣ ವಯಸ್ಸಿನಲ್ಲಿಯೇ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಅವರ ಸಾಹಿತ್ಯ ಕೈಂಕರ್ಯಕ್ಕೆ ಕರ್ನಾಟಕ ಸಂಘದ ಬೆಂಬಲ ಯಾವತ್ತಿಗೂ ಇದೆ” ಎನ್ನುತ್ತ ಸಂಘದ ಕಾರ್ಯಚಟುವಟಿಕೆಗಳಲ್ಲಿ ಸಹಕಾರ ನೀಡುತ್ತ ಬಂದವರನ್ನು ಸ್ಮರಿಸಿದರು. ಸಂಘದ ಕಾರ್ಯಾಧ್ಯಕ್ಷರಾದ ಸುಕುಮಾರ್ ಶೆಟ್ಟಿಯವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ,…

Read More

ಕಾರ್ಕಳ : ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ದಿನಾಂಕ : 18-06-2023ರಂದು ನಡೆದ ಜೈನ್ ಮಿಲನ್ ಮಾಸಿಕ ಸಭೆಯಲ್ಲಿ ಶ್ರೀ ಜಯಕೀರ್ತಿ ಹೆಚ್. ಇವರು ರಚಿಸಿರುವ ‘ಮುಕ್ತ ಜಿನದತ್ತ’ ಕಾದಂಬರಿಯನ್ನು ಬಿಡುಗಡೆಗೊಳಿಸಲಾಯಿತು. ‘ಮುಕ್ತ ಜಿನದತ್ತ’ ಹೊಂಬುಜ ಕ್ಷೇತ್ರದ ಐತಿಹಾಸಿಕ ಕಾದಂಬರಿಯಾಗಿದ್ದು, ಇದನ್ನು ಹೊಂಬುಜ ಕ್ಷೇತ್ರದ ಮಠಾದೀಶರಾದ ಸ್ವಸ್ತಿ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಮೊದಲೇ ಸಾಂಕೇತಿಕವಾಗಿ ಬಿಡುಗಡೆ ಮಾಡಿದ್ದು, ಜೈನ್ ಮಿಲನ್ ಮಾಸಿಕ ಸಭೆಯ ಕಾರ್ಯಕ್ರಮದಲ್ಲಿ ಮಾನ್ಯ ಜೈನ ವಿದ್ವಾಂಸರೂ, ಕವಿ ರತ್ನಾಕರ ವರ್ಣಿ ಪ್ರಶಸ್ತಿ ವಿಜೇತರೂ ಆದ ನಿವೃತ್ತ ಮುಖ್ಯ ಶಿಕ್ಷಕ ಶ್ರೀಯುತ ಮುನಿರಾಜ ರೆಂಜಾಳ ಇವರಿಂದ ಲೋಕಾರ್ಪಣೆಗೊಂಡಿತು. ಶ್ರೀಯುತ ರೆಂಜಾಳರು ಮಾತನಾಡುತ್ತಾ “ಮುಕ್ತ ಜಿನದತ್ತ ಕಾದಂಬರಿಯು ಇಂದಿನ ದಿನಗಳಲ್ಲಿ ಹೊಂಬುಜ ಕ್ಷೇತ್ರದ ಬಗೆಗಿನ ಪೂರ್ಣ ಇತಿಹಾಸವನ್ನು ಜನರಿಗೆ ತಲುಪಿಸಲು ಬಹಳ ಅನುಕೂಲವಾಗಲಿದೆ. ಹಿಂದೆ ಪದ್ಮನಾಭ ಕವಿ ವಿರಚಿತ ಜಿನದತ್ತರಾಯ ಚರಿತ್ರೆಯು ಕಾವ್ಯ ರೂಪದಲ್ಲಿದ್ದು ಓದುಗರಿಗೆ ಕಷ್ಟವಾಗಿತ್ತು. ಆದರೆ ಈ ‘ಮುಕ್ತ ಜಿನದತ್ತ’ ಕಾದಂಬರಿಯು ಇಂದಿನ…

Read More

ಮುಡಿಪು: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕವು ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಂಬಲಪಾಡಿ ವ್ಯಾಸ ಬಲ್ಲಾಳ ಜಾನಕಿ ದತ್ತಿನಿಧಿ ಉಪನ್ಯಾಸವನ್ನು ಜೂನ್ 28ರಂದು ಅಪರಾಹ್ನ 2.30 ಕ್ಕೆ ಕೊಣಾಜೆ ವಿವಿಯ ವಿಜ್ಞಾನ ಸಂಕೀರ್ಣದಲ್ಲಿರುವ ಯು.ಆರ್ ರಾವ್ ಸಭಾಂಗಣದಲ್ಲಿ ಹಮ್ಮಿಕೊಂಡಿದೆ. ಸೇಡಿಯಾಪು ಕೃಷ್ಣ ಭಟ್ಟರ ಬದುಕು ಮತ್ತು ಸಾಹಿತ್ಯದ ಕುರಿತು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗದ ವಿಶ್ರಾಂತ ಮುಖ್ಯಸ್ಥರಾದ ಡಾ.ಯು ಮಹೇಶ್ವರಿ ಉಪನ್ಯಾಸ ನೀಡಲಿದ್ದಾರೆ. ಗಾಯಕಿ ಶ್ರೀದೇವಿ ಕಲ್ಲಡ್ಕ ಸೇಡಿಯಾಪು ಕವಿತೆಗಳನ್ನು ಹಾಡಲಿದ್ದಾರೆ. ವಿವಿ ಕನ್ನಡ ವಿಭಾಗದ ಅಧ್ಯಕ್ಷ ಡಾ.ಸೋಮಣ್ಣ ಹೊಂಗಳ್ಳಿ, ಉಳ್ಳಾಲ ಕಸಾಪ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಹಾಗೂ ಪದಾಧಿಕಾರಿಗಳು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

Read More

ಉಡುಪಿ: ಯಕ್ಷಗಾನ ಭಾಗವತರಾಗಿ ಹಲವು ಯಕ್ಷಗಾನ ಸಂಘ ಮತ್ತು ಉಡುಪಿ ಯಕ್ಷಶಿಕ್ಷಣ ಟ್ರಸ್ಟಿನಲ್ಲಿ ಗುರುಗಳಾಗಿ ಸಾವಿರಾರು ಕಲಾವಿದರನ್ನು ಸಿದ್ಧಪಡಿಸಿದ ಯಕ್ಷವಾರಿಧಿ, 77ವರ್ಷದ ತೋನ್ಸೆ ಜಯಂತ ಕುಮಾರ್ 26-06-2023ರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಹಂಗಾರಕಟ್ಟೆ ಚೇತನಾ ಪ್ರೌಢ ಶಾಲೆಯ ಕಛೇರಿ ಅಧೀಕ್ಷಕರಾಗಿ ನಿವೃತ್ತರಾಗಿದ್ದ ತೋನ್ಸೆಯವರಿಗೆ ಯಕ್ಷಗಾನ ಪ್ರವೃತ್ತಿಯಾಗಿತ್ತು. ಸಂಚಾರಿ ಯಕ್ಷಗಾನ ಭಂಡಾರವೆಂದೇ ಖ್ಯಾತರಾಗಿದ್ದ ತೋನ್ಸೆ ಕಾಂತಪ್ಪ ಮಾಸ್ತರರ ಸುಪುತ್ರರಾಗಿದ್ದ ಇವರಿಗೆ ತಂದೆಯೇ ಯಕ್ಷಗಾನ ಗುರು. ಆರಂಭದಲ್ಲಿ ಯಕ್ಷಗಾನ ವೇಷಧಾರಿಯಾಗಿ ಆಮೇಲೆ ಯಕ್ಷಗಾನ ಗುರುಗಳಾಗಿ ಈ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರು. ಬಡಗು ತಿಟ್ಟಿನಲ್ಲಿ ಯಕ್ಷಗಾನ ಸವ್ಯಸಾಚಿ ಎಂದೇ ಖ್ಯಾತಿಗಳಿಸಿದ್ದ ಅವರಿಗೆ ಅದೇ ಹೆಸರಿನ ಅಭಿನಂದನಾ ಗ್ರಂಥ ಸಮರ್ಪಣೆಯಾಗಿದೆ. ಉಡುಪಿ ಶಾಸಕರ ನೇತೃತ್ವದ ಯಕ್ಷಶಿಕ್ಷಣ ಟ್ರಸ್ಟಿನಲ್ಲಿ ಆರಂಭದಿಂದಲೂ ಗುರುಗಳಾಗಿ ಅದರ ಯಶಸ್ಸಿಗೆ ಕಾರಣರಾದ ಇವರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಶ್ರೀರಾಮ ವಿಠಲ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ ಮತ್ತು ಯಕ್ಷಾಂಗಣ ಮಂಗಳೂರು ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿ-ಗೌರವಗಳು ಲಭಿಸಿವೆ. ಇತ್ತೀಚೆಗೆ ಅನಾರೋಗ್ಯದಿಂದ ಮನೆಯಲ್ಲೇ…

Read More

ಮಂಗಳೂರು : ಹರಿಕಥಾ ಪರಿಷತ್ ಮಂಗಳೂರು ಇದರ ಮಂಗಳೂರು ವಲಯ ಸದಸ್ಯರ ಸಮಾವೇಶವು ದಿನಾಂಕ 29-06-2023ರಂದು ಕದ್ರಿಯ ಶ್ರೀಕೃಷ್ಣ ಕಲ್ಯಾಣ ಮಂದಿರದಲ್ಲಿ ನಡೆಯಲಿರುವುದು. ಸಮಾವೇಶದಲ್ಲಿ ಮೊದಲಿಗೆ ಕದ್ರಿ ಕಂಬಳದ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಹಾಗೂ ಕಾವೂರು ಶ್ರೀ ಮುಖ್ಯಪ್ರಾಣ ಭಜನಾ ಮಂಡಳಿ ಇವರಿಂದ ‘ದಾಸ ಸಂಕೀರ್ತನೆ’ ನಡೆಯಲಿರುವುದು. ಬಳಿಕ ‘ಹರಿಕಥಾ ರಂಗ-ನಿರೀಕ್ಷೆಗಳು ಹಾಗೂ ಸವಾಲುಗಳು’ ಎಂಬ ವಿಷಯದಲ್ಲಿ ಸಂವಾದ ಗೋಷ್ಠಿ ನಡೆಯಲ್ಲಿದ್ದು, ಹರಿದಾಸರು ಹಾಗೂ ವಕೀಲರಾದ ಶ್ರೀ ಮಹಾಬಲ ಶೆಟ್ಟಿ ಕೂಡ್ಲು ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪರಿಷತ್ತಿನ ಗೌರವಾಧ್ಯಕ್ಷರಾದ ಧರ್ಮದರ್ಶಿ ಡಾ. ಶ್ರೀ ಹರಿಕೃಷ್ಣ ಪುನರೂರು ಇವರು ನೆರವೇರಿಸಲಿದ್ದಾರೆ. ಸಂವಾದ ಗೋಷ್ಠಿಯಲ್ಲಿ ಸಂಪನ್ಮೂಲ ಮಹನೀಯರಾದ ಬಹುಶ್ರುತ ವಿದ್ವಾಂಸರು ಹಾಗೂ ವಿಮರ್ಶಕರಾದ ಡಾ. ಎಂ. ಪ್ರಭಾಕರ ಜೋಶಿ, ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠದ ನಿರ್ದೇಶಕರಾದ ಡಾ. ಧನಂಜಯ್ ಕುಂಬ್ಳೆ, ನಿವೃತ್ತ ಪ್ರಾಂಶುಪಾಲರು ಹಾಗೂ ಯಕ್ಷಗಾನ ಅರ್ಥಧಾರಿಯಾದ ಶ್ರೀ ಸರ್ಪಂಗಳ ಈಶ್ವರ ಭಟ್, ಅರ್ಥಧಾರಿಗಳು ಹಾಗೂ ವಿಮರ್ಶಕರಾದ ಶ್ರೀ…

Read More

ಬೆಂಗಳೂರು : ಎಸ್.ವಿ. ನಾರಾಯಣಸ್ವಾಮಿ ರಾವ್ ಸಂಸ್ಥಾಪಿಸಿದ ಶ್ರೀ ರಾಮಸೇವಾ ಮಂಡಳಿ ಟ್ರಸ್ಟ್ (ರಿ.) ಇದರ ವತಿಯಿಂದ ಸುಂದರವಾಗಿ ನಿರ್ಮಾಣಗೊಂಡ ನೂತನ ಸಭಾಂಗಣ “ಎಸ್.ವಿ. ನಾರಾಯಣಸ್ವಾಮಿ ರಾವ್ ಮೆಮೊರಿಯಲ್ ಹಾಲ್’ ಮತ್ತು ಶ್ರೀ ಟಿ. ನಾಗರಾಜು ಅವರ ಲೇಖನಿಯಿಂದ ಮೂಡಿ ಬಂದ ‘ನಿಸ್ವಾರ್ಥ ಬದುಕಿನ ಶ್ರೀ ರಾಮಭಕ್ತ’ ಎಂಬ ಕೃತಿಯು ಲೋಕಾರ್ಪಣೆಗೊಳ್ಳಲಿದೆ. ಕನಕಪುರದ ನೆಟ್ಟಿಗೆರೆ ಗ್ರಾಮದ ಸೋಮನ ಹಳ್ಳಿಯಲ್ಲಿ 30-06-2023ರಂದು ಪೂರ್ವಾಹ್ನ 11-30ಕ್ಕೆ ಸಭಾಂಗಣ ಮತ್ತು ಕೃತಿಯ ಸಮರ್ಪಣಾ ಸಮಾರಂಭವು ಪೇಜಾವರ ಮಠಾದೀಶ ಶ್ರೀ ಶ್ರೀ 1008 ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರ ಪವಿತ್ರ ದೈವಿಕ ಉಪಸ್ಥಿತಿಯಲ್ಲಿ ನಡೆಯಲಿದೆ. ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್, ಮಾನ್ಯ ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೇ ಗೌಡ, ಶ್ರೀ ಕೆ.ಸಿ. ರಾಮಮೂರ್ತಿ (ಐ.ಪಿ.ಎಸ್.), ಮಾಜಿ ಲೋಕ ಸಭಾ ಸದಸ್ಯರು ಹಾಗೂ ಸಿ.ಎಂ.ಆರ್. ಸಮೂಹ ಸಂಸ್ಥೆಗಳ ಅಧ್ಯಕ್ಷರು ಇವರೆಲ್ಲರೂ ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಶವಂತಪುರದ…

Read More

ಮುಡಿಪು : ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ ನೀಡುವ ಅಭಿನವ ವಾಲ್ಮೀಕಿ, ‘ಅಂಬುರುಹ ಯಕ್ಷಸದನ ಪ್ರಶಸ್ತಿ’ಯನ್ನು ತೆಂಕುತಿಟ್ಟು ಯಕ್ಷಗಾನ ರಂಗದ ಪ್ರಸಿದ್ಧ ಹಾಸ್ಯ ಕಲಾವಿದ ಹಾಸ್ಯ ಚಕ್ರವರ್ತಿ ಬಂಟ್ವಾಳ ಜಯರಾಮ ಆಚಾರ್ಯ ಅವರಿಗೆ ದಿನಾಂಕ 21-06-2023 ಬುಧವಾರ ಪೂಂಜರ ಸ್ವಗೃಹ ಬೊಟ್ಟಿಕೆರೆಯ ಅಂಬುರಹದಲ್ಲಿ ನೀಡಿ ಗೌರವಿಸಲಾಯಿತು. ಪ್ರತಿಷ್ಠಾನವು ಈ ಹಿಂದೆ 2021ರಲ್ಲಿ ಛಂದೋವಾರಿಧಿ ಚಂದ್ರ ಗಣೇಶ ಕೊಲೆಕಾಡಿ, 2022ರಲ್ಲಿ ರಂಗ ನಾಯಕ ಕುರಿಯ ಗಣಪತಿ ಶಾಸ್ತ್ರಿಯವರಿಗೆ ಅಂಬುರುಹ ಯಕ್ಷಸದನ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಯರಾಮ ಆಚಾರ್ಯ ಅವರು, “ಪುರುಷೋತ್ತಮ ಪೂಂಜರ ಪ್ರಶಸ್ತಿ, ಅವರ ಸ್ನೇಹ ನನಗೆ ದೊರಕಿರುವುದು ನನ್ನ ಭಾಗ್ಯ. ಪೂಂಜರ ಪ್ರಸಂಗದ ಪದ್ಯಗಳಿಗೆ ಅರ್ಥ ಹೇಳಲು ಬೇರೆ ಸಾಹಿತ್ಯ ಅಗತ್ಯವೆನಿಸದು. ಅವರ ಸಾಹಿತ್ಯ ಶ್ರೀಮಂತಿಕೆಯೇ ಓರ್ವ ಕಲಾವಿದನ್ನು ಬೆಳೆಸುತ್ತದೆ. ಯಕ್ಷಗಾನ ಲೋಕದ ಸವ್ಯಸಾಚಿಯಾದ ಪುರುಷೋತ್ತಮ ಪೂಂಜರು ಇನ್ನೂ ಬಾಳಿ ಬೆಳಗಬೇಕಿತ್ತು. ಇನ್ನಷ್ಟು ಅವರ ಪ್ರಸಂಗ ಸಾಹಿತ್ಯ ಯಕ್ಷಗಾನ ಲೋಕವನ್ನು ಅರಳಿಸಬೇಕಿತ್ತು. ‘ಮಾತೆ ಜಾನಕಿಯೆನ್ನ ಕಾವ್ಯ ನಾಯಕಿ’…

Read More

ಬೆಂಗಳೂರು : ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳಾದ ರಂಗಚ೦ದಿರ ಮತ್ತು ರ೦ಗಮ೦ಡಲ-ಸಿವಗಂಗ ಟ್ರಸ್ಟ್, ಪ್ರಸ್ತುತ ಪಡಿಸುವ ರಂಗ ಜಂಗಮ ಸಿಜಿಕೆ -73 ರ ನೆನಪು ಕಾರ್ಯಕ್ರಮವು ದಿನಾಂಕ : 27-06-2023ರಂದು ಮಂಗಳವಾರ ಸಂಜೆ ಬೆಂಗಳೂರಿನ ಸಿವಗಂಗ ರಂಗಮಂದಿರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಬೈರಮಂಗಲ ರಾಮೇಗೌಡರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ರಾಜ್ಯಸಭಾ ಸದಸ್ಯರಾದ ಡಾ. ಎಲ್. ಹನುಮಂತಯ್ಯಯವರು ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ರಂಗ ಪೋಷಕರಾದ ಶ್ರೀಮತಿ ಜಯಲಕ್ಷ್ಮಿ, ರಂಗನಿರ್ದೇಶಕರು /ಸಾಹಿತಿಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮಹಾಮಣೆ, ನಾಟಕಕಾರರು/ ರಂಗನಿರ್ದೇಶಕರಾದ ಡಾ. ಬೇಲೂರು ರಘುನಂದನ, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ. ಪ್ರಕಾಶಮೂರ್ತಿ, ಕಸಾಪ ಬೆಂಗಳೂರು, ಸಂಘ ಸಂಸ್ಥೆಗಳ ಪ್ರತಿನಿಧಿ ಡಾ. ಮಾಗಡಿ ಗಿರೀಶ್, ಕೆಂಗೇರಿ ಉಪನಗರ, ಭಗೀರಥ ಬಡಾವಣೆ ಡಾ. ದೀಪಕ್ ಬಿ.ವಿ. ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರಂಗನಿರ್ದೇಶಕರಾದ ಶ್ರೀಮತಿ ನಿರ್ಮಲಾ ನಾದನ್ ಮತ್ತು ಬೆಳಕು ವಿನ್ಯಾಸಕರಾದ ಶ್ರೀ ರವಿಶಂಕರ್ ಎಸ್. ಇವರಿಗೆ ಸಿಜಿಕೆ ಯುವ…

Read More

ಮಂಗಳೂರು : ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ಒಂದು ದಿನದ ಅಂತರ್ ಕಾಲೇಜಿನ ಸಾಂಸ್ಕೃತಿಕ ಸ್ಪರ್ಧೆ ವ್ಯೋಮ್ -2023 ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ : 17-06-2023ರಂದು ನಡೆಯಿತು. ಡೈಜಿ ವರ್ಲ್ಡ್ ಮೀಡಿಯಾದ ಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀ ವಾಲ್ಟರ್ ಡಿ’ಸೋಜಾ ನಂದಳಿಕೆ ಅಂದಿನ ಮುಖ್ಯ ಅಭ್ಯಾಗತರಾಗಿದ್ದರು. ಅವರು ಮಾತನಾಡಿ “ವಿದ್ಯಾರ್ಥಿಗಳು ತಮ್ಮಲ್ಲಿ ಸಕಾರಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ಈ ಚಿಂತನೆಗಳು ನಿಸ್ಸಂದೇಹವಾಗಿ ಅವರನ್ನು ಯಶಸ್ಸಿನ ಗುರಿ ತಲುಪುವಂತೆ ಮಾಡುತ್ತದೆ” ಎ೦ದರು. ಬೆಸೆಂಟ್ ಕನ್ನಡ ಮಾಧ್ಯಮ ಶಾಲೆಯ ಸಂಚಾಲಕ ಶ್ಯಾಮ್ ಸುಂದರ್ ಕಾಮತ್ ಅವರು ಅಧ್ಯಕ್ಷ ಸ್ಥಾನದಿಂದ ಮಾತನಾಡಿ “ವಿದ್ಯಾರ್ಥಿಗಳು ದೇಶದ ಆಸ್ತಿ, ಅವರು ಸದ್ಬಳಕೆಯಾದಲ್ಲಿ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ” ಎಂಬ ಸಂದೇಶ ಇತ್ತರು. ಪ್ರಾಂಶುಪಾಲ ಡಾ. ಲಕ್ಷ್ಮೀ ನಾರಾಯಣ ಭಟ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಸಂಘಟಕ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಗೋಪಾಲ ರಡ್ಡಿರಿತ್ತಿ ಸ್ವಾಗತಿಸಿ, ಸಂಯೋಜಕಿ ಶ್ರೀವಿದ್ಯಾ ವ್ಯೋಮ್ -2023 ಕಾರ್ನಿವಲ್ ಆಫ್ ಕಲ್ಚರ್ ಬಗ್ಗೆ…

Read More