Subscribe to Updates
Get the latest creative news from FooBar about art, design and business.
Author: roovari
ಮಂಗಳೂರು: ಲವಿ ಗಂಜಿಮಠ ಅವರು ಕೊಂಕಣಿ ಭಾಷೆಯಲ್ಲಿ ಬರೆದ ಕಿರು ಕಥೆಗಳ ಸಂಗ್ರಹ ‘ಆಗುಂಬೆಚಿ ಘುಂವ್ಡಿ’ ಪುಸ್ತಕದ ಲೋಕರ್ಪಣಾ ಸಮಾರಂಭವು 21 ಜುಲೈ 2024ನೇ ಭಾನುವಾರದಂದು ಮಂಗಳೂರಿನ ಸಂದೇಶ ಸಭಾಭವನದಲ್ಲಿ ನಡೆಯಿತು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ವತಿಯಿಂದ ನಡೆದ ಕೊಂಕಣಿ ಲೇಖಕರ ಸಹಮಿಲನದಲ್ಲಿ ಅಕಾಡೆಮಿ ಅಧ್ಯಕ್ಷ ಸ್ಪ್ಯಾನಿ ಅಲ್ವಾರಿಸ್ ಕೃತಿ ಲೋಕಾರ್ಪಣೆಗೊಳಿಸಿದರು. ಮೈಕಲ್ ಡಿಸೋಜ ಇವರ ವಿಷನ್ ಕೊಂಕಣಿ ಪುಸ್ತಕ ಯೋಜನೆ ಅನುದಾನದಲ್ಲಿ ಮುದ್ರಣಗೊಂಡ ಈ ಪುಸ್ತಕವು ಲವಿ ಗಂಜಿಮಠ ಇವರ ನಾಲ್ಕನೇ ಸಾಹಿತ್ಯ ಕೃತಿಯಾಗಿದೆ. ಕಾರ್ಯಕ್ರಮದಲ್ಲಿ ಕೆ.ಎಲ್.ಎಸ್. ಸಂಚಾಲಕ ರಿಚರ್ಡ್ ಮೋರಸ್ ಅಕಾಡೆಮಿ ಸದಸ್ಯರಾದ ಸ್ವಪ್ನಾ, ನವೀನ್ ಲೋಬೊ, ರೋನೊ ಕ್ರಾಸ್ತಾ ಕೆಲರಾಯ್, ಸಮರ್ಥ್ ಭಟ್ ಹಾಗೂ ಸಂಪನ್ಮೂಲ ವ್ಯಕ್ತಿ ಐರಿನ್ ರೆಬೆಲ್ಲೊ ಉಪಸ್ಥಿತರಿದ್ದರು.
ಹುಬ್ಬಳ್ಳಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್(ಮಾಹೆ) ಇವರ ಸಂಯುಕ್ತ ಆಶ್ರಯದಲ್ಲಿ 22 ಜುಲೈ 2024ನೇ ಸೋಮವಾರದಂದು ಸೇಡಿಯಾಪು ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಪ್ರಶಸ್ತಿ ಪುರಸ್ಕೃತರಾದ ಡಾ. ಬಿ. ವಿ. ಶಿರೂರ ಇವರ ಹುಬ್ಬಳ್ಳಿ ಮಂಜುನಾಥ ನಗರದಲ್ಲಿ ನಿವಾಸದಲ್ಲಿ ನಡೆಯಿತು. ಪ್ರಶಸ್ತಿ ಪುರಸ್ಕೃತರ ಕುರಿತು ಮಾತನಾಡಿದ ಡಾ. ಪಾದೇಕಲ್ಲು ವಿಷ್ಣು ಭಟ್ಟ “ನಾಡಿನ ಸಾಕ್ಷಿಪ್ರಜ್ಞೆ, ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ ಡಾ. ಬಿ. ವಿ. ಶಿರೂರ ಇವರಿಗೆ ಈ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಶಾಸನ, ಗ್ರಂಥ ಸಂಪಾದನೆ, ಜೈನಸಾಹಿತ್ಯ, ವೀರಶೈವ ಸಾಹಿತ್ಯ, ವಚನ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಇವರು ಪ್ರಸಿದ್ಧರಾಗಿದ್ದಾರೆ.” ಎಂದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಬಿ. ವಿ. ಶಿರೂರ “ಕನ್ನಡ ಸಾಹಿತ್ಯದಲ್ಲಿ ಸಂಶೋಧನೆ ವ್ಯಾಕರಣ ಮತ್ತು ಛಂದಸ್ಸಿನಂಥ ಶಾಸ್ತ್ರೀಯ ಪಾಂಡಿತ್ಯವುಳ್ಳ ಪಠ್ಯವನ್ನು ವಿಶ್ವವಿದ್ಯಾಲಯಗಳು ಕಡಿತಗೊಳಿಸಿ ಕನ್ನಡ ಭಾಷಾ ಗಟ್ಟಿತನವನ್ನು ಹಾಳು ಮಾಡುತ್ತಿರುವುದು ವಿಷಾದನೀಯ. ವರ್ತಮಾನದಲ್ಲಿ ಯುವಕರಿಗೆ…
ಬೆಂಗಳೂರು : ವಿಜಯನಗರ ಬಿಂಬ (ರಿ.) ರಂಗ ಶಿಕ್ಷಣ ಕೇಂದ್ರ, ಹಿರಿಯರ ವಿಭಾಗ ಇದರ ವತಿಯಿಂದ 12ನೇ ವರ್ಷದ ಡಿಪ್ಲೋಮೊ ವಿದ್ಯಾರ್ಥಿಗಳಿಂದ ಅಭ್ಯಾಸ ಮಾಲಿಕೆ -1 ಐತಿಹ್ಯಮಾಲೆಯ ಕಥೆಗಳ ಆಧಾರಿತ ನಾಟಕ ‘ಇತಿ-ಹ.ಯ’ ಇದರ ಪ್ರದರ್ಶನವನ್ನು ದಿನಾಂಕ 28 ಜುಲೈ 2024ರಂದು ಸಂಜೆ ಗಂಟೆ 4-00 ಮತ್ತು 7-00ಕ್ಕೆ ವಿಜಯನಗರ ಬಿಂಬದ ಸರಳಾಂಗಣದಲ್ಲಿ ಆಯೋಜಿಸಲಾಗಿದೆ. ಈ ನಾಟಕವನ್ನು ಬಿ.ಆರ್. ವೆಂಕಟರಮಣ ಐತಾಳ್ ಇವರು ಕನ್ನಡಕ್ಕೆ ಅನುವಾದಿಸಿದ್ದು, ಡಾ. ಸುಷ್ಮಾ ಎಸ್.ವಿ. ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತಗೊಳ್ಳಲಿದೆ.
ಬೆಂಗಳೂರು : ನಾಡೋಜ ಪ್ರೊ. ಬರಗೂರು ಸ್ನೇಹ ಬಳಗ ಇದರ ವತಿಯಿಂದ ಪ್ರೊ. ಬರಗೂರು 75 ವರ್ಷ ದಾಟಿದ ಹಿನ್ನೆಲೆಯಲ್ಲಿ ‘ಸಾಂಸ್ಕೃತಿಕ ಸ್ನೇಹ ಗೌರವ ಪುಸ್ತಕಗಳ ಜನಾರ್ಪಣೆ’ ಕಾರ್ಯಕ್ರಮವನ್ನು ದಿನಾಂಕ 28 ಜುಲೈ 2024ರಂದು ಬೆಳಗ್ಗೆ 11-00 ಗಂಟೆಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10-00 ಗಂಟೆಗೆ ಡಾ. ಶಮಿತಾ ಮಲ್ನಾಡ್ ಮತ್ತು ತಂಡದವರಿಂದ ಪ್ರೊ. ಬರಗೂರು ರಚಿಸಿದ ಗೀತೆಗಳ ಗಾಯನ ನಡೆಯಲಿದೆ. ಮಾಜಿ ಮುಖ್ಯಮಂತ್ರಿಗಳಾದ ಡಾ. ಎಂ. ವೀರಪ್ಪ ಮೊಯಿಲಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಯಲ್ಲಪ್ಪ ಹಿಮ್ಮಡಿ ಇವರ ‘ಬರಗೂರ್ ಬುಕ್’ ಮತ್ತು ಡಾ. ರಾಜು ಗುಂಡಾಪುರ ಹಾಗೂ ಬಿ. ರಾಜಶೇಖರಮೂರ್ತಿ ಇವರ ‘ನಮ್ಮ ಬರಗೂರ್ ಮೇಷ್ಟ್ರು’ ಎಂಬ ಕೃತಿಗಳನ್ನು ಕನ್ನಡ ಲೇಖಕರಾದ ಡಾ. ಚಂದ್ರಶೇಖರ ಕಂಬಾರ ಇವರು ಜನಾರ್ಪಣೆಗೊಳಿಸಲಿರುವರು.
ತೀರ್ಥಹಳ್ಳಿ : ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಮೇಲಿನ ಕುರುವಳ್ಳಿಯಲ್ಲಿ ದಿನಾಂಕ 25 ಜುಲೈ 2024ರಂದು ತಾಲೂಕು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಸಾಹಿತ್ಯ ಪರಿಷತ್ತು ತೀರ್ಥಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಹೋಬಳಿ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಕಥೆ, ಕವನ, ಪ್ರಬಂಧ ರಚನೆ ಮತ್ತು ಮಂಡನೆಯ ಕುರಿತಾದ ಒಂದು ವಿಭಿನ್ನವಾದ ‘ಸಾಹಿತ್ಯ ಕಮ್ಮಟ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ರೇಣುಕಾ ಹೆಗಡೆ, ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಶ್ರೀ ರಮೇಶ್ ಶೆಟ್ಟಿ ಹಾಗೂ ಆಗಮಿಸಿದ ಮುಖ್ಯ ಅತಿಥಿಗಳು ‘ಕಾವ್ಯ ಕಮ್ಮಟ’ ಕಾರ್ಯಕ್ರಮದ ಮೂಲ ಉದ್ದೇಶಗಳು, ಪ್ರಸ್ತುತ ಸನ್ನಿವೇಶಕ್ಕೆ ಅದರ ಅವಶ್ಯಕತೆಗಳು ಹಾಗೂ ಮಕ್ಕಳು ಉತ್ತಮ ಸಂಸ್ಕಾರ ಮತ್ತು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ಕಾವ್ಯ ಕಮ್ಮಟದ ಮಹತ್ವವನ್ನು ತಿಳಿಸಿಕೊಟ್ಟರು. ವಿವಿಧ ಶಾಲೆಗಳಿಂದ ಆಗಮಿಸಿದ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಕಥೆ, ಕವನ ಮತ್ತು ಪ್ರಬಂಧಕ್ಕೆ ಮೂರು ವಿಭಾಗ ಮಾಡಿ ಪ್ರತ್ಯೇಕ ಕೊಠಡಿಗಳಲ್ಲಿ…
ಕಾಸರಗೋಡು : ಸಾಹಿತಿ, ಭಾಷಾಂತರಕಾರ, ಸಮಾಜಸೇವಕ ಕೆ.ವಿ. ಕುಮಾರನ್ ಮಾಸ್ಟರಿಗೆ ಕಾಸರಗೋಡು ಕನ್ನಡ ಭವನದ ಗುರುನಮನ ಹಾಗೂ ‘ಕನ್ನಡ ಭವನ ಅಭಿನಂದನಾ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವು ಇವರ ವಿದ್ಯಾನಗರದ ಸ್ವಗೃಹದಲ್ಲಿ ದಿನಾಂಕ 28 ಜುಲೈ 2024ರ ಆದಿತ್ಯವಾರ ಬೆಳಿಗ್ಗೆ 9.30 ಗಂಟೆಗೆ ನಡೆಯಲಿದೆ. ಶಿವರಾಮ ಕಾರಂತರ ‘ಚೋಮನ ದುಡಿ’, ಭೈರಪ್ಪನವರ ‘ಯಾನ’, ಗೋಪಾಲಕೃಷ್ಣ ಪೈಯವರ ‘ಸ್ವಪ್ನಸಾರಸ್ವತ’ ಸಹಿತ ಹಲವು ಕಾದಂಬರಿಗಳನ್ನು ಮಲಯಾಳಕ್ಕೆ ಅನುವಾದಿಸಿದ ಕೆ.ವಿ. ಕುಮಾರನ್ ಇವರಿಗೆ ಕೇರಳ ಸಾಹಿತ್ಯ ಅಕಾಡಮಿ ಅವಾರ್ಡ್ ಪ್ರಕಟಿಸಿದೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಈ ಗೌರವ ಪ್ರಶಸ್ತಿ ಲಭಿಸಿದೆ. ಇವರು ಹೈಸ್ಕೂಲ್ ಅಧ್ಯಾಪಕರಾಗಿ, ಸಹಾಯಕ ವಿದ್ಯಾಧಿಕಾರಿಯಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ನಿವೃತ್ತ ಜೀವನವನ್ನು ಸಾಹಿತ್ಯ ಸೃಷ್ಟಿ ಹಾಗೂ ವಿವಿಧ ಸಂಘಟನೆಗಳ ಸಾಹಿತ್ಯಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಇವರು ಹಿಂದಿಯಿಂದಲೂ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ. ಇವರ ಸಾಹಿತ್ಯ, ಸಾಮಾಜಿಕ ಸರ್ವತೋಮುಖ ಸೇವೆಯನ್ನು ಪರಿಗಣಿಸಿ ಕನ್ನಡ ಭವನ ‘ಗುರುನಮನ’ ನೀಡಿ ಗೌರವಿಸಲಿರುವುದು. ಕೇರಳ ಸಾಹಿತ್ಯ ಅಕಾಡೆಮಿ ಅವಾರ್ಡ್…
ಕಿನ್ನಿಗೋಳಿ : ಕಿನ್ನಿಗೋಳಿಯ ಯುಗಪುರುಷದ ಸಂಸ್ಥಾಪಕ ದಿ. ಕೊ. ಅ. ಉಡುಪ ಸಂಸ್ಮರಣಾ ಸಮಾರಂಭ, ಕೊ. ಅ. ಉಡುಪ ಪ್ರಶಸ್ತಿ ಪ್ರದಾನ, ವೇದ ವಿದ್ವಾಂಸರ ಸನ್ಮಾನ, ಕೃತಿ ಬಿಡುಗಡೆ ಸಮಾರಂಭ ಹಾಗೂ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ 24 ಜುಲೈ 2024ರಂದು ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿ, “ದಿ. ಕೊ. ಅ. ಉಡುಪರು ಆದರ್ಶ ಕೃಷಿಕರಾಗಿ, ಉತ್ತಮ ಗುರುಗಳಾಗಿ, ಸಾಂಸ್ಕೃತಿಕ ರಾಯಭಾರಿಯಾಗಿ, ಅಜಾತಶತ್ರುವಾಗಿದ್ದು ಅವರ ಸಾಧನೆಗಳು ಕಾಲಕಾಲಕ್ಕೂ ಪ್ರಸ್ತುತ” ಎಂದರು. ಉಳೆಪಾಡಿ ದೇವಸ್ಥಾನದ ಧರ್ಮದರ್ಶಿ ಮೋಹನದಾಸ ಸುರತ್ಕಲ್ ಅವರಿಗೆ ಕೊ. ಅ. ಉಡುಪ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಎಡಪದವು ರಾಧಾಕೃಷ್ಣ ತಂತ್ರಿ ಅವರನ್ನು ಕಮಲಾಕ್ಷಿ ಉಡುಪ ಸ್ಮರಣಾರ್ಥ ವೇದ ವಿದ್ವಾಂಸರ ನೆಲೆಯಲ್ಲಿ ಗೌರವಿಸಲಾಯಿತು. ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಎಂ.ವಿ. ಭಟ್ ರಚಿತ ‘ಆಧುನಿಕ…
ತುಮಕೂರು : ಲೇಖಕ ಪತ್ರಕರ್ತ ಜಿ. ಇಂದ್ರಕುಮಾರ್ ಪ್ರತಿಷ್ಠಾನ ತುಮಕೂರು ಇದರ ವತಿಯಿಂದ ಪುಸ್ತಕ ಲೋಕಾರ್ಪಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 28 ಜುಲೈ 2024ರಂದು ಬೆಳಿಗ್ಗೆ 10-30ಕ್ಕೆ ತುಮಕೂರಿನ ಅಮಾನಿಕೆರೆ ಎದುರು, ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರು ಹಾಗೂ ಸಾಹಿತಿಗಳಾದ ಡಾ. ಸಿ. ಸೋಮಶೇಖರ್ ಇವರು ಲೇಖಕ ಜಿ. ಇಂದ್ರಕುಮಾರ್ ಇವರ ‘ನೆರೆದೆಲಗ’ ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ. ಸಾಹಿತಿ ಶ್ರೀಮತಿ ನಾಗರತ್ನ ಚಂದ್ರಪ್ಪ, ಹಿರಿಯ ಪತ್ರಕರ್ತ ಶ್ರೀ ಹೆಚ್.ಎನ್. ಮಲ್ಲೇಶ್, ಹಿರಿಯ ಪತ್ರಿಕಾ ಛಾಯಾ ಗ್ರಾಹಕರಾದ ಶ್ರೀ ಟಿ. ಎಸ್. ತ್ರಿಯಂಬಕ ಮತ್ತು ರಂಗಭೂಮಿ ಕಲಾವಿದರಾದ ಶ್ರೀ ಎನ್. ಸಿದ್ಧರಾಜು ಇವರುಗಳಿಗೆ ಜಿ. ಇಂದ್ರಕುಮಾರ್ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಆರ್. ದೊಡ್ಡಲಿಂಗಪ್ಪ ಇವರು ಪ್ರಶಸ್ತಿ ಪ್ರದಾನ ಮಾಡಲಿರುವರು.
ಧಾರವಾಡ : ಮಹಾನಗರದ ಹಿರಿಯ ರಂಗ ಸಂಸ್ಥೆ ಅಭಿನಯ ಭಾರತಿಯು ಈ ವರ್ಷದಿಂದ ರಂಗ ದಿಗ್ಗಜರ ಸವಿ ನೆನಪಿನಲ್ಲಿ ಪ್ರತಿ ತಿಂಗಳು ಮಾಸಿಕ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸುತ್ತಿದೆ. ಈ ಸರಣಿಯ ಏಳನೆಯ ಕಾರ್ಯಕ್ರಮವನ್ನು ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಸಹಯೋಗದೊಂದಿಗೆ ದಿನಾಂಕ 29 ಜುಲೈ 2024ರಂದು ಸಂಜೆ 6-00 ಗಂಟೆಗೆ ಧಾರವಾಡದ ಮನೋಹರ ಗ್ರಂಥ ಮಾಲಾದ ಅಟ್ಟದಲ್ಲಿ ಏರ್ಪಡಿಸಿದೆ. ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಮನೋಹರ ಗ್ರಂಥ ಮಾಲೆಯ ಅನನ್ಯ ಕೊಡುಗೆ ಹಾಗೂ ಶತಮಾನದತ್ತ ಹೆಜ್ಜೆ ಇಡುತ್ತಿರುವ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ‘ಶ್ರಮಸಾಫಲ್ಯ’ ಜಿ.ಬಿ. ಜೋಶಿ ಹಾಗೂ ಕೀರ್ತಿನಾಥ ಕುರ್ತಕೋಟಿ ಅವರಿಗೆ ಸಲ್ಲುತ್ತದೆ. ಜುಲೈ 29 ಜಿ.ಬಿ. ಜೋಶಿಯವರ 120ನೇ ಹುಟ್ಟುಹಬ್ಬ ಹಾಗೂ ಜುಲೈ 31 ಶ್ರೀ ಕೀರ್ತಿನಾಥ ಕುರ್ತುಕೋಟಿಯವರ 21ನೇ ಪುಣ್ಯತಿಥಿ. ತಮಗೆಲ್ಲ ಗೊತ್ತಿರುವಂತೆ ಜಿ.ಬಿ. ಜೋಶಿಯವರ ಶತಮಾನೋತ್ಸವ ಸಂದರ್ಭದಲ್ಲಿ ಆ ಕಾರ್ಯಕ್ರಮದ ಜವಾಬ್ದಾರಿಗಳನ್ನು ನಿರ್ವಹಿಸಿ ಮಾರನೇ ದಿನವೇ ಅವರೀರ್ವರ ಅವಿನಾಭಾವ ಸಂಬಂಧದ ಸಂಕೇತವೆಂಬಂತೆ ಕೀರ್ತಿಯವರು ನಮ್ಮನ್ನು ಅಗಲಿದ್ದರು.…
ಸುರತ್ಕಲ್ : ಅಗರಿ ಪ್ರಶಸ್ತಿ, ಅಗರಿ ರಘುರಾಮ ಸಮ್ಮಾನ, ಅಗರಿ ಸಂಸ್ಮರಣೆ, ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಯಕ್ಷಗಾನ ಬಯಲಾಟ ಕಾರ್ಯಕ್ರಮವು 28 ಜುಲೈ 2024ರಂದು ಹೊಸಬೆಟ್ಟು ನವಗಿರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. 2023ನೇ ಸಾಲಿನ ಪ್ರತಿಷ್ಠಿತ ‘ಅಗರಿ ಪ್ರಶಸ್ತಿ’ಗೆ ಅಭಿಜ್ಞ ಯಕ್ಷಗಾನ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಆಯ್ಕೆಯಾಗಿದ್ದು, ಅಗರಿ ರಘುರಾಮ ಸಮ್ಮಾನ ಪುರಸ್ಕಾರಕ್ಕೆ ಉಡುಪಿಯ ಕಲೆ ಮತ್ತು ಸಮಾಜ ಸೇವಾ ಸಂಸ್ಥೆ ‘ಯಕ್ಷಗಾನ ಕಲಾರಂಗ’ ಆಯ್ಕೆ ಯಾಗಿದೆ. ಅಂದು ಸಂಜೆ ಘಂಟೆ 3.00ರಿಂದ ನಡೆಯಲಿರುವ ಈ ಕಾರ್ಯಕ್ರಮಾದಲ್ಲಿ ಮೂಡುಬಿದಿರೆಯ ಉದ್ಯಮಿ ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದು, ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಶ್ರೀಹರಿನಾರಾಯಣ ದಾಸ ಆಸ್ರಣ್ಣ ಶುಭ ಹಾರೈಸಲಿದ್ದಾರೆ. ಈ ಸಂದರ್ಭದಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರಾದ ನಿಧೀಶ ಹೊಸಬೆಟ್ಟು, ರಾಘವೇಂದ ಎಚ್. ವಿ., ರಾಕೇಶ್ ಹೊಸಬೆಟ್ಟು ಇವರನ್ನು ಅಭಿನಂದಿಸಲಾಗುವುದು. ಸಂಸದ ಕ್ಯಾ. ಬ್ರಿಜೇಶ್ ಚೌಟ, ಉದ್ಯಮಿ ಶ್ರೀಕಾಂತ್ ಭಟ್, ಗುರುರಾಜ್ ಆಚಾರ್ ಹೊಸಬೆಟ್ಟು, ಪೆರ್ಮುದೆ ಸ.…