Author: roovari

ಧಾರವಾಡ : ವಿಶಾಖಾಪಟ್ಟಣದ ಪ್ರತಿಮಾ ಟ್ರಸ್ಟ್ ಮತ್ತು ಧಾರವಾಡದ ಸಾಹಿತ್ಯ ಗಂಗಾ ಬಳಗದ ಸಹಯೋಗದಲ್ಲಿ 2024ನೇ ಸಾಲಿನಲ್ಲಿ ನೀಡಲಾಗುವ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಯ್ದ 15 ಅರ್ಹ ಅಭ್ಯರ್ಥಿಗಳಿಗೆ ತಲಾ ರೂ.10000/- ಪ್ರೋತ್ಸಾಹ ಧನ ನೀಡಲಾಗುವುದು. ಸಾಹಿತ್ಯ, ಸಂಗೀತ, ನೃತ್ಯ, ನಟನೆ, ಚಿತ್ರಕಲೆ, ವಿಜ್ಞಾನ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬಯಸುವ 35 ವರ್ಷದೊಳಗಿನ ಯುವಕ/ಯುವತಿಯರು ಅರ್ಜಿ ಸಲ್ಲಿಸಬಹುದು. ನಿಯಮಗಳು : * ಅರ್ಜಿ ಸಲ್ಲಿಸಲು ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. * ಅರ್ಹತೆಯೊಂದೇ ಆಯ್ಕೆಯ ಏಕೈಕ ಮಾನದಂಡ. * 18-35 ವರ್ಷದೊಳಗಿನ ಯುವಕ/ಯುವತಿಯರು ಮಾತ್ರ ಅರ್ಜಿ ಸಲ್ಲಿಸಬಹುದು. * ಅಭ್ಯರ್ಥಿಗಳು ತಮ್ಮ ಪೂರ್ಣ ಪರಿಚಯ, ವಯೋಮಿತಿ ದಾಖಲಾತಿ, ಪೂರ್ಣ ವಿಳಾಸ ಮತ್ತು ಭಾವಚಿತ್ರವನ್ನು ನಮಗೆ ವಾಟ್ಸಪ್ ಮೂಲಕ ಕಳುಹಿಸಬೇಕು. * ಸಾಹಿತ್ಯ, ಸಂಗೀತ, ನೃತ್ಯ, ನಟನೆ, ಚಿತ್ರಕಲೆ, ವಿಜ್ಞಾನ ಮತ್ತು ಕ್ರೀಡಾ ಕ್ಷೇತ್ರದಲ್ಲಿ ತಾವು ಮಾಡಿದ ಸಾಧನೆಗಳ ಕುರಿತ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಕಳುಹಿಸಬೇಕು. * ಅರ್ಜಿ ಸಲ್ಲಿಸಲು ಕೊನೆಯ…

Read More

ಕಾಸರಗೋಡು : ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಅಡೂರು ಗ್ರಾಮದ ಕೊರತಿಮೂಲೆ ಬಾಲಕೃಷ್ಣ ತಂತ್ರಿಗಳ ಸ್ಮರಣಾರ್ಥವಾಗಿ ನಡೆಸಿದ ಸ್ವಾತಂತ್ರ್ಯೋತ್ಸವ-2024ರ ಕಾಸರಗೋಡು ಜಿಲ್ಲಾ ಪ್ರೌಢಶಾಲಾ ಮಟ್ಟದ ಕನ್ನಡ ಕವನ ರಚನಾ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ದಿನಾಂಕ 15 ಸೆಪ್ಟೆಂಬರ್ 2024ರಂದು ವಿತರಿಸಲಾಯಿತು. ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯದಲ್ಲಿ ನಡೆದ ಕೇರಳ-ಕರ್ನಾಟಕ ಸ್ಪಂದನ ಸಿರಿ ಕೃಷಿ, ಕನ್ನಡ ಶಿಕ್ಷಣ, ಸಂಸ್ಕೃತಿ ಸಮ್ಮೇಳನದಲ್ಲಿ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಮೈಸೂರು ಇವರು ವಿಜೇತರಿಗೆ ಬಹುಮಾನ ವಿತರಿಸಿದರು. ಸಭೆಯಲ್ಲಿ ಕರ್ನಾಟಕ ಸರಕಾರದ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ಹಾಸನದ ಸ್ಪಂದನ ಸಿರಿ ವೇದಿಕೆಯ ಸ್ಥಾಪಕ ಅಧ್ಯಕ್ಷೆ ಜಿ.ಎಸ್. ಕಲಾವತಿ ಮಧುಸೂದನ, ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಶಿಕ್ಷಣ ತಜ್ಞ ವಿ.ಬಿ. ಕುಳಮರ್ವ, ಶಿಕ್ಷಕಿ ಕೆ.ಟಿ. ಶ್ರೀಮತಿ, ನಿವೃತ್ತ ಪ್ರಾಂಶುಪಾಲ ಪ್ರೋ. ಶ್ರೀನಾಥ, ಕನ್ನಡ ಭವನ ಗ್ರಂಥಾಲಯ ಸ್ಥಾಪಕ ಅಧ್ಯಕ್ಷ ಕೆ.…

Read More

ಕಾರ್ಕಳ : ಆಧುನಿಕ ಭಾರತೀಯ ರಂಗಭೂಮಿಗೆ ಹೊಸ ಜೀವಚೈತನ್ಯ ನೀಡಿದ ಮಹಾನ್ ಪ್ರತಿಭೆ ದಿವಂಗತ ಶ್ರೀ ಬಿ.ವಿ. ಕಾರಂತ ಇವರ ಜನ್ಮದಿನಾಚರಣೆಯ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಯಕ್ಷರಂಗಾಯಣ ಕಾರ್ಕಳ ಇದರ ವತಿಯಿಂದ ‘ಗಜಮುಖದವಗೆ ಗಣಪಗೆ’ ಎಂಬ ಕಾರ್ಯಕ್ರಮವನ್ನು ದಿನಾಂಕ 19 ಸೆಪ್ಟೆಂಬರ್ 2024 ಗುರುವಾರ ಸಂಜೆ 4-00 ಗಂಟೆಗೆ ಕೋಟಿ ಚೆನ್ನಯ ಥೀಂ ಪಾರ್ಕ್ ಆವರಣದಲ್ಲಿ ಆಯೋಜಿಸಲಾಗಿದೆ. ಕಾರ್ಕಳದ ರಂಗ ಸಂಸ್ಕೃತಿ ಇದರ ನಿರ್ದೇಶಕರಾದ ಶ್ರೀ ನಿತ್ಯಾನಂದ ಪೈ ಇವರು ಉದ್ಘಾಟನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಯಕ್ಷರಂಗಾಯಣದ ನಿರ್ದೇಶಕರಾದ ಶ್ರೀ ಬಿ.ಆರ್. ವೆಂಕಟರಮಣ ಐತಾಳ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಶ್ರೀಮತಿ ಕಾವ್ಯಶ್ರೀ ಅಜೇರು ಇವರು ಯಕ್ಷಗಾನ ಹಾಡುಗಾರಿಕೆಯನ್ನು ಪ್ರಸ್ತುತಪಡಿಸಲಿದ್ದು, ಚೆಂಡೆಯಲ್ಲಿ ವಾಗೆನಡು ಶ್ರೀ ಪ್ರಶಾಂತ್ ಶೆಟ್ಟಿ ಮತ್ತು ಮದ್ದಳೆಯಲ್ಲಿ ಗುರುವಾಯನಕೆರೆಯ ಶ್ರೀ ಚಂದ್ರಶೇಖರ ಆಚಾರ್ಯ ಇವರು ಸಹಕರಿಸಲಿದ್ದಾರೆ.

Read More

ಸಾಲಿಗ್ರಾಮ : ಗೆಳೆಯರ ಬಳಗ (ರಿ.) ಕಾರ್ಕಡ ಸಾಲಿಗ್ರಾಮ ಇವರು ಕೀರ್ತಿಶೇಷ ಡಾ. ಕೋಟ ಶಿವರಾಮ ಕಾರಂತರ ಹುಟ್ಟುಹಬ್ಬದ ಪ್ರಯುಕ್ತ, ಪ್ರತಿ ವರ್ಷವೂ ನೀಡುತ್ತಾ ಬಂದಿರುವ ‘ಗೆಳೆಯರ ಬಳಗ ಕಾರಂತ ಪುರಸ್ಕಾರ – 2024 ಪ್ರಶಸ್ತಿ’ಗೆ ಈ ನಾಡಿನ ಹಿರಿಯ ಸಾಹಿತಿ, ಸಂಘಟಕ, ಕವಿ, ಕಾದಂಬರಿಕಾರ, ಸಾಂಸ್ಕೃತಿಕ ಚಿಂತಕ ಡಾ. ನಾ. ಮೊಗಸಾಲೆಯವರು ಆಯ್ಕೆಯಾಗಿದ್ದಾರೆ. ಅತ್ಯಂತ ಗ್ರಾಮೀಣ ಪ್ರದೇಶವಾದ ಕಾಂತಾವರದಲ್ಲಿ ಕನ್ನಡ ಸಂಘ ಸ್ಥಾಪಿಸಿ ನಿರಂತರ ಚಟುವಟಿಕೆಯ ಮೂಲಕ ವಿಶ್ವ ಭೂಪಟದಲ್ಲಿ ಕಾಂತಾವರವನ್ನು ಗುರುತಿಸುವಂತೆ ಮಾಡಿದ ಡಾ. ಮೊಗಸಾಲೆಯವರ ಸಾಧನೆ ಅನನ್ಯವಾದುದು. ಕಾರಂತರಂತೆ ಸಂಘಟನೆ, ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲೂ ಕಾದಂಬರಿಕಾರರಾಗಿ, ಕಥೆಗಾರರಾಗಿ ಕವಿಯಾಗಿ, ಮೊಗಸಾಲೆಯವರ ಸಾಧನೆ ಬೆಲೆಕಟ್ಟಲಾಗದು. ಈ ಹಿಂದೆ ಶ್ರೀಮತಿ ಮಾಲಿನಿ ಮಲ್ಯ, ಶ್ರೀ ಎಸ್. ನಾರಾಯಣ ರಾವ್, ಪೇತ್ರಿ ಮಾಧವ ನಾಯಕ್, ಶ್ರೀ ಶ್ರೀನಿವಾಸ ಸಾಸ್ತಾನ, ಶ್ರೀ ಹಿರಿಯಡ್ಕ ಗೋಪಾಲರಾವ್, ಶ್ರೀ ಎಚ್. ಇಬ್ರಾಹಿಂ ಸಾಹೇಬ್, ಶ್ರೀ ಪಾಂಡೇಶ್ವರ ಚಂದ್ರಶೇಖರ ಚಡಗ, ಶ್ರೀ ಬನ್ನಂಜೆ ಸಂಜೀವ ಸುವರ್ಣ, ಶ್ರೀಮತಿ…

Read More

ಸಾಸ್ತಾನ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡ್ಮಿ, ಸಾಸ್ತಾನದಲ್ಲಿ ಯಶಸ್ವೀ ಕಲಾವೃಂದ (ರಿ.)ಕೊಮೆ ತೆಕ್ಕಟ್ಟೆ ಸಂಯೋಜನೆಯಲ್ಲಿ ‘ಶಾಲೆಗಳಲ್ಲಿ ಒಡ್ಡೋಲಗ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 17 ಸೆಪ್ಟೆಂಬರ್ 2024ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡ್ಮಿ, ಸಾಸ್ತಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀವಟಿಕೆಗೆ ಎಣ್ಣೆ ಹಾಕುವುದರ ಮೂಲಕ ಉದ್ಘಾಟಿಸಿದ ಯಕ್ಷಗಾನದ ಅಭಿಮಾನಿ ಹಂದಾಡಿ ಆ್ಯಂದ್ರು ಡಿ’ಸಿಲ್ವ ಮಾತನಾಡಿ “ಯಕ್ಷಗಾನ ಕಲಾ ಪ್ರೇಮಿಗಳ ಜೀವ. ಯಕ್ಷಗಾನದಲ್ಲಿ ಪೂರ್ವರಂಗ ಅತ್ಯಂತ ಮುಖ್ಯವಾಗಿತ್ತು. ಹಿಂದಿನ ಕಾಲದಲ್ಲಿ ಪೂರ್ವರಂಗದಲ್ಲಿಯೇ ಹೆಚ್ಚಿನ ಕಲಾವಿದರು ಪಳಗಿ ಮುಖ್ಯ ವೇಷಧಾರಿಗಳಾಗುತ್ತಿದ್ದರು. ಪ್ರಸ್ತುತ ಕಾಲಘಟ್ಟದಲ್ಲಿ ಯಕ್ಷಗಾನ ಫಾಸ್ಟ್ ಫುಡ್ ತರಹ ಆಗಿಹೋಗಿದೆ. ಪೂರ್ವರಂಗದ ಯಾವುದೇ ಭಾಗಗಳಿಲ್ಲದೇ ನೇರವಾಗಿ ಪ್ರಸಂಗ ಪ್ರಸ್ತುತಿಗೆ ಯಕ್ಷಗಾನ ಮೊದಲಾಗುತ್ತಿದ್ದಾರೆ. ಪೂರ್ವರಂಗವನ್ನು ಕೇಳುವ, ಮಾಡುವ, ನೋಡುವ ಸಹನೆ ಯಾರಲ್ಲಿಯೂ ಇಲ್ಲ. ಯಶಸ್ವೀ ಕಲಾವೃಂದ ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯ.” ಎಂದರು ಪಟ್ಟಣ ಪಂಚಾಯತ್ ಸದಸ್ಯರಾದ ಸುಲತಾ ಹೆಗ್ಡೆ ಮಾತನಾಡಿ “ಮಕ್ಕಳ ಮೂಲಕ ಮಕ್ಕಳಿಗೆ ಕಲೆಯನ್ನು ಬಿತ್ತರಿಸುವ ಕೆಲಸ ಬಹಳ ಸಂತೋಷವಾಗುತ್ತದೆ. ಮಕ್ಕಳಿಗೆ…

Read More

ಮಂಗಳೂರು : ಶ್ರೀ ಶಾರದಾ ನಾಟ್ಯಾಲಯದ 30ನೇ ವರ್ಷದ ಕಾರ್ಯಕ್ರಮವಾದ ‘ತ್ರಿದಶ ನಾಟ್ಯ ಕಲೋತ್ಸವ’ದ ಉದ್ಘಾಟನೆಯು ದಿನಾಂಕ 14 ಸೆಪ್ಟೆಂಬರ್ 2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿತು. ಸನಾತನ ನಾಟ್ಯಾಲಯದ ನೃತ್ಯ ನಿರ್ದೇಶಕಿ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಇವರು ನಾಟ್ಯಾಧಿದೇವತೆಯಾದ ನಟರಾಜನಿಗೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭಾರಂಭ ಮಾಡಿದರು. ‘ತ್ರಿದಶ ನಾಟ್ಯ ಕಲೋತ್ಸವ’ ಉದ್ಘಾಟನೆಯನ್ನು ಉಡುಪಿಯ ಖ್ಯಾತ ವಿಮರ್ಶಕರಾದಂತಹ ಗುರು ವಿದುಷಿ ಶ್ರೀಮತಿ ಪ್ರತಿಭಾ ಸಾಮಗರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಬಂದಂತಹ ಮಾಜಿ ಶಾಸಕ ಕ್ಯಾಪ್ಟನ್ ಶ್ರೀ ಗಣೇಶ್ ಕಾರ್ಣಿಕ್, ವಿದುಷಿ ಶ್ರೀಮತಿ ಶ್ರೀಲತಾ ನಾಗರಾಜ್, ‘ತ್ರಿದಶ ನಾಟ್ಯ ಕಲೋತ್ಸವ’ದ ಸಮಿತಿಯ ಅಧ್ಯಕ್ಷರಾದ ಪ್ರೊ. ಶ್ರೀ ರಮೇಶ್ ಭಟ್ ಎಸ್.ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯಗುರು ವಿದುಷಿ ಶ್ರೀಲತಾ ನಾಗರಾಜ್ ಇವರನ್ನು ಸನ್ಮಾನಿಸಲಾಯಿತು. ಶ್ರೀ ದಾಮೋದರ್ ಶರ್ಮಾ ಇವರು ಕಾರ್ಯಕ್ರಮದ ನಿರೂಪಣೆಗೈದರು. ಶ್ರೀ ಶಾರದಾ ನಾಟ್ಯಾಲಯದ ಹಿರಿಯ ನೃತ್ಯ…

Read More

ಬೆಂಗಳೂರು : ಸಾಹಿತಿ ಮತ್ತು ಕಲಾವಿದರ ವೇದಿಕೆ ಬೆಂಗಳೂರು ಮತ್ತು ವೃತ್ತಿ ರಂಗ ಭೂಮಿ ಇದರ ವತಿಯಿಂದ ಧಾರಾವಾಹಿಗಳ ಹಿರಿಯ ಕಲಾವಿದೆ ಜಯಲಕ್ಷ್ಮಿ ಪಾಟೀಲ ಕುರಿತ ಗಣೇಶ್ ಅಮೀನಗಡ ಇವರ ನೂತನ ಕೃತಿ ‘ರಂಗ ಬಾನಾಡಿ’ ಬಿಡುಗಡೆ ಸಮಾರಂಭವನ್ನು ದಿನಾಂಕ 24 ಸೆಪ್ಟೆಂಬರ್ 2024ರಂದು ಸಂಜೆ 6-00 ಗಂಟೆಗೆ ರವೀಂದ್ರ ಕಲಾ ಕ್ಷೇತ್ರ ಆವರಣದ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದಲ್ಲಿ ಖ್ಯಾತ ಕಲಾವಿದರು ಮತ್ತು ಶಾಸಕರಾದ ಡಾ. ಉಮಾಶ್ರೀ ಇವರು ಕೃತಿ ಬಿಡುಗಡೆ ಮಾಡಲಿದ್ದು, ‘ಈ ಹೊತ್ತಿಗೆ’ ಇದರ ಸಂಚಾಲಕಿ ನಟಿ ಜಯಲಕ್ಷ್ಮಿ ಪಾಟೀಲ ಇವರು ಕೃತಿ ಪರಿಚಯ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಜಯಲಕ್ಷ್ಮಿ ಪಾಟೀಲ ರಚನೆಯ ಖ್ಯಾತ ಅಭಿನೇತ್ರಿ ಕಲ್ಪನಾ ಅವರ ವ್ಯಕ್ತಿ ಚಿತ್ರ ‘ಮಿನುಗು ತಾರೆ’ ಏಕವ್ಯಕ್ತಿ ನಾಟಕವನ್ನು ರೂಪಾಂತರ ತಂಡದ ಕೆ.ಎಸ್.ಡಿ.ಎಲ್. ಚಂದ್ರು ಇವರ ನಿರ್ದೇಶನದಲ್ಲಿ ರಂಜಿತಾ ಸೂರ್ಯವಂಶಿ ಇವರು ಪ್ರದರ್ಶನ ನೀಡಲಿದ್ದಾರೆ.

Read More

ಮೂಡುಬಿದಿರೆ : ಅಖಿಲ ಭಾರತ ತುಳು ಒಕ್ಕೂಟ (ರಿ.) ಮಂಗಳೂರು ಇದರ ನೇತೃತ್ವದಲ್ಲಿ ಇತ್ತೀಚೆಗೆ ಮಂಗಳೂರಿನ ಪುರಭವನದಲ್ಲಿ ನಡೆದ ‘ಜಾನಪದ ಉಚ್ಚಯ – 2024 ನಮ್ಮ ತುಳುನಾಡ್ ಕಲಾ ಪಂಥ’ ಸ್ಪರ್ಧೆಯಲ್ಲಿ ಐವತ್ತು ಸಾವಿರ ನಗದು ಬಹುಮಾನದೊಂದಿಗೆ ಪ್ರಥಮ ಸ್ಥಾನವನ್ನು ಪಡೆದ ಮೂಡುಬಿದಿರೆ ತುಳುಕೂಟದ ಸದಸ್ಯರು ಮತ್ತು ಕಲಾವಿದರ ತಂಡಕ್ಕೆ ಅಭಿನಂದನಾ ಸಮಾರಂಭವು ದಿನಾಂಕ 14 ಸೆಪ್ಟೆಂಬರ್ 2024ರಂದು ಮೂಡಬಿದಿರೆಯ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ವಕೀಲರು ಹಾಗೂ ಮೂಡುಬಿದಿರೆ ತುಳುಕೂಟದ ಗೌರವಾಧ್ಯಕ್ಷರಾಗಿರುವ ಎಂ. ಬಾಹುಬಲಿ ಪ್ರಸಾದ್ ಮಾತನಾಡಿ “ತುಳು ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಪ್ರೀತಿ ಅಭಿಮಾನದ ಜೊತೆ ಸಂಘಟನಾತ್ಮಕವಾಗಿ ಒಂದುಗೂಡಿದರೆ ಯಾವುದೇ ಕಾರ್ಯದಲ್ಲಿಯೂ ಯಶಸ್ಸು ಪಡೆದುಕೊಳ್ಳಲು ಸಾಧ್ಯ. ಮೂಡುಬಿದಿರೆ ತುಳುಕೂಟದ ಸದಸ್ಯರು ಈ ನಿಟ್ಟಿನಲ್ಲಿ ಮಾಡಿದ ಸಾಧನೆ ಪ್ರಶಂಸನೀಯವಾದುದು.” ಎಂದರು.  ತುಳುಕೂಟದ ಉಪಾಧ್ಯಕ್ಷರಾದ ಸಂಪತ್ ಸಾಮ್ರಾಜ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲರನ್ನೂ ಅಭಿನಂದಿಸಿ ಮಾತನಾಡಿದರು. ಕಲಾಪಂಥದ ಸ್ಪರ್ಧೆಯಲ್ಲಿ ಒಟ್ಟು ಹದಿಮೂರು ತಂಡಗಳು…

Read More

ಕೋಟ : ಕೋಟದ ಸಾಲಿಗ್ರಾಮ ಮಕ್ಕಳ ಮೇಳ ಇದರ ನಿರ್ದೇಶಕರಾದ ಉಪನ್ಯಾಸಕ ಸುಜಯೀಂದ್ರ ಹಂದೆ ಎಚ್. ಇವರ ಯಕ್ಷಗಾನ ಪ್ರಬಂಧ ಸಂಕಲನ ‘ಯಕ್ಷ ದೀವಟಿಕೆ’ ಕೃತಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ 2023ರ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ಘೊಷಿಸಿದೆ. ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಇವರು ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದು, ಕವಿ, ಕತೆಗಾರ, ಲೇಖಕ, ಗಮಕಿಯಾಗಿ ಗುರುತಿಸಿಕೊಂಡಿದ್ದಾರೆ. 2024ರ ನವಂಬರ್ ತಿಂಗಳ ಎರಡನೇ ವಾರ ಮಂಗಳೂರು ಪುರಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿರುವುದು.

Read More

ಕಲಬುರುಗಿ : ಕನ್ನಡ ಸಾಹಿತ್ಯ ಪರಿಷತ್ತು ಜೇವರ್ಗಿ ಮತ್ತು ಮೈಸೂರಿನ ‘ಪರಂಪರೆ ಸಂಸ್ಥೆ’ ಇವರ ಸಹಯೋಗದಲ್ಲಿ ಏರ್ಪಡಿಸಿರುವ ರಾಜ್ಯ ಮಟ್ಟದ ಗಮಕ ಸಮ್ಮೇಳನವನ್ನು ದಿನಾಂಕ 21 ಸೆಪ್ಟೆಂಬರ್ 2024 ಮತ್ತು 22 ಸೆಪ್ಟೆಂಬರ್ 2024ರಂದು ಕಲಬುರುಗಿಯ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 21 ಸೆಪ್ಟೆಂಬರ್ 2024ರಂದು ಬೆಳಗ್ಗೆ 9-30 ಗಂಟೆಗೆ ವಾದ್ಯ ಮೇಳಗಳು, ಗಮಕಿಗಳ ಹಾಡುಗಳು, ಪೂಜಾ ಕುಣಿತ ಮತ್ತು ಜಾನಪದ ಕಲಾ ಮೇಳದೊಂದಿಗೆ ಮೆರವಣಿಗೆ ನೆರವೇರಲಿದೆ. ಪೂಜ್ಯ ಮತೋಶ್ರೀ ಡಾ. ದಾಕ್ಷಾಯಣಿ ಎಸ್. ಅಪ್ಪ ಇವರ ದಿವ್ಯ ಸಾನಿಧ್ಯದಲ್ಲಿ ಮಾನ್ಯ ಲೋಕ ಸಭಾ ಸದಸ್ಯರಾದ ಶ್ರೀ ರಾಧಾಕೃಷ್ಣ ದೊಡ್ಡಮನಿ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಸ್ಮರಣ ಸಂಚಿಕೆ ಮತ್ತು ಪುಸ್ತಕ ಬಿಡುಗಡೆ ಈ ಸಮಾರಂಭ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಾಗುವುದು. ಮಧ್ಯಾಹ್ನ 1-30ರಿಂದ ಗಮಕ ಕಾರ್ಯಕ್ರಮ ನಡೆಯಲಿದ್ದು, ಗಮಕ 1ರಲ್ಲಿ ‘ಕುಮಾರವ್ಯಾಸ ಭಾರತ ಪಾಶುಪತಾಸ್ತ್ರ ಪ್ರದಾನ’ ಇದರ ವಾಚನ ವಿದ್ವಾನ್ ಗಣೇಶ ಉಡುಪ ಹಾಗೂ ವ್ಯಾಖ್ಯಾನ ವಿದ್ವಾನ್…

Read More