Subscribe to Updates
Get the latest creative news from FooBar about art, design and business.
Author: roovari
ಮಡಿಕೇರಿ: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಅಮ್ಮತ್ತಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರಕಾರಿ ಪ್ರೌಢಶಾಲೆ ಪಾಲಿಬೆಟ್ಟ ಇವರ ಸಂಯುಕ್ತ ಆಶ್ರಯದಲ್ಲಿ ದಿ. ಡಿ. ಜೆ ಪದ್ಮನಾಭ ಮತ್ತು ಬಿ. ಆರ್. ಸಾಯಿನಾಥ್ ದತ್ತಿ ಉಪನ್ಯಾಸ ಕಾರ್ಯಕ್ರಮವು 21 ಆಗಸ್ಟ್ 2024 ರಂದು ಪಾಲಿಬೆಟ್ಟ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ. ಪಿ. ಕೇಶವ ಕಾಮತ್ “ಕೊಡಗಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿ ಅದರ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಿದವರು ದಿವಂಗತ ಡಿ. ಜೆ. ಪದ್ಮನಾಭರು ಅವರು ಅಂದು ನೆಟ್ಟ ಗಿಡ ಇಂದು ಹೆಮ್ಮರವಾಗಿ ಬೆಳೆದು ನಾಲ್ಕು ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿ ಪ್ರತಿ ವರ್ಷವೂ ನೂರಾರು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಜಿಲ್ಲಾಧ್ಯಕ್ಷರಾಗಿ 23 ವರ್ಷಗಳ ಕಾಲ ಕನ್ನಡ ಸಾಹಿತ್ಯ, ಭಾಷೆ, ನಾಡು-ನುಡಿ, ಸಂಸ್ಕೃತಿ,…
ಮಡಿಕೇರಿ: ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ 4 ಅಕ್ಟೋಬರ್ 2024ರಿಂದ 12 ಅಕ್ಟೋಬರ್ 2024ರವರೆಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಆಯೋಜಿತ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರು ಹಾಗೂ ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕಲಾವಿದರು, ಕಲಾತಂಡಗಳು 2ರ ಸೆಪ್ಟೆಂಬರ್ 2024ರ ಒಳಗಾಗಿ madikeri- [email protected] ಇಲ್ಲಿಗೆ ಮಾಹಿತಿಯನ್ನು ಮೇಲ್ ಮಾಡಬೇಕು. ನಿಗದಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಶೀಲಿಸಲಾಗುವುದಿಲ್ಲ ಎಂದು ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್. ಟಿ. ತಿಳಿಸಿದ್ದಾರೆ. ನೃತ್ಯ ತಂಡದಲ್ಲಿ ಕನಿಷ್ಟ 4 ಮಂದಿ ಇರಬೇಕು. ಕಲಾವಿದರ ಆಯ್ಕೆಯ ಅಂತಿಮ ತೀರ್ಮಾನ ಸಮಿತಿಯದ್ದಾಗಿರುತ್ತದೆ. ಹೆಚ್ಚಿನ ಮಾಹಿತಿಗೆ 9449156215 ಅಥವಾ 9972538584 ಅನ್ನು ಸಂಪರ್ಕಿಸಬಹುದಾಗಿದೆ.
ಮುಂಬಯಿ: ಕರಾವಳಿ ಕರ್ನಾಟಕದ ಹೆಸರಾಂತ ಸಾಹಿತಿ, ಕವಿ-ಲೇಖಕ ಮತ್ತು ಯಕ್ಷಗಾನ ವಿದ್ವಾಂಸರಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಇವರ ನೂತನ ಕೃತಿಗಳಾದ ‘ಸೃಷ್ಟಿಸಿರಿಯಲ್ಲಿ ಪುಷ್ಪವೃಷ್ಟಿ’ ಮತ್ತು ‘ಸೀಯನ’ ಇದರ ಲೋಕಾರ್ಪಣಾ ಸಮಾರಂಭವು 24 ಆಗಸ್ಟ್ 2024ರ ಶನಿವಾರದಂದು ಮುಂಬೈ ವಿದ್ಯಾ ವಿಹಾರ್ ಪೂರ್ವದ ಶ್ರೀ ಅಂಬಿಕಾ ಆದಿನಾಥೇಶ್ವರ ಗಣಪತಿ ಮಂದಿರದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಅಂದು ಸಂಜೆ ಘಂಟೆ 4.30ಕ್ಕೆ ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಇವರ ನೇತೃತ್ವದ ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ಪ್ರಸಕ್ತ ವರ್ಷ ನಡೆಯಲಿರುವ ಸರಣಿ ತಾಳಮದ್ದಳೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಜೊತೆಗೆ ಈ ಕಾರ್ಯಕ್ರಮ ನೆರವೇರಲಿದೆ. ‘ಸೃಷ್ಟಿಸಿರಿಯಲ್ಲಿ ಪುಷ್ಪವೃಷ್ಟಿ’ ಕನ್ನಡ ಕವನ ಸಂಕಲನ: ಕವಿ ಕುಕ್ಕುವಳ್ಳಿಯವರು ಬೇರೆ ಬೇರೆ ಸಂದರ್ಭಗಳಲ್ಲಿ ರಚಿಸಿದ ವಿವಿಧ ಕನ್ನಡ ಕವನಗಳು ಕಾವ್ಯ ಸಿರಿ, ಭಾವ ಸಿರಿ, ಭಕ್ತಿ ಸಿರಿ ಎಂಬ ಮೂರು ವಿಭಾಗಗಳಲ್ಲಿ ಪ್ರಕಟವಾಗಿರುವ ‘ಸೃಷ್ಟಿ ಸಿರಿಯಲ್ಲಿ ಪುಷ್ಪವೃಷ್ಠಿ’ : ಭಾವ – ಅನುಭಾವ ಗೀತೆಗಳ ಗುಚ್ಛವನ್ನು ಅಂಬಿಕಾ ಮಂದಿರದ ಧರ್ಮದರ್ಶಿ ವೇ.…
ಬೆಂಗಳೂರು: ಬೆಂಗಳೂರಿನಲ್ಲಿ 18 ಆಗಸ್ಟ್ 2024ರಂದು ನಡೆದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಉಡುಪಿ ಜಿಲ್ಲೆಯ ಶಿಕ್ಷಕರ ತಂಡ ಶಶಿರಾಜ್ ಕಾವೂರು ರಚಿಸಿದ ‘ಬರ್ಬರೀಕ’ ನಾಟಕವನ್ನು ಪ್ರದರ್ಶಿಸಿ ಪ್ರಥಮ ಸ್ಥಾನದೊಂದಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ. ಎರಡು ವರ್ಷದ ಹಿಂದೆ ರಾಷ್ಟ್ರ ಮಟ್ಟದಲ್ಲಿ ತೃತೀಯ ಸ್ಥಾನ ಗಳಿಸಿದ್ದ ಈ ನಾಟಕ ಈ ಬಾರಿ ಹೊಸ ವಿನ್ಯಾಸ ಮತ್ತು ವಿಭಿನ್ನ ಸಂಯೋಜನೆಯೊಂದಿಗೆ ಮತ್ತೆ ಸ್ಪರ್ಧೆಯಲ್ಲಿ ಪ್ರದರ್ಶನಗೊಂಡಿತು. ಬಿ. ಎಸ್. ರಾಮ್ ಶೆಟ್ಟಿ ಇವರ ನಿರ್ದೇಶನದಲ್ಲಿ ಪ್ರದರ್ಶನಗೊಂಡ ನಾಟಕಕ್ಕೆ ವಿಜಯ್ ಕುಮಾರ್ ಕುಂಭಾಶಿಯವರ ಗೀತ ಸಾಹಿತ್ಯ, ದಿವಾಕರ ಕಟೀಲ್ ಇವರ ಸಂಗೀತ ಸಂಯೋಜನೆ, ರಮೇಶ್ ಕಪಿಲೇಶ್ವರ ಇವರ ರಂಗಸಜ್ಜಿಕೆ ಮತ್ತು ವೇಷಭೂಷಣವಿತ್ತು. ರವಿ ಎಸ್. ಪೂಜಾರಿ ಬೈಕಾಡಿ ಇವರ ನೇತೃತ್ವದ ಶಿಕ್ಷಕರ ತಂಡದಲ್ಲಿ ಹರೀಶ್ ಪೂಜಾರಿ ಎಸ್., ನಾಗರತ್ನ ಗುಂಡ್ಮಿ, ವನಿತಾ ಶೆಟ್ಟಿ ಚೇರ್ಕಾಡಿ, ದಿನೇಶ್ ಶೆಟ್ಟಿ ಕಾರ್ಕಳ, ಲಕ್ಷ್ಮೀನಾರಾಯಣ ಪೈ ಕನ್ನಾರು, ಸತೀಶ್ ಬೇಳಂಜೆ, ಸುರೇಂದ್ರ ಕೋಟ,…
ಮಂಗಳೂರು : ಅಖಿಲ ಭಾರತ ತುಳು ಒಕ್ಕೂಟ (ರಿ.) ಇದರ ವತಿಯಿಂದ ‘ತುಳು ಜಾನಪದ ಉಚ್ಚಯ 2024’ ಕಾರ್ಯಕ್ರಮವನ್ನು ದಿನಾಂಕ 24 ಆಗಸ್ಟ್ 2024ರಂದು ಬೆಳಗ್ಗೆ ಗಂಟೆ 9-30ಕ್ಕೆ ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ. ಬೆಳಗ್ಗೆ 8.30ಕ್ಕೆ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನಿಂದ ಪುರಭವನದವರೆಗೆ ನಡೆಯುವ ತುಳುವೆರೆ ದಿಬ್ಬಣ ಮೆರವಣಿಗೆಯನ್ನು ಶಾಸಕ ಡಿ. ವೇದವ್ಯಾಸ ಕಾಮತ್ ಇವರು ಉದ್ಘಾಟಿಸಲಿದ್ದಾರೆ. ದಿವಾಕರ ಶೆಟ್ಟಿ ಸಾಂಗ್ಲಿ, ನಗ್ರಿಗುತ್ತು ರೋಹಿತ್ ಶೆಟ್ಟಿ ಕರ್ನೂರು ಮೋಹನ್ ರೈ, ಅಶೋಕ್ ಪಕ್ಕಳ ಮುಂಬಯಿ ಭಾಗವಹಿಸಲಿದ್ದಾರೆ. ಕಂಬಳ ಕೂಟಕ್ಕೆ ಹೆಸರುವಾಸಿಯಾದ ನಂದಳಿಕೆ ಶ್ರೀಕಾಂತ ಭಟ್ ಅವರ ಗಿಡ್ಡೆರು ‘ನಂದಳಿಕೆ ಪಾಂಡು’ವಿಗೆ ಸನ್ಮಾನ ನಡೆಯಲಿದೆ. ಬೆಳಗ್ಗೆ 9-30ಕ್ಕೆ ನಡೆಯಲಿರುವ ನಮ್ಮ ತುಳುನಾಡ ಕಲಾ ಪಂಥವನ್ನು ಡಾ. ಎ. ಸದಾನಂದ ಶೆಟ್ಟಿ ಉದ್ಘಾಟಿಸಲಿದ್ದಾರೆ. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಪ್ರೊ. ಪಿ.ಎಲ್. ಧರ್ಮ, ಬಿ. ರಮಾನಾಥ ರೈ, ಐವನ್ ಡಿಸೋಜ, ರಾಜೇಶ್ ಖನ್ನಾ, ಜಾನಕಿ ಬ್ರಹ್ಮಾವರ್ ಉಪಸ್ಥಿತರಿರಲಿದ್ದಾರೆ. ನಾನಾ ಅಕಾಡೆಮಿಗಳ…
ನೀರ್ಚಾಲು : ಶಂಕರ ಶರ್ಮ ಕುಳಮರ್ವ ಇವರು ಭಾಮಿನಿ ಷಟ್ಪದಿಯಲ್ಲಿ ರಚಿಸಿರುವ ‘ಉತ್ತರ ಕಾಂಡ ಕಾವ್ಯಧಾರಾ’ ಕೃತಿಯ ಲೋಕಾರ್ಪಣಾ ಸಮಾರಂಭವು ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಉನ್ನತ ಪ್ರೌಢಶಾಲಾ ಸಭಾಂಗಣದಲ್ಲಿ ದಿನಾಂಕ 18 ಆಗಸ್ಟ್ 2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಖ್ಯಾತ ವಿದ್ವಾಂಸ ವಿಶ್ರಾಂತ ಪ್ರಾಂಶುಪಾಲ ಡಾ. ಪಾದೇಕಲ್ಲು ವಿಷ್ಣು ಭಟ್ ಇವರು ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡುತ್ತಾ “ರಾಮಾಯಣದ ಉತ್ತರ ಕಾಂಡದ ಕಥೆಯನ್ನು ಭಾಮಿನಿ ಷಟ್ಪದಿಯಲ್ಲಿ ಶಂಕರ ಶರ್ಮ ಕುಳಮರ್ವರು ಸೊಗಸಾಗಿ ನಿರೂಪಿಸಿದ್ದಾರೆ. ಇದು ಹೊಸಗನ್ನಡ ಕಾಲಘಟ್ಟದ ಅಪೂರ್ವ ಕೃತಿ” ಎಂದು ಹೇಳಿದರು. ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಂಶುಪಾಲ ಬೇ.ಸಿ. ಗೋಪಾಲಕೃಷ್ಣ ಭಟ್ ಕೃತಿಯ ಅವಲೋಕನ ಮಾಡಿ “ಶಂಕರ ಶರ್ಮರು ರಚಿಸಿದ ಈ ಮಹಾಕಾವ್ಯದಲ್ಲಿ ಅದರದ್ದೇ ಆದ ವಿಶೇಷ ಗುಣಗಳಿವೆ. ಸುಂದರ, ಸುಲಲಿತ, ಸುಮಧುರವಾಗಿದೆ” ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್…
ಕಾರ್ಕಳ : ಕನ್ನಡ ಜಾನಪದ ಪರಿಷತ್ ಬೆಂಗಳೂರು ಮತ್ತು ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲೆ ಘಟಕ ಇವರ ಕಾರ್ಕಳ ತಾಲೂಕು ಘಟಕದ ಪದಪ್ರದಾನ ಕಾರ್ಯಕ್ರಮ ಹಾಗೂ ‘ವಿಶ್ವ ಜಾನಪದ ದಿನಾಚರಣೆ’ಯನ್ನು ದಿನಾಂಕ 24 ಆಗಸ್ಟ್ 2024ರಂದು ಮಧ್ಯಾಹ್ನ 4-00 ಗಂಟೆಗೆ ಕಾರ್ಕಳದ ಬಂಡಿಮಠದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಕಂಬಳ ಸಮಿತಿಯ ಜೊತೆ ಕಾರ್ಯದರ್ಶಿಯಾದ ಶ್ರೀ ರವೀಂದ್ರ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಕನ್ನಡ ಜಾನಪದ ಪರಿಷತ್ ಇದರ ರಾಜ್ಯಾಧ್ಯಕ್ಷರಾದ ಡಾ. ಜಾನಪದ ಎಸ್. ಬಾಲಾಜಿ ಇವರು ಈ ಕಾರ್ಯಕ್ರಮವನು ಉದ್ಘಾಟನೆ ಮಾಡಲಿರುವರು. ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ತಾಳಮದ್ದಳೆ ಅರ್ಥಧಾರಿಗಳಾದ ಶ್ರೀ ಕೆ. ವಸಂತ್ ಇವರನ್ನು ಸನ್ಮಾನಿಸಲಾಗುವುದು.
ಕಾರ್ಕಳ : ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ ಕಾರ್ಕಳ ಇದರ ತಿಂಗಳ ಕಾರ್ಯಕ್ರಮದಲ್ಲಿ ‘ವಿಶೇಷ ಉಪನ್ಯಾಸ’ವು ದಿನಾಂಕ 21 ಆಗಸ್ಟ್ 2024ರಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಎಸ್.ವಿ.ಟಿ. ಪದವಿಪೂರ್ವ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕರಾದ ಶ್ರೀ ರಾಮ ಭಟ್ ಇವರು ‘ದೈನಂದಿನ ಬದುಕಿನಲ್ಲಿ ಹಾಸ್ಯ’ ಎಂಬ ವಿಷಯದ ಕುರಿತಾಗಿ ವಿಶೇಷ ಉಪನ್ಯಾಸವನ್ನು ನೀಡಿ “ದೈನಂದಿನ ಬದುಕಿನಲ್ಲಿ ಹಾಸ್ಯ ಜೀವನೋತ್ಸಾಹವನ್ನು ಹೆಚ್ಚಿಸುತ್ತದೆ. ಬದುಕಿನ ಭಾರ ಕಡಿಮೆಯಾಗಬೇಕಾದರೆ ನಮ್ಮ ಜೀವನದ ಜೇಬಿನೊಳಗೆ ಹಾಸ್ಯ ನಿತ್ಯ ತುಂಬಿರಬೇಕು. ಜೀವನದ ಪ್ರತಿಕ್ಷಣವನ್ನು ಸಂಭ್ರಮಿಸುವುದರ ಮುಖೇನ ಬದುಕನ್ನು ಹಸನುಗೊಳಿಸಬಹುದು” ಎಂದು ಅಭಿಪ್ರಾಯಪಟ್ಟರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಮಿತ್ರಪ್ರಭಾ ಹೆಗ್ಡೆಯವರು ಸ್ವಾಗತಿಸಿದರು. ಅನುಪಮಾ ಚಿಪ್ಲೂಣ್ಕರ್ ಪ್ರಾರ್ಥಿಸಿ, ಡಾ. ಸುಮತಿ ಪಿ. ಉಪನ್ಯಾಸಕಾರರನ್ನು ಪರಿಚಯಿಸಿದ ಕಾರ್ಯಕ್ರಮವನ್ನು ಕಾರ್ಯದರ್ಶಿ ಮಾಲತಿ ಜಿ. ಪೈಯವರು ನಿರ್ವಹಿಸಿದರು. ಬಿ.ವಿ. ಸುಲೋಚನಾ ಧನ್ಯವಾದವನ್ನಿತ್ತರು.…
ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣ ಮಠ ಉಡುಪಿ, ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು, ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದಂಗಳವರ ಶುಭಾಶೀರ್ವಾದದೊಂದಿಗೆ ರಾಗ ಧನ ಉಡುಪಿ ಸಂಸ್ಥೆಯು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಪ್ರಸ್ತುತಪಡಿಸುವ ‘ರಾಗರತ್ನ ಮಾಲಿಕೆ- 27’ ಸಂಗೀತ ಕಾರ್ಯಕ್ರಮವು ದಿನಾಂಕ 31 ಆಗಸ್ಟ್ 2024 ಶನಿವಾರ ಸಂಜೆ 7-00 ಗಂಟೆಗೆ ಉಡುಪಿಯ ರಾಜಾಂಗಣದಲ್ಲಿ ನಡೆಯಲಿದೆ. ಬೆಂಗಳೂರಿನ ಶ್ರೀ ಈಶ್ವರ ಅಯ್ಯರ್ ಇವರ ಹಾಡುಗಾರಿಕೆಗೆ ವಯೊಲಿನ್ ನಲ್ಲಿ ಕುಮಾರಿ ಪೃಥ್ವಿ ಭಾಸ್ಕರ್ ಹಾಗೂ ಮೃದಂಗದಲ್ಲಿ ಪವನ್ ಮಾಧವ್ ಮಾಸೂರ್ ಸಹಕರಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ: ಉಮಾಶಂಕರಿ ಕಾರ್ಯದರ್ಶಿ, ರಾಗ ಧನ ಉಡುಪಿ (ರಿ). 9964140601.
ಮೈಸೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ‘ಸುವರ್ಣ ಕರ್ನಾಟಕ : ನಾಟಕ 50 ರಾಷ್ಟ್ರೀಯ ವಿಚಾರ ಸಂಕಿರಣವನ್ನು ದಿನಾಂಕ 24 ಆಗಸ್ಟ್ 2024ರಂದು ಬೆಳಗ್ಗೆ 10-00 ಗಂಟೆಗೆ ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷರಾದ ಶ್ರೀ ಕೆ.ವಿ. ನಾಗರಾಜ ಮೂರ್ತಿ ಇದರ ಅಧ್ಯಕ್ಷತೆಯಲ್ಲಿ ಮಾನ್ಯ ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹಾದೇವಪ್ಪ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿರುವರು. ಬೆಳಗ್ಗೆ 11-00 ಗಂಟೆಗೆ ನಡೆಯಲಿರುವ ಗೋಷ್ಠಿ 1ರಲ್ಲಿ ರಂಗ ನಿರ್ದೇಶಕರಾದ ಡಾ. ಸಿ. ಬಸವಲಿಂಗಯ್ಯ ಇವರು ಅಧ್ಯಕ್ಷತೆ ವಹಿಸಲಿದ್ದು, ‘ಚಳಿವಳಿಯ ರೂಪವಾಗಿ ರಂಗಭೂಮಿ’ ಎಂಬ ವಿಷಯದ ಬಗ್ಗೆ ಮೈಸೂರಿನ ಡಾ. ಎಸ್.ಆರ್. ರಮೇಶ್, ‘ಆಧುನಿಕ ರಂಗಭೂಮಿಯ ಅಭಿನಯ…