Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ‘ಕಲ್ಲಚ್ಚು ಪ್ರಕಾಶನ’ ಇದರ ವತಿಯಿಂದ ಮೋಹನ್ ದಾಸ್ ಕೆ.ಎಸ್. ಇವರ ‘ಚಿದಂಬರ’ ಕವನ ಸಂಕಲನ ಬಿಡುಗಡೆ ಮತ್ತು 2024ರ ಕಲ್ಲಚ್ಚು ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 24 ಆಗಸ್ಟ್ 2024ರಂದು ಬೆಳಗ್ಗೆ 11-00 ಗಂಟೆಗೆ ಬೆಂಗಳೂರಿನ ಕುಮಾರಕೃಪ ರಸ್ತೆ, ಕರ್ನಾಟಕ ಚಿತ್ರಕಲಾ ಪರಿಷತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಇದರ ಅಧ್ಯಕ್ಷರಾದ ಬಿ. ಎಲ್. ಶಂಕರ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಕನ್ನಡ ವಿಶ್ವ ವಿದ್ಯಾಲಯ ಹಂಪಿ ಇದರ ಉಪಕುಲಪತಿಗಳಾದ ಪ್ರೊ. ಡಿ.ವಿ. ಪರಮಶಿವಮೂರ್ತಿ ಇವರು ಕೃತಿ ಲೋಕಾರ್ಪಣೆಗೊಳಿಸಲಿರುವರು. ಲೇಖಕರು ಮತ್ತು ದಿ ಹಿಂದು ಪತ್ರಿಕೆಯ ಹಿರಿಯ ಉಪ ಸಂಪಾದಕರಾದ ಡಾ. ನಾಗೇಶ್ ಪ್ರಭು ಇವರಿಗೆ ‘ಕಲ್ಲಚ್ಚು ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಕೊಟ್ಟಾಯಂನ ಮನೋರಮ ಸ್ಕೂಲ್ ಆಫ್ ಕಮ್ಯೂನಿಕೇಷನ್ ಅಶ್ವಿನ್ ಬಿ.ಎಂ. ಇವರು ಕವನ ವಾಚನ ಮಾಡಲಿದ್ದಾರೆ.
ಬೆಂಗಳೂರು : ನಾಟ್ಯ ಮಯೂರಿ ನೃತ್ಯ ಟ್ರಸ್ಟ್ (ರಿ.) ಟೆಸ್ಟ್ ವಿರಾಜಪೇಟೆ ಹಾಗೂ ಡಿವೈನ್ ಟೆಂಪಲ್ ಪೌಂಡೇಶನ್ (ರಿ.) ಬೆಂಗಳೂರು ಇದರ ಸಹಯೋಗದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದ ನಯನ ಸಭಾಂಗಣದಲ್ಲಿ ದಿನಾಂಕ 18 ಆಗಸ್ಟ್ 2024ರಂದು ನಡೆದ ರಾಷ್ಟ್ರ ಮಟ್ಟದ ನೃತ್ಯ ಪ್ರದರ್ಶನ ಕಾರ್ಯಕ್ರಮದಲ್ಲಿ ಸಾಹಿತ್ಯ ಹಾಗೂ ಪತ್ರಿಕೋದ್ಯಮದ ಸಾಧನೆಗಾಗಿ ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಇವರಿಗೆ ಕೆಂಗಲ್ ಹನುಮಂತಯ್ಯ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಡಾ. ಕೆಂಚನೂರು ಶಂಕರ್, ಸುಧಾಕರ ಬನ್ನಂಜೆ, ಶಶಿಧರ ಕೋಟೆ, ಡಾ. ಎಂ.ಪಿ. ಮೋಹನ್, ಪ್ರೇಮಾಂಜಲಿ ಆಚಾರ್ಯ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಮಳವಳ್ಳಿ : ರಂಗಬಂಡಿ ಇದರ ವತಿಯಿಂದ ‘ಮಳವಳ್ಳಿ ಸುಂದರಮ್ಮ ರಂಗೋತ್ಸವ 2024-25’ ಕಾರ್ಯಕ್ರಮಗಳನ್ನು ದಿನಾಂಕ 21 ಆಗಸ್ಟ್ 2024ರಿಂದ 25 ಆಗಸ್ಟ್ 2024ರವೆರೆಗೆ ಮಳವಳ್ಳಿಯ ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟಾಂಡ್ ಹಿಂಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ. ದಿನಾಂಕ 21 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ರಾಜ್ಯ ಪ್ರಶಸ್ತಿ ವಿಜೇತ ವೃತ್ತಿ ರಂಗಭೂಮಿಯ ಖ್ಯಾತ ರಂಗ ನಿರ್ದೇಶಕರಾದ ಶ್ರೀ ವೈ.ಎಂ. ಪುಟ್ಟಣ್ಣಯ್ಯ ಮತ್ತು ತಂಡದವರಿಂದ ಮಳವಳ್ಳಿ ಸುಂದರಮ್ಮ ನಟಿಸಿದ್ದ ನಾಟಕಗಳ ವಿಶೇಷ ರಂಗಸಂಗೀತ ಕಾರ್ಯಕ್ರಮ, ದಿನಾಂಕ 22 ಆಗಸ್ಟ್ 2024ರಂದು ಸಂಜೆ 7-00 ಗಂಟೆಗೆ ಮೈಮ್ ರಮೇಶ್ ಇವರ ನೃತ್ಯ ಸಂಯೋಜನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೈಸೂರಿನ ಜಿ.ಪಿ.ಐ.ಇ.ಆರ್. ರಂಗ ತಂಡ ಪ್ರಸ್ತುತ ಪಡಿಸುವ ನಾಟಕ ‘ಮಂಟೇಸ್ವಾಮಿ ಕಥಾ ಪ್ರಸಂಗ’, ದಿನಾಂಕ 23 ಆಗಸ್ಟ್ 2024ರಂದು ಸಂಜೆ 7-00 ಗಂಟೆಗೆ ಸುಮತಿ ಕೆ.ಆರ್. ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮಂಡ್ಯದ ವಿಮಲರಣದೀವೆ ಮಹಿಳಾ ನಾಟಕ ತಂಡದವರಿಂದ ‘ನ್ಯಾಯ ಕೇಳಿದ ನಿಂಗವ್ವ’ ಎಂಬ…
ಮಂಗಳೂರು : ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘವನ್ನು ಮುನ್ನಡೆಸಿದ್ದ ಕೀರ್ತಿಶೇಷ ನಾಗೇಶ ಪ್ರಭುಗಳ ಸಂಸ್ಮರಣೆ ಕಾರ್ಯಕ್ರಮವು ಶ್ರೀ ಮಹಾಮಾಯಿ ದೇವಸ್ಥಾನದ ವಠಾರದಲ್ಲಿ ದಿನಾಂಕ 18 ಆಗಸ್ಟ್ 2024ರಂದು ಜರಗಿತು. ಈ ಕಾರ್ಯಕ್ರಮದಲ್ಲಿ ಅಶೀರ್ವಚನವನ್ನು ನೀಡುತ್ತ ಇಸ್ಕಾನ್ ಸಂಸ್ಥೆಯ ಕಾರ್ಯದರ್ಶಿ ಸನಂದನ ದಾಸ ಪ್ರಭು “ಸಂತೃಪ್ತಿಯೇ ಸಾರ್ಥಕ ಜೀವನಕ್ಕೆ ದಾರಿ. ಇದ್ದುದರಲ್ಲೇ ತೃಪ್ತಿ ಪಡುತ್ತಾ ಜೀವನವನ್ನು ನಡೆಸಿದವರು ನಾಗೇಶ್ ಪ್ರಭುಗಳು. ತತ್ವ ವಿಚಾರದ ಆಳವಾದ ಜ್ಞಾನ ಹೊಂದಿದ್ದು ಮಾತ್ರವಲ್ಲದೆ ತನ್ನ ವಿಚಾರಗಳಲ್ಲಿ ತಪ್ಪುಗಳಿದ್ದರೆ ಅವುಗಳನ್ನು ಪ್ರಾಂಜಲವಾಗಿ ಒಪ್ಪುವ ಮನೋಭಾವ ಅವರಲ್ಲಿ ಇತ್ತು” ಎಂದು ಹೇಳಿದರು. ಶ್ರೀ ಮಹಾಗಣಪತಿ ದೇವಸ್ಥಾನ ಉರ್ವಸ್ಟೋರ್ ಇದರ ಕಾರ್ಯದರ್ಶಿ ಶ್ರೀಧರ ಮಣಿಯಾಣಿಯವರು ಈ ಯಕ್ಷಗಾನ ಸಂಘದ ಸದಸ್ಯರ ಶಿಸ್ತಿನ ಬಗ್ಗೆ ಪ್ರಶಂಸೆಯ ಮಾತನ್ನಾಡಿದರು. ಇನ್ನೋರ್ವ ಅತಿಥಿ ಜಿ.ಕೆ. ಭಟ್ ಸೇರಾಜೆ ಮಾತನಾಡಿ “ನಾಗೇಶ ಪ್ರಭುಗಳು ಯಕ್ಷಗಾನ ಭಾಗವತ, ಅರ್ಥಧಾರಿ, ಹಿಮ್ಮೇಳ ವಾದಕ, ಸಂಘಟಕ ಮಾತ್ರವಲ್ಲದೆ ಓರ್ವ ಪೋಷಕ ಹಾಗೂ ಉತ್ತಮ ವಿಮರ್ಶಕನೂ ಆಗಿದ್ದರು” ಎಂದರು. ಶ್ರೀ ಮಹಾಗಣಪತಿ…
ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ‘ತಿಂಗಳ ನಾಟಕ ಸಂಭ್ರಮ’ವು ದಿನಾಂಕ 22-08-2024ರಂದು ಸಂಜೆ 6.30ಕ್ಕೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಂಗತಜ್ಞೆ ಎನ್. ಮಂಗಳಾ ಇವರು ತಿಂಗಳ ಅತಿಥಿಯಾಗಿ ಭಾಗವಹಿಸಲಿರುವರು. ಮಂಡ್ಯ ರಮೇಶ್ ನಿರ್ದೇಶನದಲ್ಲಿ ‘ನಟನ’ ಮೈಸೂರು ಅಭಿನಯಿಸುವ ‘ಸ್ಥಾವರವೂ ಜಂಗಮ’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕದ ಮೂಲ ಕಥೆ ಮಂಜುನಾಥ ಲತಾ, ರಂಗರೂಪ ನಟನ ಮಂಜು ಇವರದ್ದು, ಸಂಗೀತ ಸಾಂಗತ್ಯ ದಿಶಾ ರಮೇಶ್ ನೀಡಿದ್ದು, ವಿನ್ಯಾಸ ಮೇಘ ಸಮೀರ ಇವರು ಮಾಡಿರುತ್ತಾರೆ.
ಕುಂದಾಪುರ: ಕುಂದಾಪುರ ಕಲಾಕ್ಷೇತ್ರದ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-52’ ಕಾರ್ಯಕ್ರಮದ ಅಂಗವಾಗಿ ತೆಕ್ಕಟ್ಟೆ ಕೊಮೆಯ ಯಶಸ್ವಿ ಕಲಾವೃಂದದ ಚಿಣ್ಣರ ತಾಳಮದ್ದಳೆ ಕಾರ್ಯಕ್ರಮವು 18 ಆಗಸ್ಟ್ 2024ರಂದು ಕುಂದಾಪುರದ ಕಲಾಕ್ಷೇತ್ರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾನ್ಯ ಎ. ಎಸ್. ಎನ್. ಹೆಬ್ಬಾರ್ ಇವರನ್ನು ಅಭಿನಂದಿಸಿ ಮಾತನ್ನಾಡಿದ ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಮಾರ್ “ಕಲೆಯಲ್ಲಿ ಸಾತ್ವಿಕವಾದ ಹುಚ್ಚು ಇದ್ದರೆ ಸಂಸ್ಕಾರಯುತ ಸಮಾಜವಾಗಿ ಬೆಳೆಯುವುದಕ್ಕೆ ಸಾಧ್ಯ. ಕಲೆಯನ್ನು ನಾವು ನಮ್ಮೊಳಗೆ ರೂಢಿಸಿಕೊಳ್ಳಬೇಕು. ಮಕ್ಕಳು ಕಲೆಯಲ್ಲಿ ಆಸಕ್ತಿಯನ್ನು ಹೊಂದಲೇ ಬೇಕು. ಆಗ ಮಾತ್ರ ಮಕ್ಕಳು ನಮ್ಮೊಂದಿಗೆ ಸಂಸ್ಕಾರವಂತರಾಗಿ ಉಳಿಯುವುದಕ್ಕೆ ಸಾಧ್ಯ. ಮಾತೇ ಆಡದ ಮಕ್ಕಳೂ ಕಲೆಯಲ್ಲಿ ತೊಡಗಿಸಿಕೊಂಡರೆ ರಂಗವೇರಿ ನಿರರ್ಗಳವಾಗಿ ಮಾತಾಡುವುದು ಸಾಧ್ಯವಾಗುತ್ತದೆ. ಪೋಷಕರು ಈ ನಿಟ್ಟಿನಲ್ಲಿ ಮಕ್ಕಳಿಗೆ ಪ್ರೋತ್ಸಾಹವನ್ನು ಕೊಡಬೇಕು. ಆಗ ಸುಂದರವಾದ ಸಮಾಜ ನಿರ್ಮಾಣವಾಗುವುದಕ್ಕೆ ಸಾಧ್ಯ.” ಎಂದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಎ. ಎಸ್. ಎನ್ ಹೆಬ್ಬಾರ್ “ಯಶಸ್ವೀ ಕಲಾವೃಂದದ ಬೆಳ್ಳಿ ಹಬ್ಬದಲ್ಲಿ 84ರ ಪ್ರಾಯದಲ್ಲಿ ವೇಷ ತೊಟ್ಟು ರಂಗವೇರಿ ಕುಣಿಯುವ ಅವಕಾಶ ಲಭ್ಯವಾದದ್ದು ಅವಿಸ್ಮರಣೀಯ.…
ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ‘ಕೊಡವ ಕಥೆ ಜೊಪ್ಪೆ’ಯನ್ನು ಹೊರತರಲು ಸೂಕ್ತ ಕತೆಗಳನ್ನು ಆಹ್ವಾನಿಸಿದೆ. ಸುಮಾರು 25ರಿಂದ 30ರಷ್ಟು ಕತೆಗಳನ್ನು ಒಂದೇ ಪುಸ್ತಕದಲ್ಲಿ ಪ್ರಕಟಿಸಲಾಗುವುದು. ಕತೆಗಳು ಎ4 ಅಳತೆಯ ಕಾಗದದಲ್ಲಿ ಸ್ಪುಟವಾಗಿ, 5-6 ಪುಟಗಳನ್ನು ಮೀರದಂತಿರಬೇಕು. ಕಥಾವಸ್ತು ಕತೆಗಾರರ ಕಲ್ಪನೆಗೆ ಬಿಟ್ಟಿದ್ದು. ಕತೆಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ‘ಯಾರದ್ದು ತೇಜೋವಧೆಯಾಗಲಿ ಅಥವಾ ಜಾತಿ-ಧರ್ಮಗಳ ಭಾವನೆಗಳಿಗೆ ಘಾಸಿ ಉಂಟು ಮಾಡುವಂತಿರಬಾರದು. ಸಾಧಕ-ಭಾದಕಗಳಿಗೆ ಕತೆಗಾರರೇ ಜವಾಬ್ದಾರರು. ಕತೆಗಳು ಸಾಧ್ಯವಾದಷ್ಟು ಕೊಡವ ಸಂಸ್ಕೃತಿ-ಪದ್ಧತಿ, ಮೂಲತನಕ್ಕೆ ಒತ್ತುಕೊಡುವಂತಿದ್ದು ಸಾರ್ವಕಾಲಿಕವಾಗಿರಲಿ. ಪ್ರಕಟಿತ ಕಥೆಗಳಿಗೆ ಅಕಾಡೆಮಿ ಗೊತ್ತು ಪಡಿಸಿರುವಂತೆ ಸಂಭಾವನೆ ನೀಡಲಾಗುವುದು. ಕಥೆಗಾರರು ತಮ್ಮ ಸ್ವಪರಿಚಯವನ್ನು 4-5 ವಾಕ್ಯಗಳಿಗೆ ವೀರದಂತೆ ಬರೆದು ಕಳುಹಿಸಬೇಕು. ಪ್ರತಿಯೊಬ್ಬ ಕಥೆಗಾರರು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಲಗತ್ತಿಸಬೇಕು. ಕತೆಗಳನ್ನು ಕಳುಹಿಸಿಕೊಡಲು 20 ಸೆಪ್ಟೆಂಬರ್ 2024ಕೊನೆ ದಿನವಾಗಿದ್ದು, ಒಂದಕ್ಕಿಂತ ಹೆಚ್ಚಿನ ಕತೆಗಳನ್ನು ಕಳುಹಿಸುವಂತಿಲ್ಲ. ‘ಕೊಡವ ಕಥೆ ಜೊಪ್ಪೆಗೆ’ ನಿಮ್ಮ ಕಥೆಗಳನ್ನು ಅಧ್ಯಕ್ಷರು/ ರಿಜಿಸ್ಟ್ರಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಜೂನಿಯರ್…
ಮೂಲ್ಕಿ: ಸಾಹಿತ್ಯ, ಲಲಿತಕಲೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸಿದ ಗಣ್ಯರಿಗೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ವತಿಯಿದ ನೀಡಲಾಗುವ ಪ್ರತಿಷ್ಠಿತ ‘ದಾಸೋಹಿ’ ಪ್ರಶಸ್ತಿಗೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಕೊಡುಗೈ ದಾನಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಇದರ ಮಾಜಿ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕ. ಚು. ಸಾ. ಪ. ಇದರ ಸಂಚಾಲಕರಾದ ಕೃಷ್ಣಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ. 5 ಸೆಪ್ಟೆಂಬರ್ 2024ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಜರುಗಲಿರುವ ಕ. ಚು. ಸಾ. ಪ. ರಾಜ್ಯ ಶಿಕ್ಷಕ ಸಾಹಿತಿಗಳ ಏಳನೆಯ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಎಂದು ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡ ಶೆಟ್ರು ತಿಳಿಸಿದ್ದಾರೆ.
ಗ್ರಾಮೀಣ ಪ್ರತಿಭೆಯಾಗಿ ಉತ್ತಮ ಹೆಸರು ಗಳಿಸಿರುವ ಅಂತರರಾಷ್ಟ್ರೀಯ ನೃತ್ಯಪಟು-ಗುರು ವಿದ್ವಾನ್ ಕೋಲಾರ ರಮೇಶ್, ದೇಶ-ವಿದೇಶಗಳ ಪ್ರತಿಷ್ಟಿತ ವೇದಿಕೆಗಳಲ್ಲಿ, ಅಸಂಖ್ಯಾತ ನೃತ್ಯಪ್ರದರ್ಶನಗಳನ್ನು ಮತ್ತು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಮ್ಮುಖ ಶಿಷ್ಯರ ನೃತ್ಯಪ್ರದರ್ಶನ ಪ್ರಸ್ತುತಪಡಿಸಿ ಪ್ರಶಂಸೆ ಪಡೆದವರು ಎಂಬುದು ವಿಶೇಷ ಸಂಗತಿ. ಹೊಸಕೋಟೆಯಲ್ಲಿ ನೃತ್ಯಶಾಲೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ರಮೇಶ ಅವರ ಸಮರ್ಥ ಮಾರ್ಗದರ್ಶನದಲ್ಲಿ ತಯಾರಾದ ನೃತ್ಯಕುಸುಮಗಳು ಅಸಂಖ್ಯಾತ ಮತ್ತು ನೃತ್ಯನೈಪುಣ್ಯ ಪಡೆದು ರಂಗಪ್ರವೇಶ ಮಾಡಿದ ಪ್ರತಿಭೆಗಳು ಅನೇಕಾನೇಕ. ಇದು ಇವರ ನೇತೃತ್ವದ ‘ಶ್ರೀ ನವಚೇತನ ನೃತ್ಯಕಲಾ ಅಕಾಡೆಮಿ’ಯ 48 ನೇ ರಂಗಪ್ರವೇಶವಾಗಿದೆ. ಇವರ ನುರಿತ ಗರಡಿಯಲ್ಲಿ ರೂಹುತಳೆದ ನೃತ್ಯಶಿಲ್ಪ ಕು. ಖುಷಿ ದೇವರಾಜ್ ಶ್ರೀಮತಿ ಸುಜಾತ ಮತ್ತು ದೇವರಾಜ್ ಅವರ ಪುತ್ರಿಯಾಗಿದ್ದು, ಈಗಾಗಲೇ ದೆಹಲಿಯೂ ಸೇರಿದಂತೆ ನಾಡಿನಾದ್ಯಂತ ನೃತ್ಯಪ್ರದರ್ಶನಗಳನ್ನು ನೀಡಿದ್ದಾರೆ. ಈ ಭರವಸೆಯ ಪ್ರತಿಭೆ- ತನ್ನ ನೃತ್ಯದ ವಿವಿಧ ಆಯಾಮಗಳನ್ನು ಪ್ರದರ್ಶಿಸಲು ಆಗಸ್ಟ್ 23 ಶುಕ್ರವಾರ ಮಧ್ಯಾಹ್ನ 2-00 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ವಿಧ್ಯುಕ್ತವಾಗಿ ತನ್ನ ‘ರಂಗಪ್ರವೇಶ’ ನೆರವೇರಿಸಿಕೊಳ್ಳಲಿದ್ದಾರೆ. ಈಕೆಯ ನೃತ್ಯ ಕಲಾಸೊಬಗನ್ನು…
ಮಂಗಳೂರು : ಯಕ್ಷಗಾನ ಕಲಾವಿದ ಕೌಶಿಕ್ ಕರ್ಕೆರ ಇವರ ತಂಡದ ಯಕ್ಷಗಾನ ಪ್ರದರ್ಶನವು 14 ಆಗಸ್ಟ್ 2024ರಂದು ಕುತ್ತರ್ ಪದವು ಶ್ರೀ ರಾಜ ರಾಜೇಶ್ವರಿ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ರಾಜೇಶ್ ಅತ್ತಾವರ್ ಮಾತನಾಡಿ “ಯಕ್ಷಗಾನವು ಆರ್ಥಿಕ ಬೆಂಬಲದಿಂದ ಬೆಳಗುವ ರಾಜಕಲೆ. ಅದಕ್ಕೆ ಬೆಂಬಲ ಹಾಗೂ ಪ್ರೋತ್ಸಾಹ ಸದಾ ದೊರೆತ ಕಾರಣದಿಂದ ಅದು ಇಂದು ವಿಶ್ವಮಾನ್ಯ ಕಲೆಯಾಗಿ ಮೆರೆಯುತ್ತಿದೆ. ಎಲ್ಲಾ ದೇವಾಲಯಗಳೂ ಇದಕ್ಕೆ ಸಹಕರಿಸಬೇಕು. ಅಂತೆಯೇ ಸರಕಾರವೂ ತಕ್ಕ ಪ್ರೋತ್ಸಾಹ ನೀಡುತ್ತಾ ಬರುತ್ತಿರುವುದು ಶ್ಲಾಘನೀಯ. ನಮ್ಮ ರಾಜರಾಜೇಶ್ವರಿ ಅಮ್ಮನವರ ಸನ್ನಿಧಿಯಲ್ಲೂ ಅದು ಬೆಳಗುತ್ತಿದೆ. ಧಾರ್ಮಿಕ ಕಲೆಗಳಿಗೆ ಧಾರ್ಮಿಕ ನೆಲೆಗಟ್ಟು ದೊರೆಯಲಿ.” ಎಂದು ಶುಭಹಾರೈಸಿದರು. ವೇ. ಮೂ. ರಾಘವೇಂದ್ರ ಹೊಳ್ಳರು ಮಾತನಾಡಿ “ಲಲಿತ ಕಲೆಗಳ ಸಂವರ್ಧನೆಗಾಗಿ ಕಲೆ ಬೆಳೆಯಬೇಕು. ಅದರಲ್ಲೂ ನಮ್ಮ ಮಣ್ಣಿನ ಕಲೆ ಯಕ್ಷಗಾನಕ್ಕೆ ಸಂಘಟನೆಗಳು ಒತ್ತಾಸೆಯಾಗಿ ನಿಂತರೆ ಅವು ಚಿರಕಾಲ ಉಳಿಯಲು ಸಾಧ್ಯ.” ಎಂದು ಹೇಳಿದರು. ಕ್ಷೇತ್ರದ ಪದಾಧಿಕಾರಿಗಳಾದ ಜಗನ್ನಾಥ ಸಾಲಿಯಾನ್,…