Author: roovari

ಚನ್ನರಾಯಪಟ್ಟಣ : ಪ್ರತಿಮಾ ಟ್ರಸ್ಟ್ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ, ಬಿ.ಇ.ಓ ಕಚೇರಿ ಹಿಂಭಾಗ ಚನ್ನರಾಯಪಟ್ಟಣ ಇವರ ಸಹಯೋಗದಲ್ಲಿ ‘ವಾರ್ಷಿಕ ತರಬೇತಿ ಶಿಬಿರ’ದ ಉದ್ಘಾಟನಾ ಸಮಾರಂಭವು ದಿನಾಂಕ 12-07-2024 ಬೆಳಗ್ಗೆ 10-30 ಗಂಟೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಕತ್ತರಿಘಟ್ಟದ ಮಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿ ಇವರ ಉಪಸ್ಥಿತಿಯಲ್ಲಿ ಶ್ರವಣಬೆಳಗೊಳ ಕ್ಷೇತ್ರದ ಶಾಸಕರಾದ ಡಾ. ಸಿ.ಎನ್. ಬಾಲಕೃಷ್ಣ ಇವರು ಉದ್ಘಾಟಿಸಲಿದ್ದು, ಚನ್ನರಾಯಪಟ್ಟಣದ ಪ್ರತಿಮಾ ಟ್ರಸ್ಟ್ ಇದರ ಅಧ್ಯಕ್ಷರಾದ ಶ್ರೀ ಉಮೇಶ್ ತೆಂಕನಹಳ್ಳಿ ಅಧ್ಯಕ್ಷತೆ ವಹಿಸಲಿರುವರು.

Read More

ಹಾವೇರಿ : ಕನಕದಾಸ ಅಧ್ಯಯನ ಸಂಶೋಧನಾ ಪೀಠ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಕನ್ನಡ ವಿಭಾಗ ಕೆ.ಎಲ್.ಇ. ಸಂಸ್ಥೆಯ ಗುಡ್ಲೆಪ್ಪ ಹಳ್ಳಿಕೇರಿ ಪದವಿ ಮಹಾವಿದ್ಯಾಲಯ ಹಾವೇರಿ ಇವರ ಸಂಯುಕ್ತ ಆಶ್ರಯದಲ್ಲಿ ‘ಕನಕ ಚಿಂತನೆ : ಇಹಪರ ಸಮನ್ವಯತೆಯ ಸೊಬಗು’ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ದಿನಾಂಕ 02-07-2024ರಂದು ಆಂಧ್ರಪ್ರದೇಶದ ದ್ರಾವಿಡ ವಿಶ್ವವಿದ್ಯಾನಿಲಯ ಕುಪ್ಪಂ ಇಲ್ಲಿನ ಡೀನ್ ಆದ ಡಾ. ಎಂ.ಎನ್. ವೆಂಕಟೇಶ್ ಅವರು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೆ.ಎ.ಇ. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಎಂ.ಸಿ. ಕೊಳ್ಳಿ ಅವರು ವಹಿಸಿದ್ದರು. ಇದೇ ಸಂದರ್ಭದಲ್ಲಿ ‘ವಚನದರ್ಶನ’ ಎಂಬ ಕೃತಿಯನ್ನು ಡಾ. ಪಾದೇಕಲ್ಲು ವಿಷ್ಣು ಭಟ್ ಬಿಡುಗಡೆಗೊಳಿಸಿದರು. ಜಿ.ಎಚ್. ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಡಾ. ಎಸ್.ಎಲ್. ಬಾಲೆಹೊಸೂರ, ಡಾ. ಎಸ್.ಜಿ. ವೈದ್ಯ, ಪ್ರಾಚಾರ್ಯರು ಬಿ.ಇ ಎಸ್.ಎಂ. ಕಾಲೇಜು ಬ್ಯಾಡಗಿ, ಡಾ. ಅರುಣ್ ಕುಮಾರ್ ಎಸ್.ಆರ್. ಸಂಶೋಧನ ಸಹಾಯಕರು…

Read More

ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಇವುಗಳ ಸಹಯೋಗದಲ್ಲಿ ದಿನಾಂಕ 06-07-2024ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮದಲ್ಲಿ ‘ಐತರೇಯ ಉಪನಿಷತ್’ ಇದರ ಕುರಿತು ಉಪನ್ಯಾಸ ನೀಡಿದ ಸಂಸ್ಕೃತ ವಿದ್ವಾಂಸರು ಹಾಗೂ ಪ್ರಾಧ್ಯಾಪಕರೂ ಆಗಿರುವ ಶ್ರೀ ಅನೀಶ ಮುಳಿಯಾಲ ಇವರು “ಐತರೇಯ ಉಪನಿಷತ್ ಮೂರು ಅಧ್ಯಾಯಗಳಿರುವ ಸಣ್ಣ ಉಪನಿಷತ್ ಆದರೂ ಆತ್ಮಜ್ಞಾನವನ್ನು ಬೋಧಿಸುವ ಮಹತ್ವದ ಉಪನಿಷತ್ತಾಗಿದೆ. ಸಮುದ್ರದ ಅಲೆಗಳಂತೆ ಪಂಚೇಂದ್ರಿಯಗಳ ಬಯಕೆಗಳಿಗೆ ಕೊನೆಯೆಂಬುದಿಲ್ಲ. ಯೋಗ್ಯ ಗುರುವಿನ ಮಾರ್ಗದರ್ಶನ ದೊರಕಿದಲ್ಲಿ ಪೂರ್ಣಜ್ಞಾನವೆಂಬ ಹಡಗನ್ನೇರಿ ಸಂಸಾರವೆಂಬ ಸಾಗರದಿಂದ ಪಾರಾಗಿ ದಡ ಸೇರಿ ಮೋಕ್ಷ ಪದವನ್ನು ಪಡೆಯಬಹುದಾಗಿದೆ. ಅಂತಃಕರಣ ರೂಪದಲ್ಲಿ ಪರಮಾತ್ಮ ನಮ್ಮೊಳಗಿದ್ದು, ಆತನ ಉಪಾಸನೆಯಿಂದ ಆತ್ಮಜ್ಞಾನವನ್ನು ಹೊಂದಿ ಮುಕ್ತರಾಗುವ ಮಾರ್ಗವನ್ನು ಉಪನಿಷತ್ತು ನಮಗೆ ತೋರಿಸುತ್ತದೆ” ಎಂದು ಹೇಳಿದರು. ಡಾ. ನಾ. ಮೊಗಸಾಲೆ, ನಿತ್ಯಾನಂದ ಪೈ, ಏರ್ ವೇಸ್…

Read More

ಬೆಂಗಳೂರು : ಐಲೇಸಾ ದಿ ವಾಯ್ಸ್ ಆಫ್ ಓಷನ್ (ರಿ.) ಅರ್ಪಿಸುವ ‘ವಿಜಯ ಕಲಾ ರಂಗೋತ್ಸವ’ವನ್ನು ದಿನಾಂಕ 21-07-2024ರಂದು ಬೆಳಿಗ್ಗೆ ಗಂಟೆ 9-00ರಿಂದ ಬೆಂಗಳೂರಿನ ಬಿಳೇಕಳ್ಳಿ ವಿಜಯ ಬ್ಯಾಂಕ್ ಲೇಔಟ್ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಶರತ್ ಶೆಟ್ಟಿ ನೇತೃತ್ವದ ವಿಜಯ ಕಲಾವಿದರು ಕಿನ್ನಿಗೋಳಿ ಇದರ 25ನೇ ವಾರ್ಷಿಕೋತ್ಸವ ಸಲುವಾಗಿ ಹಾಸ್ಯ ಪ್ರಧಾನ ತುಳು ಸಾಂಸಾರಿಕ ನಾಟಕ ‘ತೊಟ್ಟಿಲ್’ ಅಪ್ಪೆನ ಮೋಕೆದ ಮಟ್ಟೆಲ್ ಹಾಗೂ ಹಾಡು, ನೃತ್ಯ ಸಾಂಸ್ಕೃತಿಕ ವೈಭವದ ಕಾರ್ಯಕ್ರಮಗಳು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 90664 69871, 9945736459 ಮತ್ತು 9972210686

Read More

ಸುಳ್ಯ : ಜಲಶ್ರೀ ಪ್ರತಿಷ್ಠಾನ ಕಡ್ಲಾರು ದೇವಚಳ್ಳ ಗ್ರಾಮ ಸುಳ್ಯ ತಾಲೂಕು ಮತ್ತು ಎನ್.ಎ. ಟೈಮ್ಸ್ ಯೂಟ್ಯೂಬ್ ಚಾನೆಲ್ ಇವುಗಳ ಆಶ್ರಯದಲ್ಲಿ ‘ಗೀತಗಾಯನ ವೀಡಿಯೋ ಸ್ಪರ್ಧೆ 2024’ ಆಯೋಜಿಸಲಾಗಿದೆ. ನಿಯಮಗಳು : * ಕನ್ನಡ ಭಾಷೆಯ ಭಾವಗೀತೆ, ಭಕ್ತಿಗೀತೆ, ಜನಪದ ಗೀತೆ, ಲಾವಣೆ ಹಾಡು, ಕೀರ್ತನೆಗಳು ಇದರಲ್ಲಿ ಯಾವುದಾದರೂ ಒಂದನ್ನು ಹಾಡುತ್ತಿರುವ ವಿಡಿಯೋ ಮಾಡಿ ಕಳಿಸಬೇಕು. * ನಿಮ್ಮ ವಿಡಿಯೋಗಳು ನಾಲ್ಕು ನಿಮಿಷ ಮೀರಬಾರದು; 12ರಿಂದ 50 ವರ್ಷದೊಳಗಿನ ಸ್ಪರ್ಧಿಗಳು ಭಾಗವಹಿಸಬಹುದು. * ಎಲೆಕ್ಟ್ರಾನಿಕ್ ಸಂಗೀತ ಉಪಕರಣ ಅಥವಾ ಕರೋಕೆಯನ್ನಾಗಲಿ ಅಭ್ಯರ್ಥಿಯು ಹಾಡಿನ ರೆಕಾರ್ಡ್ ಗಳಲ್ಲಿ ಬಳಸುವಂತಿಲ್ಲ. * ಹಾಡಿನ ಸಮಯದಲ್ಲಿ ತಾಳ, ತಮ್ಕಿ ಮತ್ತು ಶೃತಿ ಪೆಟ್ಟಿಗೆಯನ್ನು ಬಳಸಬಹುದು. ಆದರೆ ಕಡ್ಡಾಯವಿಲ್ಲ. * ಹಾಡಿನ ರೆಕಾರ್ಡಿಂಗ್ ಮಾಡುವಾಗ ಪ್ರಶಾಂತತೆ ಮತ್ತು ಸ್ಪಷ್ಟವಾಗಿರಲಿ ಮತ್ತು ಯಾವುದೇ ಸಹಹಾಡುಗಾರರು ಹಾಡುವಂತಿಲ್ಲ. * ಹಾಡಿನ ಪ್ರಾರಂಭಕ್ಕೆ ಮೊದಲು ಗೀತ ಗಾಯನ ಸ್ಪರ್ಧೆಗಾಗಿ ಎಂದು ಉಲ್ಲೇಖಿಸಿ, ನಿಮ್ಮ ಹೆಸರು, ಊರು, ವಿಳಾಸಗಳನ್ನು ತಿಳಿಸಬೇಕು. * ಹಾಡಿನ…

Read More

ಸುಳ್ಯ : ಸುಳ್ಯದ ರಂಗ ಮಯೂರಿ ಕಲಾ ಶಾಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ ಯಕ್ಷಗಾನ ಗೋಷ್ಠಿ ಮತ್ತು ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 06-07-2024ರಂದು ಸುಳ್ಯದ ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿರುವ ರಂಗ ಮಯೂರಿ ಕಲಾಶಾಲೆಯಲ್ಲಿ ಉದ್ಘಾಟನೆಗೊಂಡಿತು. ಹಿರಿಯ ಉದ್ಯಮಿ ಶ್ರೀ ಹರಿ ಕಾಂಪ್ಲೆಕ್ಸ್ ಮಾಲಕ ಕೃಷ್ಣ ಕಾಮತ್ ಅರಂಬೂರುರವರು ದೀಪ ಪ್ರಜ್ವಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಯಕ್ಷಗಾನ ಕಲಾವಿದ ಡಾ. ಪ್ರಭಾಕರ ಶಿಶಿಲ ಇವರು ‘ಯಕ್ಷಗಾನದ ಬೆಳವಣಿಗೆಯಲ್ಲಿ ಸಹಭಾಗಿತ್ವ’ ಎಂಬ ವಿಷಯದಲ್ಲಿ, ಲೇಖಕರು ಯಕ್ಷಗಾನ ಕಲಾವಿದ ಶ್ರೀ ನಾರಾಯಣ ದೇಲಂಪಾಡಿಯವರು ‘ಯಕ್ಷಗಾನ ಸಂಘಟನೆಯ ಸವಾಲುಗಳು ಮತ್ತು ಪರಿವಾರ’ ವಿಷಯದ ಕುರಿತು ಹಾಗೂ ಲೇಖಕರು, ಸಂಶೋಧಕರಾದ ಡಾ. ಸುಂದರ ಕೇನಾಜೆಯವರು ‘ಯಕ್ಷಗಾನವನ್ನು ತಲೆಮಾರಿಗೆ ವರ್ಗಾಯಿಸುವ ಸಾಧ್ಯತೆಗಳು’ ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರು. ಪೋಷಕ ಕಮಿಟಿ ಸದಸ್ಯ ಭವಾನಿ ಶಂಕರ ಅಡ್ತಲೆ, ರಂಗ ಮಯೂರಿ ಕಲಾ ಶಾಲೆಯ ಸಂಚಾಲಕ ಲೋಕೇಶ್ ಊರುಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.…

Read More

ಉಡುಪಿಃ ತುಳುಕೂಟ ಉಡುಪಿ ವತಿಯಿಂದ ಪ್ರತಿ ವರ್ಷವೂ ನೀಡುತ್ತಿರುವ ದಿ. ಎಸ್. ಯು. ಪಣಿಯಾಡಿ ಪ್ರಶಸ್ತಿಗೆ 2024ನೇ  ಸಾಲಿನಲ್ಲಿ ಮಂಗಳೂರಿನ ಕರಂಗಲ್ಪಾಡಿಯ ರೂಪಕಲಾ ಆಳ್ವ ಅವರ ‘ಪಮ್ಮಕ್ಕೆನ ಪೊರುಂಬಾಟ’ ಎಂಬ ಹಸ್ತಪ್ರತಿಯು ಆಯ್ಕೆಯಾಗಿದೆ. ತುಳುಭಾಷೆಯಲ್ಲಿ ಉತ್ತಮ ಕಾದಂಬರಿಗಳು ಪ್ರಕಟಗೊಳ್ಳಬೇಕೆಂಬ ಆಶಯದೊಂದಿಗೆ ತುಳು ಚಳವಳಿಗೆ ಚಾಲನೆ ನೀಡಿದ ಹಾಗೂ ತುಳುವಿನ ಮೊತ್ತಮೊದಲ ಕಾದಂಬರಿಕಾರ ದಿ. ಎಸ್. ಯು. ಪಣಿಯಾಡಿ ಅವರನ್ನು ಸದಾ ನೆನಪಿಟ್ಟುಕೊಳ್ಳುವ ಉದ್ದೇಶದಿಂದ ಕಳೆದ 29 ವರ್ಷಗಳಿಂದ ತುಳುಕೂಟ ಉಡುಪಿ  ಆಶ್ರಯದಲ್ಲಿ ಪಣಿಯಾಡಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿಯು 10,000 ರೂಪಾಯಿ ನಗದು ಮತ್ತು ಫಲಕ ಸಮೇತ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಈ ಬಾರಿ ಸ್ಪರ್ಧೆಯ ಪ್ರಶಸ್ತಿ ಸಮಿತಿಯಲ್ಲಿ ಹಿರಿಯ ಸಾಹಿತಿ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ, ಸಕು ಪಾಂಗಾಳ ಹಾಗೂ ಪುತ್ತಿಗೆ ಪದ್ಮನಾಭ ರೈ ತೀರ್ಪುಗಾರರಾಗಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್ ತಿಂಗಳಲ್ಲಿ ಉಡುಪಿಯಲ್ಲಿ ನಡೆಯಲಿದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕಾರ್ಯದರ್ಶಿ ಗಂಗಾಧರ ಕಿದಿಯೂರ್,…

Read More

ಮಡಿಕೇರಿ : ಕನ್ನಡ ಸಿರಿ ಸ್ನೇಹ ಬಳಗ ಹಾಗೂ ಮಡಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮಾಚರಣೆ ಅಂಗವಾಗಿ ಸಾಹಿತಿ ದಿ. ಜಿ. ಟಿ. ನಾರಾಯಣ ರಾವ್ ಅವರ ಬದುಕು ಬರಹ ಕುರಿತ ಉಪನ್ಯಾಸ  ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 06-07-2024ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರಾದ  ಬಿ. ಜಿ. ಅನಂತಶಯನ ಮಾತನಾಡಿ  “ವಿದ್ಯಾರ್ಥಿಗಳು ಪ್ರಶ್ನಿಸುವ ಹಾಗೂ ಉತ್ತರಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು,ಸಾಹಿತ್ಯದ ಕಡೆಗೆ ಒಲವು ತೋರಬೇಕು. ಬರಹದಲ್ಲಿ ಕಲಾತ್ಮಕತೆ, ಸೃಜನಶೀಲತೆ ಇರಬೇಕು. ಸುಪ್ತ ಮನಸ್ಸು ಇದ್ದಲ್ಲಿ ಎಲ್ಲವೂ ಇರುತ್ತದೆ. ನಿಮ್ಮಲ್ಲಿಯೂ ಸುಪ್ತ ಮನಸ್ಸು ಇದೆ, ನೀವೂ ಕೂಡ ಸಾಹಿತಿಗಳಾಗಬಹುದು. ನಿರಂತರ ಕಲಿಕೆ, ಪ್ರಯತ್ನದಿಂದ ಎಲ್ಲವೂ ಸಾಧ್ಯವಾಗುತ್ತದೆ. ಕಣ್ಣು, ಕಿವಿ ತೆರೆದಿರಬೇಕು, ಆಗ ಸುಪ್ತ ಮನಸ್ಸು ಜಾಗೃತಗೊಳ್ಳುತ್ತದೆ.” ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಡಿಕೇರಿ ನಗರಸಭಾ ಸದಸ್ಯ ಕೆ. ಎಸ್. ರಮೇಶ್ ಮಾತನಾಡಿ…

Read More

ಪುತ್ತೂರು : ಬಹುವಚನಂ ವಿದ್ಯಾನಗರ ದರ್ಬೆ ಪುತ್ತೂರು ಮತ್ತು ಜ್ಞಾನಗಂಗಾ ಪುಸ್ತಕ ಮಳಿಗೆ ಪುತ್ತೂರು ಆಯೋಜನೆಯಲ್ಲಿ ತೀರ್ಥರಾಮ ವಳಲಂಬೆಯವರ ‘ಬದುಕು ಮತ್ತು ಭಾರತ’ ಕೃತಿ ಲೋಕಾರ್ಪಣಾ ಸಮಾರಂಭವನ್ನು ದಿನಾಂಕ 21-07-2024ರಂದು ಸಂಜೆ 4-30 ಗಂಟೆಗೆ ಪುತ್ತೂರಿನ ದರ್ಬೆ ವಿದ್ಯಾನಗರದ ಪದ್ಮಿನೀ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಲೇಖಕ ತೀರ್ಥರಾಮ ವಳಲಂಬೆಯವರ ಉಪಸ್ಥಿತಿಯಲ್ಲಿ ನ್ಯಾಯವಾದಿಗಳಾದ ಶ್ರೀ ಸೂರ್ಯನಾರಾಯಣ ಎನ್. ಕೆ.ಯವರು ಕೃತಿ ಲೋಕಾರ್ಪಣೆ ಮಾಡಲಿರುವರು.

Read More

ಮಂಗಳೂರು : ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಕೆನರಾ ಕಾಲೇಜಿನ ಸಭಾಂಗಣದಲ್ಲಿ ದಿನಾಂಕ 08-07-2024ರಂದು ಶ್ರೀಮತಿ ವೀಣಾ ಟಿ. ಶೆಟ್ಟಿಯವರ ಲೇಖನಗಳ ಸಂಗ್ರಹ ‘ಗೋಡೆಯ ಮೇಲಿನ ಚಿತ್ತಾರ’ ಕೃತಿ ಲೋಕಾರ್ಪಣೆಗೊಂಡಿತು. ಈ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿದ ಬರಹಗಾರ್ತಿ, ಅನುವಾದಕರಾದ ಡಾ. ಪಾರ್ವತಿ ಜಿ. ಐತಾಳ್ ಇವರು “ಎಡ ಬಲ ಪಂಥದಿಂದಾಗಿ ಸಾಹಿತ್ಯ ಕ್ಷೇತ್ರ ಸೊರಗುತ್ತಿದೆ, ಇಲ್ಲಿ ಪ್ರಾಮಾಣಿಕತೆಗಿಂತ ಪ್ರತಿಷ್ಠೆಯೇ ಮುಖ್ಯವಾಗುತ್ತಿದೆ. ಅರ್ಹತೆಗೆ ಪುರಸ್ಕಾರ ಸಿಗುವ ಬದಲು ಪಂಥದ ಮೇಲೆ ನಿರ್ಧರಿತವಾಗುತ್ತದೆ. ಹಾಗಾಗಿ ಹೊಸ ಸಾಹಿತಿಗಳಲ್ಲಿ ಗೊಂದಲ ಮೂಡುತ್ತಿದೆ. ಭಾವನೆ ಹಾಗೂ ಸಂವೇದನಾಶೀಲತೆಗೆ ‘ಗೋಡೆಯ ಮೇಲಿನ ಚಿತ್ತಾರ’ ವೇದಿಕೆಯಾಗಿದೆ. ನಿಜ ಜೀವನ ಹಾಗೂ ಪ್ರಕೃತಿಯೊಂದಿಗಿನ ಸಂಬಂಧ ತೆರೆದುಕೊಂಡಿದೆ. ಕೃತಿಯಲ್ಲಿ ಲೇಖಕಿಯ ವ್ಯಕ್ತಿತ್ವಕ್ಕೆ ಅಭಿವ್ಯಕ್ತಿ ಸಿಕ್ಕಿದೆ. ಬಾಲ್ಯದ ನೆನಪುಗಳನ್ನು ಮೆಲುಕು ಹಾಕಲು ಕಾರಣವಾಗಿದೆ. ಸರಳವಾದ ಲಲಿತವಾದ, ಶಕ್ತಿಯುತವಾದ ಲೇಖನಗಳಿದ್ದು ಓದುಗರನ್ನು ಹಿಡಿದಿಟ್ಟುಕೊಳ್ಳುತ್ತದೆ. ಇಂತಹ ಮತ್ತಷ್ಟು ಸಾಹಿತ್ಯ ಕೃಷಿಯ ಅಗತ್ಯವಿದೆ” ಎಂದು ಹೇಳಿದರು. ಚಿಂತಕ ಡಾ. ಅರುಣ್ ಉಳ್ಳಾಲ ಅವರು ಕೃತಿ ಪರಿಚಯ…

Read More