Author: roovari

10 ಮಾರ್ಚ್ 2023, ಮಂಗಳೂರು: “ಸಾಹಿತ್ಯದಿಂದ ಮಾನವೀಯತೆ, ಸಾಮರಸ್ಯದ ಭಾವನೆ ಜಾಗೃತಗೊಳ್ಳುತ್ತದೆ. ಸಾಹಿತ್ಯ ಸಮ್ಮೇಳನಗಳು ಅಲ್ಲಲ್ಲಿ ಜರುಗಿ ಜನರಲ್ಲಿ ಸಾಹಿತ್ಯಾಸಕ್ತಿಯನ್ನು ಬೆಳೆಸಬೇಕು. ಉಳ್ಳಾಲದಲ್ಲಿ ಪ್ರಥಮ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಿರುವುದು ಶ್ಲಾಘನೀಯ.” ಎಂದು ಶಾಸಕ ಯು ಟಿ ಖಾದರ್ ಹೇಳಿದರು. ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಉಳ್ಳಾಲ ತಾಲೂಕು ಘಟಕದ ವತಿಯಿಂದ ಮಾರ್ಚ್ 17ರಂದು ಆಯೋಜಿಸಿರುವ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ ಎಂ. ಪಿ. ಶ್ರೀನಾಥ್ ಮಾತನಾಡಿ “ಸಾಹಿತ್ಯ ಸಮ್ಮೇಳನಗಳು ಸ್ಥಳೀಯ ಸಾಹಿತಿಗಳಿಗೆ ವೇದಿಕೆಗಳನ್ನು ನೀಡುವುದರ ಜೊತೆಗೆ ಹೊಸ ಬರಹಗಾರರನ್ನು ನಾಡಿಗೆ ಪರಿಚಯಿಸುವ ಕಾರ್ಯವನ್ನು ನಡೆಸಬೇಕು. ಉಳ್ಳಾಲ ಸಾಹಿತ್ಯ ಸಮ್ಮೇಳನದಲ್ಲಿ ಉಚ್ಚಿಲ ಮೂಲದ ಪ್ರಸ್ತುತ ಮುಂಬೈಯಲ್ಲಿ ನೆಲೆಸಿರುವ ಶ್ಯಾಮಲಾ ಮಾಧವ ಇವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದರ ಮೂಲಕ ಊರಿಗೂ ಹೊರನಾಡಿಗೂ ಗೌರವ ಕೊಟ್ಟಂತೆ…

Read More

10 ಮಾರ್ಚ್ 2023, ಚಿಕ್ಕಮಗಳೂರು: ಸಾಹಿತಿ ಪೂರ್ಣಚಂದ್ರ ತೇಜಸ್ವಿ ನೆನಪಿನಾರ್ಥ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ ಏಪ್ರಿಲ್ 5ರಿಂದ 7ರವರೆಗೆ ರಾಜ್ಯಮಟ್ಟದ “ಜೀವಿಲೋಕ ಸಾಹಿತ್ಯ ಸಂಭ್ರಮ” ಆಯೋಜಿಸಲಾಗಿದೆ. ಕುವೆಂಪು ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಪರಿಸರ, ನಿಸರ್ಗ ರಕ್ಷಣಾ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಭಾಗವಹಿಸಲು ಇಚ್ಛಿಸುವವರು ಜೀವಿಲೋಕ ಕುರಿತ ತಮ್ಮ ಕವನ, ಕಿರುಕಥೆ, ಚಿತ್ರಪಟ ಕಥನ, ಪ್ರಬಂಧ ಹಾಗೂ ಬೇರೆ ಭಾಷೆಗಳ ಜೀವಿಲೋಕ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಿ ಇದೇ ಮಾರ್ಚ್ 18ರೊಳಗೆ ಕಳಿಸಬೇಕು. ಆಯ್ಕೆಯಾದ ಸಾಹಿತ್ಯ ಪ್ರಕಾರಗಳನ್ನು ‘ಜೀವಿಲೋಕ ಸಾಹಿತ್ಯ ಸಂಭ್ರಮ”ದಲ್ಲಿ ಪ್ರಸ್ತುತಪಡಿಸಲು ಅವಕಾಶ ಕಲ್ಪಿಸಲಾಗುವುದು. ಮಾಹಿತಿಗೆ ಮೊ: 94480 77019 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Read More

10 ಮಾರ್ಚ್ 2023, ಮಂಗಳೂರು: ಇಂದು ಸಮಾಜದಲ್ಲಿ ಅನ್ಯೋನ್ಯವಾಗಿ ಬದುಕುವುದು ಕಡಿಮೆಯಾಗುತ್ತಿದೆ. ಒಂದಾಗಿ ಬಾಳಿದಲ್ಲಿ ಸರ್ವತ್ತೋಮುಖ ಅಭಿವೃದ್ದಿ ಸಾದ್ಯ ಎಂದು ಮಾಜಿ ಮುಖ್ಯಮಂತ್ರಿ ಡಾ. ವೀರಪ್ಪ ಮೊಯ್ಲಿ ಹೇಳಿದರು. ಅವರು ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲೂಕಿನ ಪುನರೂರಿನ ವಿಶ್ವನಾಥ ದೇವಾಲಯದಲ್ಲಿ ಶ್ರೀ ವಿದ್ಯಾಲಯ ಮತ್ತು ಅಖಿಲ ಕರ್ನಾಟಕ ಬೆಳಂದಿಗಳ ಸಾಹಿತ್ಯ ಸಮ್ಮೇಳನ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ, ಪುನರೂರು ಪ್ರತಿಷ್ಠಾನ, ಕನ್ನಡ ಸಂಸ್ಕೃತಿ ಇಲಾಖೆ, ಪುನರೂರು ಆರ್ಟ್ಸ್ ಸಹಯೋಗದಲ್ಲಿ ದಿನಾಂಕ 05-03-2023 ಭಾನುವಾರದಂದು ನಡೆದ 13ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಜೀವಮಾನದ ಸಾಧನೆಗಾಗಿ ವಿಶ್ವ ತುಳುವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯಾದ್ಯಕ್ಷ ಡಾ. ಹರಿಕೃಷ್ಣ ಪುನರೂರು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಸಾಹಿತ್ಯ ಬೆಳವಣಿಗೆ ಕಾಣಬೇಕಾದರೆ ಕನ್ನಡಿಗರು ಒಗ್ಗಟ್ಟಾಗಿ ನಾಡು, ನುಡಿಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಬೆಳದಿಂಗಳ ಸಾಹಿತ್ಯ ಸಮ್ಮೇಳನ ನಡೆಸುವ ಮೂಲಕ ಸಂಘಟಕರಾದ ಡಾ. ಶೇಖರ ಅಜೆಕಾರು ಅವರು…

Read More

10 ಮಾರ್ಚ್ 2023 ಪುತ್ತೂರು: ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ತಿಂಗಳ ಸರಣಿ ತಾಳಮದ್ದಳೆ ಅಂಗವಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ “ಅತಿಕಾಯ ಕಾಳಗ” ನಡೆಯಿತು. ಹಿಮ್ಮೇಳದಲ್ಲಿ ಆನಂದ ಸವಣೂರು, ಚಂದ್ರಶೇಖರ್ ಹೆಗ್ಡೆ ನೆಲ್ಯಾಡಿ, ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ (ಶ್ರೀರಾಮ) ಗುಂಡ್ಯಡ್ಕ ಈಶ್ವರ ಭಟ್ (ರಾವಣ) ಗುಡ್ಡಪ್ಪ ಬಲ್ಯ (ಅತಿಕಾಯ) ಚಂದ್ರಶೇಖರ್ ಭಟ್ ಬಡೆಕ್ಕಿಲ (ಲಕ್ಷ್ಮಣ) ಸಹಕರಿಸಿದರು. ಟಿ ರಂಗನಾಥ ರಾವ್ ಸ್ವಾಗತಿಸಿ, ಮನೋರಮಾ ಜಿ. ಭಟ್ ವಂದಿಸಿದರು.

Read More

0 ಮಾರ್ಚ್ 2023, ಪುತ್ತೂರು: ನೃತ್ಯ ವಿದುಷಿ ಆಸ್ತಿಕಾ ಸುನಿಲ್ ಶೆಟ್ಟಿ ಅವರು ಅನಾರೋಗ್ಯದಿಂದ ಮಂಗಳವಾರ 07-03-2023ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಮೃತರು ಪತಿ, ಓರ್ವ ಪುತ್ರನನ್ನು ಅಗಲಿದ್ದಾರೆ. ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪಡುಮಲೆ ಸಮೀಪದ ಪದಡ್ಕದಲ್ಲಿ ವಿಶ್ವ ಕಲಾನಿಕೇತನ ಸಂಸ್ಥೆಯನ್ನು ನಡೆಸುತ್ತಿದ್ದ ಖ್ಯಾತ ನೃತ್ಯ ಗುರು ವಿದ್ವಾನ್ ದಿ. ಕುದ್ಕಾಡಿ ವಿಶ್ವನಾಥ ರೈ-ನಯನಾ ವಿ. ರೈ ದಂಪತಿಯ ಕಿರಿಯ ಪುತ್ರಿ ಆಸ್ತಿಕಾ ರೈ. ಇವರು ವಿಶ್ವ ಕಲಾನಿಕೇತನದಲ್ಲಿ ಕಲಿತು ಭರತನಾಟ್ಯ ಮತ್ತು ಯಕ್ಷಗಾನದಲ್ಲಿ ಪಳಗಿದ್ದರು. ಎಳೆಯ ಪ್ರಾಯದಲ್ಲಿಯೇ ತಂದೆ ತಾಯಿಯ ನೃತ್ಯ ಗರಡಿಯಲ್ಲಿ ಪಳಗಿದ ಆಸ್ತಿಕಾ ಒಂದು ಕಲಾ ಕುಟುಂಬದಲ್ಲಿ ಜನಿಸಿದ ಕಲಾವಿದೆಯಾಗಿ ಸುದೀರ್ಘ ಕಾಲ ಕಲಾಸರಸ್ವತಿಯನ್ನು ಆರಾಧಿಸುತ್ತಾ ಬಂದು ಎಲ್ಲರಿಗೂ ಅಚ್ಚು ಮೆಚ್ಚಿನವರಾಗಿದ್ದವರು. ವಿವಾಹದ ಬಳಿಕ ಬಹರೈನ್ ನಲ್ಲಿ ಪತಿಯ ಜೊತೆ ನೆಲೆಸಿ ಇಲ್ಲಿಯ ಕಲೆಯನ್ನು ಅಲ್ಲಿ ಪರಿಚಯಿಸಿದರು. ಬಹರೈನ್ ಯಕ್ಷಗಾನ ರಂಗದಲ್ಲಿ ಅವರು ಸುಧನ್ವ ಮೋಕ್ಷದ ಕೃಷ್ಣನಾಗಿ, ಕೋಟಿ-ಚೆನ್ನಯದ ಕಿನ್ನಿದಾರುವಾಗಿ, ಶಾಂಭವಿ ವಿಲಾಸದ ಶಾಂಭವಿ…

Read More

10 ಮಾರ್ಚ್ 2023, ಉಳ್ಳಾಲ: ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕವು ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಆಯೋಜಿಸಿರುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಇದೇ 17ರಂದು ಮಂಗಳ ಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ನಡೆಯಲಿದೆ. ತಾಲೂಕಿನ ಮೊದಲ ಸಾಹಿತ್ಯ ಸಮ್ಮೇಳನ ಇದಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ. ಶ್ರೀನಾಥ್ ಮತ್ತು ತಜ್ಞರ ಸಮಿತಿ ಶ್ರೀಮತಿ ಶ್ಯಾಮಲಾ ಮಾಧವ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ ಎಂದು ಕಸಾಪ ಉಳ್ಳಾಲ ಘಟಕದ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ತಿಳಿಸಿದ್ದಾರೆ. ಉಳ್ಳಾಲ ಸೋಮೇಶ್ವರದ ಯು. ನಾರಾಯಣ ಮತ್ತು ವಸಂತಿ ದಂಪತಿಯ ಪುತ್ರಿ ಶ್ಯಾಮಲಾ ಮಾಧವ ಅವರು ಮುಂಬೈಯಲ್ಲಿ ವಾಸವಾಗಿದ್ದು, ಹಿಂದಿ ಕಾದಂಬರಿ ‘ಅಲಂಪನಾ’, ಇಂಗ್ಲೀಷ್ ವಿಶ್ವ ಸಾಹಿತ್ಯ ಕೃತಿಗಳಾದ ‘ಗಾನ್ ವಿದ್ ದ ವಿಂಡ್’, ಫ್ರಾಂಕ್ಲಿನ್ ಸ್ಟೈನ್’, ‘ಜೇನ್ ಏರ್’, ‘ವುದರಿಂಗ್ ಹೈಟ್ಸ್’, ರಾಮಯ್ಯ ರೈ ಅವರ ‘ಪೊಲೀಸ್ ಡೈರಿ’, ಎಂ.ಆರ್. ಪೈ ಅವರ ‘ಏನ್ ಅನ್ ಕಾಮನ್ ಕಾಮನ್ ಮ್ಯಾನ್’…

Read More

10 ಮಾರ್ಚ್ 2023, ಅಜೆಕಾರು: ಬೆಂಗಳೂರಿನ ಹಾವನೂರು ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕಿಯಾಗಿರುವ ಅಜೆಕಾರಿನ ಶಿಕ್ಷಕಿ ಬಿಂದು ಕೆ ಅವರು ಸ್ವರ್ಣ ಭೂಮಿ ಪೌಂಡೇಶನ್ ಬೆಂಗಳೂರು ನೀಡುವ ಮಹಿಳಾ ಚೈತನ್ಯ ರತ್ನ ಪ್ರಶಸ್ತಿಯನ್ನು ಮಾರ್ಚ್ 12 ರಂದು ಸ್ವೀಕರಿಸಲಿದ್ದಾರೆ. ಬೆಂಗಳೂರು ನೈರುತ್ಯ ತಾಲೂಕು ಮಟ್ಟದ ಸರಕಾರದ ಉತ್ತಮ ಶಿಕ್ಷಕಿ,ಕಾವ್ಯ ಸಂಭ್ರಮ ಪ್ರಶಸ್ತಿ, ಸಾಧನಾ ರತ್ನ ಪ್ರಶಸ್ತಿ, ಕೆಂಪಮ್ಮ ಪುರಸ್ಕಾರ,ಸೇವಾ ರತ್ನ ರಾಜ್ಯ ಪ್ರಶಸ್ತಿ,ಕನ್ನಡ ರತ್ನ ಪ್ರಶಸ್ತಿ, ಆದಿಗ್ರಾಮೋತ್ಸವ ಯುವ ಸಿರಿ ಗೌರವ ಸಹಿತ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ. ಆದಿಗ್ರಾಮೋತ್ಸವ ಸಮಿತಿ ಮತ್ತು ಅ.ಕ.ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಅವರನ್ನು ಅಭಿನಂದಿಸಿದೆ.

Read More

10-03-2023,ಮಂಗಳೂರು: ಮಣಿ ಕೃಷ್ಣ ಸ್ವಾಮಿ ಅಕಾಡೆಮಿ(ರಿ ) ಮತ್ತು ನಾಗರಿಕ ಸಲಹಾ ಸಮಿತಿ (ರಿ ) ಸುರತ್ಕಲ್ ಇವರು ನಡೆಸಿಕೊಂಡು ಬಂದಿರುವ ‘ಉದಯರಾಗ’ ಸರಣಿ ಕಾರ್ಯಕ್ರಮದ ಈ ಬಾರಿಯ ಸಂಗೀತ ಕಛೇರಿಯು ಇದೆ ಬರುವ ದಿನಾಂಕ 12.03.2023ರ ಭಾನುವಾರದ ಬೆಳಿಗ್ಗೆ ಗಂ 6.00 ರಿಂದ 7.00 ರ ವರೆಗೆ ಸುರತ್ಕಲ್ ನಲ್ಲಿರುವ ಕೆನರಾ ಬ್ಯಾಂಕ್ ಅಡ್ಡರಸ್ತೆಯ ‘ಅನುಪಲ್ಲವಿ’ ಇಲ್ಲಿ ನಡೆಯಲಿದೆ. ಹಾಡುಗಾರಿಕೆಯಲ್ಲಿ ಪ್ರಣವ್ ಅಡಿಗ ಉಡುಪಿ ಇವರಿಗೆ ವಯಲಿನ್ ನಲ್ಲಿ ಧನಶ್ರೀ ಶಬರಾಯ ಮಂಗಳೂರು, ಮೃದಂಗದಲ್ಲಿ ಅಚಿಂತ್ಯಕೃಷ್ಣ ಪುತ್ತೂರು ಇವರು ಸಹಕರಿಸಲಿರುವರು. ಪ್ರಣವ್ ಅಡಿಗ : ಅಂಬಲಪಾಡಿಯ ಶ್ರೀಮತಿ ವೀಣಾ ಹಾಗೂ ಪ್ರಕಾಶ್ ಅಡಿಗ ದಂಪತಿಗಳ ಪುತ್ರ ಚಿ| ಪ್ರಣವ್ ಅಡಿಗ ಪ್ರಸ್ತುತ ಆನಂದ ತೀರ್ಥ ವಿದ್ಯಾಲಯದಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದಾನೆ. ಕಳೆದ 6 ವರ್ಷಗಳಿಂದ ಕೊಳಲು ವಾದನ ಹಾಗೂ ಸಂಗೀತವನ್ನು ವಿದ್ವಾನ್ ಕೆ. ರಾಘವೇಂದ್ರ ರಾವ್ ಹಾಗೂ ವಿದ್ವಾನ್ ಕೆ. ರವಿಚಂದ್ರ ಕೂಳೂರು ಇವರಲ್ಲಿ ಕಲಿಯುತ್ತಿದ್ದಾನೆ ಹಾಗೂ ವಿದುಷಿ ಶ್ರೀಮತಿ…

Read More

9 ಮಾರ್ಚ್ 2023, ಕಾಸರಗೋಡು: ಬಹುಭಾಷಾ ಪ್ರದೇಶವಾಗಿರುವ ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅನುವಾದದ ಕುರಿತಾಗಿ ಹಮ್ಮಿಕೊಂಡಿರುವ ರಾಷ್ಟ್ರೀಯ ವಿಚಾರ ಸಂಕಿರಣ ಔಚಿತ್ಯಪೂರ್ಣ ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಮಾನ್ಯ ಉಪಕುಲಪತಿಗಳಾದ ಪ್ರೊ. ಎಚ್. ವೆಂಕಟೇಶ್ವರಲು ಅವರು ಹೇಳಿದರು. ಭಾಷೆಗಳ ಅಳಿವು ಉಳಿವಿನ ಮೇಲೆ ಮನುಷ್ಯನ ಅಸ್ತಿತ್ವವಿದೆ. ಭಾರತದ ವಿವಿಧ ಪ್ರಾದೇಶಿಕ ಭಾಷೆಗಳ ಅಭಿವೃದ್ದಿಯನ್ನು ಪ್ರೋತ್ಸಾಹಿಸಬೇಕಾಗಿದೆ ಎಂದರು. ಕಾಸರಗೋಡಿನ ಪೆರಿಯದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ನಡೆದ ‘ಅನುವಾದ – ಅನುಸಂಧಾನ: ತತ್ವ ಮತ್ತು ಪ್ರಯೋಗ’ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಭಾಷಾ ವಿಭಾಗಗಳ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವುಗಳನ್ನು ಸಶಕ್ತವಾಗಿ ಕಟ್ಟುತ್ತಿದೆ. ಈ ನಿಟ್ಟಿನಲ್ಲಿ ಕನ್ನಡ ವಿಭಾಗವು ಸಪ್ತಭಾಷಾ ಸಂಗಮ ಭೂಮಿಯಾದ ಕಾಸರಗೋಡಿನ ಪ್ರದೇಶದಲ್ಲಿ ಹಮ್ಮಿಕೊಂಡಿರುವ ಅನುವಾದ ತತ್ವ ಮತ್ತು ಪ್ರಯೋಗ ಕುರಿತ ವಿಚಾರ ಸಂಕಿರಣವು ಅತ್ಯಂತ ಮಹತ್ವವನ್ನು ಪಡೆದಿದೆ ಎಂದರು. ವಿಚಾರ ಸಂಕಿರಣದ ಕುರಿತು ದಿಕ್ಸೂಚಿ ಮಾತುಗಳನ್ನಾಡಿದ ಖ್ಯಾತ…

Read More

9 ಮಾರ್ಚ್ 2023, ಬೆಂಗಳೂರು: ರಾಣಿ ಅಬ್ಬಕ್ಕ ಉತ್ಸವ ಸಮಿತಿ ಬೆಂಗಳೂರು ಇದರ ವತಿಯಿಂದ ಇದೇ ಮಾರ್ಚ್ 12 ಭಾನುವಾರದಂದು ‘ರಾಣಿ ಅಬ್ಬಕ್ಕ ಉತ್ಸವ’ವನ್ನು ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್ ನಲ್ಲಿರುವ ‘ರಾಣಿ ಅಬ್ಬಕ್ಕ ಕ್ರೀಡಾಂಗಣ’ದಲ್ಲಿ ಆಯೋಜಿಸಲಾಗಿದೆ. ದಿನಾಂಕ 07-03-2023 ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಉಪಾಧ್ಯಕ್ಷೆ ಕಾಂತಿ ಶೆಟ್ಟಿ, ವೀರರಾಣಿ ಅಬ್ಬಕ್ಕನ ಹೆಸರು, ಕೆಚ್ಚೆದೆಯ ಹೋರಾಟ ಮತ್ತು ಕೀರ್ತಿಯನ್ನು ನಾಡಿನೆಲ್ಲೆಡೆ ಪಸರಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ನೆಲೆಸಿರುವ ಸಂಘ ಸಂಸ್ಥೆಗಳು ಸೇರಿ ಈ ಕಾರ್ಯಕ್ರಮ ಆಯೋಜಿಸಿವೆ. ಅಂದು ಪೂರ್ವಾಹ್ನ 9 ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಆಹ್ವಾನಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್, ಅಬಕಾರಿ ಸಚಿವ ಗೋಪಾಲಯ್ಯ, ಶಾಸಕ ಯು.ಟಿ. ಖಾದರ್ ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಸುಮಾರು 20 ಸಾವಿರ…

Read More