Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ವಿಪ್ರವೇದಿಕೆ ಕೋಡಿಕಲ್ ಇದರ ವತಿಯಿಂದ ಶ್ರೀ ರಾಮ ತಾರಕ ಮಂತ್ರ ಸಹಿತ ನೃತ್ಯ ಯಕ್ಷ ನಮನ ಕಾರ್ಯಕ್ರಮವು ದಿನಾಂಕ 21-01-2024ರಂದು ಕೋಡಿಕಲ್ ಬೆನಕ ಸಭಾಭವನದಲ್ಲಿ ಸಂಪನ್ನಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ವೇದಮೂರ್ತಿ ವಿಶ್ವಕುಮಾರ ಜೋಯಿಸರು ಮಾತನಾಡಿ “ಪ್ರಭು ಶ್ರೀ ರಾಮಚಂದ್ರ ಮನುಕುಲಕ್ಕೆ ಬದುಕಿನಲ್ಲಿ ಮಾನವತೆಯ ಚೌಕಟ್ಟಿನಲ್ಲಿ ಕಾಣಿಸಿಕೊಂಡು ಎಲ್ಲರಿಗೂ ಮಾದರಿಯಾಗುವಂತಹ ನೆಲದ ಮೇಲಿನ ಕಲ್ಯಾಣ ಗುಣಗಳನ್ನು ಪ್ರದರ್ಶಿಸಿದ ಆದರ್ಶ ಸ್ವರೂಪಿ. ಮನುಷ್ಯ ಜನ್ಮದ ಆದರ್ಶಗಳನ್ನು ಪಾಲಿಸಿ ಬದುಕನ್ನು ಒಂದು ಉದಾಹರಣೆಯಾಗಿ ತೋರಿಸಿಕೊಟ್ಟಿರುವ ಮಹಾನ್ ಪುರುಷ. ಪ್ರತಿಯೊಬ್ಬ ಮನುಷ್ಯನೂ ಶ್ರೀ ರಾಮಚಂದ್ರನ ಆದರ್ಶ ಗುಣಗಳನ್ನು ಪಾಲಿಸಿಕೊಂಡಾಗ ರಾಮರಾಜ್ಯ ಸಾಕಾರಗೊಳ್ಳಲು ಸಾಧ್ಯ” ಎಂದರು. ಕಾರ್ಯಕ್ರಮದಲ್ಲಿ ನ್ಯಾಯವಾದಿ ಜಯರಾಮ ಪದಕಣ್ಣಾಯ, ಕಾರ್ಯದರ್ಶಿ ದುರ್ಗಾದಾಸ್ ಕೋಡಿಕಲ್, ನಿಕಟಪೂರ್ವ ಅಧ್ಯಕ್ಷೆ ವಿದ್ಯಾ ಗಣೇಶ್ ರಾವ್, ಕೋಶಾಧಿಕಾರಿ ಕಿಶೋರ್ ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು. ಅಧ್ಯಕ್ಷ ಶ್ರೀಧರ ಹೊಳ್ಳ ಸ್ವಾಗತಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಕೊಟ್ಟಾರದ ಭರತಾಂಜಲಿ ಸಂಸ್ಥೆಯ ನಿರ್ದೇಶಕಿ ವಿದುಷಿ ಪ್ರತಿಮಾ ಶ್ರೀಧರ್ ಶಿಷ್ಯೆಯರಿಂದ ಶ್ರೀ ರಾಮ…
ಹಾವೇರಿ : ಮಾತೋಶ್ರೀ ಗಂಗಮ್ಮ ಬೊಮ್ಮಾಯಿ ಮತ್ತು ಮಾಜಿ ಸಿಎಂ, ಶಾಸಕ ಬಸವರಾಜ ಬೊಮ್ಮಾಯಿ ಅವರ ಜನ್ಮದಿನದ ಅಂಗವಾಗಿ ಮೂಡಬಿದರಿಯ ಆಳ್ವಾಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಡಾ. ಮೋಹನ್ ಆಳ್ವ ಹಾಗೂ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆಯವರಿಗೆ ದಿನಾಂಕ 28-01-2024ರಂದು ‘ಶ್ರೇಷ್ಠ ಕನ್ನಡಿಗ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಮೋಹನ್ ಆಳ್ವ “ಶಿಕ್ಷಣ ತಜ್ಞ ಪ್ರಭಾಕರ ಕೋರೆ ಅವರೊಂದಿಗೆ ನನಗೂ ಮಾತೋಶ್ರೀ ಅವರ ಹೆಸರಿನಲ್ಲಿ ಶ್ರೇಷ್ಠ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಿದ್ದು ಸಂತಸ ತಂದಿದೆ. ಮೊದಲಿನಿಂದಲೂ ಬೊಮ್ಮಾಯಿ ಕುಟುಂಬದ ಮೇಲೆ ನನಗೆ ವಿಶೇಷ ಗೌರವ ಇದೆ” ಎಂದರು. ಡಾ. ಪ್ರಭಾಕರ ಕೋರೆ ಮಾತನಾಡಿ, “ಮಾತೋಶ್ರೀ ಗಂಗಮ್ಮ ಬೊಮ್ಮಾಯಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಿದ್ದು ಅಭಿಮಾನದ ಸಂಗತಿ. ದಿ. ಎಸ್.ಆರ್. ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ನಾನು ಬೆಳೆದು ಬಂದಿದ್ದೇನೆ. ಶಿಗ್ಗಾವಿಯಲ್ಲಿ 4 ಎಕರೆ ಜಮೀನು ಒದಗಿಸಿಕೊಟ್ಟರೆ ಅರಟಾಳ ರುದ್ರಗೌಡರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಕಟ್ಟಲು…
ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಪ್ರಕಾಶನದ ‘ಕಾವ್ಯ ಕುಂಚ’ ಕವನ ಸಂಕಲನದ ಮೂರನೇ ಭಾಗ ಇತ್ತೀಚಿಗೆ ಲೋಕಾರ್ಪಣೆ ಆಗಿದ್ದು ನಾಲ್ಕನೇ ಭಾಗದ ಮುದ್ರಣಕ್ಕೆ ಸಂಸ್ಥೆಯು ಪೂರ್ಣ ಪ್ರಮಾಣದ ಸಿದ್ಧತೆ ಮಾಡಿಕೊಂಡಿದೆ ಎಂದು ‘ಕಾವ್ಯ ಕುಂಚ ಕವನ ಸಂಕಲನ’ದ ಪ್ರಧಾನ ಸಂಪಾದಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ಸಾಹಿತ್ಯಾಸಕ್ತರು 15ರಿಂದ 20 ಸಾಲುಗಳ ಒಂದು ಕವನವನ್ನು ಶೀರ್ಷಿಕೆಯೊಂದಿಗೆ ಕನ್ನಡದಲ್ಲಿ ತಮ್ಮ ತಮ್ಮ ವ್ಯಾಟ್ಸಪ್‌ನಲ್ಲಿ ಟೈಪ್ ಮಾಡಿ ಕನ್ನಡದಲ್ಲಿ ತಮ್ಮ ಹೆಸರು ಪೂರ್ಣ ಪ್ರಮಾಣದ ವಿಳಾಸ ಚಿತ್ತಾಕರ್ಷಕವಾದ ಒಂದು ಭಾವಚಿತ್ರ ಹಾಗೂ ವ್ಯಾಟ್ಸಪ್ ಸಂಖ್ಯೆಯನ್ನು ಈ ಕೆಳಗಿನ ವ್ಯಾಟ್ಸಪ್ ಸಂಖ್ಯೆಗೆ ಕಳಿಸಬಹುದು. ವಿಷಯ ತಮ್ಮ ಆಯ್ಕೆ. ಕವನ ರಚಿಸಿ ಕಳಿಸುವ ದಿನಾಂಕ ವಿಸ್ತರಿಸಲಾಗಿದ್ದು, ಕೊನೆಯ ದಿನಾಂಕ 25-02-2024. ಸಂಕಲನ ಮುದ್ರಣವಾದ ನಂತರ ಪುಸ್ತಕ ಲೋಕಾರ್ಪಣೆಯ ಸಮಾರಂಭದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿಗೆ ಅವಕಾಶವಿದ್ದು, ಭಾಗವಹಿಸಿದವರಿಗೆ ಅಭಿನಂದನಾ ಪತ್ರ, ಕನ್ನಡ ತಾಯಿ ಭುವನೇಶ್ವರಿ ಸ್ಮರಣಿಕೆ ಹಾಗೂ ಹತ್ತು ಪುಸ್ತಕಗಳನ್ನು ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗೆ 9538732777 ಈ…
ಮಂಗಳೂರು : ಬಳ್ಕೂರು ಯಕ್ಷ ಕುಸುಮ ಪ್ರತಿಷ್ಠಾನ ಮತ್ತು ರಂಗಸ್ಥಳ (ರಿ.) ಮತ್ತು ಶ್ರೀ ಕ್ಷೇತ್ರ ಕುದ್ರೋಳಿ ಭಗವತೀ ದೇವಸ್ಥಾನ ಇವರ ಸಹಕಾರದೊಂದಿಗೆ ಬಡಗುತಿಟ್ಟಿನ ಶ್ರೀಕ್ಷೇತ್ರ ಹಟ್ಟಿಯಂಗಡಿ ಮೇಳ ಇವರಿಂದ ‘ಚಂದ್ರಹಾಸ ಶ್ರೀನಿವಾಸ ಕಲ್ಯಾಣ’ ಕಲಾಮಿತಿ ಯಕ್ಷಗಾನ ಪೌರಾಣಿಕ ಪ್ರಸಂಗದ ಪ್ರದರ್ಶನವು ದಿನಾಂಕ 11-02-2024ರಂದು ಸಂಜೆ 4.30ಕ್ಕೆ ಕೂಟಕ್ಕಳ ಸಭಾಂಗಣದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಸೂರಿಕುಮೇರು ಗೋವಿಂದ ಭಟ್ ಇವರಿಗೆ ‘ಬಳ್ಕೂರು ಯಕ್ಷ ಕುಸುಮ’ ಪುರಸ್ಕಾರ ಮತ್ತು ಸಾತ್ವಿಕ್ ನೆಲ್ಲಿತೀರ್ಥ ಇವರಿಗೆ ‘ಯಕ್ಷ ಕುಸುಮ’ ಯುವ ಪುರಸ್ಕಾರ ಪ್ರದಾನ ಮಾಡಲಾಗುವುದು.
ಧಾರವಾಡ : ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ದಿ. ರಾ.ಹ. ದೇಶಪಾಂಡೆ ಸಭಾಭವನದಲ್ಲಿ ನಡೆದ ‘ಗೈರ ಸಮಜೂತಿ’ ಮತ್ತು ‘ಹಾವಳಿ’ ಕಾದಂಬರಿಗಳ ಕುರಿತ ವಿಶೇಷ ಉಪನ್ಯಾಸ ಮತ್ತು ‘ಹೃದಯದ ಹಾದಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮವು ದಿನಾಂಕ 30-01-2024ರಂದು ನಡೆಯಿತು. ‘ಹೃದಯದ ಹಾದಿ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಆನಂದ ಜಂಝರವಾಡರು “ಕನ್ನಡದ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದಾಗಿರುವ ‘ಗೈರ ಸಮಜೂತಿ’ಯು ಎಲ್ಲ ಕಾಲಕ್ಕೂ ಸಲ್ಲುವ ಕೃತಿಯಾಗಿದೆ. ಕನ್ನಡದ ಮಹತ್ವದ ಲೇಖಕರಾದ ರಾಘವೇಂದ್ರ ಪಾಟೀಲರು ಬರೆದ ಆ ಕಾದಂಬರಿಯ ಬಗ್ಗೆ ಯುವ ವಿಮರ್ಶಕ ವಿಕಾಸ ಹೊಸಮನಿ ಸಂಪಾದಿಸಿದ ‘ಹೃದಯದ ಹಾದಿ’ ಎಂಬ ಸಂಪಾದಿತ ಕೃತಿಯ ಮಹತ್ವ ಈಗ ಅರಿವಾಗದಿದ್ದರೂ ಸುಮಾರು ಐವತ್ತು ವರ್ಷಗಳ ಬಳಿಕ ಮನದಟ್ಟಾಗಬಹುದು. ಪಾಟೀಲರ ದೇಸಿ ಪ್ರತಿಭೆ, ಉತ್ತರ ಕರ್ನಾಟಕದ ಭಾಷೆಯ ಸೊಗಡು, ಪದ ಪ್ರಯೋಗದ ಹಿಡಿತ, ಅರ್ಥ ಭಾವಗಳ ಮಿಡಿತ, ಉಪ ಕತೆಗಳನ್ನು ನೇಯ್ದು ಕಥನ ಕಟ್ಟುವ ಶೈಲಿ, ಕಥನದ ಧ್ವನಿಶಕ್ತಿ ಮೊದಲಾದ ಬಹುಮುಖಿ ಆಯಾಮಗಳು…
ಉಡುಪಿ : ಪರ್ಯಾಯ ಶ್ರೀಪುತ್ತಿಗೆ ಮಠ ಮತ್ತು ‘ಸುಗುಣಶ್ರೀ ಭಜನಾ ಮಂಡಳಿ’ ಮಣಿಪಾಲ ಹಾಗೂ ‘ರತ್ನಸಂಜೀವ ಕಲಾಮಂಡಲ’ ಸರಳೇಬೆಟ್ಟು ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 09-02-2024ರಂದು ಮಧ್ಯಾಹ್ನ 3 ಗಂಟೆಯಿಂದ ದಾಸಶ್ರೇಷ್ಠರಾದ ಶ್ರೀ ಪುರಂದರ ದಾಸರ ಆರಾಧನಾಂಗವಾಗಿ ‘ಶತಕಂಠ ಗಾಯನ’ ಶ್ರೀ ಕೃಷ್ಣ ಮಠ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ಮತ್ತು ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದಂಗಳವರ ಪರಮಾನುಗ್ರಹದಿಂದ ನಡೆಯಲಿರುವ ಈ ಕಾರ್ಯಕ್ರಮದಲ್ಲಿ 100ಕ್ಕೂ ಮಿಕ್ಕಿ ಗಾಯಕರು ಗಾಯನವನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದು ಸಂಚಾಲಕಿ ವಿದುಷಿ ಉಷಾ ಹೆಬ್ಬಾರ್ ತಿಳಿಸಿದ್ದಾರೆ.
ಸುಬ್ರಹ್ಮಣ್ಯ : ಉಡುಪಿ ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆ ಮತ್ತು ಶ್ರೀ ಸುಬ್ರಹ್ಮಣ್ಯ ಮಠದ ಸಹಯೋಗದಲ್ಲಿ ನಮ ತುಳುವೆರ್ ಸಂಘಟನೆಯ ಸುವರ್ಣ ಕರ್ನಾಟಕ ಕಾರ್ಯಕ್ರಮದ ಅಂಗವಾಗಿ ಸುವರ್ಣ ಕರ್ನಾಟಕ ರಂಗ ಅಭಿಯಾನ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮವು ಸುಬ್ರಹ್ಮಣ್ಯದ ಶ್ರೀ ವನದುರ್ಗಾದೇವಿ ಸಭಾಭವನದಲ್ಲಿ ದಿನಾಂಕ 27-01-2024ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಸುಬ್ರಹ್ಮಣ್ಯ ಮಠದ ದಿವಾನ ಸುದರ್ಶನ ಜೋಯಿಸ ಮಾತನಾಡಿ “ನಾಟಕಗಳು ನಮ್ಮ ಕಲೆಯನ್ನು ಯುವ ಪೀಳಿಗೆಗೆ ತಿಳಿಸುವ ಮಾಧ್ಯಮವಾಗಿದೆ. ಆಧುನಿಕ ಜನತೆ ನಮ್ಮ ಕಲಾ ಸಂಸ್ಕೃತಿಯತ್ತ ಹೆಚ್ಚು ಆಕರ್ಷಿತರಾಗುವುದು ಅತ್ಯವಶ್ಯಕ. ಭಾರತೀಯ ಕಲಾ ಪ್ರಕಾರಗಳು ಮನಸ್ಸಿಗೆ ಮುದ ನೀಡುವ ಶ್ರೇಷ್ಠ ಕಾರ್ಯವನ್ನು ಮಾಡುತ್ತದೆ. ಅಲ್ಲದೆ, ಬದುಕಿನಲ್ಲಿ ಶಾಂತಿ ನೆಮ್ಮದಿ ಪ್ರಗತಿಯಾಗಲು ನಮ್ಮ ಕಲೆಗಳ ಪಾತ್ರ ಅನನ್ಯವಾಗಿದೆ. ಸುಂದರ ಮನಸ್ಸುಗಳ ನಿರ್ಮಾಣದಲ್ಲಿ ನಾಟಕದ ಪಾತ್ರ ಅಮೋಘ. ನಾಟಕಗಳು ನಮ್ಮ ಪಾರಂಪರಿಕ ಕಲೆಗಳನ್ನು ಎತ್ತಿ ಹಿಡಿಯುತ್ತದೆ” ಎಂದು ಹೇಳಿದರು. ಕಲಾವಿದ ಕೆ. ಯಜ್ಞೇಶ್ ಆಚಾರ್, ನಿವೃತ್ತ ಮುಖ್ಯ ಗುರು ಶ್ರೀಕೃಷ್ಣ…
ಗಾವಳಿ : ಗಾವಳಿಯ ಯಕ್ಷ ಕುಟೀರದಲ್ಲಿ ಖ್ಯಾತ ಸ್ತ್ರೀ ವೇಷಧಾರಿ ಅರಾಟೆ ಮಂಜುನಾಥ ಸಂಸ್ಮರಣೆ ಹಾಗೂ ಹಿರಿಯ ಯಕ್ಷಗಾನ ಕಲಾವಿದ ಹೊಸಂಗಡಿ ರಾಜೀವ ಶೆಟ್ಟಿಯವರಿಗೆ ಅರಾಟೆ ಮಂಜುನಾಥ ಗೌರವ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 30-01-2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಎಚ್. ಸುಜಯೀಂದ್ರ ಹಂದೆ ಮಾತನಾಡಿ “ಕರಾವಳಿ ಮತ್ತು ಮಲೆನಾಡಿನ ಜನರ ಬೌದ್ಧಿಕ ಶ್ರೀಮಂತಿಕೆಗೆ ಕಾರಣವಾದದ್ದು ಯಕ್ಷಗಾನ ಕಲೆ. ಆನಂದದ ಅನುಭೂತಿಯೊಂದಿಗೆ ಬುದ್ಧಿಯ ವಿಕಸನಕ್ಕೆ ಯಕ್ಷಗಾನ ದಾರಿಯಾಗಿದೆ. ರಂಗಸ್ಥಳದಲ್ಲಿ ಕಲೆಯ ಸಾಕ್ಷಾತ್ಕಾರಕ್ಕೆ ಕಾರಣರಾದ ಕಲಾವಿದರನೇಕರು ಪ್ರಾತಃಸ್ಮರಣೀಯರು. ಅಂತಹ ಮೇರು ಕಲಾವಿದರ ಸಾಲಿನಲ್ಲಿ ಖ್ಯಾತ ಸ್ತ್ರೀವೇಷಧಾರಿ ಅರಾಟೆ ಮಂಜುನಾಥರು ಅಭಿವಂದನೀಯರು. ಕಲಾವಿದನಾಗಿ, ಸಂಘಟಕನಾಗಿ, ಕಲಾವಿದರ ನೋವಿನ ಧ್ವನಿಯಾಗಿ, ಸಿಡಿಲಾಗಿ ಗುರುತಿಸಿಕೊಂಡವರು ಅರಾಟೆಯವರು. ಹಲವು ಕಲಾವಿದರ ಪ್ರತಿಭಾ ಅನಾವರಣಕ್ಕೆ ಕಾರಣರಾದ ಅರಾಟೆಯವರ ಹೆಸರಿನ ಪ್ರಶಸ್ತಿ ಅರ್ಹರಿಗೆ ದೊರೆತಿದೆ” ಎಂದು ಹೇಳಿದರು. ಗಣೇಶ್ ಪ್ರಸಾದ್ ಅರಾಟೆ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪೆರ್ಡೂರು ಮೇಳದ ಯಜಮಾನ ವೈ. ಕರುಣಾಕರ…
ಉಡುಪಿ : ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ ಇದರ ವತಿಯಿಂದ ಎರಡು ದಿನಗಳ ‘ಕಲೋತ್ಸವ -2024’ ಸಮಾರಂಭವು ದಿನಾಂಕ 11-02-2024 ಮತ್ತು 12-02-2024ರಂದು ಕೋಟ ಪಟೇಲರ ಮನೆ ಆವರಣದಲ್ಲಿ ನಡೆಯಲಿರುವುದು. ದಿನಾಂಕ 11-02-2024ರಂದು ಸಂಜೆ 5.30ಕ್ಕೆ ನಡೆಯಲಿರುವ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಂಬೈ ಒ.ಎನ್.ಜಿ.ಸಿ.ಯ ನಿವೃತ್ತ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಬನ್ನಾಡಿ ನಾರಾಯಣ ಆಚಾರ್ ಸಂಸ್ಮರಣ ನುಡಿಗಳನ್ನಾಡಲಿದ್ದಾರೆ. ಯಕ್ಷಗಾನ ಕಲಾವಿದ ಕೋಟ ಸುರೇಶ್ ಇವರಿಗೆ ಉಡುಪ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಂಜೆ ಗಂಟೆ 4ಕ್ಕೆ ವಿದ್ವಾನ್ ಅಶೋಕ್ ಆಚಾರ್ಯ ಮತ್ತು ಬಳಗದವರಿಂದ ‘ನಿನಾದ’ ಲಘು ಸಂಗೀತ ಮತ್ತು ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ಶ್ವೇತ ಅರೆಹೊಳೆ ನಿರ್ದೇಶನದಲ್ಲಿ ‘ನೃತ್ಯ ಸಂಭ್ರಮ’ ಪ್ರಸ್ತುತಗೊಳ್ಳಲಿದೆ. ದಿನಾಂಕ 12-02-2024ರಂದು ನಡೆಯಲಿರುವ ಯಕ್ಷ ಕಲಾವಿದರಿಗೆ ಗೌರವ ಪ್ರದಾನ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ್ ಕಲ್ಕೂರ ಇವರು ವಹಿಸಲಿದ್ದಾರೆ.…
ಪುತ್ತೂರು : ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟಿನ 30ನೇ ವಾರ್ಷಿಕೋತ್ಸವ ‘ತ್ರಿಂಶತಿ ಸಂಭ್ರಮ’ವು ಪುತ್ತೂರು ಪುರಭವನದಲ್ಲಿ ಸಭೆ, ಗಾಯನ, ನರ್ತನ, ವಾದ್ಯ ವಾದನಗಳ ಪ್ರಸ್ತುತಿಗಳೊಂದಿಗೆ ದಿನಾಂಕ 28-01-2024ರಂದು ವಿಜೃಂಭಣೆಯಿಂದ ನೆರವೇರಿತು. ಹರೀಶ್ ಕಿಣಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಗೀತ ಗುರುಗಳಾದ ವಿದ್ವಾನ್ ಸುದರ್ಶನ್ ಭಟ್ ಅವರ ನಿರ್ದೇಶನದಲ್ಲಿ ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ನಡೆಯಿತು. ತದನಂತರ ಕೊಳಲು ವಾದನ ಗುರು ಸುರೇಂದ್ರ ಆಚಾರ್ಯ ಅವರ ಶಿಷ್ಯ ವೃಂದದಿಂದ ಕೊಳಲು ವಾದನ ನಡೆಯಿತು. ಸಂಜೆ 6 ಗಂಟೆಗೆ ವಿದುಷಿ ನಯನಾ ವಿ. ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅಂತರ್ಜಲ ಸಂಶೋಧಕ ಹಾಗೂ ವಾಹಿನಿ ದರ್ಬೆ ಕಲಾಸಂಘದ ರಾಜ್ಯಾಧ್ಯಕ್ಷ ಮಧುರಕಾನನ ಗಣಪತಿ ಭಟ್ ಪಾಲ್ಗೊಂಡರು. ನಂತರ ಹಿರಿಯ ವಿದ್ಯಾರ್ಥಿಗಳು, ಗುರು ವಿದ್ವಾನ್ ಸುದರ್ಶನ್ ಎಂ.ಎಲ್. ಭಟ್ ಹಾಗೂ ತಾಯಿ ಮಾಲಿನಿ ಭಟ್ ಅವರಿಗೆ ಗುರುವಂದನೆ ಸಲ್ಲಿಸಿದರು. ಈ ಸಂದರ್ಭ ಸಂಸ್ಥೆಯ ಜೂನಿಯರ್, ಸೀನಿಯರ್, ವಿದ್ವತ್…