Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಮುಸ್ಲಿಂ ಬರಹಗಾರರ ಕನ್ನಡ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕರ್ನಾಟಕ ಮುಸ್ಲಿಂ ಲೇಖಕರ ಸಂಘವು ಪ್ರತೀ ವರ್ಷ ಮುಸ್ಲಿಂ ಬರಹಗಾರರ ಅತ್ಯುತ್ತಮ ಕನ್ನಡ ಕೃತಿಗೆ ರಾಜ್ಯ ಮಟ್ಟದ ‘ಮುಸ್ಲಿಂ ಸಾಹಿತ್ಯ ಪ್ರಶಸ್ತಿ’ಯನ್ನು ನೀಡುತ್ತಿದ್ದು, 2023ನೇ ಸಾಲಿನ ಪ್ರಶಸ್ತಿಗಾಗಿ ಕೃತಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿಯು 10 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿದೆ. ಮುಸ್ಲಿಂ ಬರಹಗಾರರು ಕನ್ನಡದಲ್ಲಿ ಪ್ರಕಟವಾದ 2023ನೇ ಸಾಲಿನ ಕೃತಿಯ ನಾಲ್ಕು ಪ್ರತಿಗಳನ್ನು 10 ಸೆಪ್ಟೆಂಬರ್ 2024ರ ಒಳಗಾಗಿ ಸಂಚಾಲಕರು, ಮುಸ್ಲಿಂ ಸಾಹಿತ್ಯ ಪ್ರಶಸ್ತಿ, ಮುಸ್ಲಿಂ ಲೇಖಕರ ಸಂಘ, ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ, ಮಂಗಳೂರು-575001 ವಿಳಾಸಕ್ಕೆ ಕಳುಹಿಸುವಂತೆ ತಿಳಿಸಲಾಗಿದೆ. ಅನುವಾದಿತ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ ಹಾಗೂ ಪ್ರಶಸ್ತಿಗಾಗಿ ಕಳುಹಿಸುವ ಕೃತಿಗಳನ್ನು ಹಿಂದಿರುಗಿಸಲಾಗುವುದಿಲ್ಲ ಎಂದು ಸಂಘದ ಅಧ್ಯಕ್ಷ ಉಮರ್ ಯು. ಎಚ್. ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ – 9845054191 ಅಥವಾ 0824-2410358 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಉಡುಪಿ : ಕಲಾಕ್ಷೇತ್ರ ಶೈಲಿಯ ಪ್ರತಿಭಾವಂತ ಯುವ ನೃತ್ಯ ಕಲಾವಿದೆ ದಿವ್ಯ ಸುರೇಶ್ ಇವರು ದಿನಾಂಕ 01 ಸೆಪ್ಟೆಂಬರ್ 2024ರಂದು ಸಂಜೆ 7-00 ಗಂಟೆಗೆ ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಏಕವ್ಯಕ್ತಿ ನೃತ್ಯ ಮಾರ್ಗ ಪ್ರದರ್ಶನವನ್ನು ನೀಡಲಿದ್ದಾರೆ. ಹಾಡುಗಾರಿಕೆಯಲ್ಲಿ ಶ್ರೀ ವಿನೀತ್ ಪೂರವನ್ಕರ, ನಟುವಾಂಗದಲ್ಲಿ ಶ್ರೀ ಮಂಜುನಾಥ ಎನ್. ಪುತ್ತೂರು, ಮೃದಂಗದಲ್ಲಿ ಶ್ರೀ ಬಾಲಚಂದ್ರ ಭಾಗವತ್ ಹಾಗೂ ವಯಲಿನ್ ನಲ್ಲಿ ಶ್ರೀಮತಿ ಶರ್ಮಿಳಾ ರಾವ್ ಇವರು ಭಾಗವಹಿಸಲಿದ್ದಾರೆ.
ಉಡುಪಿ : ಕಾವಿ ಆರ್ಟ್ ಫೌಂಡೇಷನ್ ಇದರ ವತಿಯಿಂದ ಭಾವನಾ ಫೌಂಡೇಶನ್ ಮತ್ತು ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಇವುಗಳ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ‘ಕಾವಿ ವೈವಿಧ್ಯ’ ಚಿತ್ರಕಲಾ ಪ್ರದರ್ಶನವನ್ನು ದಿನಾಂಕ 31-08-2024ರಿಂದ 01-09-2024ರವರೆಗೆ ಉಡುಪಿಯ ಬಡಗುಪೇಟೆಯ ಹತ್ತು ಮೂರು ಇಪ್ಪತ್ತೆಂಟು ಇಲ್ಲಿ ಆಯೋಜಿಸಲಾಗಿದೆ. ಪುಷ್ಪಾಂಜಲಿ ರಾವ್, ಆಶ್ಲೇಶ್ ಆರ್. ಭಟ್, ವರ್ಷ ಎ.ಜೆ. ಮತ್ತು ರಾಜೇಶ್ ಡಿ. ಸಿರ್ಸಿಕರ್ ಇವರುಗಳ ಕಲಾಕೃತಿಗಳು ಪ್ರದರ್ಶನಗೊಳ್ಳಲಿದೆ.
ಬಂಟ್ವಾಳ : ಬೆಳ್ತಂಗಡಿ ಗೇರುಕಟ್ಟೆಯ ಶ್ರೀ ಮದವೂರ ವಿಘ್ನೇಶ್ವರ ಕಲಾಸಂಘ ಇದರ ಸದಸ್ಯರಿಂದ ‘ಕಂಸ ವಧೆ’ ಎಂಬ ಯಕ್ಷಗಾನ ತಾಳಮದ್ದಳೆಯು ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಶ್ರಾವಣ ಮಾಸದ ವಿಶೇಷ ಯಕ್ಷಗಾನ ತಾಳಮದ್ದಳೆಯ ಸರಣಿಯಲ್ಲಿ ದಿನಾಂಕ 24 ಆಗಸ್ಟ್ 2024ರಂದು ಮಧೂರು ಮೋಹನ ಕಲ್ಲೂರಾಯರ ನಿರ್ದೇಶನದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತಿಕೆಯಲ್ಲಿ ಸಚಿನ್ ಶೆಟ್ಟಿ ಕುದುರೆಪ್ಪಾಡಿ, ಮದ್ದಳೆಯಲ್ಲಿ ಮುರಳಿ ಕಟೀಲು, ಚೆಂಡೆಯಲ್ಲಿ ರಾಮಪ್ರಕಾಶ ಕಲ್ಲೂರಾಯ ಭಾಗವಹಿಸಿದ್ದರು. ಮುಮ್ಮೇಳದಲ್ಲಿ ಶ್ರೀ ಸುಂದರ ಕೃಷ್ಣ ಮಧೂರು, ಬಾಸಮೆ ನಾರಾಯಣ ಭಟ್, ರಾಮಕೃಷ್ಣ ಭಟ್ ಬಳಂಜ, ಮಧೂರು ಮೋಹನ ಕಲ್ಲೂರಾಯ, ಶ್ರೀಮತಿ ಜಯಂತಿ ಸುರೇಶ ಹೆಬ್ಬಾರ್, ಶ್ರೀಮತಿ ಕೆ.ಆರ್. ಸುವರ್ಣ ಕುಮಾರಿ ಭಾಗವಹಿಸಿದ್ದರು. ಶ್ರೀ ನಾಗೇಂದ್ರ ಪೈ ಸ್ವಾಗತಿಸಿ, ಸೀತಾರಾಮ ವಂದಿಸಿದರು.
ಸೀತಾಂಗೋಳಿ : ಕೈರಳಿ ಪ್ರಕಾಶನ ಹಾಗೂ ಸಂತೋಷ್ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಸೀತಾಂಗೋಳಿ ಸಹಯೋಗದಲ್ಲಿ ಲೇಖಕ ಎಂ.ಎಸ್. ಥೋಮಸ್ ಡಿ’ಸೋಜ ರಚಿಸಿರುವ ‘ಸೀತಾಂಗೋಳಿಯ ಗತವೈಭವ’ ಕೃತಿ ಪರಿಚಯ ಹಾಗೂ ವಿಮರ್ಶೆ ಕಾರ್ಯಕ್ರಮವು ದಿನಾಂಕ 01 ಸೆಪ್ಟೆಂಬರ್ 2024ರಂದು ಅಪರಾಹ್ನ 3-00 ಗಂಟೆಗೆ ಸಂತೋಷ್ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಕಾರ್ಯಾಲಯದಲ್ಲಿ ನಡೆಯಲಿದೆ. ಕನ್ನಡ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪ್ರಕಾಶಕರು ಹಾಗೂ ಸದಸ್ಯರಾದ ಎ.ಆರ್. ಸುಬ್ಬಯ್ಯಕಟ್ಟೆ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಪತ್ರಕರ್ತರಾದ ರವಿ ನಾಯ್ಕಾಪು ಇವರು ಕೃತಿ ಪರಿಚಯ ಮಾಡಲಿದ್ದಾರೆ. ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಕೆ. ಕಮಲಾಕ್ಷ ಇವರ ಕೃತಿ ವಿಮರ್ಶೆಗೆ ಹಿರಿಯ ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಕೈರಳಿ ಪ್ರಕಾಶನದ ನಿರ್ದೇಶಕರಾದ ಅರಿಬೈಲು ಗೋಪಾಲ ಶೆಟ್ಟಿ ಮತ್ತು ಯಕ್ಷಗಾನ ಕಲಾವಿದ ವೀಜಿ ಕಾಸರಗೋಡು ಇವರುಗಳು ಸ್ಪಂದನೆ ನೀಡಲಿರುವರು.
ಧಾರವಾಡ : ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ್ದ ಮೂರು ದಿನಗಳ ‘ಅನಂತ ಸ್ವರ ನಮನ’ ಸಂಗೀತೋತ್ಸವದ ಸಮಾರೋಪ ಸಮಾರಂಭವು ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ದಿನಾಂಕ 25 ಆಗಸ್ಟ್ 2024ರಂದು ಸಂಪನ್ನಗೊಂಡಿತು. ಈ ಕಾರ್ಯಕ್ರಮದಲ್ಲಿ ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಇವರು ಮಾತನಾಡಿ “ಅನಂತ ಹರಿಹರರು ಯುವ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ಧಾರವಾಡ ಸಂಗೀತ ಕ್ಷೇತ್ರದ ಬೆಳೆವಣಿಗೆಗೆ ಅನಂತ ಹರಿಹರ ಅವರ ಕೊಡುಗೆ ಅಪಾರ. ಅನಂತ ಹರಿಹರ ಅವರನ್ನು ಕಳೆದುಕೊಂಡಿದ್ದು ಸಂಗೀತದ ರತ್ನ ಕಳಿಚಿದಂತಾಗಿದೆ. ಅನಾಮಿಕ ಸಂಗೀತ ಸೇವಕರಾಗಿದ್ದ ಅವರು ಪ್ರತಿ ಸಂಗೀತ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಆಯೋಜಿಸುವಲ್ಲಿ ಪ್ರಸಿದ್ಧರಾಗಿದ್ದರು. ಈ ಮೂಲಕ ಆರು ದಶಕಗಳ ಕಾಲ ಸಂಗೀತ-ನೃತ್ಯ-ಸಾಂಸ್ಕೃತಿಕ ಲೋಕದಲ್ಲಿ ಕಲಾವಿದರು ಹಾಗೂ ಶ್ರೋತೃವರ್ಗದ ಕೊಂಡಿಯಾಗಿದ್ದರು ಎಂದು ಹೇಳಿದರು. ಪಂಡಿತ್ ಬಿ.ಎಸ್. ಮಠ ಮಾತನಾಡಿ “ಅನಂತ ಹರಿಹರರು ಎಲ್ಲಾ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಅವರ ಸಹಕಾರವನ್ನು ಮರೆಯುವಂತಿಲ್ಲ. ಆದ್ದರಿಂದ ಕಲಾವಿದರ ಸ್ಮರಣೆಯಲ್ಲಿ…
ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ (ರಿ.) ಈ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತ ಪಡಿಸುವ ‘ಉದಯರಾಗ – 55’ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ಸುರತ್ಕಲ್ಲಿನ ಫ್ಲೈ ಓವರಿನ ತಳಭಾಗದಲ್ಲಿ ದಿನಾಂಕ 01-09-2024 ಭಾನುವಾರ ಪೂರ್ವಾಹ್ನ ಗಂಟೆ 6-00ಕ್ಕೆ ನಡೆಯಲಿದೆ. ಕಾರ್ತಿಕ್ ರಾವ್ ಇಡ್ಯಾ ಇವರ ನಿರ್ದೇಶನದಲ್ಲಿ ಗಾಯನ ಮಿತ್ರರು ಸುರತ್ಕಲ್ ಇವರು ಅರ್ಪಿಸುವ ‘ನಾಮ ಸಂಕೀರ್ತನ’ ಕಾರ್ಯಕ್ರಮ ನಡೆಯಲಿದ್ದು, ಕಾರ್ತಿಕ್ ರಾವ್ ಇಡ್ಯಾ, ಸಂಪತ್ ಎಸ್.ಬಿ., ಶ್ರೀನಿಧಿ ರಾವ್ ಮತ್ತು ತಂಡದ ಸದಸ್ಯರ ಹಾಡುಗಾರಿಕೆಗೆ ಕುಳಾಯಿಯ ವಿಜಯ್ ಆಚಾರ್ಯ ಹಾರ್ಮೋನಿಯಂ ಹಾಗೂ ಪ್ರಥಮ್ ಚೇಳ್ಯಾರು ತಬಲಾ ಸಾಥ್ ನೀಡಲಿದ್ದಾರೆ. ಸಾಮಾಜಿಕ ಸೇವೆ ಮತ್ತು ರೋಟರಿ ಕ್ಲಬ್ ಸುರತ್ಕಲ್ ಇದರ ನಿರ್ದೇಶಕರಾದ ಶ್ರೀ ರಾಮಚಂದ್ರ ಬಿ. ಕುಂದರ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಮಣಿ ಕೃಷ್ಣಸ್ವಾಮಿ ಆಕಾಡಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್…
ಕುತ್ತಾರು : ಬಾಲ ಸಂರಕ್ಷಣಾ ಕೇಂದ್ರ ಕುತ್ತಾರು ಮತ್ತು ಮಂಗಳಾ ಸೇವಾ ಸಮಿತಿ ಟ್ರಸ್ಟ್ ಇದರ ವತಿಯಿಂದ ಉಮೇಶ ಕರ್ಕೇರ ಮತ್ತು ಬಳಗದವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ಗುರುದಕ್ಷಿಣೆ ಎಂಬ ಪ್ರಸಂಗದ ಯಕ್ಷಗಾನ ಬಯಲಾಟದ ಸಭಾ ಕಾರ್ಯಕ್ರಮವು ದಿನಾಂಕ 14 ಆಗಸ್ಟ್ 2024ರಂದು ಕುತ್ತಾರಿನ ಬಾಲ ಸಂರಕ್ಷಣಾ ಕೇಂದ್ರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂವಿಧಾನ ತಜ್ಞ, ಮಂಗಳ ಸೇವಾ ಟ್ರಸ್ಟಿನ ಸಂಚಾಲಕ ಡಾ. ಪಿ. ಅನಂತಕೃಷ್ಣ ಭಟ್ ಇವರು ‘ಸಂವಿಧಾನ – ಯಕ್ಷಗಾನ’ದ ಬಗ್ಗೆ ಪ್ರವಚನ ನೀಡುತ್ತಾ “ಈ ದೇಶದ ಸಂವಿದಾನಕ್ಕೆ ಈಗ ಎಪ್ಪತ್ತೈದರ ಸಂಭ್ರಮ. ನಿಯಮಗಳು ಕಾನೂನು ರೀತ್ಯಾ ಜಾರಿಯಾಗಿ ದೇಶ ಸನ್ನಡತೆಯಲ್ಲಿ ಮುನ್ನಡೆಯುವಂತೆ ನಡೆಯುತ್ತಿದೆ. ಆದರೆ ಯಕ್ಷಗಾನವೂ ಅಲಿಖಿತ ಸಂವಿಧಾನವನ್ನು ಒಗ್ಗೂಡಿಸಿಕೊಂಡು ಸಂಸ್ಕೃತಿ-ಸಂಸ್ಕಾರಗಳನ್ನು ಪ್ರಚುರ ಪಡಿಸುತ್ತಾ ಧರ್ಮ ಜಾಗೃತಿ ಮೂಡಿಸುತ್ತಾ ಬರುತ್ತಿದೆ. ಇದು ಈ ದೇಶದ ಹೆಗ್ಗಳಿಕೆಯೂ ಹೌದು. ಇದನ್ನು ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯುವಂತೆ ಮೂಡಿಸುವುದು ನಮ್ಮ ಕರ್ತವ್ಯ. ಇದಕ್ಕೆ ಸರಕಾರ, ಸಂಘ ಸಂಸ್ಥೆಗಳು ಸಹಕಾರಿಯಾಗಿ…
ತುಮಕೂರು : ಶೈನಾ ಅಧ್ಯಯನ ಸಂಸ್ಥೆ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ತುಮಕೂರು ಇದರ ವತಿಯಿಂದ ಬಿ. ಚನ್ನಪ್ಪ ಗೌರಮ್ಮ ‘ವಚನ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭ ಮತ್ತು ನುಡಿನಮನ ಕಾರ್ಯಕ್ರಮವನ್ನು ದಿನಾಂಕ 28 ಆಗಸ್ಟ್ 2024ರಂದು ಬೆಳಗ್ಗೆ 10-30 ಗಂಟೆಗೆ ತುಮಕೂರಿನ ಮರಳೂರು, ಪ್ರಗತಿ ಬಡಾವಣೆ ಡಾ. ಬಿ.ಸಿ. ಶೈಲಾ ನಾಗರಾಜ್ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಜಾಪ್ರಗತಿ ದಿನ ಪತ್ರಿಕೆಯ ಸಂಪಾದಕರಾದ ಶ್ರೀ ಎಸ್. ನಾಗಣ್ಣ ಇವರು ಶರಣ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ವಿದ್ವಾನ್ ಶ್ರೀ ಎಂ.ಜಿ. ಸಿದ್ಧರಾಮಯ್ಯ ಇವರಿಗೆ ‘ವಚನ ಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಡಾ. ಬಿ.ಸಿ. ಶೈಲಾ ನಾಗರಾಜ್ ಇವರು ನುಡಿ ನಮನ ಸಲ್ಲಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಚನಗಾಯನ ಕಾರ್ಯಕ್ರಮ ನಡೆಯಲಿದೆ.
ಮಂಗಳೂರು : ಮಂಗಳೂರಿನ ಧ್ಯಾನ ಸಂಗೀತ ಅಕಾಡೆಮಿಯ ವಾರ್ಷಿಕೋತ್ಸವದ ಅಂಗವಾಗಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತೋತ್ಸವ ಕಾರ್ಯಕ್ರಮವು 25 ಆಗಸ್ಟ್ 2024ರಂದು ಮಂಗಳೂರಿನ ಉರ್ವಸ್ಟೋರ್ ಇಲ್ಲಿನ ತುಳುಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ಕಲಾವಿದರಾದ ಮುಂಬೈ ಇಲ್ಲಿನ ಪಂಡಿತ್ ರಾಮ್ ದೇಶಪಾಂಡೆ “ಶಾಸ್ತ್ರೀಯ ಸಂಗೀತದಂತಹ ದೈವಿಕ ವಿದ್ಯೆಗಳು ಕೇವಲ ಗುರುಗಳ ಆಶೀರ್ವಾದದಿಂದ ಸಿದ್ಧಿಸುತ್ತವೆ. ಕೇವಲ ಸ್ವಪ್ರಯತ್ನ ಸಾಲದು, ಸಂಗೀತ ಗುರುಗಳು ಹಾಕಿಕೊಟ್ಟ ಹಾದಿಯೇ ಸಾಧನೆಗೆ ಮತ್ತು ಶ್ರೇಯಸ್ಸಿಗೆ ಮಾರ್ಗ.” ಎಂದರು. ಶ್ರೀಮತಿ ಲೋಲಾಕ್ಷಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಂ. ಆರ್. ಪಿ. ಎಲ್. ಹಾಗೂ ಒ. ಎನ್. ಜಿ. ಸಿ. ಇದರ ಜನರಲ್ ಮ್ಯಾನೇಜರ್ ಆಗಿರುವ ಮಂಜುನಾಥ ಎಚ್. ವಿ. ಹಾಗೂ ಸಂಗೀತ ಪೋಷಕರಾದ ಶ್ರೀಮತಿ ಶ್ರೇಯಾ ಕಿರಣ್ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಸಭಾಕಾರ್ಯಕ್ರಮದ ಬಳಿಕ ಪಂಡಿತ್ ರಾಮ್ ದೇಶಪಾಂಡೆ, ಮೈಸೂರಿನ ವಿದುಷಿ ಶ್ರೀಮತಿ ದೇವೀ ಹಾಗೂ ಧ್ಯಾನ ಸಂಗೀತ ಕಲಾ ಅಕಾಡೆಮಿಯ ವಿದ್ಯಾರ್ಥಿಗಳಿಂದ ಹಿಂದೂಸ್ಥಾನಿ ಗಾಯನ, ಲಘು…