Subscribe to Updates
Get the latest creative news from FooBar about art, design and business.
Author: roovari
ಹೊಸಕೋಟೆ: ಹೊಸಕೋಟೆ ತಾಲೂಕಿನ ‘ಜನಪದರು’ ಸಾಂಸ್ಕೃತಿಕ ವೇದಿಕೆ, ಪ್ರತೀ ತಿಂಗಳ ಎರಡನೇ ಶನಿವಾರದಂದು ಆಯೋಜಿಸುವ ನಾಟಕ ಸರಣಿ ‘ರಂಗ ಮಾಲೆ -71’ ದಿನಾಂಕ 10-06-2023ರಂದು ನಡೆಯಿತು. ಈ ಬಾರಿ ಬೆಂಗಳೂರಿನ ರೂಪಾಂತರ ರಂಗ ತಂಡ ಪ್ರಸ್ತುತ ಪಡಿಸಿದ ಜ್ಞಾನಪೀಠ ಪುರಸ್ಕೃತ ಡಾ. ಶಿವರಾಮ ಕಾರಂತರ ಮಹತ್ವದ ಕಾದಂಬರಿ ‘ಚೋಮನ ದುಡಿ’ ಪ್ರದರ್ಶನಗೊಂಡಿತು. ಈ ಕಾದಂಬರಿಯನ್ನು ರಂಗರೂಪಕ್ಕೆ ಅಳವಡಿಸಿದ ಆರ್. ನಾಗೇಶ್ ಹಾಗೂ ಕೆ.ಎಸ್.ಡಿ.ಎಲ್. ಚಂದ್ರು ಅವರ ನಿರ್ದೇಶನದಲ್ಲಿ ಈ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಉದ್ಘಾಟನೆ ಮಾಡಿದ ವೇದಿಕೆ ಅಧ್ಯಕ್ಷ ಕೆ.ವಿ. ವೆಂಕಟ ರಮಣಪ್ಪ @ ಪಾಪಣ್ಣ ಕಾಟಂನಲ್ಲೂರು “ಕಾರಂತರ ಕೃತಿಗಳಲ್ಲಿ ಸರ್ವಕಾಲಿಕ ಜೀವನ ಮೌಲ್ಯಗಳಿವೆ” ಎಂದರು. ಪ್ರಾಯೋಜಕ ವೇಣು ಜ್ಯೋತಿಪುರ, ನಿರ್ದೇಶಕ ಕೆ.ಎಸ್.ಡಿ.ಎಲ್. ಚಂದ್ರು ಹಾಗೂ ನಟ ಮುರುಡಯ್ಯನವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪದಾಧಿಕಾರಿಗಳಾದ ಸಿದ್ದೇಶ್ವರ, ಜಗದೀಶ್ ಕೆಂಗನಾಳ್, ಎಂ. ಸುರೇಶ್, ಮಮತ ಮುನಿರಾಜು ಉಪಸ್ಥಿತರಿದ್ದರು. ನಾಟಕ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿತು.
ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾಣ ಗ್ರಾಮದ ಜೋಗಿ ಬಂಗೇರ ಹಾಗೂ ರಾಧ ಕರ್ಕೇರ ಇವರ ಮಗನಾಗಿ 13-06-1985ರಂದು ಕೋಡಿ ರಾಘವೇಂದ್ರ ಕರ್ಕೇರ ಅವರ ಜನನ. ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿ ಕನ್ಯಾಣದಲ್ಲಿ ಮುಗಿಸಿ, ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಕೋಡಿ ಕನ್ಯಾಣದಲ್ಲಿ ಪೂರೈಸಿ, ಪದವಿ ಪೂರ್ವ ಶಿಕ್ಷಣವನ್ನು ವಿವೇಕ ಪದವಿ ಪೂರ್ವ ಕಾಲೇಜು ಕೋಟ ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಮೈಸೂರಿನಲ್ಲಿ ಪದವಿ ಶಿಕ್ಷಣದೊಂದಿಗೆ ತೇರ್ಗಡೆಯಾಗಿ, ಎಮ್ ಬಿ ಎ ಫೈನಾನ್ಸ್ ಉನ್ನತ ಶಿಕ್ಷಣ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಡೆದಿರುತ್ತಾರೆ. ಯಕ್ಷಗಾನದ ಗುರುಗಳು:- ಶ್ರೀ ಮಹಾಬಲ ಭಂಡಾರಿ ಕೋಡಿ ಶ್ರೀ ಗೋವಿಂದ ಉರಾಳ ಕೋಟ ಹೆಮ್ಮಾಡಿ ಪ್ರಭಾಕರ್ ಆಚಾರ್ ಕೃಷ್ಣಯ್ಯ ಆಚಾರ್ ಬಿದ್ಕಲ್ ಕಟ್ಟೆ ಶ್ರೀ ಬಸವ ಮರಕಾಲ ಸೈಬ್ರಕಟ್ಟೆ ಜಂಬೂರ್ ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು. ಪ್ರಾಥಮಿಕ ಶಿಕ್ಷಣ ಮುಗಿಸುವ ಹಂತದಲ್ಲಿ ನನಗಾಗ 13 ವರ್ಷ ಪ್ರಾಯ. 1998ರಲ್ಲಿ ನಾನು ಸ.ಹಿ.ಪ್ರಾ. ಶಾಲೆ ಕೋಡಿ ಕನ್ಯಾಣದಲ್ಲಿ 7ನೇ…
ಮೂಲ್ಕಿ : ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕವಿ, ಛಾಂದಸ ಸಾಹಿತಿ ಗಣೇಶ ಕೊಲಕಾಡಿ ಅವರ ಮನೆಗೆ ದ.ಕ.ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಭೇಟಿ ನೀಡಿ ಗೌರವಿಸಿದರು. ಗಣೇಶ ಕೊಲಕಾಡಿಯವರು ಯಕ್ಷಗಾನ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ಕೊಟ್ಟವರು. ಸಾಕಷ್ಟು ಸಂಮಾನ ಗೌರವಗಳಿಗೆ ಪಾತ್ರರಾದವರು. ಅನಾರೋಗ್ಯದಿಂದ ನೊಂದಿರುವ ಅವರು ಚೇತರಿಸಿ ಮತ್ತೆ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು. ಕನ್ನಡ ಸಾಹಿತ್ಯ ನಾಡು ನುಡಿಗಾಗಿ ಶ್ರಮಿಸುವವರೊಂದಿಗೆ ಸಾಹಿತ್ಯ ಪರಿಷತ್ತು ಸದಾ ಜೊತೆಯಾಗಿರುತ್ತದೆ ಎಂಬ ನಿಟ್ಟಿನಲ್ಲಿ ಕೊಲಕಾಡಿಯವರ ಮನೆಗೆ ಭೇಟಿ ನೀಡಿದ್ದೇವೆ. ಜಿಲ್ಲೆಯ ಸಾಹಿತಿಗಳನ್ನು ಭೇಟಿಯಾಗಿ ಅವರ ಜೊತೆಗಿರುವ ಕಾರ್ಯ ನಿರಂತರವಾಗಿರುತ್ತದೆ ಎಂದು ಡಾ. ಶ್ರೀನಾಥ್ ತಿಳಿಸಿದರು. ಅನಂತ ಪ್ರಕಾಶ ಸಂಸ್ಥೆಯ ಕೊಡೆತ್ತೂರು ಸಚ್ಚಿದಾನಂದ ಉಡುಪ, ಸಾಹಿತ್ಯ ಪರಿಷತ್ ಮೂಲ್ಕಿ ಘಟಕದ ಮಿಥುನ ಕೊಡೆತ್ತೂರು, ಜೊಸ್ಸಿ ಪಿಂಟೋ, ವೆಂಕಟೇಶ ಹೆಬ್ಬಾರ್, ಮಾಧವ ಕೆರೆಕಾಡು ಹಾಗೂ ಹೆರಿಕ್ ಪಾಯಸ್ ಜೊತೆಗಿದ್ದರು.
ಮೈಸೂರು : ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ (ರಿ) ಮೈಸೂರು, ಸಾಹಿತಿ ಶಿಕ್ಷಕರ ವೇದಿಕೆಯು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಡೆಸಿದ ಸಾಧಕ ಮಹಿಳೆಯರ ಕುರಿತು ‘ಕವನ ರಚನೆ ಮತ್ತು ವಾಚನ ಸ್ಪರ್ಧೆ’ಯ ಫಲಿತಾಂಶ ಘೋಷಣೆ ಮತ್ತು ಅಭಿನಂದನಾ ಪ್ರಮಾಣ ಪತ್ರ ವಿತರಣಾ ಸಮಾರಂಭವು ದಿನಾಂಕ 05-06-2023ರಂದು ನಡೆಯಿತು. ಸಮಾರಂಭದ ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ (ರಿ.) ಮೈಸೂರು ಇವರ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ಪಿ. ಮಹೇಶ್ ವಹಿಸಿದ್ದು, ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಂತೋಷ ಕುಮಾರ ಬಂಡೆ ಇವರು ಮುಖ್ಯ ಅತಿಥಿಗಳಾಗಿ, ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಶ್ರೀ ಚಂದ್ರಶೇಖರ ನಾಯಕ ಇವರು ಗೌರವ ಅತಿಥಿಗಳಾಗಿ ಹಾಗೂ ಸಹಕಾರ ಸಮಿತಿಗಳ ಮುಖ್ಯಸ್ಥರಾದ ಶ್ರೀಮತಿ ಉಮಾದೇವಿ ಗುಡ್ಡದ ಅತಿಥಿಗಳಾಗಿ ಭಾಗವಹಿಸಿದ್ದರು. ಪರಿಷತ್ತಿನ ಮುಖ್ಯಸ್ಥರಾದ ಶ್ರೀ ಲೀಲಾಧರ ಮೊಗೇರ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಲಕ್ಷ್ಮೀ ವಿ. ಭಟ್ – ಪ್ರಥಮ ಬಹುಮಾನ ಶ್ರೀಮತಿ ಭುವನೇಶ್ವರಿ ಅಂಗಡಿ…
ಬೆಂಗಳೂರು: 10 ಮತ್ತು 11-06-2023ರಂದು ಬೆಂಗಳೂರಿನ ನೃತ್ಯ ಸಂಸ್ಥೆಯಾಗಿರುವ ‘ಸಂಸ್ಕೃತಿ ಡ್ಯಾನ್ಸ್ ಅಕಾಡೆಮಿ’ಯು ವಿದ್ಯಾರಣ್ಯಪುರದ ತನ್ನ ಸಂಸ್ಥೆಯ ಸಭಾಂಗಣದಲ್ಲಿ ತಮ್ಮ ನೃತ್ಯ ವಿದ್ಯಾರ್ಥಿಗಳಿಗಾಗಿ ಯುವ ವಿದ್ವಾಂಸರಾದ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಅವರ ‘ತಾಳ ಕಾರ್ಯಗಾರ’ವನ್ನು ಹಮ್ಮಿಕೊಂಡಿದ್ದು ಕಾರ್ಯಾಗಾರವು ಯಶಸ್ವಿಯಾಗಿ ನೆರವೇರಿದೆ. ಗುರುಗಳಾದ ಶ್ರೀಮತಿ ಶೃತಿ ನಾಯಕ್ ಅವರು ಕಾರ್ಯಾಗಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 13 ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಭಾಗವಹಿಸಿ, ಅದರ ಪ್ರಯೋಜನವನ್ನು ಪಡೆದುಕೊಂಡರು ಹಾಗೂ ಅವರೆಲ್ಲರಿಗೂ ಪ್ರಮಾಣ ಪತ್ರ ನೀಡಲಾಗಿದೆ.
ಮೂಡಬಿದ್ರೆ : ತೆಂಕ ಮಿಜಾರು, ನೀರ್ಕೆರೆಯ ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ಆಶ್ರಯದಲ್ಲಿ ದಿನಾಂಕ 18-06-2023 ರಂದು ದ. ಕ ಮತ್ತು ಉಡುಪಿ ಜಿಲ್ಲಾ ಮಟ್ಟದ ‘ತಾಳ ನಿನಾದಂ-2023’ ಕುಣಿತ ಭಜನಾ ಸ್ಪರ್ಧೆಯು ನೀರ್ಕೆರೆಯ ಜಾರಂದಾಯ ದೈವಸ್ಥಾನದ ಮುಂಭಾಗದ ಶ್ರೀರಾಮಕೃಷ್ಣ ಸಭಾಭವನದಲ್ಲಿ ನಡೆಯಲಿದೆ . ಸ್ಪರ್ಧಾ ವಿಜೇತರಿಗೆ ಪ್ರಥಮ ಬಹುಮಾನ ರೂಪಾಯಿ 25,000/- ನಗದು ಮತ್ತು ಫಲಕ, ದ್ವಿತೀಯ ಬಹುಮಾನ ರೂಪಾಯಿ 15,000/- ನಗದು ಮತ್ತು ಫಲಕ ಹಾಗೂ ತೃತೀಯ ಬಹುಮಾನ ರೂಪಾಯಿ 10,000/- ನಗದು ಮತ್ತು ಫಲಕ ನೀಡಲಾಗುವುದು .ಹೆಚ್ಚಿನ ಮಾಹಿತಿಗಾಗಿ 8105076721, 7022162521, 9611751854 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
Mangaluru: Nrityaangan, Mangaluru presented ‘Yuva Nrityotsava 2023’ in Memory of Dr. Arun Kumar Maiya, at Don Bosco Hall on 11th June. Top 8 chosen budding artistes presented their best and the following budding artistes won the following places. P. Snavaja Krishnan, Bengaluru, bagged the Arunodaya award by winning 1st place. Tvisha Vadhul, Chennai, won 2nd place. P. G. Pannaga Rao, Udupi, won 3rd place. Top 8 artistes of Yuva Nrityotsava 2023 and the judges, Smt. Udhaya Ramakrishnan, Smt. Manjula Subrahmanya, Smt. Renuka Vishnu. Smt. Vidya Manoj, Karnataka Kalashree Sharadamani Shekar, Smt. Srilatha Nagaraj and Smt. Sangeetha Maiya were present along…
ಕುಂದಾಪುರ: ಡಾ. ಸುಧಾ ಮೂರ್ತಿ ಹಾಗೂ ಡಾ. ಪಿ. ದಯಾನಂದ ಪೈ ಪ್ರಾಯೋಜಕತ್ವದಲ್ಲಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಪ್ರಸ್ತುತಪಡಿಸುವ ಸರಣಿ ಕಾರ್ಯಕ್ರಮ ‘ ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ‘ ದಿನಾಂಕ 18-06-2023ರಂದು ಕುಂದಾಪುರದ ಉಪ್ಪಿನ ಕುದ್ರುವಿನ ಗೊಂಬೆ ಮನೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ಸತತ ಏಳು ವರ್ಷಗಳಿಂದ ನಡೆಯುತ್ತಿದ್ದು, ಇದು ಸರಣಿಯ 84ನೇ ಕಾರ್ಯಕ್ರಮ. ಈ ಬಾರಿ ಶ್ರೀಮತಿ ಮಾಯಾ ಕಾಮತ್ ನೇತೃತ್ವದ ಮಹಾಮಾಯಿ ಭಜನಾ ಮಂಡಳಿ ಮಣಿಪಾಲ ಇವರಿಂದ ‘ ಭಕ್ತಿ ಸಂಗೀತ ‘ ಕಾರ್ಯಕ್ರಮವು ನಡೆಯಲಿರುವುದು. ಇದೇ ಸಂದರ್ಭದಲ್ಲಿ 2022-23 ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಉಪ್ಪಿನ ಕುದ್ರು ಸರಕಾರಿ ಪ್ರೌಢ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದ ಕುಮಾರಿ ಮಹಿಮಾ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಉಪ್ಪಿನ ಕುದ್ರು ಗೊಂಬೆಯಾಟ ಅಕಾಡೆಮಿ: ಆರು ತಲೆಮಾರುಗಳಿಂದ ಯಕ್ಷಗಾನ ಗೊಂಬೆಯಾಟವನ್ನು ನಡೆಸಿಕೊಂಡು ಬಂದಿರುವ ಉಪ್ಪಿನಕುದ್ರುವಿನ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಕೇವಲ ಈ ಪ್ರದೇಶದಲ್ಲಷ್ಟೇ…
ಉಡುಪಿ : ತಲ್ಲೂರು ಫ್ಯಾಮಿಲಿ ಟ್ರಸ್ಟ್ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಇದರ ಸಹಯೋಗದಲ್ಲಿ ಉಡುಪಿ ಜಿಲ್ಲಾ ಮಟ್ಟದ ‘ಜಾನಪದ ಸ್ಪರ್ಧೆಗಳು 2023’ ದಿನಾಂಕ 18-06-2022ರಂದು ಉಡುಪಿಯ ಅಂಬಾಗಿಲಿನ ಅಮೃತ ಗಾರ್ಡನ್ ನಲ್ಲಿ ನಡೆಯಲಿದೆ. ಖ್ಯಾತ ಜಾನಪದ ಕಲಾವಿದರಾದ ಶ್ರೀ ರವಿ ಪಾಣಾರ ಪಡ್ದಮ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರು ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಪರ್ಧೆಯ ಬಳಿಕ ಬಹುಮಾನ ವಿತರಣೆ ಹಾಗೂ ಸೇವಾರತ್ನ ಜಾನಪದ ಪ್ರಶಸ್ತಿ ಪ್ರಧಾನ ಸಮಾರಂಭವು ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ.ನಿ.ಬೀ., ವಿಜಯ ಬಲ್ಲಾಳ್, ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಗೂರ್ಮೆ ಸುರೇಶ್ ಶೆಟ್ಟಿ, ಹಿರಿಯ ಜಾನಪದ ವಿದ್ವಾಂಸರಾದ ಡಾ. ವೈ.ಎನ್. ಶೆಟ್ಟಿ, ಮಣಿಪಾಲದ ಗಾಂಧಿಯನ್ ಸೆಂಟರ್ ಫಾರ್ ಫಿಲೋಸೊಫಿಕಲ್ ಆರ್ಟ್ಸ್ & ಸೈನ್ಸ್, ಮಾಹೆ ಇದರ ನಿರ್ದೇಶಕರಾದ ಪ್ರೊ. ವರದೇಶ ಹಿರೇಗಂಗೆ…
ಮಡಿಕೇರಿ : ಕೊಡವ ಕೂಟಾಳಿಯಡ ಕೂಟ ಸಂಘಟನೆಯ ವತಿಯಿಂದ ಕೊಡವ ಮಕ್ಕಳಿಗಾಗಿ ಮೂರನೇ ವರ್ಷದ ‘ಕೊಡಗ್’ರ ಚುಪ್ಪಿ ಕೋಗಿಲೆಯ’ ಎಂಬ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. 15 ವರ್ಷದೊಳಗಿನ ಕೊಡವ ಮಕ್ಕಳು ಯಾವುದೇ ಮ್ಯೂಸಿಕ್, ಕರೋಕೆ, ಆ್ಯಪ್ ಬಳಸದೇ 3 ನಿಮಿಷದ ಒಳಗೆ ಹಾಡಿದ ಕೊಡವ ಭಾಷೆಯ ಹಾಡನ್ನು ದಿನಾಂಕ 25-06-2023 ತಾರೀಖಿನೊಳಗಾಗಿ 9972538030 ಈ ವಾಟ್ಸಪ್ ಸಂಖ್ಯೆಗೆ ಕಳಿಸಬಹುದು. ಎರಡು ಸುತ್ತಿನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವಿಜೇತರಾದವರಿಗೆ ಬಿರುದು ಹಾಗೂ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ವಿಜೇತರಿಗೆ ನಗದು ಬಹುಮಾನ ಮತ್ತು ಎರಡನೇ ಸುತ್ತಿನಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಅಭಿನಂದನಾ ಪತ್ರ ನೀಡಲಾಗುವುದು. ಸ್ಪರ್ಧೆಯ ಮತ್ತಷ್ಟು ಮಾಹಿತಿ ಮತ್ತು ನಿಯಮಗಳಿಗಾಗಿ ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಚಿಮ್ಮಚಿರ ಪವಿತ ರಜನ್ 9663267249 , ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣರವರನ್ನು 9972538030 ಸಂಪರ್ಕಿಸಬಹುದು.