Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕಲೆ, ಸಾಂಸ್ಕೃತಿಕ ಪರಂಪರೆಗಾಗಿ ಭಾರತೀಯ ರಾಷ್ಟ್ರೀಯ ಟ್ರಸ್ಟ್ (ಇಂಟಾಕ್)ನ ಮಂಗಳೂರು ಶಾಖೆ ಮತ್ತು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸಹಯೋಗದಲ್ಲಿ ‘ದೃಶ್ಯ– ಬಾಂಧವ್ಯ’ ಎಂಬ ಶೀರ್ಷಿಕೆಯಡಿ ಕಲಾ ಪ್ರದರ್ಶನವನ್ನು ದಿನಾಂಕ :03-06-2023ರಿಂದ 10-06-2023ರವರೆಗೆ ಆಯೋಜಿಸಿದೆ. 2021ರಲ್ಲಿ ಚಿಕ್ಕಮಗಳೂರಿನ ಕೊಟ್ಟಿಗೆಹಾರ ಗ್ರಾಮದಲ್ಲಿ ನಡೆದ ಕಲಾಶಿಬಿರದಲ್ಲಿ ಕಲಾವಿದರು ರಚಿಸಿದ ಕಲಾಕೃತಿಗಳ ಪ್ರದರ್ಶನ ನಗರದ ಬಲ್ಲಾಳ್ ಬಾಗಿನ ಕೊಡಿಯಾಲ್ ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಆರಂಭಗೊಂಡಿದೆ. ಬಿಜೈ ಶ್ರೀಮಂತಿ ಬಾಯಿ ಸ್ಮಾರಕ ಸರಕಾರಿ ವಸ್ತು ಸಂಗ್ರಹಾಲಯದ ಕ್ಯುರೇಟರ್ ಧನಲಕ್ಷ್ಮೀ ಅಮ್ಮಾಳ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಪ್ರದರ್ಶನದಲ್ಲಿರುವ ವರ್ಣಚಿತ್ರಗಳ ಸಂಗ್ರಹವನ್ನು ಶ್ಲಾಘಿಸಿದರಲ್ಲದೆ ಶ್ರೀಮಂತಿ ಬಾಯಿ ವಸ್ತು ಸಂಗ್ರಹಾಲಯ, ಇಂಟಾಕ್ ಮತ್ತು ಆರ್ಟ್ ಕನರಾ ಟ್ರಸ್ಟ್ ನಡುವಿನ ಸಹಯೋಗದ ಸಾಧ್ಯತೆಗಳನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಚಿಕ್ಕಮಗಳೂರಿನ ಸಹಮತದ ಐವನ್ ಡಿ’ಸಿಲ್ವಾ ಅವರು 2021ರಲ್ಲಿ ನಡೆದ ಕಲಾ ಶಿಬಿರದ ಕಲ್ಪನೆ ಮತ್ತು ಅದರ ಮಹತ್ವವನ್ನು ವಿವರಿಸಿದರು. ಕಲಾವಿದ ಹಾಗೂ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ…
ದುಬೈ: ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ. ಮತ್ತು ಯಕ್ಷಧ್ರುವ ಪಟ್ಲ ಫೌಂಡೇಷನ್ ದುಬೈ ಘಟಕದ ವತಿಯಿಂದ ‘ದುಬೈ ಯಕ್ಷೋತ್ಸವ- 2023 ವಿಶ್ವ ಪಟ್ಲ ಸಂಭ್ರಮ’ ಜೂನ್ 11ರಂದು ಮಧ್ಯಾಹ್ನ 2 ಗಂಟೆಗೆ ದುಬೈನ ಕರಾಮ ಇಂಡಿಯನ್ ಸ್ಕೂಲಿನ ಶೇಖ್ ರಷೀದ್ ಸಭಾಂಗಣದಲ್ಲಿ ವಿಶ್ವದಲ್ಲಿ ಇರುವ ಪಟ್ಲ ಫೌಂಡೇಷನ್ನಿನ 38 ಘಟಕದ ಪದಾಧಿಕಾರಿಗಳ ಸಮ್ಮುಖದಲ್ಲಿ ಜರಗಲಿದೆ. ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ. ಇವರು ದುಬೈ ಮತ್ತು ತಾಯಿ ನಾಡಿನ ಯಕ್ಷಗಾನ ರಂಗದ ಸಾಧಕರೊಬ್ಬರನ್ನು ಗುರುತಿಸಿ ನೀಡುವ ‘ಯಕ್ಷಶ್ರೀ ರಕ್ಷಾ ಗೌರವ ಪ್ರಶಸ್ತಿ’ಯನ್ನು ಹಿರಿಯ ಕಲಾವಿದ ಪಟ್ಲಗುತ್ತು ಮಹಾಬಲ ಶೆಟ್ಟಿ ಅವರಿಗೆ ನೀಡಲಾಗುವುದು. ಮುಖ್ಯ ಅತಿಥಿಗಳಾಗಿ ಪಟ್ಲ ಫೌಂಡೇಷನ್ನಿನ ಕೇಂದ್ರ ಘಟಕದ ಗೌರವಾಧ್ಯಕ್ಷರಾದ ಉದ್ದಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಘಟಕದ ಪ್ರಧಾನ ಸಂಚಾಲಕ ಶಶಿಧರ ಶೆಟ್ಟಿ ಬರೋಡ, ಐಕಳ ಹರೀಶ್ ಶೆಟ್ಟಿ, ಪಟ್ಲ ಘಟಕ ಯುಎಇಯ ಗೌರವಾಧ್ಯಕ್ಷ ಪುತ್ತಿಗೆ ವಾಸುದೇವ ಭಟ್, ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಭೀಮ್ ಜ್ಯುವೆಲ್ಲರ್ಸ್ ನ ಯು. ನಾಗರಾಜ…
ಬೆಂಗಳೂರು: ಭಾರತದ ಪ್ರತಿಷ್ಠಿತ ನಾಟಕೋತ್ಸವಗಳಲ್ಲಿ ಒಂದಾದ ‘ ಮಹೇಂದ್ರ ಎಕ್ಸಲೆನ್ಸ್ ಇನ್ ಥಿಯೇಟರ್ ಅವಾರ್ಡ್ -2023 ‘ (META)ಗೆ 393 ನಾಟಕಗಳ ಪೈಕಿ ಆಯ್ಕೆಯಾದ 10 ನಾಟಕಗಳಲ್ಲಿ “ದಕ್ಲಕಥಾ ದೇವಿಕಾವ್ಯ” ನಾಟಕವು ಒಂದು. ಮೆಟಾ ಅವಾರ್ಡ್ ನಲ್ಲಿ 10 ವಿಭಾಗಗಳಲ್ಲಿ ಆಯ್ಕೆಯಾದ ಕೆಲವೇ ನಾಟಕಗಳಲ್ಲಿ ಈ ನಾಟಕವು ಒಂದು. ಈ ನಾಟಕದಲ್ಲಿಯ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಸಂತೋಷ್ ದಿಂಡ್ಗೂರು ಮತ್ತು ಭರತ್ ಡಿಂಗ್ರಿ ಈಗಾಗಲೇ ಪಡೆದಿದ್ದಾರೆ. 29-03-2023ರಂದು ನವದೆಹಲಿಯ ರಂಗದಲ್ಲಿ ಪ್ರದರ್ಶನ ಕಂಡ ಈ ನಾಟಕ ಭಾಷೆಯನ್ನು ಮೀರಿ ನೆರೆದಿದ್ದ ಅಷ್ಟೂ ಜನರನ್ನು ರಂಜಿಸಿ, ಮೆಚ್ಚುಗೆಗೂ ಪಾತ್ರವಾಯಿತು. ಕೆ. ಬಿ ಸಿದ್ದಯ್ಯನವರ ಆಯ್ದ ಬರಹಗಳನ್ನು ಆಧರಿಸಿದ ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದು ಲಕ್ಷ್ಮಣ್ ಕೆ. ಪಿ ಯವರು. ಇವರಿಗೆ ಸ್ಕಂದ ಘಾಟೆ ಹಾಗೂ ಶ್ರೀ ಹರ್ಷ ಜಿ. ಎನ್ ಸಹನಿರ್ದೇಶಕರಾಗಿ ಸಹಕರಿಸಿದ್ದಾರೆ. ನಾಟಕದ ಬೆಳಕಿನ ವಿನ್ಯಾಸವನ್ನು ಮಂಜು ನಾರಾಯಣ್ ಮಾಡಲಿದ್ದು, ವಸ್ತ್ರ ವಿನ್ಯಾಸ ಶ್ವೇತಾಮಣಿ ಹೆಚ್.ಕೆ…
ಬೆಂಗಳೂರು : ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರ, ಮಕ್ಕಳ ವಿಭಾಗದಲ್ಲಿ 3ರಿಂದ 15 ವರ್ಷದ ಮಕ್ಕಳಿಗೆ 2 ವಿಭಾಗಗಳಲ್ಲಿ ರಂಗ ತರಬೇತಿಗಳು ಆರಂಭವಾಗಲಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ. ‘ಮಂಗಳ ಅಂಗಳ’ ಮೊದಲ ವಿಭಾಗವು 3ರಿಂದ 8ನೇ ವರ್ಷದ ಮಕ್ಕಳಿಗಾಗಿದ್ದು, 4 ತಿಂಗಳ ಅವಧಿಯ ಈ ತರಗತಿಗಳಲ್ಲಿ ಅಭಿನಯ, ಆಟಗಳು, ಹಾಡುಗಳು, ಕಲೆ ಹಾಗೂ ಕರಕುಶಲದ ಬಗ್ಗೆ ಮಕ್ಕಳಿಗೆ ಪ್ರತಿಭಾವಂತ ನಿರ್ದೇಶಕರು ಮಾರ್ಗದರ್ಶನ ನೀಡಲಿದ್ದಾರೆ ಹಾಗೂ ಪ್ರತಿ 2 ತಿಂಗಳಿಗೊಮ್ಮೆ ಮಕ್ಕಳಿಂದ ವಿಶೇಷ ಪ್ರದರ್ಶನಗಳನ್ನು ನಡೆಸಲಾಗುವುದು. ಜೂನ್ 6ರಿಂದ ಈ ತರಗತಿಗಳು ಪ್ರಾರಂಭವಾಗಲಿದ್ದು ಪ್ರತಿ ಮಂಗಳವಾರ ಸಂಜೆ 5ರಿಂದ 6.30ರವರೆಗೆ ನಡೆಯಲಿದೆ. 2ನೇ ವಿಭಾಗವು 8ರಿಂದ 15ನೇ ವರ್ಷದ ಮಕ್ಕಳಿಗೆ 8 ತಿಂಗಳ ಅವಧಿಯ ತರಗತಿಗಳಾಗಿದ್ದು ಇದರಲ್ಲಿ ನಟನೆ, ಆಟಗಳು, ಕಲೆ ಹಾಗೂ ಕರಕುಶಲ, ಹಾಡು, ನೃತ್ಯ, ಚಿತ್ರಕಥನ ಇವುಗಳಲ್ಲಿ ಮುಂದುವರೆಯಲು ಮಕ್ಕಳಿಂದ ವಿಶೇಷ ಪ್ರದರ್ಶನ ಹಾಗೂ ‘ಬೊಂಬೆ ಹಬ್ಬ’ ನಡೆಯಲಿರುವುದು. ಜೂನ್ 4ರಿಂದ ಈ ತರಗತಿಗಳು ಪ್ರಾರಂಭವಾಗಲಿದ್ದು ಪ್ರತಿ…
ಮಂಗಳೂರು: ಬಿಜೈಯಲ್ಲಿರುವ ನೃತ್ಯಾಂಗನ್ ಸಂಸ್ಥೆ ಜೂನ್ 11ರಂದು ‘ನೃತ್ಯೋತ್ಸವ-2023’ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಂದು ಮಧ್ಯಾಹ್ನ 2.45ಕ್ಕೆ ಡಾನ್ಬಾಸ್ಕೋ ಸಭಾಂಗಣದಲ್ಲಿ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಕಲಾನಿಕೇತನ ಡಾನ್ಸ್ ಫೌಂಡೇಶನ್ ನಿರ್ದೇಶಕಿ ವಿದುಷಿ ವಿದ್ಯಾ ಮನೋಜ್ ಚಾಲನೆ ನೀಡುವರು. ಯುವ ನೃತ್ಯೋತ್ಸವ-2023ರ ಅಂತಿಮ ಸುತ್ತಿಗೆ ಆಯ್ಕೆಯಾದ ಕಲಾವಿದೆ ಅಪರ್ಣಾ ಮೋಹನ್, ಗಾಯತ್ರಿ ಜೋಶಿ, ಕಾರ್ತಿಕ್ ಮಣಿಕಂದನ್, ಮೀರಾ ಶ್ರೀ ದಂಡಪಾಣಿ, ಮೇಘಾ ಮಲರ್ ಪ್ರಭಾಕರ್, ಪಿ.ಜಿ.ಪನ್ನಗ ರಾವ್, ಪಿ.ಸ್ನವಜಾ ಕೃಷ್ಣನ್, ತ್ವಿಶಾ ವಧುಲ್ ಏಕವ್ಯಕ್ತಿ ಭರತನಾಟ್ಯ ಪ್ರಸ್ತುತಪಡಿಸುವರು. ಬಳಿಕ ಗುರು ವಿದ್ಯಾ ಮನೋಜ್ ಅವರ ಶಿಷ್ಯೆಯಂದಿರಾದ ಡಾ.ಮಹಿಮಾ ಪಣಿಕ್ಕರ್, ಅನುಷಾ ಎನ್.ರಾವ್ ಅವರ ಯುಗಳ ನೃತ್ಯ ಪ್ರದರ್ಶನ ಇರಲಿದೆ. ಅನಂತರ ಕರ್ನಾಟಕ ಕಲಾಶ್ರೀ ಶಾರದಾಮಣಿ ಶೇಖರ್ ಹಾಗೂ ವಿದುಷಿ ಶ್ರೀಲತಾ ನಾಗರಾಜ್ ಅವರ ಶಿಷ್ಯರು ಸಮೂಹ ನೃತ್ಯ ಪ್ರಸ್ತುತಪಡಿಸುವರು. ಆಸಕ್ತರಿಗೆ ಉಚಿತ ಪ್ರವೇಶ ಎಂದು ನೃತ್ಯಾಂಗನ್ ಸಂಸ್ಥೆಯ ನಿರ್ದೇಶಕಿ, ಕಲಾವಿದೆ ರಾಧಿಕಾ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು: ತುಳು ಕೂಟ ಕುಡ್ಲದ ಆಶ್ರಯದಲ್ಲಿ 17-06-2023ರಂದು ಬೆಳಿಗ್ಗೆ 10 ಗಂಟೆಗೆ ನಂತೂರಿನ ಭಾರತೀ ಕಾಲೇಜಿನ ಶಂಕರ ಸದನದಲ್ಲಿ ‘ಬಂಗಾರ್ ಪರ್ಬ ಸರಣಿ ಕಾರ್ಯಕ್ರಮ-4’ದಲ್ಲಿ ‘ಯಕ್ಷಗಾನೊಡು ತುಳು ಸಾಹಿತ್ಯೊ’ ಕಾರ್ಯಕ್ರಮವು ನಡೆಯಲಿದೆ. ತುಳು ಕೂಟದ ಅಧ್ಯಕ್ಷರಾದ ಶ್ರೀ ಬಿ. ದಾಮೋದರ ನಿಸರ್ಗ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸರಣಿ ಕಾರ್ಯಕ್ರಮದಲ್ಲಿ ‘ಯಕ್ಷಗಾನೊಡು ತುಳು ಸಾಹಿತ್ಯೊ’ ಎಂಬ ವಿಷಯದ ಬಗ್ಗೆ ಪರಿಚಯ ಕೊಡಲಿದ್ದಾರೆ ಮಂಗಳೂರಿನ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷರಾದ ಶ್ರೀ ದಯಾನಂದ ಕತ್ತಲ್ ಸಾರ್. ನಂತೂರಿನ ಶ್ರೀ ಭಾರತೀ ಗ್ರೂಪ್ ಆಫ್ ಇನಿಸ್ಟಿಟ್ಯೂಷನ್ಸ್ ಇದರ ಕಾರ್ಯದರ್ಶಿಗಳಾದ ಶ್ರೀ ಶ್ರೀಕೃಷ್ಣ ಭಟ್ ನೀರಮೂಲೆ, ಶ್ರೀ ಭಾರತೀ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಗಂಗಾರತ್ನ, ಶ್ರೀ ಭಾರತೀ ಪ. ಪೂ ಕಾಲೇಜಿನ ಕೋಶಾಧಿಕಾರಿಗಳಾದ ಶ್ರೀ ಉದಯ ಶಂಕರ್ ನೀರ್ಪಾಜೆ ಹಾಗೂ ಹವ್ಯಕ ಮಹಾಮಂಡಲದ ಮುಷ್ಟಿಭಿಕ್ಷಾ ಪ್ರಧಾನದ ಶ್ರೀ ಸರವು ರಮೇಶ್ ಭಟ್ ಇವರೆಲ್ಲರೂ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಶ್ರೀ…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ತಿಂಗಳ ಸರಣಿ ತಾಳಮದ್ದಳೆಯು ದಿನಾಂಕ 05.06.2023ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ರಾಜಗೋಪುರದಲ್ಲಿ ‘ಮಾಯಾಮೃಗ’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಆನಂದ ಸವಣೂರು, ನಿತೀಶ್ ಎಂಕಣ್ಣಮೂಲೆ, ಪ್ರೊ. ದಂಬೆ ಈಶ್ವರ ಶಾಸ್ತ್ರೀ ಮುರಳೀಧರ ಕಲ್ಲೂರಾಯ, ಅಚ್ಯುತ ಪಾಂಗಣ್ಣಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀರಾಮ – ಭಾಸ್ಕರ್ ಬಾರ್ಯ, ಸೀತೆ – ಕು೦ಬ್ಳೆ ಶ್ರೀಧರ್ ರಾವ್, ರಾವಣ – ಪೂಕಳ ಲಕ್ಷ್ಮೀನಾರಾಯಣ ಭಟ್, ಮಾರೀಚ – ಭಾಸ್ಕರ್ ಶೆಟ್ಟಿ ಸಾಲ್ಮರ, ಸನ್ಯಾಸಿ ರಾವಣ – ಪಕಳಕುಂಜ ಶ್ಯಾಮ್ ಭಟ್, ಲಕ್ಷ್ಮಣ – ದುಗ್ಗಪ್ಪ ಎನ್. ಸಹಕರಿಸಿದರು. ಇತ್ತೀಚೆಗೆ ನಿಧನರಾದ ಯಕ್ಷಗಾನ ಕಲಾವಿದರೂ ಸಂಘಟಕರೂ ಆದ ಎಸ್.ಎನ್. ಪಂಜಾಜೆಯವರಿಗೆ ಅಧ್ಯಕ್ಷರಾದ ಭಾಸ್ಕರ್ ಬಾರ್ಯ ಇವರು ನುಡಿನಮನ ಸಲ್ಲಿಸಿದರು. ಟಿ ರಂಗನಾಥ ರಾವ್ ಸ್ವಾಗತಿಸಿ, ಶ್ರೀಮತಿ ಶುಭಾ ಅಡಿಗ ವಂದಿಸಿದರು.
ಕಲಬುರಗಿ : ರಂಗಸಂಗಮ ಕಲಾವೇದಿಕೆ ನೀಡುವ ಎಸ್.ಬಿ. ಜಂಗಮ ಶೆಟ್ಟಿ ಮತ್ತು ಸುಭದ್ರಾ ದೇವಿ ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ರಂಗ ಸಾಧಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಧನೆಗೈದ ರಂಗಕರ್ಮಿಗಳ ಹೆಸರುಗಳನ್ನು ರಂಗಾಸಕ್ತರು ಪ್ರಶಸ್ತಿಗೆ ನಾಮನಿರ್ದೇಶನ ಮಾಡಬಹುದು ಅಥವಾ ಅರ್ಜಿ ಹಾಕಬಹುದು ಎಂದು ರಂಗ ಸಂಗಮ ಕಲಾವೇದಿಕೆಯ ಕಾರ್ಯದರ್ಶಿ ಡಾ. ಸುಜಾತ ಜಂಗಮಶೆಟ್ಟಿ ತಿಳಿಸಿದ್ದಾರೆ. ಪ್ರಶಸ್ತಿಯು ತಲಾ 10,000 ರೂ.ನಗದು, ಪ್ರಶಸ್ತಿ ಪತ್ರ ಹಾಗೂ ಸನ್ಮಾನವನ್ನೊಳಗೊಂಡಿದ್ದು, ಜುಲೈ 18ರಂದು ಹಮ್ಮಿಕೊಳ್ಳಲಾಗುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗಾಗಿ ಅರ್ಜಿಗಳನ್ನಾಗಲಿ ಅಥವಾ ನಾಮ ನಿರ್ದೇಶನಗಳನ್ನಾಗಲಿ ಕಳಿಸುವ ಕೊನೆಯ ದಿನಾಂಕ 20-06-2023. ಕಳಿಸಬೇಕಾದ ವಿಳಾಸ: ಡಾ.ಸುಜಾತಾ ಜಂಗಮಶೆಟ್ಟಿ, ಓಂ ರೆಸಿಡೆನ್ಸಿ, ಗೋಕುಲ ಸೂಪರ್ ಬಜಾರಿನ ಎರಡನೇ ಮಹಡಿ, ಶ್ರೀನಿವಾಸ ಕಣ್ಣಿನ ಆಸ್ಪತ್ರೆ ಪಕ್ಕ. ಸಿದ್ದೇಶ್ವರ ಕಲ್ಯಾಣ ಮಂಟಪದ ಹತ್ತಿರ, ಹಳೆಯ ಜೇವರ್ಗಿ ರಸ್ತೆ, ಕಲಬುರಗಿ 585102.
ಬೆಂಗಳೂರು : ‘ಶ್ರೀ ಮುರಳೀಧರ ಸಂಗೀತ ನೃತ್ಯ ಮಹಾವಿದ್ಯಾಲಯ’ ಮತ್ತು ಕಲಾ ಪೋಷಕ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ‘ಮೋಹನ ತರಂಗಿಣಿ ಸಂಗೀತ ಸಭಾ’ ಇದರ ಅಮೃತ ಮಹೋತ್ಸವ ಸಾಂಸ್ಕೃತಿಕ ಸಂಗೀತ ಸಂಭ್ರಮವು ದಿನಾಂಕ 18-02-2023ರಿಂದ 07-05-2023ರವರೆಗೆ ಕರ್ನಾಟಕ ಸಂಗೀತ ತ್ರಿಮೂರ್ತಿಗಳ ಹಾಗೂ ಕನಕ ಪುರಂದರ ಸಂಗೀತೋತ್ಸವ ಅಂಗವಾಗಿ ನಡೆಯುತ್ತಿರುವ 75ನೇ ವಾರ್ಷಿಕೋತ್ಸವಕ್ಕೆ 75 ಕಾರ್ಯಕ್ರಮಗಳ ‘ಮಂಗಳ ಸಂಗೀತ ನೃತ್ಯ ಧಾರೆ’ ಎಂಬ ಕಾರ್ಯಕ್ರಮವು ಕಲಾಗ್ರಾಮ ಸಮುಚ್ಛಯ ಭವನ, ಮಲ್ಲತ್ತ ಹಳ್ಳಿ, ಬೆಂಗಳೂರಿನಲ್ಲಿ ನಡೆಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮೋಹನ ತರಂಗಿಣಿ ಸಂಗೀತ ಸಭಾ ಬೆಂಗಳೂರು ಇದರ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮೀದೇವಿ ಮೋಹನ ಕುಮಾರ ಮತ್ತು ಸಂಸ್ಥೆಯ ಮುಖ್ಯಸ್ಥರಾದ ಕರ್ನಾಟಕ ಕಲಾಶ್ರೀ ವಿದ್ವಾನ್ ಶ್ರೀ ಕೆ.ಎಸ್. ಮೋಹನ ಕುಮಾರರೊಂದಿಗೆ ರಾಜ್ಯದ ಎಲ್ಲಾ ಸಂಗೀತ ಸಭಾದ ಅಧ್ಯಕ್ಷರುಗಳು ಮತ್ತು ಕಾರ್ಯದರ್ಶಿಗಳು ಸೇರಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದರು. ಉಡುಪಿಯ ರಂಜನಿ ಮೆಮೋರಿಯಲ್ ಟ್ರಸ್ಟಿನ ಪ್ರೊ. ವಿ ಅರವಿಂದ ಹೆಬ್ಬಾರ್ ಮಾತನಾಡಿ, “ವಿದ್ವಾನ್ ಮೋಹನ…
ಮಂಗಳೂರು : ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇದು ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಪ್ರಥಮ ಮಕ್ಕಳ ಮೇಳವಾಗಿದೆ. ಕದ್ರಿ ದೇವಳದ ಸಂಪೂರ್ಣ ಸಹಕಾರದೊಂದಿಗೆ ತನ್ನ 23ನೇ ವರ್ಷದ ವಿಶೇಷ ಕಾರ್ಯಕ್ರಮವಾಗಿ ‘ಸರಯೂ ಸಪ್ತಾಹ -2023’ವು ಮೇ 25ರಿಂದ 31ರವರೆಗೆ ಕದ್ರಿ ದೇವಳದ ರಾಜಾಂಗಣದಲ್ಲಿ ಬಹಳ ವೈಭವದಿಂದ ನೆರವೇರಿತು. ಈ ಕಾರ್ಯಕ್ರಮವನ್ನು ದಿನಾಂಕ 25-05-2023ರಂದು ಶ್ರೀ ಕ್ಷೇತ್ರ ಕದ್ರಿಯ ವೇದಮೂರ್ತಿ ನರಸಿಂಹ ತಂತ್ರಿಗಳು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ದಿನಾಂಕ 26-05-2023ರಂದು 2ನೇ ದಿನದ ಕಾರ್ಯಕ್ರಮದಲ್ಲಿ ಶ್ರೇಷ್ಠ ಆರ್ಥಿಕ ತಜ್ಞ, ಕಲಾಪೋಷಕ ಎಸ್.ಎಸ್.ನಾಯಕ್ ಮಾತನಾಡುತ್ತಾ “ಭಾರತೀಯ ಲಲಿತಕಲೆಗಳೇ ಶ್ರೇಷ್ಠ. ಅದರಲ್ಲೂ ಇಂದು ಯಕ್ಷಗಾನ ವಿಶ್ವವೇ ತಿರುಗಿ ನೋಡುವಂತೆ ಮಾಡಿದೆ. ತೆಂಕು ಮತ್ತು ಬಡಗುಗಳ ಬೇಧವಿಲ್ಲದೇ ಜನ ಅದನ್ನು ಸ್ವೀಕರಿಸಿದ್ದಾರೆ. ಅದರಲ್ಲೂ ಸರಯೂ ತಂಡ ಬೇರೆ ಬೇರೆ ಭಾಷೆಗಳಲ್ಲೂ ಕಾರ್ಯಕ್ರಮ ನೀಡುತ್ತಾ ಬರುತ್ತಿದೆ. ಸಂಸ್ಕೃತದಲ್ಲೂ ಯಶಸ್ವಿಯಾಗಿ ಕಾರ್ಯಕ್ರಮ ನೀಡಿ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ತಲುಪುವಲ್ಲಿ ಹಿಂದೆ ಬಿದ್ದಿಲ್ಲ. ಅದಕ್ಕಾಗಿ ನಮ್ಮ ಬೆಂಬಲ…